For Quick Alerts
ALLOW NOTIFICATIONS  
For Daily Alerts

ಗರ್ಲ್ ಫ್ರೆಂಡ್ ನ್ನು ಬಿಡಲು ಕಾರಣಗಳು

By Hemanth Amin
|

ಜೀವನದಲ್ಲಿ ಒಮ್ಮೆ ನಾವು ಪ್ರೀತಿಸುತ್ತಿದ್ದ ವ್ಯಕ್ತಿಯನ್ನು ಪ್ರೀತಿಸದೇ ಇರುವಂತಹ ಸಮಯ ಬರಬಹುದು. ಇಂತಹ ಸಮಯದಲ್ಲಿ ನಾವು ಬ್ರೇಕ್ ಅಪ್ ನಂತಹ ಕಠಿಣ ನಿರ್ಧಾರ ತೆಗೆದುಕೊಳ್ಳುತ್ತೇವೆ. ಭಾವನಾತ್ಮಕ ಮಟ್ಟಕ್ಕೆ ಹೋಲಿಸಿದರೆ ಬ್ರೇಕ್ ಅಪ್ ಅಷ್ಟು ಸುಲಭವಲ್ಲ, ಇದು ನೋವು ಮತ್ತು ಮಾನಸಿಕ ಖಿನ್ನತೆಯನ್ನು ಉಂಟುಮಾಡಬಹುದು. ಹೀಗೆ ಮಾಡುವುದು ತುಂಬಾ ಕಠಿಣ. ಕೆಲವು ಪುರುಷರು ಈ ರೀತಿ ಯೋಚಿಸಿ ಪರಿಸ್ಥಿತಿ ತುಂಬಾ ಕೆಟ್ಟದಾಗುವ ತನಕ ತಮ್ಮ ನಿರ್ಧಾರ ಮುಂದೂಡುತ್ತಾರೆ. ಇನ್ನೊಂದೆಡೆ ಕೆಲವೊಂದು ಪುರುಷರ ಹಠಾತ್ ನಿರ್ಧಾರ ಹೇಳಿ ತಮ್ಮನ್ನು ಪ್ರೀತಿಸುವ ಮಹಿಳೆಯರ ಹೃದಯ ಛಿದ್ರ ಮಾಡುತ್ತಾರೆ.

ನಿಮ್ಮ ಗರ್ಲ್ ಫ್ರೆಂಡ್ ಗೆ ಯಾವುದೇ ರೀತಿಯಿಂದಲೂ ನೋವಾಗದ ಹಾಗೆ ತುಂಬಾ ಹಿತಕರವಾಗಿ ಮತ್ತು ಚಾಕಚಕ್ಯತೆಯಿಂದ ಬ್ರೇಕ್ ಅಪ್ ನಿರ್ಧಾರ ಹೇಳಲು ಯೋಜನೆ ಹಾಕಬೇಕು. ಪರಿಸ್ಥಿತಿಯನ್ನು ರಾಜತಾಂತ್ರಿಕವಾಗಿ ಎದುರಿಸುವುದರಿಂದ ನಿಮಗೆ ಮತ್ತು ಗರ್ಲ್ ಫ್ರೆಂಡ್ ಸ್ನೇಹಪರ ಹಾದಿಯಲ್ಲಿ ಸಂಬಂಧವನ್ನು ಕೊನೆಗಾಣಿಸಬಹುದು. ಗರ್ಲ್ ಫ್ರೆಂಡ್ ನ್ನು ಬಿಡಲು ಹಲವಾರು ಕಾರಣಗಳಿರಬಹುದು. ಈ ಸಮಯದಲ್ಲಿ ಹಲವಾರು ಮಂದಿ ನಿಮಗೆ ಸಲಹೆಗಳನ್ನು ನೀಡಬಹುದು.

Reasons To Dump Your Girlfriend

ಸ್ನೇಹಿತರೊಂದಿಗೆ ಈ ವಿಷಯ ಚರ್ಚಿಸಿದರೆ ಅವರು ಕೆಲವು ಮೌಲ್ಯಯುತ ಸಲಹೆಗಳನ್ನು ನೀಡಬಹುದು. ನಿಮ್ಮ ಗರ್ಲ್ ಫ್ರೆಂಡ್ ನ್ನು ಬಿಡಲು ಇರುವ ಕಾರಣಗಳನ್ನು ಇಲ್ಲಿ ಪಟ್ಟಿ ಮಾಡಲಾಗಿದೆ.

