ಅರೆ ಸ್ವಲ್ಪ ಕೇಳಿ! ಆಕೆಯ ಎದುರು, ಹೀಗೆಲ್ಲಾ ಮಾಡಕ್ಕೆ ಹೋಗಬೇಡಿ

By: Arshad
Subscribe to Boldsky

ಹಿಂದಿನ ದಿನಗಳಲ್ಲಿ ಗೌರವರ್ಣವಿದ್ದ ಪುರುಷರನ್ನು ಹೆಚ್ಚಾಗಿ ಹುಡುಗಿಯರು ಇಷ್ಟಪಡುತ್ತಾರೆ ಎಂದು ನಂಬಿದ್ದ ಕಾಲದಲ್ಲಿ ಫೇಸ್ ಪೌಡರ್ ಭರ್ಜರಿಯಾಗಿ ಮಾರಾಟವಾಗುತ್ತಿತ್ತು. ಕಾಲ ಬದಲಾದಂತೆ ಹುಡುಗಿಯರು ಇಷ್ಟ ಪಡುವ ವಿಷಯಗಳೂ ಬದಲಾಗುತ್ತಾ ಹೋಗುತ್ತಿವೆ. ಇದನ್ನು ಅರ್ಥ ಮಾಡಿಕೊಳ್ಳದ ಯುವಕರು ತಮ್ಮ ಅಲಂಕಾರದಲ್ಲಿ ತರತರನೆಯ ಸರ್ಕಸ್ಸುಗಳನ್ನು ಮಾಡುತ್ತಿರುತ್ತಾರೆ.

ಆದರೆ ಇವೆಲ್ಲವೂ ಯುವತಿಯರನ್ನು ಆಕರ್ಷಿಸಲು ವಿಫಲವಾಗುತ್ತವೆ. ಒಂದು ವೇಳೆ ಯುವತಿಯರಿಗೆ ಏನು ಇಷ್ಟವಾಗುವುದಿಲ್ಲ ಎಂದು ಗೊತ್ತಾದರೆ ಆ ವಿಷಯಗಳನ್ನು ಮಾಡದೇ ಇರುವ ಮೂಲಕ ಮನಗೆಲ್ಲುವ ವಿಧಾನಗಳನ್ನು ಅನುಸರಿಸಲು ಸಾಧ್ಯ....

ಸತತವಾಗಿ ಹಿಂಬಾಲಿಸಬೇಡಿ

ಸತತವಾಗಿ ಹಿಂಬಾಲಿಸಬೇಡಿ

ಒಂದು ವೇಳೆ ನೀವು ಓರ್ವ ಯುವತಿಯಿಂದ ಪ್ರೇಮಭಿಕ್ಷೆಯನ್ನು ನಿರಾಕರಿಸಲ್ಪಟ್ಟಿದ್ದರೆ ಮತ್ತೊಮ್ಮೆ ಆ ಯುವತಿಯಲ್ಲಿ ಭಿಕ್ಷೆ ಬೇಡಬೇಡಿ. ಏಕೆಂದರೆ ಮತ್ತೊಮ್ಮೆ ಮಗದೊಮ್ಮೆ ಕೇಳುತ್ತಾ ಇದ್ದರೆ ಆಕೆಗೆ ಇದು ಕಿರಿಕಿರಿ ಎನಿಸುತ್ತದೆ.

ನೀವು ಹಲವರಲ್ಲಿ ಉತ್ಸುಕತೆ ತೋರುತ್ತಿದ್ದೀರೋ?

ನೀವು ಹಲವರಲ್ಲಿ ಉತ್ಸುಕತೆ ತೋರುತ್ತಿದ್ದೀರೋ?

ಒಂದು ವೇಳೆ ನೀವು ಹಲವರಲ್ಲಿ ನಿಮ್ಮ ಪ್ರೇಮವನ್ನು ನಿವೇದಿಸಿಕೊಂಡು ತಾನು ಲಭ್ಯನಿದ್ದೇನೆ ಎಂಬುದನ್ನು ಫೇಸ್‌ಬುಕ್ ಮೊದಲಾದ ಸಾಮಾಜಿಕ ತಾಣಗಳ ಮೂಲಕ ಟಾಂ ಟಾಂ ಮಾಡುವುದನ್ನು ಯಾವುದೇ ಯುವತಿ ಇಷ್ಟಪಡುವುದಿಲ್ಲ.

ನಿಮ್ಮ ಕಥೆಯನ್ನು ಉತ್ಪ್ರೇಕ್ಷೆ ಮಾಡುತ್ತಿದ್ದೀರೋ?

ನಿಮ್ಮ ಕಥೆಯನ್ನು ಉತ್ಪ್ರೇಕ್ಷೆ ಮಾಡುತ್ತಿದ್ದೀರೋ?

ನಿಮ್ಮ ನಡುವೆ ಮಾತುಕತೆ ಪ್ರಾರಂಭವಾದ ಬಳಿಕ ತಮ್ಮ ಬಗ್ಗೆಯೇ ಹೇಳಿಕೊಳ್ಳುತ್ತಾ ಇರುವ ಸಂಗತಿಗಳನ್ನು ಉತ್ಪ್ರೇಕ್ಷಿಸುವುದನ್ನು ಯಾವುದೇ ಯುವತಿ ಇಷ್ಟಪಡುವುದಿಲ್ಲ

ಪದೇ ಪದೇ ನಿಮ್ಮ ಪ್ರೇಮವನ್ನು ಪ್ರಕಟಿಸುತ್ತಾ ಇರುತ್ತೀರೋ?

ಪದೇ ಪದೇ ನಿಮ್ಮ ಪ್ರೇಮವನ್ನು ಪ್ರಕಟಿಸುತ್ತಾ ಇರುತ್ತೀರೋ?

