For Quick Alerts
ALLOW NOTIFICATIONS  
For Daily Alerts

ಪ್ರೀತಿನಾ ನಮಗೆ ಕೊಡದೆ ಸತ್ತು ಹೋಗಬೇಡ್ರಿ, ಪ್ಲೀಸ್!

By * ಚಂದ್ರಶೇಖರ್ ಹಿರೇಮಠ, ಹಂಪಿ
|
Chandrashekar Hiremath
ಇತ್ತೀಚಿಗೆ ಯಾರೋ ನಮ್ಮ ಯುವ ಭಗಿನಿಯರು ನಮಗೆ ಪ್ರೀತಿ ತೋರದೆ ಹಾಗೆ ಹೋಗುತ್ತಿದ್ದಾರೆ. ಲೋಕ ತೊರೆದೇ ಹೋಗುತ್ತಿದ್ದಾರೆ. ಹೌದ್ರೀ, ಹೆಣ್ಣಿನ ಪ್ರೀತಿ ಕಾಣದ ಗಂಡು ಜೀವನ ಸಾರ್ಥಕವೇ?

ಅದು ತಾಯಿ ಪ್ರೀತಿಯಾಗಿರಬಹುದು ಅಥವಾ ಹೆಂಡತಿ ಪ್ರೀತಿ ಆಗಿರಬಹುದು ಒಟ್ಟಿನಲ್ಲಿ ಅವರ ಪ್ರೀತಿ ಇಲ್ಲದೆ ನಮ್ಮ ಜೀವನ ಪೂರ್ಣವಲ್ಲ. ಹೀಗಿರುವಾಗ ನಮಗೆ ನೀವು ಪ್ರೀತಿ ತೋರದೆ ಹೋಗುವುದು ಸರಿಯೇ? ನೀವೇ ಯೋಚಿಸಿ ಭವಿಷ್ಯದ ಸುಂದರ ಸಂಸಾರದ ಒಡತಿಯರೇ.

ವಿಷಯ ಏನೆಂದರೆ, ಇತ್ತೀಚಿಗಿನ ದಿನಪತ್ರಿಕೆಗಳಲ್ಲಿ ಟಿ.ವಿ. ಮಾಧ್ಯಮಗಳಲ್ಲಿ ಪ್ರೀತಿ ವಂಚಿತರಾದ ಯುವತಿಯರ ಸಾವುಗಳನ್ನು ಕೇಳುತ್ತಲೇ ಇದ್ದೇವೆ. ಆ ಪಟ್ಟಿಯಲ್ಲಿ ಯುವಕರೂ ಇದ್ದಾರೆ. ಆದರೆ ಈ ಸಾವಿನ ಪಟ್ಟಿಯಲ್ಲಿ ಯುವತಿಯರದೇ ಮೇಲುಗೈ ಎಂಬುದು ವಿಷಾದನೀಯ.

ನಿಮಗೆ ತಿಳಿದಿರಬಹುದು ಕೆಲವು ತಿಂಗಳ ಹಿಂದೆಯಷ್ಟೆ ಮಾಲಿನಿ ವರ್ಮಾ ಎಂಬ ಐಐಎಂ ಕಾಲೇಜಿನ ಎಂ.ಬಿ.ಎ. ವಿದ್ಯಾರ್ಥಿನಿ ತನ್ನ ಪ್ರಿಯತಮ ಅಭಿಷೇಕ್ ಅವನ ಫೇಸ್‌ಬುಕ್‌ನಲ್ಲಿ ಮಾಲಿನಿಗೆ ಸಹಿಸಲಾಗದ ಮಾತೊಂದನ್ನು ಬರೆದು ಹಾಕಿದ್ದ. ಅದು ಏನೆಂದರೆ, ಇಂದು ತುಂಬಾ ಸಂತೋಷವಾಗುತ್ತಿದೆ. ನನ್ನ ಹೊಸ ಗೆಳತಿಯನ್ನು ಡಿಚ್ ಮಾಡಿದ್ದೇನೆ. ಹ್ಯಾಪಿ ಇಂಡಿಪೆಂಡೇನ್ಸ್ ಡೇ ಎಂದು ಮೆಸೇಜ್ ಮಾಡಿದ್ದ.

