ಅವನು ಕೇಳದಿದ್ದರೆ, ನೀವೇ ಕೇಳಿ!, ಒಂದು ರೌಂಡ್ ಸುತ್ತಾಡಿ ಬನ್ನಿ!

Posted By: Deepak M
Subscribe to Boldsky

ಯಾವಾಗಲೂ ಹುಡುಗರೇ ಹುಡುಗಿಯರನ್ನು ಹೊರಗೆ ಸುತ್ತಾಡಿಕೊಂಡು ಬರೋಣ ಬಾ ಎಂದು ಕರೆಯುವ ಕಾಲ ಇರುವುದಿಲ್ಲ. ಸ್ವಲ್ಪ ಜನ ಸಂಕೋಚದ ಸ್ವಭಾವದವರು ಸಹ ಇರುತ್ತಾರೆ. ಅವರಿಗೆ ಹುಡುಗಿಯರನ್ನು ಸುತ್ತಾಡಲು ಕರೆಯಬೇಕು ಎಂಬ ಆಸೆ ಇರುತ್ತದೆ. ಆದರೆ ಕರೆಯುವಷ್ಟು ಧೈರ್ಯ ಇರುವುದಿಲ್ಲ.

ಅಂತಹವರ ಜೊತೆಗೆ ಸಂಬಂಧವನ್ನು ಹೊಂದಿರುವ ಹುಡುಗಿ, ತಾನೇ ಆ ಹುಡುಗನನ್ನು ಎಲ್ಲಾದರೂ ಸುತ್ತಾಡೋಣ ಬಾ ಎಂದು ಕರೆಯಬೇಕಾಗುತ್ತದೆ. ಅಯ್ಯೋ ನಾನು ಅವನನ್ನು ಕೇಳಬೇಕಾ? ಎಂದು ಪ್ರಶ್ನಿಸಿಕೊಂಡರೆ, ನಮ್ಮ ಉತ್ತರ ಏಕೆ ಆಗಬಾರದು? ಮಹಿಳೆ ವ್ಯಕ್ತಿಯನ್ನು ಕೇಳಬೇಕಾದ ಸಮಯ ಬಂದಿದೆ ಎಂಬುದಕ್ಕೆ ತೃಪ್ತಿಕರವಾದ ಕೆಲವು ಕಾರಣಗಳನ್ನು ಕೆಳಗೆ ತಿಳಿಸಿದ್ದೇವೆ ಮುಂದೆ ಓದಿ....

ಆತ್ಮವಿಶ್ವಾಸ ಕಳೆದುಕೊಳ್ಳಬೇಡಿ

ಆತ್ಮವಿಶ್ವಾಸ ಕಳೆದುಕೊಳ್ಳಬೇಡಿ

ನಾಚಿಕೆ ಸ್ವಭಾವವಿಲ್ಲದ ಹುಡುಗಿಯರು ತಾವು ಪ್ರೀತಿಸುವ ಹುಡುಗನಿಗೆ ತಮ್ಮ ನಿಜವಾದ ಭಾವನೆಗಳನ್ನು ವ್ಯಕ್ತಪಡಿಸಲು ಹಿಂಜರಿಯುವುದಿಲ್ಲ. ಒಬ್ಬ ವ್ಯಕ್ತಿ ಅಥವಾ ಹುಡುಗ ತನ್ನ ಭಾವನೆಗಳನ್ನು ಬಹಿರಂಗವಾಗಿ ವ್ಯಕ್ತಪಡಿಸಬಲ್ಲವನಾಗಿರುವಾಗ ಆತ್ಮವಿಶ್ವಾಸವಿರುವ ಯುವತಿಯಾಗಿ ನೀವು ಯಾಕೆ ಭಾವನೆಗಳನ್ನು ವ್ಯಕ್ತಪಡಿಸಬಾರದು?