ನಿಮ್ಮ ಪ್ರೇಮವನ್ನು ಆಗಾಗ, ಸಂದರ್ಭಾನುಸಾರ ಪ್ರಕಟಿಸಿದರೆ ಸಾಕು. ಅದು ಬಿಟ್ಟು ಘಳಿಗೆ ಘಳಿಗೆಗೂ ಸಂದೇಶಗಳನ್ನು ರವಾನಿಸುತ್ತಾ ಇರುವುದನ್ನು ಯಾವುದೇ ಯುವತಿ ಸಹಿಸಲಾರಳು.

ಇಂದಿನ ಫ್ಯಾಷನ್ ಯುಗದ ರಾಯಭಾರಿಯಂತೆ ವರ್ತಿಸುತ್ತಿದ್ದೀರೋ

ಇಂದಿನ ಫ್ಯಾಷನ್ ಯುಗದ ರಾಯಭಾರಿಯಂತೆ ವರ್ತಿಸುತ್ತಿದ್ದೀರೋ

ನೀವು ಕೂಲ್ ಆಗಿ ಕಾಣಬೇಕೆಂದು ಬಯಸಿ ನವ ಫ್ಯಾಷನ್ ಯುಗದ ಬಿಂಕ ಬಿನ್ನಾಣಗಳನ್ನೆಲ್ಲಾ ತಮ್ಮ ಮೇಲೆ ಹೇರಿಕೊಂಡು ಬಿನ್ನಾಣ ಪ್ರದರ್ಶಿಸುವುದು ಕೆಲವೊಮ್ಮೆ ಉಲ್ಟಾ ಹೊಡೆಯಬಹುದು. ಏಕೆಂದರೆ ಹೊಸ ಫ್ಯಾಷನ್ ನಿಮಗೆ ಅತ್ಯಂತ ಆಕರ್ಷಕವಾಗಿ ಕಂಡರೂ ಯುವತಿಯರಿಗೆ ಅದು ಮಂಗನಿಗೆ ಸರ್ಕಸ್ ವೇಷ ತೊಡಿಸಿದಂತೆ ತೋರಬಹುದು.

ತನ್ನ ಬೆನ್ನನ್ನು ತಾವೇ ತಟ್ಟಿಕೊಳ್ಳುವುದು

ತನ್ನ ಬೆನ್ನನ್ನು ತಾವೇ ತಟ್ಟಿಕೊಳ್ಳುವುದು

ಕೆಲವರಿಗೆ ಭಾರೀ ಹಣ ಖರ್ಚು ಮಾಡಿ ದರ್ಪ ತೋರಿಸುವ, ತಮ್ಮ ಅಥವಾ ತಮ್ಮ ತಂದೆಯ ಬಳಿ ಭಾರೀ ಹಣ ಇರುವ ಬಗ್ಗೆ, ತಮ್ಮಲ್ಲಿರುವ ಧನಕನಕ, ಭೂಮಿ, ಸಂಪತ್ತಿನ ಬಗ್ಗೆ ಕೊಚ್ಚಿಕೊಳ್ಳುವುದು ಅಭ್ಯಾಸವಾಗಿರುತ್ತದೆ. ಅಷ್ಟೇ ಅಲ್ಲ, ಕೆಲವರಿಗೆ ತಮ್ಮ ರೂಪ ಲಾವಣ್ಯ ಅಲಂಕಾರದ ಬಗ್ಗೆ ಕೊಚ್ಚಿಕೊಳ್ಳುವುದು, ಎದುರಿಗಿರುವವರ ಸೌಂದರ್ಯವನ್ನು ಹೊಗಳುವ ಚಟವೂ ಇರುತ್ತದೆ. ಈ ಅಭ್ಯಾಸಗಳನ್ನೂ ಯುವತಿಯರು ಇಷ್ಟಪಡುವುದಿಲ್ಲ.

ಚುಟುಕು ವಾಕ್ಯಗಳನ್ನು ಬಳಸುವುದು

ಚುಟುಕು ವಾಕ್ಯಗಳನ್ನು ಬಳಸುವುದು

You look ill. You must be suffering form a lack of Vitamin ME. ಇಂತಹ ಚುಟುಕು ವಾಕ್ಯಗಳಿಂದ ಮನದನ್ನೆಯ ಮನ ಸೆಳೆಯಬಹುದು ಎಂದು ನೀವು ತಿಳಿದುಕೊಂಡಿದ್ದರೆ ಇದು ಹೆಚ್ಚಿನ ಸಂದರ್ಭದಲ್ಲಿ ತಪ್ಪಾಗುತ್ತದೆ. ಏಕೆಂದರೆ ಯಾವುದೇ ಯುವತಿ ತಾನು ಮೆಚ್ಚುವ ವ್ಯಕ್ತಿಯ ಅಂತರಾಳ ಮತ್ತು ವ್ಯಕ್ತಿತ್ವವನ್ನು ಅರಿತು ಮೆಚ್ಚುತ್ತಾಳೆಯೇ ಹೊರತು ನೀವೆಷ್ಟೇ ಸುಂದರರಾಗಿದ್ದು ಮನಗೆಲ್ಲುವ ವಾಕ್ಯಗಳನ್ನೆಷ್ಟೇ ಎಸೆದರೂ ಈ ವಿಧಾನಗಳಿಗೆ ಮನಸೋಲಲಾರಳು.

English summary

Annoying Things Guys Do That Make Women Hate Them

Some guys who make friends with girls tend to get the equation right when it comes to figuring out what impresses girls and what fails to impress. Here are some things girls don't like at all but still some guys keep doing them.
Story first published: Thursday, May 25, 2017, 23:37 [IST]
Subscribe Newsletter