ಇದನ್ನು ನೋಡಿದ ಮಾಲಿನಿಗೆ ಪ್ರೀತಿಯ ಬಿಡಲಾಗದೆ, ಮನನೊಂದು ಉಸಿರೇ ಬಿಟ್ಟಳು, ಸಾವಿಗೆ ಶರಣಾದಳು. ಇದು ನಿಜವಾದ ಘಟನೆ. ಹಾಗೆಯೇ ಮತ್ತೊಬ್ಬ ಪ್ರತಿಭಾವಂತ ಆಟಗಾರ್ತಿ. ಸಾಕಷ್ಟು ಪದಕ, ಪ್ರಶಸ್ತಿಗಳನ್ನು ಗೆದ್ದು, ರಾಜ್ಯಮಟ್ಟದ ಆಟಗಾರ್ತಿ ಪೃಥ್ವಿ ಹಾಸ್ಟೆಲ್‌ನಲ್ಲಿ ಬೆಳೆಯುತ್ತಿದ್ದ ಈಕೆಗೆ ಅನ್ಯ ಧರ್ಮದ ಯುವಕನಲ್ಲಿ ಪ್ರೀತಿ ಚಿಗುರಿತು. ನಂತರ ಏನು ತೊಂದರೆ ಆಯಿತೋ ತಿಳಿಯದು. ನೇಣಿಗೆ ಶರಣಾದಳು. ರಾಜ್ಯ ಒಬ್ಬ ಒಳ್ಳೆಯ ಪ್ರತಿಭಾನ್ವಿತೆಯನ್ನು ಕಳೆದುಕೊಂಡಿತು.

ರಾಜ್ಯದ ಒಂದು ಒಳ್ಳೆಯ ಪ್ರತಿಭೆಯನ್ನು ಕಳೆದುಕೊಂಡಿತೋ ಇಲ್ಲವೋ ಗೊತ್ತಿಲ್ಲ. ಆದರೆ ಒಂದು ಸಂಸಾರ ಮನೆಯ ಒಡತಿಯನ್ನು ಕಳೆದುಕೊಂಡಿತು, ಪತಿಯು ಮಡದಿಯನ್ನು ಕಳೆದುಕೊಂಡಿದ್ದು ಮಾತ್ರ ನಿಜ. ಏನಂತೀರಾ? ಅಲ್ಲಾರೀ ನೀವು ಹುಡ್ಗೀರು ಹೀಗೆ ಮಾಡಿಕೊಂಡ್ರೆ ನಮ್ಮಂತಾ ಹುಡುಗರ ಗತಿ ಏನ್ರೀ?

ಅಂದ್ರೆ... ನಾವು ನಿಮ್ಮ ಹಂಗೆ ಸಮುದ್ರದಷ್ಟು ಪ್ರೀತಿಸೋ ಹುಡುಗೀನ ಮದುವೆ ಆಗ್ತೀವಿ ಅಂತ ಕನಸು ಕಟ್ಟಿಕೊಂಡು ಕಾಯ್ತಿರೋರ ಗತಿ ಏನ್‌ರೀ ಅಂದೆ? ನಮ್ಮಂತೆ ಪ್ರೀತಿಗೆ ಬರಗೆಟ್ಟು ನಿಂತಿರೋ ಹುಡುಗರು ಜಗತ್ತಿನಲ್ಲಿ ಇದ್ದಾರೆ ರೀ. ಕಾಲೇಜಲ್ಲಿ ಯಾರಿಗೂ ಕಾಳ್ ಹಾಕದೇ ಅಪ್ಪ-ಅಮ್ಮ ತೋರಿಸೋ ಹುಡುಗಿಗೆ ಮದುವೆ ಆಗಬೇಕು ಅಂತಿರೋರು. ನೀವು ಮಾತ್ರ ಹೀಗೆ ಕಾಲೇಜಿನಲ್ಲಿ ಓದೋ ವೇಳೆಯಲ್ಲಿ ಪ್ರೀತಿ ಗೀತಿ ಅಂತಾ ಸತ್ತೋದ್ರೆ ನಾವು ಎಲ್ಲಿ ಹೋಗಿ ಸಾಯೋಣಾ?