ನೀವೊಬ್ಬ ಸಂಪೂರ್ಣ ಸ್ತ್ರೀವಾದಿ

ನೀವೊಬ್ಬ ಸಂಪೂರ್ಣ ಸ್ತ್ರೀವಾದಿ

ನೀವು ಲಿಂಗ ಸಮಾನತೆಯಲ್ಲಿ ನಂಬಿಕೆ ಇಟ್ಟಿದ್ದೀರಿ. ಪುರುಷನೇ ಮಹಿಳೆಯನ್ನು ಬೆನ್ನಟ್ಟಿ ಹೋಗಬೇಕೆಂಬ ಹಳೆಯ ಚಿಂತನೆಯಲ್ಲಿ ನಿಮಗೆ ನಂಬಿಕೆ ಇಲ್ಲ. ನೀವು ನಿಮ್ಮ ವ್ಯಕ್ತಿ ಚಿಂತನೆಯ ಮೂಟೆಗಳನ್ನು ಮತ್ತು ನಿಮ್ಮ ಬಗೆಗಿನ ಅವನ ಭಾವನೆಯನ್ನು ವ್ಯಕ್ತಪಡಿಸುವ ಮಾರ್ಗಗಳ ಬಗ್ಗೆ ನೀವು ನಿಮ್ಮ ಪ್ರೀತಿಯ ವ್ಯಕ್ತಿಯ ಮೇಲೆ ಹೊರೆಯನ್ನು ಹೇರುವುದಿಲ್ಲ. ಬದಲಾಗಿ ಮಾತಿನಲ್ಲಿ ನಂಬಿಕೆ ಇದ್ದಾಗ ಅವನಿಗೆ ನಿಮ್ಮ ಪ್ರೀತಿಯನ್ನು ಅರ್ಥಮಾಡಿಸಬಹುದು.

ಅವನು ಸಿಕ್ಕಾಪಟ್ಟೆ ಬ್ಯುಸಿ

ಅವನು ಸಿಕ್ಕಾಪಟ್ಟೆ ಬ್ಯುಸಿ

ಹೌದು, ಇದನ್ನು ತಳ್ಳಿ ಹಾಕಲು ಸಾಧ್ಯವಿಲ್ಲ. ಅವನು ನಿಮ್ಮನ್ನು ನಿಮ್ಮನ್ನು ಗೌರವಿಸುತ್ತಾನೆ. ಅದರೆ ಆತ ತನ್ನ ಕೆಲಸದಲ್ಲಿ ಸಿಕ್ಕಿಹಾಕಿಕೊಂಡಿದ್ದಾನೆ. ಹಾಗಾಗಿ ಅವನಿಗೆ ತನ್ನ ಪ್ರೀತಿಯನ್ನು ತೋರಿಸಲು ಅಥವಾ ನಿಮ್ಮ ಪ್ರೀತಿಯ ಬೆನ್ನಟ್ಟಲು ಸಮಯವಿಲ್ಲ. ಆದ್ದರಿಂದ ನೀವೆ ಏಕೆ ನಿಮ್ಮ ಪ್ರೀತಿಯನ್ನು ತೋರಿಸಲು ಅಥವಾ ಅವನ ಪ್ರೀತಿಯನ್ನು ಬೆನ್ನಟ್ಟುವ ಪಾತ್ರವನ್ನು ವಹಿಸಿಕೊಳ್ಳಬಾರದು?

