ಅಮ್ಮನ ಮಹತ್ವವನ್ನು ಸಾರುವ ಪ್ರಖ್ಯಾತ ಹೇಳಿಕೆಗಳು

By: jaya subramanya
Subscribe to Boldsky

ಭೂಮಿಯಲ್ಲಿರುವ ಅತ್ಯುನ್ನತ ವಸ್ತುಗಳಲ್ಲಿ ತಾಯಿಗೆ ಬೆಲೆ ಕಟ್ಟಲೂ ಸಾಧ್ಯವಿಲ್ಲ. ಆಕೆಯ ಋಣವನ್ನು ತೀರಿಸಲೂ ಆಗುವುದಿಲ್ಲ. ಹಿಂದಿನಿಂದಲೂ ಮಾತೃ ವಾತ್ಸಲ್ಯ, ಮಾತೃ ಪ್ರೇಮಕ್ಕೆ ಬೆಲೆ ಕಟ್ಟಲೂ ಸಾಧ್ಯವಿಲ್ಲದಂತಿದ್ದು ಅದನ್ನು ಇತಿಹಾಸ ಪುರಾಣ ಪುಸ್ತಕಗಳಲ್ಲೂ ನಿಮಗೆ ಕಂಡುಕೊಳ್ಳಬಹುದಾಗಿದೆ.

ಅಮ್ಮನ ದಿನವನ್ನು ಆಚರಿಸಲು ಪ್ರತ್ಯೇಕವಾದ ದಿನ ಬೇಕಾಗಿಲ್ಲ. ಎಂದೆಂದೂ ಅಮ್ಮನ ದಿನವೇ. ಅಮ್ಮ ಎಂದರೆ ನೂರು ಹರುಷವು ನಮ್ಮ ಪಾಲಿಗೆ ಅವಳೇ ದೈವವು ಎಂಬ ಗಾನದಂತೆಯೇ ಅಮ್ಮ ಎಂಬ ಪದವು ನಮ್ಮಲ್ಲಿ ಹರುಷವನ್ನು ತರುತ್ತದೆ ಅಂತೆಯೇ ಆಕೆ ದೈವ ಸಮಾನಳೂ ಆಗಿದ್ದಾಳೆ.  ಹೆತ್ತು, ಸಲಹಿ ಸಾಕಿದ 'ತಾಯಿ'ಯ ಆರೋಗ್ಯದ ಕಡೆಗೂ ಕಾಳಜಿ ಇರಲಿ!

ಜಗತ್ತಿನಲ್ಲಿ ಕೆಟ್ಟ ಮಕ್ಕಳು ಇರುತ್ತಾರೆ ಆದರೆ ಕೆಟ್ಟ ತಾಯಿ ಇರಲೂ ಸಾಧ್ಯವಿಲ್ಲ ಎಂಬುದಾಗಿ ಶಾಸ್ತ್ರಜ್ಞರು ಹೇಳುತ್ತಾರೆ. ಅದುವೇ ತಾಯಿಯ ಶ್ರೇಷ್ಠತೆ. ತನ್ನ ಕನಸುಗಳನ್ನು ಮರೆತು ಸುಖವನ್ನು ತ್ಯಾಗ ಮಾಡಿ ಆಕೆ ಮಕ್ಕಳ ಸಂತೋಷವನ್ನೇ ತನ್ನದಾಗಿ ಮಾರ್ಪಡಿಸಿಕೊಳ್ಳುತ್ತಾಳೆ. ಅಮ್ಮಂದಿರ ದಿನದ ವಿಶೇಷವಾಗಿ ಇಂದಿನ ನಮ್ಮ ಲೇಖನದಲ್ಲಿ ಅಮ್ಮನನ್ನು ಹೊಗಳುವ ಅಸದಳ ವ್ಯಾಖ್ಯೆಗಳನ್ನು ನಾವು ನೀಡುತ್ತಿದ್ದು ಇದನ್ನು ನೀವೂ ಕಂಡುಕೊಳ್ಳಿ. ಇದು ಪ್ರಖ್ಯಾತ ಪಂಡಿತರು ಹೇಳಿರುವ ಮಾತಾಗಿದ್ದು ಅಮ್ಮ ಎಷ್ಟು ಮಹತ್ವದವರು ಎಂಬುದನ್ನು ತಿಳಿದುಕೊಳ್ಳೋಣ. 

