Latest Updates
-
ಮದುವೆಯಾದ ತಕ್ಷಣ ಸ್ವಾತಂತ್ರ್ಯ ಕೊನೆಗೊಳ್ಳುವುದಿಲ್ಲ: ದಾಂಪತ್ಯದಲ್ಲಿ 'ಸಮ್ಮತಿ'ಯ ಮಹತ್ವವೇನು? -
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು -
ವಿಚ್ಛೇದನದ ನಂತರವೂ ಜೀವನಾಂಶ ಪಡೆಯಬಹುದೇ? ಮಧ್ಯಪ್ರದೇಶ ಹೈಕೋರ್ಟ್ನಿಂದ ಮಹತ್ವದ ತೀರ್ಪು! -
ದೆಹಲಿ ವಾಯು ಮಾಲಿನ್ಯ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಪ್ಯಾಕ್ ಮಾಡಿದ ಆಹಾರದ ಮೇಲೆ 'ರೆಡ್ ಹೆಕ್ಸಗನ್' ಎಚ್ಚರಿಕೆ: ಇನ್ಮುಂದೆ ತಿನ್ನುವ ಮುನ್ನ ಈ ವಿಷಯ ಗಮನಿಸಿ! -
ಆಪಲ್ 'ಸರ್ಪ್ರೈಸ್ ಆಂಡ್ ಶೈನ್' ಈವೆಂಟ್: ಐಫೋನ್ 18 ಪ್ರೋ ಮತ್ತು ಫೋಲ್ಡಬಲ್ ಆಲ್ಟ್ರಾ ಲಾಂಚ್, ಭಾರತದಲ್ಲಿ ಬೆಲೆ ಎಷ್ಟು? -
ಟಾಟಾ ಮುಂಬೈ ಮ್ಯಾರಥಾನ್ ಡ್ರೀಮ್ ರನ್: ಇಂದೇ ನೋಂದಣಿ ಮುಕ್ತಾಯ, ಓಟಕ್ಕೆ ಸಜ್ಜಾಗಲು 20 ನಿಮಿಷದ ಪ್ಲಾನ್ ಇಲ್ಲಿದೆ!
ಪದಗಳಲ್ಲಿ ಬಣ್ಣಿಸದೆ ಒಮ್ಮೆ ಪ್ರೀತಿಯನ್ನು ವ್ಯಕ್ತಪಡಿಸಿ ನೋಡಿ!
ಕೆಲವರು ತಮ್ಮ ಸಂಗಾತಿಯನ್ನು ತುಂಬಾ ಪ್ರೀತಿಸುತ್ತಾರೆ. ಆದರೆ ಇದನ್ನು ವ್ಯಕ್ತಪಡಿಸಲು ತುಂಬಾ ಕಷ್ಟಪಡಬೇಕಾಗುತ್ತದೆ. ಅದರಲ್ಲೂ ಮೊದಲ ಸಲ ಪ್ರೀತಿಯನ್ನು ವ್ಯಕ್ತಪಡಿಸುವುದು ಇದೆಯಲ್ಲಾ ಅದು ತುಂಬಾ ಸಾಹಸದ ಕೆಲಸವೆನ್ನಬಹುದು. ಕೆಲವೊಂದು ಹಾವಭಾವಗಳು ನಿಮ್ಮ ಪ್ರೀತಿಯನ್ನು ತೋರಿಸಬಹುದು.
ಆದರೆ ಇದನ್ನು ಅರ್ಥ ಮಾಡಿಕೊಳ್ಳುವಂತಹ ಶಕ್ತಿ ಎದುರಿನವರಿಗೆ ಇರಬೇಕಾಗುತ್ತದೆ. ಈ ಲೇಖನದಲ್ಲಿ ಪದಗಳನ್ನು ಬಳಸದೆ ಪ್ರೀತಿಯನ್ನು ಯಾವ ರೀತಿಯಲ್ಲಿ ವ್ಯಕ್ತಪಡಿಸಬಹುದು ಎನ್ನುವ ಬಗ್ಗೆ ತಿಳಿಸಿಕೊಡಲಿದ್ದೇವೆ. ಇದರಿಂದ ನಿಮ್ಮ ಹಾಗೂ ಸಂಗಾತಿ ನಡುವಿನ ಭಾಂದವ್ಯವು ಮತ್ತಷ್ಟು ಗಟ್ಟಿಯಾಗಬಹುದು. ಮೊದಲ ಪ್ರೀತಿಯ ಸಿಹಿ-ಕಹಿ ನೆನಪು ಎಂದಿಗೂ ಶಾಶ್ವತ!
ವಿಶೇಷವಾಗಿ ಯಾವ ರೀತಿಯಿಂದ ಪ್ರೀತಿಯನ್ನು ವ್ಯಕ್ತಪಡಿಸಿದರೆ ನಿಮ್ಮ ಸಂಗಾತಿಯು ತುಂಬಾ ಸಂತೋಷಪಡಬಹುದು ಮತ್ತು ನಿಮ್ಮನ್ನು ಮತ್ತಷ್ಟು ಪ್ರೀತಿಸಲು ಮುಂದಾಗಬಹುದು ಎಂದು ತಿಳಿಯಿರಿ. ಸಂಗಾತಿಯನ್ನು ಸೆಳೆಯಲು ಇವುಗಳನ್ನು ಖಂಡಿತವಾಗಿಯೂ ನೀವು ಪ್ರಯತ್ನಿಸಬೇಕು. ಅದು ಹೇಗೆಂದು ಮುಂದೆ ಓದುತ್ತಾ ಪ್ರೀತಿಸಲು ಕಲಿಯಿರಿ.