1. ಅತೀ ಒತ್ತಾಯದ ವರ್ತನೆ
ನಿಮ್ಮ ಗರ್ಲ್ ಫ್ರೆಂಡ್ ಅತೀ ಒತ್ತಾಯದ ವರ್ತನೆ ಪ್ರದರ್ಶಿಸುತ್ತಿದ್ದರೆ, ಈ ಬಗ್ಗೆ ಎಚ್ಚರ ವಹಿಸಿ. ಇದರಿಂದ ನೀವು ತೊಂದರೆಗೀಡಾಗಬಹುದು. ಆಕೆಯನ್ನು ಖುಷಿಪಡಿಸಲು ಯಾವಾಗಲೂ ನೀವು ಹೊರಗೆ ಹೋಗಬೇಕೆಂದು ಆಕೆ ಬಯಸುತ್ತಿದ್ದರೆ ನೀವು ಆಕೆಗೆ ಗುಡ್ ಬೈ ಹೇಳುವುದು ಒಳ್ಳೆಯದು. ಹೊಸ ಗರ್ಲ್ ಫ್ರೆಂಡ್ ನ್ನು ನಿಮ್ಮ ಜೀವನಕ್ಕೆ ಆಹ್ವಾನಿಸಲು ಇದು ಸೂಕ್ತ ಸಮಯ. ಇದು ಸಂಬಂಧದ ವಿಷಯಕ್ಕೆ ಒಳ್ಳೆಯ ಸಲಹೆ. ಇದನ್ನು ಗಮನಿಸಿ.

2. ಬಹು ಸಂಬಂಧ
ಇಂದಿನ ದಿನಗಳಲ್ಲಿ ಬಹುಸಂಬಂಧಗಳು ಸಾಮಾನ್ಯವಾಗುತ್ತಿದೆ. ನಿಮ್ಮ ಗರ್ಲ್ ಫ್ರೆಂಡ್ ಮತ್ತೊಂದು ಸಂಬಂಧದಲ್ಲಿ ಇದ್ದಾಳೆಂದು ನಿಮಗೆ ಖಚಿತವಾದರೆ ಆಗ ಸಂಬಂಧಕ್ಕೆ ಅಂತ್ಯ ಹೇಳಿ. ಇದು ನಿಮ್ಮ ಸಂಬಂಧದ ಅಂತ್ಯದ ಆಟ ಮತ್ತು ಇದಕ್ಕೆ ವಿವರಣೆ ಬೇಕಾಗುತ್ತದೆ. ಗರ್ಲ್ ಫ್ರೆಂಡ್ ನ್ನು ಬಿಡಲು ಇದು ಒಂದು ಕಾರಣವಾಗಿರುತ್ತದೆ.

3. ಆಕೆ ಭಾವನಾತ್ಮಕ ಬಲೆಯೊಳಗೆ ಸಿಲುಕಿಸಿದರೆ
ನಿಮ್ಮ ಗರ್ಲ್ ಫ್ರೆಂಡ್ ನ್ನು ಬಿಡಲು ಇದು ಒಂದು ಅತ್ಯುತ್ತಮ ಕಾರಣ. ಗರ್ಲ್ ಫ್ರೆಂಡ್ ನಿಮ್ಮನ್ನು ತುಂಬಾ ಪ್ರೀತಿಸುವುದನ್ನು ಒಂದು ಹಂತದವರೆಗೆ ಖುಷಿಪಡಬಹುದು. ಆದಾಗ್ಯೂ, ಒಂದು ಎಚ್ಚರಿಕೆಯಿದೆ. ಇದು ತುಂಬಾ ನಕಾರಾತ್ಮಕವಾಗಬಹುದು. ಆಕೆಗೆ ನಿಮ್ಮ ಮೇಲಿರುವ ಪ್ರೀತಿ ಒಂದು ಹೊರೆಯಾಗಬಹುದು. ನಿಮ್ಮ ಹುಡುಗಿ ತುಂಬಾ ಹೊಟ್ಟೆಕಿಚ್ಚಿನ ಸ್ವಭಾವದವಳಾಗಿದ್ದರೆ ಎಚ್ಚರವಹಿಸಿಕೊಳ್ಳುವುದು ನಿಮ್ಮ ಸಂಬಂಧಕ್ಕೆ ಒಳ್ಳೆಯ ಸಲಹೆ.

