Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಹುಡುಗಿಯ ಮನಸ್ಸು ಅರ್ಥ ಮಾಡಿಕೊಳ್ಳುವುದು ಬಲು ಕಷ್ಟ ಸ್ವಾಮಿ!
ಮೀನಿನ ಹೆಜ್ಜೆ, ನದಿಯ ಮೂಲ ಮತ್ತು ಹೆಣ್ಣಿನ ಮನಸನ್ನು ತಿಳಿದುಕೊಳ್ಳುವುದು ತುಂಬಾ ಕಠಿಣ ಎಂದು ಹಿರಿಯರು ಹೇಳುತ್ತಾರೆ. ಮಹಿಳೆಯರ ಮನಸ್ಸನ್ನು ತಿಳಿಯುವುದು ತುಂಬಾ ಕಷ್ಟಕರ. ಅದರಲ್ಲೂ ಕೆಲವು ಹುಡುಗರು ಮೊದಲ ಸಲ ಡೇಟಿಂಗ್‌ಗೆ ಹೋಗುವಾಗ ಯಾವ ರೀತಿಯಲ್ಲಿ ಹುಡುಗಿ ಮನಸ್ಸನ್ನು ಗೆಲ್ಲಬೇಕು ಎನ್ನುವ ಗೊಂದಲದಲ್ಲಿ ಸಿಲುಕಿರುತ್ತಾರೆ. ಹುಡುಗಿಯ ಇಷ್ಟವೇನು ಎಂದು ತಿಳಿಯಲು ಶ್ರಮ ಬೇಕಾಗುತ್ತದೆ.
ಹುಡುಗಿಯರು ಸಾಮಾನ್ಯವಾಗಿ ತಮಗೆ ಏನು ಇಷ್ಟ ಮತ್ತು ಯಾವುದನ್ನು ಇಷ್ಟಪಡುವುದಿಲ್ಲ ಎಂದು ನೇರವಾಗಿ ಹೇಳಲು ಹೋಗುವುದಿಲ್ಲ. ಅದರಲ್ಲೂ ಇಂದಿನ ಹುಡುಗಿಯರು ಕೆಲವು ವಿಷಯಗಳ ಬಗ್ಗೆ ತುಂಬಾ ಸ್ಪಷ್ಟತೆ ಹೊಂದಿರುತ್ತಾರೆ. ಆದರೆ ಹುಡುಗಿಯರ ಮನಸ್ಸನ್ನು ಗೆಲ್ಲಲು ಹುಡುಗರು ಏನು ಮಾಡಬೇಕು ಎಂದು ಈ ಲೇಖನದಲ್ಲಿ ತಿಳಿದುಕೊಳ್ಳುವ.....

ನೀವು ಪ್ರಾರಂಭ ಮಾಡಿದರೆ ಆಕೆಗೆ ಇಷ್ಟವಾಗುವುದು
ಆಧುನಿಕ ಜಗತ್ತಿನ ಹುಡುಗಿಯರಿಗೆ ಪ್ರಾರಂಭ ಮಾಡಿ ಪ್ರೀತಿಯನ್ನು ಪ್ರಸ್ತಾಪಿಸುವ ಧೈರ್ಯವಿದೆ. ಆದರೆ ಹುಡುಗರು ಮೊದಲು ಆರಂಭಿಸಬೇಕೆನ್ನುವ ನಿಯಮ ಈಗಲೂ ಇದೆ. ಇದರಿಂದಾಗಿ ನೀವು ಮುಂದಾಗಿ ಆಕೆಗೆ ನಿಮ್ಮಲ್ಲಿರುವ ಭಾವನೆಯನ್ನು ಮೊದಲು ತಿಳಿಸಿ.

ಬಿಲ್ ಪಾವತಿಸಲು ಆಕೆಗೆ ಇಷ್ಟ
ಇಂದಿನ ದಿನಗಳಲ್ಲಿ ಮಹಿಳೆಯರು ಆರ್ಥಿಕ ಸ್ವಾತಂತ್ರ್ಯವನ್ನು ಪಡೆದಿರುವ ಕಾರಣದಿಂದ ಹೋಟೆಲ್ ಬಿಲ್ ಕೊಡಲು ಹಿಂಜರಿಯುವುದಿಲ್ಲ.

ಹುಡುಗಿಯನ್ನು ಕರೆದುಕೊಂಡು ಹೋಗಿ
ಮುಸ್ಸಂಜೆ ವೇಳೆ ಕಾಫಿ ಶಾಪ್ ಒಂದರಲ್ಲಿ ಆಕೆಯನ್ನು ಭೇಟಿಯಾಗಬೇಕೆಂದು ಹೇಳಿದ್ದರೂ ಆಕೆಯ ಮನೆಗೆ ಹೋಗಿ ಕರೆದುಕೊಂಡು ಹೋಗಲು ಪ್ರಯತ್ನಿಸಿ. ಇದು ತುಂಬಾ ಆಕರ್ಷಕವಾಗಿರುವುದು.