ಅವನು ಹೆಚ್ಚಾಗಿ ಮಾತನಾಡದ ತನ್ನ ಪಾಡಿಗೆ ತಾನಿರುವ ವ್ಯಕ್ತಿ

ಅವನು ಹೆಚ್ಚಾಗಿ ಮಾತನಾಡದ ತನ್ನ ಪಾಡಿಗೆ ತಾನಿರುವ ವ್ಯಕ್ತಿ

ಎಲ್ಲ ಪುರುಷರು ಹುಟ್ಟುತ್ತಲೆ ಆತ್ಮವಿಶ್ವಾಸದವರಾಗಿ ಮತ್ತು ಇತರರೊಂದಿಗೆ ಬೆರೆಯುವವರಾಗಿರುವುದಿಲ್ಲ. ಹಾಗಾಗಿ ಆತ ಧೈರ್ಯವನ್ನು ತಂದುಕೊಳ್ಳುವವರೆಗೂ ತಾವೇಕೆ ಕಾಯಬಾರದು. ಅದಕ್ಕಾಗಿ ಸ್ವಲ್ಪ ವರ್ಷಗಳು ತೆಗೆದುಕೊಳ್ಳುತ್ತವೆ. ಬದಲಾಗಿ ಆತ ನಿಮ್ಮನ್ನು ಗೌರವಿಸುತ್ತಾನೆ ಮತ್ತು ನಿಮ್ಮ ಮಾತನ್ನು ಕೇಳ ಬಯಸುತ್ತಾನೆ ಎಂದಾಗ ಒಬ್ಬ ಸ್ವಯಂಪ್ರೇರಿತ ಮಹಿಳೆಯಾಗಿ ಅವನ ಮೌನವನ್ನು ಮತ್ತು ಸಂಕೋಚವನ್ನು ನೀವು ನಿವಾರಿಸಬಹುದು ಮತ್ತು ಅವನನ್ನು ನಿಮ್ಮೊಂದಿಗೆ ಸುತ್ತಾಡಲು ಕೇಳಬಹುದು.

ಅವನು ನಿಮ್ಮನ್ನು ನೋಡಿ ಅಚ್ಚರಿಗೊಂಡಿರಬಹುದು

ಅವನು ನಿಮ್ಮನ್ನು ನೋಡಿ ಅಚ್ಚರಿಗೊಂಡಿರಬಹುದು

ಇದು ನಿಮ್ಮನ್ನು ತುಂಬಾ ಇಷ್ಟಪಡುವ ವ್ಯಕ್ತಿಯು ನಿಮ್ಮಿಂದ ಅಂತರವನ್ನು ಕಾಯ್ದುಕೊಳ್ಳಲು ಇರಬಹುದಾದ ಮತ್ತೊಂದು ಕಾರಣವಿರಬಹುದು. ನಿಮ್ಮ ವಿಶ್ವಾಸವು ಸ್ತ್ರೀಯರ ಪರವಾದದ್ದು ಎಂಬ ತಪ್ಪಾದ ಅನಿಸಿಕೆ ನೀಡಿದಾಗ ಅದು ಅವರಲ್ಲಿ ಅವರನ್ನು ಪ್ರೋತ್ಸಾಹಿಸುವುದಿಲ್ಲ ಎಂಬ ತಪ್ಪು ಅಭಿಪ್ರಾಯವನ್ನು ಉಂಟುಮಾಡಬಹುದು. ಆಗ ನಿಮ್ಮ ಬಗ್ಗೆ ಈ ಮೊದಲು ತೋರಿಸಿದಷ್ಟು ಆಸಕ್ತಿಯನ್ನು ಆತ ಈಗ ನಿಲ್ಲಿಸಬಹುದು. ಅಂತಹ ಸ್ಥಿತಿಯಲ್ಲಿ ಅವರ ಅನುಮಾನವನ್ನು ತೊಡೆದುಹಾಕುವುದು ನಿಮ್ಮ ಕರ್ತವ್ಯವಾಗಿರುತ್ತದೆ.

