ಹುಡುಗಿಯರಿಗೆ ಗಿಟಾರ್ ನುಡಿಸುವ ಹುಡುಗರೇ ಇಷ್ಟವಾಗುತ್ತಾರಂತೆ!

By: Deepu
Subscribe to Boldsky

ಬಾಲಿವುಡ್‌ನ ಸಿನಿಮಾಗಳಲ್ಲಿ ನಾಯಕ ಗಿಟಾರ್ ಬಾರಿಸುತ್ತಾ ಹಾಡು ಹಾಡಿ ನಾಯಕಿಯನ್ನು ಪ್ರೀತಿಸುವುದನ್ನು ನೀವು ನೋಡಿರಬಹುದು. ಹೆಚ್ಚಿನ ಸಿನಿಮಾಗಳಲ್ಲಿ ನಾಯಕ ಗಿಟಾರ್ ನುಡಿಸುತ್ತಾ ಹಾಡಿದರೆ, ನಾಯಕಿ ನೃತ್ಯ ಮಾಡುತ್ತಿರುತ್ತಾಳೆ.

ಆದರೆ ಈ ಲೇಖನದಲ್ಲಿ ಬೋಲ್ಡ್ ಸ್ಕೈ ಹೇಳಲು ಹೊರಟಿರುವುದು ಗಿಟಾರ್ ನುಡಿಸುವ ಹುಡುಗರತ್ತ ಹುಡುಗಿಯರು ಹೆಚ್ಚು ಆಕರ್ಷಿತರಾಗು ಬಗ್ಗೆ. ಹತ್ತರಲ್ಲಿ 8 ಮಂದಿ ಮಹಿಳೆಯರಿಗೆ ಗಿಟಾರ್ ನುಡಿಸುವ ಹುಡುಗರು ಇಷ್ಟವಂತೆ.

ಗಿಟಾರ್ ನುಡಿಸುವ ಹುಡುಗರೊಂದಿಗೆ ಡೇಟಿಂಗ್ ಗೆ ಹೋಗಲು ಯಾವುದೇ ಹಿಂಜರಿಕೆಯಿಲ್ಲವೆಂದು ಹೆಚ್ಚಿನ ಮಹಿಳೆಯರು ಒಪ್ಪಿಕೊಂಡಿದ್ದಾರೆ. ಸಾಮಾನ್ಯ ಹುಡುಗರಿಗಿಂತ ಗಿಟಾರ್ ನುಡಿಸುವ ಹುಡುಗರು ಯಾಕೆ ಇಷ್ಟವಾಗುತ್ತಾರೆ ಎನ್ನುವ ಬಗ್ಗೆ ಈ ಲೇಖನದಲ್ಲಿ ತಿಳಿದುಕೊಳ್ಳುವ...

#1

#1

ಗಿಟಾರ್ ನುಡಿಸಲು ಜಾಣ್ಮೆ ಮತ್ತು ಪ್ರತಿಭೆ ಬೇಕಾಗುತ್ತದೆ. ಇದರಿಂದ ಗಿಟಾರ್ ನುಡಿಸುವ ಹುಡುಗರು ಪ್ರತಿಭಾವಂತರೆಂದು ನಂಬಲಾಗಿದೆ.

#2

#2

ಯಾವುದೇ ಗುಂಪಿನಲ್ಲಿದ್ದರೂ ಗಿಟಾರ್ ನುಡಿಸುವ ಹುಡುಗನು ಬೇಗನೆ ಬೇರೆಯವರನ್ನು ಆಕರ್ಷಿಸಬಲ್ಲ. ಆತ ಧನಾತ್ಮಕ ಶಕ್ತಿಯನ್ನು ತುಂಬಿ ಜನರು ಆತನತ್ತ ಆಕರ್ಷಣೆಯಾಗುವಂತೆ ಮಾಡಬಲ್ಲ. ಗುಂಪನ್ನು ಸೆಳೆಯಬಲ್ಲ ಹುಡುಗರು ಮಹಿಳೆಯರಿಗೆ ಇಷ್ಟ.