ನಿಮ್ಮ ಪ್ರೀತಿಗೋಸ್ಕರ (ಹಂಬಲಿಸುವ) ಕಾಯ್ತಿರೋ ನಮ್ಮ ಜೀವನದಲ್ಲಿ ನೀವು ಬರಬೇಕು. ನಮ್ಮ ಜೀವನದ ಸಾರಥ್ಯ ವಹಿಸ್ಕೋಬೇಕು. ಸಂಜೆ ಲೇಟಾಗಿ ಬಂದ್ರೆ ನೀವು ಬಯ್ಯಬೇಕು. ನಾವು ನಮ್ಮ ಫ್ರೆಂಡ್ಸ್ ಹತ್ರ, ಇಲ್ಲ ಕಣೋ ನಾನು ಕುಡಿಯೊಲ್ಲ, ಕುಡ್ಕೊಂಡು ಹೋದ್ರೆ ನನ್ನ ಹೆಂಡತಿ ಬೈಯ್ತಾಳೆ ಅಂತ ನಿಮ್ಮ ಸಲುವಾಗಿ ಕುಡಿಯೋದನ್ನ, ಸಿಗರೇಟ್ ಸೇದೋದನ್ನ ಬಿಡಬೇಕು. ನಾವು ಕಷ್ಟ ಪಟ್ಟು ಉಳಿತಾಯ ಮಾಡಿರೋ ದುಡ್ಡನ್ನು ನೀವು ಶಾಪಿಂಗ್‌ಗೆ ಖರ್ಚು ಮಾಡಬೇಕು. ಅದನ್ನು ನೋಡಿ ನಾವು ಹೊಟ್ಟೆ ಉರ್ಕೋಬೇಕು. ಅಷ್ಟೇ ಅಲ್ಲ ನೀವು ನಮ್ಮ ತಂದೆ-ತಾಯಿ ಹತ್ರ ಹೋಗಿ ನಿಮ್ಮ ಮಗಾ ನನ್ನ ಚೆನ್ನಾಗಿ ನೋಡಿಕೊಳ್ತಾ ಇಲ್ಲ ನೋಡಿ ಅತ್ತೆ-ಮಾವ ಅಂತ ರಾಗ ಎಳಿಬೇಕು. ಅವರು ನನಗೆ ಹೌದೇನೋ ಎಂದು ರೇಗಬೇಕು. ಅಬ್ಬಾ! ಇಷ್ಟೊಂದು ಕನಸು ಕಟ್ಟಿದ್ದೀವಿ ನಿಮ್ಮ ಮೇಲೆ. ನೀವು ಹೀಗೆ ಅರ್ಧಕ್ಕೆ ಸತ್ತೋದ್ರೆ ಹೆಂಗ್ರೀ?

ನಿಮ್ಮ ಅಷ್ಟೊಂದು ಪ್ರೀತಿನಾ ನಮಗೆ ಕೊಡದೆ ಹೋಗಬೇಡ್ರಿ. ನಿಮ್ಮನ್ನು ಪ್ರೀತಿಸಿರೋ ಹುಡುಗ ನಿಮ್ಮ ಪ್ರೀತಿನ ತಿಳಿದೇ ಹೋದ್ರೆ ಏನಂತೆ ನಿಮ್ಮ ತಂದೆ-ತಾಯಿ ಹುಡುಕೋ ಹುಡುಗನಿಗೆ ಅಷ್ಟೇ ಅದಕ್ಕೂ ಹೆಚ್ಚಾಗಿ ಪ್ರೀತಿ ಕೊಡಿ. ಅವನ ಜೀವನ ಸಾರ್ಥಕ, ನಿಮ್ಮ ಜೀವನವು ಪರಿಪೂರ್ಣ. ನಿಜ ಹೇಳ್ತೀನ್ರೀ ನಾನಂತೂ ಕಾಲೇಜಿನಲ್ಲಿ ಲವ್ ಮಾಡದೆ ತಂದೆ-ತಾಯಿ ಹುಡುಕುವ ನಿಮ್ಮಂತ ಹುಡ್ಗೀಗಾಗಿ ಕಾಯ್ತಾ ಇದ್ದೀನಿ. ನೀವು ಎಲ್ಲಾದ್ರೂ ಕೈ ಕೊಟ್ರೆ ಸರಿ ಇರೋಲ್ಲ ನೋಡ್ರಿ...

English summary

Girls, lovers are waiting for you | Love letter by Chandrashekar Hiremath | Valentine's Day 2012 | ಪ್ರೀತಿನಾ ನಮಗೆ ಕೊಡದೆ ಸತ್ತು ಹೋಗಬೇಡ್ರಿ, ಪ್ಲೀಸ್!

Girls, lovers are waiting for you. Please do not give up life just because your love is failed. A love letter by die hard lover Chandrashekar Hiremath, Hampi University.
Story first published: Friday, February 10, 2012, 12:54 [IST]
X
Desktop Bottom Promotion