For Quick Alerts
ALLOW NOTIFICATIONS  
For Daily Alerts

ಮೊದಲ ಭೇಟಿ: ಬರೀ ಕಾಫಿಗೆ ಮಾತ್ರ ಸೀಮಿತವೇ?

By Arshad
|

ಸ್ನೇಹ ಬೆಳೆಸಲು ಅಥವಾ ಜೀವನಸಂಗಾತಿಯನ್ನಾರಿಸಲು ಓರ್ವ ವ್ಯಕ್ತಿಯೊಂದಿಗಿನ ಪ್ರಥಮ ಭೇಟಿ ಬಹಳ ಪ್ರಮುಖವಾಗಿದೆ. ತಂದೆ ತಾಯಿಯರು ಆರಿಸಿದ ಗಂಡು/ಹೆಣ್ಣನ್ನು ಕಣ್ಣು ಮುಚ್ಚಿ ವಿವಾಹವಾಗಲು ಇಂದಿನ ಜನಾಂಗ ತಯಾರಿಲ್ಲ. ಏಕೆಂದರೆ ಜೀವನವಿಡೀ ಜೊತೆಯಲ್ಲಿರಬೇಕಾದವರ ಬಗ್ಗೆ ಏನೊಂದೂ ಅರಿಯದೇ ಏಕಾಏಕಿ ಸಂಸಾರ ನಡೆಸಲು ಮುಂದಾಗುವುದು ಅಪಾಯಕ್ಕೆ ನೀಡುವ ಆಹ್ವಾನ.

ಆದ್ದರಿಂದ ಇಂದಿನ ಯುವಜನಾಂಗ ತಮ್ಮ ಸ್ನೇಹಿತರು ಅಥವಾ ಜೀವನಸಂಗಾತಿಯಾಗುವವರ ಮನಃಸ್ಥಿತಿ ತಮ್ಮ ವಿಚಾರಗಳಿಗನುಸಾರವಾಗಿ ಇದೆ ಎಂದರೆ ಮಾತ್ರವೇ ಆಪ್ತರಾಗುತ್ತಾರೆಯೇ ವಿನಃ ವಿರುದ್ಧವಾಗಿದ್ದರೆ ಪ್ರಥಮ ಭೇಟಿಯ ಬಳಿಕ ದೂರಾಗುತ್ತಾರೆ. ಒಂದರ್ಥದಲ್ಲಿ ಇದು ಅತ್ಯಂತ ಕ್ಷೇಮವಾದ ಕ್ರಮವೂ ಆಗಿದೆ.

First Date: Coffee Or Dinner?

ಆದರೆ ಪ್ರಥಮ ಭೇಟಿ ಕೇವಲ ಒಂದು ಕಪ್ ಕಾಫಿಗೆ ನಿಗದಿಪಡಿಸುವುದು ಉತ್ತಮವೋ ಅಥವಾ ರಾತ್ರಿಯೂಟದವರೆಗೂ ಮುಂದುವರೆಸುವುದು ಉತ್ತಮವೋ ಎಂಬ ಪ್ರಶ್ನೆಗೆ ಎಪ್ಪತ್ತು ಶೇಖಡಾಕ್ಕಿಂತಲೂ ಹೆಚ್ಚು ಯುವಜನತೆ ಕಾಫಿಗೆ ಮತ ನೀಡಿದ್ದಾರೆ. ಓರ್ವ ವ್ಯಕ್ತಿಯ ಬಗ್ಗೆ ಕಿರುನೋಟ ಪಡೆಯಲು ಕಾಫಿ ಕುಡಿಯುತ್ತಾ ನಡೆಸುವ ಸಂವಾದವೇ ಸಾಕಾಗುತ್ತದೆ.

ಒಂದು ವೇಳೆ ನೀವು ಹೆಚ್ಚು ಮಾತನಾಡುವ ವ್ಯಕ್ತಿಯಲ್ಲದಿದ್ದಲ್ಲಿ ಎದುರಿನವರು ಮಾತನಾಡುವ ಪದಗಳಿಂದ ಅವರ ಮನಃಸ್ಥಿತಿಯ ಬಗ್ಗೆ ಸ್ಥೂಲವಾಗಿ ಅರಿತುಕೊಂಡುಬಿಡಬಹುದು. ಅಂತೆಯೇ ನಿಮ್ಮ ಎದುರಿನ ವ್ಯಕ್ತಿಯೂ ನಿಮ್ಮನ್ನು ತಾಳೆ ಹಾಕುತ್ತಾ ಹೋಗುವ ಮೂಲಕ ಇಬ್ಬರೂ ಒಬ್ಬರಿಗೊಬ್ಬರು ಪರಿಚಯಗೊಳ್ಳುತ್ತಾ ಹೋಗುತ್ತೀರಿ. ಮದುವೆಯ ಬಳಿಕ ಏಕೆ ಇಷ್ಟೊಂದು ನೀರಸ ಮೌನ?