Mother's day quotes

1."ನಾನು ಹಿಂದೆಂದೂ ನೋಡಿರುವುದಕ್ಕಿಂತಲೂ ನಮ್ಮಮ್ಮ ಹೆಚ್ಚು ಸುಂದರಿ. ನಾನು ಆಕೆಯಿಂದ ದೈಹಿಕ ಶಿಕ್ಷಣ, ನೀತಿಪಾಠವನ್ನು ಕಲಿತುಕೊಂಡಿದ್ದೇನೆ" - ಜಾರ್ಜ್ ವಾಶಿಂಗ್ಟನ್

2. ತಾಯಿ ತನ್ನ ಮಕ್ಕಳ ಕೈಯನ್ನು ಸ್ವಲ್ಪ ಸಮಯ ಮಾತ್ರ ಹಿಡಿದುಕೊಳ್ಳುತ್ತಾಳೆ ಆದರೆ ಅವರ ಹೃದಯವನ್ನು ಸದಾಕಾಲ ಹಿಡಿದುಕೊಂಡಿರುತ್ತಾಳೆ. ಮಕ್ಕಳ ಯೋಗಕ್ಷೇಮವನ್ನೇ ಆಕೆ ಸದಾ ಕಾಲ ಬಯಸುತ್ತಾಳೆ - ಅಜ್ಞಾತ ಮೂಲ

3. ನನ್ನ ಅಮ್ಮನ ಪ್ರಾರ್ಥನೆಗಳನ್ನು ನಾನು ನೆನೆಪಿಸಿಕೊಳ್ಳುತ್ತೇನೆ ಮತ್ತು ಅದು ಸದಾಕಾಲವೂ ನನ್ನನ್ನು ಹಿಂಬಾಲಿಸುತ್ತದೆ. ನನ್ನ ಜೀವನದಲ್ಲಿ ಆ ಪ್ರಾರ್ಥನೆಗಳೇ ಬೆಂಗಾವಲು - ಅಬ್ರಹಾಂ ಲಿಂಕನ್.   ಪ್ರೀತಿಯ ಅಮ್ಮನಿಗಾಗಿ ಆರೋಗ್ಯ ಕಾಳಜಿ

4. ನಿಮ್ಮಲ್ಲಿ ಹೇಳಲೂ ಸಾಧ್ಯವಾಗದ ಸಂಪತ್ತು ಇರಬಹುದು

ಮಣಗಟ್ಟಲೆ ಚಿನ್ನ ಮತ್ತು ಆಭರಣಗಳು ಇದ್ದಿರಬಹುದು

ನಾನು ನಿಮಗಿಂತಲೂ ಶ್ರೀಮಂತ

ನನ್ನ ಬಳಿ ತಾಯಿ ಇದ್ದಾರೆ - ಸ್ಟಿಕ್‌ಲ್ಯಾಂಡ್ ಗಿಲಿನ್

5. ನನ್ನ ತಾಯಿ ಶ್ರಮ ಜೀವಿ. ತನ್ನ ತಲೆಯನ್ನು ಕೆಳಗೆ ಹಾಕಿ ಆಕೆ ಕೆಲಸವನ್ನು ಪೂರೈಸುತ್ತಾಳೆ. ಮತ್ತು ಸಂತಸಕ್ಕಾಗಿ ಆಕೆ ತನ್ನದೇ ವಿಧಾನವನ್ನು ಕಂಡುಕೊಳ್ಳುತ್ತಾಳೆ. ಆಕೆ ಯಾವಾಗಲೂ ಹೇಳುತ್ತಾಳೆ - 'ಸಂತೋಷ ಎಂಬುದು ನಿಮ್ಮದೇ ಜವಬ್ದಾರಿಯಾಗಿದೆ' - ಜೆನ್ನಿಫರ್ ಗಾರ್ನರ್