ಬೇರೆ ಹುಡುಗಿಯರನ್ನು ನೋಡಬೇಡಿ
ಆಕೆಯೊಂದಿಗೆ ನೀವು ಕುಳಿತುಕೊಂಡಿರುವಾಗ ಅವಳನ್ನೇ ಕೇಂದ್ರವಾಗಿರಿಸಿ. ಸುತ್ತಲಿನ ಬೇರೆ ಹುಡುಗಿಯರನ್ನು ನೋಡಿದರೆ ಆಕೆಗೆ ತುಂಬಾ ಕಿರಿಕಿರಿಯಾಗಬಹುದು.

ಏನು ಧರಿಸಬೇಕೆಂದು ಹೇಳಬೇಡಿ
ನಿಮ್ಮ ಉಡುಗೆ ತೊಡುಗೆ ಬಗ್ಗೆ ಯಾರಾದರೂ ಹೇಳಿದರೆ ಅದು ನಿಮಗೆ ಬೇಸರ ಮೂಡಿಸುವುದಿಲ್ಲವೇ? ಆಕೆಗೂ ಕೂಡ ಹಾಗೆಯೇ. ಕನಸಿನಲ್ಲೂ ಕೂಡ ಆಕೆಯ ಉಡುಗೆತೊಡುಗೆ ಬಗ್ಗೆ ಮಾತನಾಡಲು ಹೋಗಬೇಡಿ.

ಯಾರೊಂದಿಗೆ ಮಾತನಾಡಬೇಕು, ಮಾತನಾಡಬಾರದು
ಆಕೆ ಪುರುಷ ಸಹೋದ್ಯೋಗಿಗಳೊಂದಿಗೆ ಮಾತನಾಡುವುದು ನಿಮಗೆ ಇಷ್ಟವಿರುವುದಿಲ್ಲ. ಆದರೆ ಇಂತಹ ನಿಯಮಗಳನ್ನು ಆಕೆಯ ಮೇಲೆ ಹೇರಲು ಹೋಗಬೇಡಿ. ನಿಮ್ಮ ಚಿಂತೆಯನ್ನು ಆಕೆಗೆ ಹೇಳಿಬಿಡಿ. ಆದರೆ ನಿಯಮ ಹೇರಬೇಡಿ.

ಆಕೆಗೆ ಅಚ್ಚರಿ ಇಷ್ಟ
ಅಚ್ಚರಿಯ ಭೇಟಿ, ಅಚ್ಚರಿಯ ಪಾರ್ಟಿ ಅಥವಾ ಅಚ್ಚರಿಯ ಉಡುಗೊರೆ ಹೀಗೆ ಆಕೆಗೆ ಅಚ್ಚರಿಯು ತುಂಬಾ ಇಷ್ಟವಾಗುವುದು.

ಪುರುಷ ಸ್ನೇಹಿತರೊಂದಿಗೆ ಸೆಲ್ಫಿ ತೆಗೆಸಿಕೊಂಡರೆ ಸಂಶಯ ಪಡಬೇಡಿ
ಹೌದು, ಪುರುಷ ಸ್ನೇಹಿತರೊಂದಿಗೆ ಆಕೆ ಸೆಲ್ಫಿ ತೆಗೆಸಿಕೊಂಡಾಗ ನೀವು ಸಂಶಯಪಟ್ಟರೆ ಅದನ್ನು ಆಕೆ ಅದನ್ನು ಖಂಡಿತವಾಗಿಯೂ ಇಷ್ಟಪಡಲ್ಲ.

ಆಕೆಯ ಫೇಸ್ ಬುಕ್ ನಲ್ಲಿ ಪುರುಷ ಸ್ನೇಹಿತರನ್ನು ಹುಡುಕಬೇಡಿ
ನಿಮ್ಮ ಅಸುರಕ್ಷತೆ ನಿಮಗೆ ದೊಡ್ಡ ಸಮಸ್ಯೆ. ಇದರಿಂದ ಹೊರಬನ್ನಿ. ಆಕೆಯ ಫೇಸ್ ಬುಕ್ ಪ್ರೊಪೈಲ್ ನಲ್ಲಿ ಪುರುಷ ಸ್ನೇಹಿತರನ್ನು ಹುಡುಕುವ ಪ್ರಯತ್ನ ಮಾಡಬೇಡಿ.



Click it and Unblock the Notifications