ಸಮಯ ಕೊಡಿ
ಇದು ನೀವು ಮಾಡಬೇಕಾದ ಮೊದಲ ಕೆಲಸ. ಸಂಗಾತಿಯೊಂದಿಗೆ ಸಮಯ ಕಳೆದು ಅವರಲ್ಲಿ ವಿಶೇಷ ಭಾವನೆ ಮೂಡುವಂತೆ ಮಾಡಿ. ಅವರ ಕರೆ ಬಂದಾಗ ನಿಮಗೆ ಸ್ವೀಕರಿಸಲು ಅಥವಾ ಮಾತನಾಡಲು ಕಷ್ಟವಾಗಬಾರದು. ಅವರ ಅಂದಿನ ದಿನ ಹೇಗಿತ್ತೆಂದು ಕೇಳಬೇಕು.

ಮಾತನ್ನು ಕೇಳಿ
ನೀವು ಹೇಳುವ ಮಾತನ್ನು ಎದುರಿನ ವ್ಯಕ್ತಿ ಕೇಳುತ್ತಾ ಇದ್ದಾನೆಂದು ನಿಮಗೆ ಮನವರಿಕೆಯಾದರೆ ಆ ವ್ಯಕ್ತಿಯೊಂದಿಗಿನ ಭಾಂದವ್ಯವು ಮತ್ತಷ್ಟು ಉತ್ತಮವಾಗುತ್ತದೆ. ಅವರ ಕೈಯನ್ನು ಹಿಡಿದುಕೊಂಡು ಮಾತನ್ನು ಕೇಳುತ್ತಾ ಇರಿ.

ಮುತ್ತು ಮತ್ತು ಅಪ್ಪುಗೆ
ಬೆಳಿಗ್ಗೆ ಎದ್ದು ನಿಮ್ಮ ಪ್ರೀತಿಪಾತ್ರರನ್ನು ಅಪ್ಪಿಕೊಂಡರೆ ಅದಕ್ಕಿಂತ ಶುಭದಿನ ಮತ್ತೊಂದಿಲ್ಲ. ಅವರ ಕೆನ್ನೆಗೆ ಒಂದು ಸಿಹಿ ಮುತ್ತು ಕೊಟ್ಟರೆ ನಿಮ್ಮ ಸಂಗಾತಿಗೆ ಅದು ಮತ್ತಷ್ಟು ವಿಶೇಷವೆನಿಸಲಿದೆ.

ಜೀವನ ಸುಲಭವಾಗಿಸಿ
ಜೀವನದಲ್ಲಿ ಅವರಿಗೆ ಏನು ಬೇಕೋ ಅಥವಾ ಏನಾದರೂ ಸಾಧನೆ ಮಾಡಬೇಕೆಂದಿದ್ದರೆ ಆಗ ಅವರನ್ನು ಬೆಂಬಲಿಸಿ. ಇದರಿಂದ ಅವರಿಗೆ ಹಿಂಜರಿಕೆ ಕಡಿಮೆಯಾಗಿ ನಿಮ್ಮೊಂದಿಗೆ ಭಾಂದವ್ಯ ಗಟ್ಟಿಯಾಗಿ ಸಂಬಂಧವು ಬಲಿಷ್ಠವಾಗಿರುತ್ತದೆ.

ಅಡುಗೆ ಮಾಡಿ
ತಮ್ಮ ಸಂಗಾತಿಯನ್ನು ಸಂತೃಪ್ತಿಗೊಳಿಸಲು ಅಡುಗೆ ಮಾಡುವುದು ತುಂಬಾ ಒಳ್ಳೆಯ ವಿಧಾನವಾಗಿದೆ. ಇದು ಅವರ ಮನಸ್ಸಿನಲ್ಲಿ ಮರೆಯಲಾರದ ನೆನಪನ್ನು ಮೂಡಿಸುತ್ತದೆ. ನಿಮ್ಮ ಸಂಗಾತಿಗೆ ತುಂಬಾ ಇಷ್ಟವಿರುವ ಆಹಾರವನ್ನು ತಯಾರಿಸಲು ನೀವು ಪಟ್ಟಂತಹ ಶ್ರಮವು ಗಣನೆಗೆ ಬರುವುದು.

ಸಪ್ರೈಸ್
ಯಾವುದೇ ವಿಶೇಷ ಸಂದರ್ಭ ಅಥವಾ ವಾರಾಂತ್ಯಗಳಲ್ಲಿ ಮಾತ್ರ ಸಪ್ರೈಸ್ ನೀಡಬೇಕೆಂದಿಲ್ಲ. ಕೆಲವೊಮ್ಮೆ ಅವರು ನಿರೀಕ್ಷಿಸದೇ ಇರುವಂತಹ ಸಂದರ್ಭದಲ್ಲಿ ಸಪ್ರೈಸ್ ಕೊಡಿ. ಆಗ ಅವರ ಪ್ರತಿಕ್ರಿಯೆಯನ್ನು ನೋಡಿ. ಇದು ಖಂಡಿತವಾಗಿಯೂ ಅವರಿಗೆ ತುಂಬಾ ಸಂತೋಷವನ್ನು ಉಂಟುಮಾಡುತ್ತದೆ.



Click it and Unblock the Notifications