ಎಲ್ಲ ಪುರುಷರು ಕೋಪಿಷ್ಟರಲ್ಲ

ಎಲ್ಲ ಪುರುಷರು ಕೋಪಿಷ್ಟರಲ್ಲ

ನೀವು ಇಷ್ಟಪಡುವ ವ್ಯಕ್ತಿ ನಿಮ್ಮೊಂದಿಗೆ ಸುತ್ತಾಡಲು ಸಮಯವನ್ನು ಕೇಳಲು ಕಾಯುತ್ತಿರಬಹುದು. ಆಗ ನೀವು ಮೌನವಾಗಿದ್ದು ಅವಕಾಶವನ್ನು ಕಳೆದುಕೊಳ್ಳುವ ಬದಲಾಗಿ ಅವನನ್ನು ಸಂಧಿಸುವ ಪ್ರಯತ್ನ ಮಾಡಿ. ಅವನ ಜೊತೆಗೆ ಸುತ್ತಾಡಲು ನೀವು ಸಹ ಕಾದಿದ್ದೀರಿ ಎಂದು ಹೇಳಿ. ಆಗ ಅವನು ಅಂತಿಮವಾಗಿ ನಿಮ್ಮ ಗಮನ ಸೆಳೆಯಲು ಸಫಲನಾಗಿದ್ದಕ್ಕೆ ಸಂತೋಷಪಡುತ್ತಾನೆ.

ಅವನು ಗೆಳೆತನವನ್ನು ಮೀರಿ ಹೋಗುವವನಲ್ಲ

ಅವನು ಗೆಳೆತನವನ್ನು ಮೀರಿ ಹೋಗುವವನಲ್ಲ

ನೀವು ಸ್ನೇಹಪರರಾಗಿರುತ್ತೀರಿ. ಅದರೆ ನೀವು ಅವರೊಂದಿಗೆ ಇರಲು ಆಸಕ್ತಿದಾಯಕವಾಗಿರುವಾಗ ಅವರಿಂದ ಯಾವುದೇ ಸೂಚನೆಗಳು ದೊರೆಯದಿದ್ದಾಗ ಊಟಕ್ಕೆ ಹೋಗಲು ಯಾವುದು ಉತ್ತಮ ಮಾರ್ಗ ಎಂಬುದನ್ನು ತೋರಿಸಿ.

ಅವನು ನಿಮಗೆ ಹೋಲಿಸಿದಾಗ ಕಡಿಮೆ ಸಂಪಾದಿಸಬಹುದು

ಅವನು ನಿಮಗೆ ಹೋಲಿಸಿದಾಗ ಕಡಿಮೆ ಸಂಪಾದಿಸಬಹುದು

ಇಬ್ಬರಲ್ಲೂ ಪರಸ್ಪರರ ಬಗ್ಗೆ ಒಲವು ಇರಬಹುದು. ಅದರೆ ಅವನು ನಿಮ್ಮನ್ನು ಐಷಾರಾಮಿ ಜಾಗಗಳಿಗೆ ಕರೆದುಕೊಂಡು ಹೋಗಲು ಸಾಧ್ಯವಿಲ್ಲದಿರುವುದರಿಂದ ನಿಮ್ಮನ್ನು ಕರೆಯಲು ಹಿಂಜರಿಯಬಹುದು. ಆಗ ನೀವು ಒಂದು ಹೆಜ್ಜೆ ಮುಂದೆ ಹೋಗಿ ಅವನನ್ನು ಕೇಳಿಕೊಳ್ಳಿ. ಹೊರಗೆ ಹೋಗುವುದರಿಂದ ಖರ್ಚು ಮಾಡುವ ಹಣಕ್ಕಿಂತಲೂ ಹೆಚ್ಚಿನ ಸಂಗತಿಗಳಿವೆ ಎಂಬುದನ್ನು ಅವರಿಗೆ ತಿಳಿಸಿ ಹೇಳಿ.

