ಬಲು ಸುಲಭ-ಅತೀ ರುಚಿಕರ ಈ 'ಸಿಹಿ ಕುಂಬಳಕಾಯಿ' ಪಲ್ಯ

By: Hemanth
Subscribe to Boldsky

ಭಾರತದಲ್ಲಿ ಆಚರಿಸುವಷ್ಟು ಹಬ್ಬಹರಿದಿನಗಳು ಬೇರೆ ಯಾವುದೇ ದೇಶದಲ್ಲೂ ನಮಗೆ ಕಾಣಸಿಗಲ್ಲ. ವರ್ಷದಲ್ಲಿ ಒಂದೆರಡು ತಿಂಗಳು ಬಿಟ್ಟರೆ ಉಳಿದ ಹತ್ತು ತಿಂಗಳು ಏನಾದರೊಂದು ಹಬ್ಬಗಳು ಇದ್ದೇ ಇರುತ್ತದೆ. ದೇಶದ ಯಾವುದೇ ಭಾಗದಲ್ಲಿಯಾದರೂ ಏನಾದರೊಂದು ಹಬ್ಬದ ಆಚರಣೆ ಇರುತ್ತದೆ. ಒಂದೊಂದು ಹಬ್ಬಗಳಿಗೆ ವಿವಿಧ ಬಗೆಯ ಅಡುಗೆ ಮಾಡುತ್ತಾರೆ. 

ಇನ್ನು ನಮಗೆಲ್ಲರಿಗೂ ಗೊತ್ತಿರುವ ಹಾಗೆ, ಸಂಕ್ರಾಂತಿ ವರ್ಷದ ಮೊದಲನೇ ಹಬ್ಬ. ಇನ್ನು ಇಂತಹ ಹಬ್ಬಕ್ಕೆ ವಿಶೇಷ ಸಿಹಿ ಇಲ್ಲದೆ ಇದ್ದರೆ ಹೇಗೆ ಮತ್ತೆ ಹೇಳಿ...?ಎಳ್ಳು ಬೆಲ್ಲ ಸಂಕ್ರಾಂತಿ ಸ್ಪೆಷಲ್ ಹೌದಾದರೂ, ಹಬ್ಬದ ಸಮಯದಲ್ಲಿ ಸಿಹಿ ಖಾದ್ಯಕ್ಕೂ ಕೂಡ ಅದರದೇ ಆದ ಸ್ಥಾನ ಇದೆ.... ಹಾಗಾಗಿ ಇಂದಿನ ಲೇಖನದಲ್ಲಿ ಸಿಹಿ ಕುಂಬಳಕಾಯಿಯ ಪಲ್ಯವನ್ನು ತಯಾರಿಸುವುದು ಹೇಗೆ ಎಂದು ಬೋಲ್ಡ್ ಸ್ಕೈ ನಿಮಗೆ ಹೇಳಿಕೊಡಲಿದೆ. ಇದಕ್ಕೆ ಬೇಕಾಗಿರುವುದು ಕೆಲವೇ ಕೆಲವು ಸಾಮಗ್ರಿಗಳು....ಇದನ್ನು ತಯಾರಿಸಿಕೊಂಡು ಮಕರಸಂಕ್ರಾಂತಿಯನ್ನು ಆಚರಿಸಿಕೊಳ್ಳಿ....   ವಿಶೇಷ ಅಡುಗೆಗೆ ಸಿಹಿಗುಂಬಳದ ರಾಯತ

Pumpkin Palya
 

ಇಬ್ಬರಿಗೆ ಸಾಕಾಗುವಷ್ಟು

ತಯಾರಿಸಲು ಬೇಕಾಗುವ ಸಮಯ-10 ನಿಮಿಷ

ಅಡುಗೆ ಸಮಯ-15 ನಿಮಿಷ

ಬೇಕಾಗುವ ಸಾಮಗ್ರಿಗಳು

*ಸಿಹಿ ಕುಂಬಳಕಾಯಿ 1 ½ ಕಪ್( ಸಣ್ಣದಾಗಿ ಕತ್ತರಿಸಿರುವುದು)