ಒಂದು ಕಪ್ ಕಾಫಿ ಕುಡಿದು ಮುಗಿಸುವ ವೇಳೆಗೆ ಎದುರಿನ ವ್ಯಕ್ತಿಯ ಬಗ್ಗೆ ಒಂದು ಸ್ಥೂಲವಾದ ಅಭಿಪ್ರಾಯ ಹೊಂದಲು ಸಾಧ್ಯ. ಒಂದು ವೇಳೆ ಈ ಅಭಿಪ್ರಾಯ ನಿಮ್ಮ ಮನಃಸ್ಥಿತಿಗೆ ಹೊಂದಿಕೊಂಡರೆ ಮುಂದಿನ ಭೇಟಿಯ ಬಗ್ಗೆ ಮಾತನಾಡಬಹುದು. ಇದರಲ್ಲಿ ನಿಮಗೆ ಸಹ್ಯವಲ್ಲದ ವಿಚಾರಗಳಿದ್ದರೆ ಈ ಭೇಟಿಯನ್ನು ಇಲ್ಲಿಗೇ ನಿಲ್ಲಿಸಿ ಬೈ ಬೈ ಹೇಳುವುದು ಉತ್ತಮ.

ಉದಾಹರಣೆಗೆ ನೀವು ಮದ್ಯಪಾನದ ಕಟ್ಟಾ ವಿರೋಧಿಯಾಗಿದ್ದು ಎದುರಿನ ವ್ಯಕ್ತಿ ಪ್ರತಿ ವಾರಾಂತ್ಯದಲ್ಲಿ ಮಾತ್ರ ಸೇವಿಸುತ್ತೇನೆ, ನಿಮಗೇನೂ ಇದರಿಂದ ತೊಂದರೆಯಾಗುವುದಿಲ್ಲ ಎಂಬಂತಹ ಅಡ್ಡಗೋಡೆಯ ಮೇಲೆ ದೀಪ ಇಟ್ಟಂತೆ ಮಾತನಾಡಿದರೆ ಇನ್ನು ಈ ಭೇಟಿಯನ್ನು ಮುಂದುವರೆಸುವ ಪ್ರಶ್ನೆಯೇ ಇಲ್ಲ! ಹಾಗಾಗಿ ಪ್ರಥಮ ಭೇಟಿಯನ್ನು ಕಾಫಿಗೆ ನಿಗದಿಗೊಳಿಸುವುದು ಉತ್ತಮ ಎಂದು ಹೆಚ್ಚಿನವರು ಅಭಿಪ್ರಾಯಪಡುತ್ತಾರೆ. ಈ ಬಗ್ಗೆ ಹೆಚ್ಚಿನ ವಿವರಗಳನ್ನು ಈ ಕೆಳಗೆ ನೀಡಲಾಗಿದೆ

ಊಟಕ್ಕೆ ಕರೆಯುವುದು ಈಗ ಹಳೆಯದಾಯಿತು
ಪ್ರಥಮ ಭೇಟಿಯನ್ನು ಒಳ್ಳೆಯ ಹೋಟೆಲ್ ಒಂದರ ಖಾಸಗಿ ಕೋಣೆಯಲ್ಲಿ ಕುಳಿತು ಭರ್ಜರಿ ಊಟದೊಂದಿಗೆ ನಡೆಸುವ ರೀತಿ ಈಗ ಹಳೆಯದಾಗಿದೆ. ಏಕೆಂದರೆ ಈ ಭರ್ಜರಿ ಊಟದ ಮೂಲಕ ಓರ್ವ ವ್ಯಕ್ತಿ ಎದುರಿನವರ ಮೇಲೆ ಬಲವಂತವಾಗಿ ತನ್ನನ್ನು ಒಪ್ಪಿಕೊಳ್ಳಲೇಬೇಕು ಎಂಬ ಅಭಿಪ್ರಾಯವನ್ನು ಪರೋಕ್ಷವಾಗಿ ಮಂಡಿಸಿದಂತಾಗುತ್ತದೆ. ಆದ್ದರಿಂದಲೇ ಇಂದಿನ ಯುವಜನತೆ ತಮ್ಮ ಅಭಿಪ್ರಾಯಗಳನ್ನು ಬಲವಂತವಾಗಿ ಹೇರದೇ ಪ್ರಾಮಾಣಿಕವಾಗಿ, ಯಾವುದೇ ಒತ್ತಡವಿಲ್ಲದೇ ನೀಡಲು ಒಂದು ಕಪ್ ಕಾಫಿ ಸಾಕು ಎಂಬ ಅಭಿಪ್ರಾಯ ಹೊಂದಿದ್ದಾರೆ. ಕಣ್ಣು-ಕಣ್ಣು ಕಲೆತಾಗ ಮನದಲ್ಲಿ ಪ್ರೇಮಾಂಕುರ!