ಸ್ಥಳವನ್ನು ಅಯ್ಕೆ ಮಾಡುವ ಹಕ್ಕು ನಿಮ್ಮದಾಗಿರುತ್ತದೆ

ಸ್ಥಳವನ್ನು ಅಯ್ಕೆ ಮಾಡುವ ಹಕ್ಕು ನಿಮ್ಮದಾಗಿರುತ್ತದೆ

ಇದು ನೀವು ಮೊದಲ ಹೆಜ್ಜೆ ಮುಂದಿಡಲು ಹೆಚ್ಚಿನ ಪ್ರಯೋಜನವಾಗುತ್ತದೆ. ನೀವೇ ಪ್ರಾರಂಭಿಕರಾಗಿರುವುದರಿಂದ ನಿಮ್ಮ ಆಧ್ಯತೆಯ ಪ್ರಕಾರ ನೀವು ಭೇಟಿ ಮಾಡುವ ಸ್ಥಳವನ್ನು ನಿರ್ಧರಿಸುವ ಹಕ್ಕನ್ನು ನೀವು ಹೊಂದಿರುತ್ತೀರಿ. ಇದನ್ನು ಖಂಡಿತವಾಗಿಯೂ ನಿಮ್ಮ ಹುಡುಗ ತಿರಸ್ಕರಿಸುವುದಿಲ್ಲ ಏಕೆಂದರೆ ಅದನ್ನು ಮಾಡಲು ಅವನಿಗೆ ಮುಜುಗರ ಉಂಟಾಗುತ್ತದೆ.

ನಿಮ್ಮ ಭವಿಷ್ಯವನ್ನು ನಿರ್ಧರಿಸಲು ಬಯಸುವಿರಾ

ನಿಮ್ಮ ಭವಿಷ್ಯವನ್ನು ನಿರ್ಧರಿಸಲು ಬಯಸುವಿರಾ

ನೀವಿಬ್ಬರು ಒಬ್ಬರನ್ನೊಬ್ಬರು ಮೆಚ್ಚಿ ಗೌರವಿಸುವುದಾದರೆ ಒಳ್ಳೆಯ ಸ್ನೇಹಿತರಾಗುತ್ತೀರಿ. ಈ ಹಂತದಲ್ಲಿ ನೀವು ಪದವೀಧರರಾಗಿರುವ ಅಗತ್ಯತೆ ಇರುತ್ತದೆ. ಅವನಿಗೆ ಚೆನ್ನಾಗಿ ತಿಳಿದಿರುವ ಯಾವುದೇ ವಿಚಾರದ ಬಗ್ಗೆ ಕಾರಣಗಳಿಗಾಗಿ ನಿಮ್ಮನ್ನು ಕೇಳದೆ ಇದ್ದರೆ ನೀವು ಚಿಂತಿಸುವ ಅಗತ್ಯವಿಲ್ಲ. ಅಲ್ಲದೆ ನೀವು ಮುಂದೆ ನಿಮ್ಮಿಬ್ಬರ ಸಂಬಂಧವನ್ನು ತೆಗೆದುಕೊಂಡು ಹೋಗಬೇಕೆಂದುಕೊಂಡಿರುವಿರಿ ಎಂಬುದರ ಬಗ್ಗೆ ಅವನಲ್ಲಿ ಕೇಳಬಹುದು ಮತ್ತು ಚರ್ಚಿಸಬಹುದು. ಕನಸುಗಳನ್ನು ಕಾಣುವುದನ್ನು ನಿಲ್ಲಿಸಿ ಮತ್ತು ನಿಮ್ಮ ಕನಸಿನ ಪ್ರೇಮಿಯನ್ನು ಬೆನ್ನಟ್ಟಿರಿ. ನಿಮ್ಮ ಪ್ರೇಮಿ ನಿಮ್ಮ ಬಾಳ ಸಂಗಾತಿಯಾಗಿ ಬರಲಿ ಎಂದು ನಾವು ಸಹ ಹಾರೈಸುತ್ತೇವೆ.

For Quick Alerts
ALLOW NOTIFICATIONS
For Daily Alerts

    English summary

    Reasons Why A Woman Should Ask A Man Out

    Hey, young ladies, which planet are you from? Dreaming of being wooed by a charming young man you have always fantasized about? Wake up please, and understand that times have changed. You are the twenty-first century young dynamic young woman, who doesn't want to wait forever for a man to ask her for a date. If you do not act, you might end up as a damsel in distress and will remain forever in distress! Because, there is no more a prince charming coming to rescue you from your distress!
    Story first published: Tuesday, June 27, 2017, 23:42 [IST]
    We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more