4. ಆಕೆ ಯಾವಾಗಲೂ ಇಲ್ಲವೆನ್ನುತ್ತಿದ್ದರೆ...
ಶಾರೀರಿಕ ಆಪ್ತತೆ ಮತ್ತು ಆನಂದ ಪ್ರೀತಿಯ ಒಂದು ಭಾಗ. ನಿಮ್ಮ ಪುರುಷತ್ವದ ಕಡೆಗೆ ಹುಡುಗಿ ಆಕರ್ಷಿತಳಾಗಿಲ್ಲವೆಂದು ನಿಮಗನಿಸಿದರೆ ಆಗ ಸಲಹೆ ಪಡೆಯುವ ಸಮಯ. ನಿಮ್ಮ ಬಯಕೆಗಳಿಗೆ ಆಕೆ ಯಾವಾಗಲೂ ಇಲ್ಲವೆನ್ನುತ್ತಿರಬಹುದು. ನಿಮ್ಮ ಗರ್ಲ್ ಫ್ರೆಂಡ್ ನ್ನು ಬಿಡಲು ಇದು ಒಂದು ಕಾರಣವಾಗಬಹುದು.

5. ದೂರು ಪುಸ್ತಕ
ನಿಮ್ಮ ಗರ್ಲ್ ಫ್ರೆಂಡ್ ಯಾವಾಗಲೂ ತನ್ನ ಬಳಿ ದೂರಿನ ಪುಸ್ತಕವನ್ನು ಹಿಡಿದುಕೊಂಡು ನೀವು ಏನು ಮಾಡಿದರೂ ಮತ್ತು ಎಲ್ಲಿ ಹೋದರೂ ದೂರತ್ತಲಿದ್ದರೆ ಆಗ ಗರ್ಲ್ ಫ್ರೆಂಡ್ ನ್ನು ಬಿಡಲು ಒಳ್ಳೆಯ ಕಾರಣ. ನಿಮ್ಮ ದೈನಂದಿನ ಅಭ್ಯಾಸಗಳ ಬಗ್ಗೆ ಆಕೆ ದೂರುತ್ತಿದ್ದರೆ ಅಕೆಯನ್ನು ಬಿಡುವುದೇ ಒಳ್ಳೆಯದು.

6. ನಿಮ್ಮನ್ನು ಏಕಾಂಗಿಯಾಗಿ ಮಾಡಿದರೆ
ಕುಡಿಯುವುದು ಮತ್ತು ಎಲ್ಲರೊಂದಿಗೆ ಬೆರೆಯುವುದು ಇಂದಿನ ದಿನಗಳಲ್ಲಿ ಸಾಮಾನ್ಯ. ಆದಾಗ್ಯೂ, ಆಕೆ ಕುಡಿದು ಅಸಭ್ಯವಾಗಿ ಡ್ಯಾನ್ಸ್ ಮಾಡಿ ನಿಮಗೆ ಮುಜುಗರ ಉಂಟುಮಾಡಿದರೆ ಆಗ ಗರ್ಲ್ ಫ್ರೆಂಡ್ ನ್ನು ಬಿಟ್ಟುಬಿಡುವುದು ಒಳ್ಳೆಯದು.

7. ಭಾವನೆಗಳಿಲ್ಲದಿದ್ದರೆ...
ಆಕೆ ನಿಮ್ಮನ್ನು ಪ್ರೀತಿಸುವುದಿಲ್ಲವೆಂದು ನಿಮಗನಿಸಿದರೆ ಮತ್ತು ಆ ವಿಶೇಷ ಭಾವನೆ ಕಳಕೊಂಡಿದ್ದರೆ, ಗರ್ಲ್ ಫ್ರೆಂಡ್ ನ್ನು ಬಿಡಲು ಇದು ಒಂದು ಒಳ್ಳೆಯ ಕಾರಣ. ಯಾವುದೇ ಸಂಬಂಧದಲ್ಲಿ ಇದು ತುಂಬಾ ಕಠಿಣ ಸಮಯ. ನಿಮ್ಮ ಪ್ರೀತಿ ಬಳಲಿ ಹೋಗಬಹುದು. ಇಂತಹ ಸಮಯದಲ್ಲಿ ನಿಮ್ಮ ಸಂಬಂಧ ಸಾಗುತ್ತಿದ್ದರೆ, ಒಂದು ಸಲಹೆಯೆಂದರೆ ಈ ಸಂಬಂಧವನ್ನು ಅಂತ್ಯಗೊಳಿಸಿ.

English summary

Reasons To Dump Your Girlfriend

There comes a point in our lives where we no longer love the person we loved once. This is a time where we need to undergo the difficult decision of breaking up. Breaking is never an easy task, when it comes to emotional level.
Story first published: Wednesday, November 27, 2013, 15:32 [IST]
X
Desktop Bottom Promotion