ಊಟ ಎಂದರೆ ತೀರಾ ಸಲುಗೆಯದ್ದಾಯಿತು
ಯಾವುದೇ ವ್ಯಕ್ತಿಯೊಂದಿಗೆ ಪ್ರಥಮ ಭೇಟಿಯಲ್ಲಿಯೇ ಊಟಕ್ಕೆ ತೆರಳುವುದೆಂದರೆ ಸಲಿಗೆ ಅತಿಯಾದ ಭಾವನೆ ಬರುತ್ತದೆ. ಪ್ರಥಮ ಭೇಟಿಯಲ್ಲಿಯೇ ಅತಿಯಾದ ಸಲುಗೆ ಉಚಿತವಲ್ಲ! ಏಕೆಂದರೆ ಎದುರಿನ ವ್ಯಕ್ತಿಯು ಇಷ್ಟಪಡುವ, ಇಷ್ಟಪಡದ ವಿಷಯ ಅಥವಾ ಆಹಾರಗಳ ಬಗ್ಗೆ ನೀವಿನ್ನೂ ಅರಿತಿಲ್ಲ! ಅದಕ್ಕೂ ಮೊದಲು ಊಟವೆಂದರೆ ಏಕೋ ಸರಿಹೋಗುವುದಿಲ್ಲ. ಆದ್ದರಿಂದ ಪ್ರಥಮ ಭೇಟಿಯನ್ನು ಒಂದು ಕಾಫಿಗೆ ಮಿತಿಗೊಳಿಸುವುದು ಇಬ್ಬರಿಗೂ ಕ್ಷೇಮ.

ಮುಜುಗರ ಎದುರಿಸುವ ಪ್ರಸಂಗ ಎದುರಾಗಬಹುದು
ನಿಮ್ಮೆದುರಿನ ವ್ಯಕ್ತಿ ನೀವು ಬಯಸುವ ವ್ಯಕ್ತಿ ಸರ್ವಥಾ ಅಲ್ಲ ಎಂದು ಅರಿಯಲು ಕೆಲವೇ ನಿಮಿಷಗಳು ಸಾಕು. ಇಂತ ಪ್ರಸಂಗದಲ್ಲಿ ಊಟ ಮಾಡುತ್ತಿದ್ದರೆ ಪೇಚಾಟ ಎದುರಾಗುತ್ತದೆ. ಒಂದು ವೇಳೆ ಅರ್ಧ ಊಟ ಮುಗಿಸಿದ ಬಳಿಕ ಎದುರಿನ ವ್ಯಕ್ತಿ ನಿಮ್ಮ ಇಷ್ಟದ ವ್ಯಕ್ತಿ ಅಲ್ಲ ಎಂದು ಗೊತ್ತಾದರೆ ಏನು ಮಾಡುವಿರಿ? ನಡುವಿನಲ್ಲಿಯೇ ಊಟ ಬಿಟ್ಟು ಹೋಗುವಂತಿಲ್ಲ, ಉಳಿದ ಸಮಯ ಅಲ್ಲಿಯೇ ಇರುವಂತಿಲ್ಲ.
ಮನಸ್ಸು ವ್ಯಗ್ರಗೊಂಡಿರುವುದರಿಂದ ಉಳಿದ ಊಟವನ್ನು ಮುಗಿಸಲೂ ಮನಸ್ಸಿಲ್ಲ. ಸುಮ್ಮನೇ ಆಹಾರವನ್ನು ಕಲೆಸುತ್ತಾ ಸಮಯ ಕಳೆಯಬೇಕಾದ ಅನಿವಾರ್ಯತೆ ಎದುರಾಗುತ್ತದೆ. ಇದು ತೀವ್ರ ಮುಜುಗರಕ್ಕೆ ಕಾರಣವಾಗುತ್ತದೆ. ಬದಲಾಗಿ ಕಾಫಿ ಕುಡಿಯುತ್ತಿದ್ದಾಗಲೇ ಈ ಪರಿಸ್ಥಿತಿ ಎದುರಾದರೆ ಹೆಚ್ಚಿನ ಕಷ್ಟವಿಲ್ಲದೇ ಕಾಫಿಯ ಕಪ್ ಮುಗಿದ ಕೂಡಲೇ ಬಾಯ್ ಹೇಳಬಹುದು.

English summary

First Date: Coffee Or Dinner?

Do you prefer going out for coffee on first date? Well, anyone would say yes to this because having a cup of coffee together offers sometime to exchange views on the first meeting. A recent survey declared that 70 per cent of the couples preferred to go for a coffee on the first date instead of a dinner. Now, check out some other reasons why coffee on the first date is better than dinner. Should First Date Be Coffee Or Dinner.
X
Desktop Bottom Promotion