Mother's day quotes

6. ನಾನು ಕೆಳಕ್ಕೆ ಬಿದ್ದಾಗ ಓಡಿ ಬಂದು ನನಗೆ ಸಹಾಯ ಮಾಡುತ್ತಾರೆ,

ನನಗೆ ಉತ್ತಮ ಕಥೆಗಳನ್ನು ಹೇಳುತ್ತಾರೆ,

ನಾನು ಬಿದ್ದು ಏಟು ತಿಂದಿರುವ ಜಾಗಕ್ಕೆ ಸಿಹಿ ಮುತ್ತನ್ನು ನೀಡುತ್ತಾಳೆ

ನನ್ನ ತಾಯು - ಆನ್ ಟೇಲರ್

7. "ಒಬ್ಬ ತಾಯಿ ಮಾತ್ರವೇ ಭವಿಷ್ಯದ ಬಗೆಗೆ ಚಿಂತಿಸಬಹುದು ಏಕೆಂದರೆ ತನ್ನ ಮಕ್ಕಳಲ್ಲಿ ಆಕೆ ಅದಕ್ಕೂ ಜನ್ಮನೀಡಿದ್ದಾಳೆ - ಮ್ಯಾಕ್ಸಿಂ ಗೋರ್ಕಿ

8. ಇಡಿಯ ವಿಶ್ವಕ್ಕೆ ನೀವು ಒಬ್ಬ ವ್ಯಕ್ತಿ ಮಾತ್ರ

ಆದರೆ ಒಬ್ಬ ವ್ಯಕ್ತಿಗೆ ನೀವು ಇಡಿಯ ವಿಶ್ವ - ಅಜ್ಞಾತ ಮೂಲ

9. ನನ್ನ ತಾಯಿ ಯಾವಾಗಲೂ ಭಾವುಕ ಮಾಪಕರು ಮತ್ತು ನನ್ನ ಮಾರ್ಗದರ್ಶಕರಾಗಿದ್ದಾರೆ. ನನ್ನ ಪ್ರತಿಯೊಂದರಲ್ಲೂ ನನಗೆ ಸಹಕಾರಿಯಾಗಿರುವ ನನ್ನಮ್ಮನನ್ನು ಹೊಂದಿರುವುದಕ್ಕೆ ನಾನು ಅದೃಷ್ಟಶಾಲಿ - ಎಮ್ಮ ಸ್ಟೋನ್

10. ನನ್ನ ತಾಯಿ ನನ್ನ ಸ್ನೇಹಿತರೇ? ನಾನು ಮೊದಲು ಹೇಳಬೇಕಾಗಿರುವುದು ಆಕೆ ನನ್ನ ತಾಯಿ. ನನಗೆ ಆಕೆ ಸರ್ವಸ್ವ ನನ್ನ ಪಾಲಿಗೆ ಪವಿತ್ರ ಆತ್ಮ. ಆಕೆ ನನ್ನ ಉತ್ತಮ ಸ್ನೇಹಿತೆ ಕೂಡ ಹೌದು. - ಸೋಫಿಯಾ ಲಾರೆನ್ಸ್  ಈ ವ್ಯಾಖ್ಯಾನಗಳನ್ನು ನೀಡಿರುವುದು ವಿಶ್ವದ ಪ್ರಖ್ಯಾತರು ಖ್ಯಾತನಾಮರೂ ಆಗಿದ್ದಾರೆ. ಕೆಲವೊಂದು ಅಜ್ಞಾತ ಮೂಲಗಳಿಂದ ಸಂಗ್ರಹಿಸಿರುವ ದಾಖಲೆಗಳಾಗಿವೆ. ಆದರೆ ಒಬ್ಬ ತಾಯಿಗೆ ಮಕ್ಕಳ ಮೇಲಿರುವ ಪ್ರೀತಿ ಮಮಕಾರವನ್ನು ಇದು ಪ್ರಸ್ತುತಪಡಿಸುತ್ತದೆ. ನಿಮ್ಮ ಅಮ್ಮನಿಗೆ ಈ ಅಮ್ಮಂದಿರ ದಿನದ ವಿಶೇಷವಾಗಿ ಇವುಗಳೆಲ್ಲದರ ಪ್ರಿಂಟ್ ಔಟ್ ತೆಗೆದು ಕೊಡುಗೆಯಾಗಿ ನೀಡಬಹುದು. ನಿಮ್ಮ ತಾಯಿ ಖಂಡಿತ ಸಂತೋಷಪಡುತ್ತಾರೆ.

English summary

Mother's day quotes

Love for moms are eternal and therefore there are several interesting and heart-melting quotes to emphasize the importance of the day. So, on this coming Mother’s Day, you can use any of these quotes to be inscribed on a coffee-mug or make a collage with small quotes and gift it to your mother. The interesting thing about these quotes is that though many of them are specifically told about the particular person’s mother, but you can’t ignore the universality of those. Also, these beautiful quotes will remind you how much you love your mom. To know more about these, you need to read on-
Subscribe Newsletter