#3

#3

ಸಂಗೀತವು ತುಂಬಾ ಹಿತವನ್ನು ನೀಡುವುದು. ಗಿಟಾರ್ ನುಡಿಸುವ ಹುಡುಗನು ಒಳ್ಳೆಯ ಭಾವನೆಯನ್ನು ಉಂಟು ಮಾಡಿ ಇಂದ್ರಿಯಗಳಲ್ಲಿ ಉತ್ತಮ ಸಂವೇದನೆ ಸೃಷ್ಟಿಸಬಲ್ಲ.

#4

#4

ಪ್ರತಿಯೊಬ್ಬರಿಗೂ ಗಿಟಾರ್ ನುಡಿಸಲು ಸಾಧ್ಯವಿಲ್ಲ. ಇದನ್ನು ಪರಿಪೂರ್ಣತೆಯಿಂದ ನುಡಿಸಬೇಕಾದರೆ ಅದಕ್ಕೆ ತಕ್ಕ ಪರಿಶ್ರಮ ಮತ್ತು ಕಲಿಯುವ ಸಾಮರ್ಥ್ಯ ಬೇಕೇಬೇಕು. ಇದರಿಂದ ಗಿಟಾರ್ ನುಡಿಸುವ ಹುಡುಗರಲ್ಲಿ ಪರಿಪೂರ್ಣತೆಯಿದೆ ಎನ್ನಬಹುದು.

#5

#5

ಯಾವುದೇ ಸಂಗೀತ ಸಾಧನಗಳನ್ನು ನುಡಿಸಲು ಸೂಕ್ಷ್ಮತೆ ಬೇಕು. ಸೂಕ್ಷ್ಮತೆ ಇರುವ ವ್ಯಕ್ತಿಯು ಕಲ್ಲು ಹೃದಯದ ವ್ಯಕ್ತಿಗಿಂತ ಹೆಚ್ಚು ಆಕರ್ಷಣೀಯವಾಗಿರುತ್ತಾನೆ. ಸೂಕ್ಷ್ಮತೆ ಇರುವ ವ್ಯಕ್ತಿಗಳು ತುಂಬಾ ಪ್ರೀತಿಸುವವರು ಹಾಗೂ ಆರೈಕೆ ಮಾಡುವವರಾಗಿರುತ್ತಾರೆ.

#6

#6

ಗಿಟಾರ್ ಹಿಡಿದಿರುವ ಹುಡುಗರು ರಾಕ್ ಸ್ಟಾರ್ ನಂತೆ ಕಾಣುತ್ತಾರೆ. ಗಿಟಾರ್ ಹಿಡಿದಿರುವ ವ್ಯಕ್ತಿಯು ತುಂಬಾ ಸ್ಫೂರ್ತಿ ಹಾಗೂ ಆಕರ್ಷಣೀಯವಾಗಿರುತ್ತಾನೆ.

#7

#7

ಹೆಚ್ಚಿನ ಕಲಾವಿದರು ಹಾಸಿಗೆಯಲ್ಲಿ ತುಂಬಾ ಉತ್ತಮರಾಗಿರುತ್ತಾರೆ. ಈ ಕಾರಣದಿಂದ ಗಿಟಾರ್ ಬಾರಿಸುವ ಹುಡುಗರು ಮಹಿಳೆಯರಿಗೆ ಇಷ್ಟವಾಗುತ್ತಾರೆ.

 

English summary

Reasons Why Girls Love Guys Who Play Guitar

Ask any woman; at least 8 out of every 10 women would agree that a guy who plays guitar is attractive. Yes, women tend to have a crush on the guy who plays guitar. Some women openly admit that they would love to date a guy who has music sense. Yes, such guys are more attractive compared to the average. Let us speculate the reasons here.
Subscribe Newsletter