*ಕೆಂಪು ಮೆಣಸು-2

*ಹಸಿರು ಮೆಣಸು-2

*ತೆಂಗಿನ ಕಾಯಿ ½ ಕಪ್ (ತುರಿದಿರುವುದು)

*ಕೊತ್ತಂಬರಿ ಸೊಪ್ಪು ಸ್ವಲ್ಪ ಸರಿಯಾಗಿ ಕತ್ತರಿಸಿರುವುದು

*ಎಣ್ಣೆ 3 ಚಮಚ

*ರುಚಿಗೆ ತಕ್ಕಷ್ಟು ಉಪ್ಪು       ಆರೋಗ್ಯದ ಪಾಲಿನ ಸಂಜೀವಿನಿ-ಸಿಹಿ ಕುಂಬಳಕಾಯಿ

ಒಗ್ಗರಣೆಗೆ

*ಸಾಸಿವೆ ಕಾಳು 2 ಚಮಚ

*ಉದ್ದಿನ ಕಾಳು 2 ಚಮಚ

*ಇಂಗು 1 ಹಿಡಿ

*ಕಡಲೆ ಕಾಳು 2 ಚಮಚ

*ಕರಿಬೇವು 4-5

*ಅರಿಶಿನ ಹುಡಿ ¼ ಚಮಚ

ತಯಾರಿಸುವ ವಿಧಾನ

* ಸಿಹಿ ಕುಂಬಳಕಾಯಿಯ ಸಿಪ್ಪೆಯನ್ನು ಸರಿಯಾಗಿ ತೆಗೆದು ಸಣ್ಣದಾಗಿ ಕತ್ತರಿಸಿಕೊಳ್ಳಿ.

* ಒಂದು ಬಾಣಲೆ ತೆಗೆದುಕೊಂಡು ಎಣ್ಣೆ ಬಿಸಿ ಮಾಡಿ. ಸಾಸಿವೆ ಕಾಳು, ಉದ್ದಿನ ಕಾಳು, ಕಡಲೆ ಕಾಳು, ಇಂಗು, ಅರಶಿನ ಮತ್ತು ಮೆಣಸನ್ನು ಹಾಕಿಕೊಳ್ಳಿ. ಇದನ್ನು 30 ಸೆಕೆಂಡು ಕಾಲ ಕರಿಯಿರಿ.

* ಕಡಲೆಕಾಳು ಬಣ್ಣ ಬದಲಾಯಿಸಿದಾಗ ಇದಕ್ಕೆ ಸಿಹಿ ಕುಂಬಳಕಾಯಿ ಕಾಯಿ ಮತ್ತು ಸ್ವಲ್ಪ ನೀರು ಹಾಕಿ. ಇದನ್ನು ಮುಚ್ಚಳ ಮುಚ್ಚಿ ಸ್ವಲ್ಪ ಸಮಯ ಬೇಯಲು ಬಿಡಿ.

* ಐದು ನಿಮಿಷ ಬಿಟ್ಟು ಕುಂಬಳಕಾಯಿ ಬೆಂದಿದೆಯಾ ಎಂದು ನೋಡಿ. ಸಿಹಿ ಕುಂಬಳಕಾಯಿ ಮೃದುವಾಗಿದ್ದರೆ ಬೆಂದಿದೆ ಎಂದು ಅರ್ಥ. ಇದಕ್ಕೆ ಉಪ್ಪು ಹಾಕಿಕೊಂಡು ಸರಿಯಾಗಿ ಮಿಶ್ರಣ ಮಾಡಿಕೊಳ್ಳಿ.

* ಕತ್ತರಿಸಿಕೊಂಡಿರುವ ಕೊತ್ತಂಬರಿ ಸೊಪ್ಪು ಮತ್ತು ತುರಿದಿರುವ ತೆಂಗಿನಕಾಯಿ ಹಾಕಿಕೊಂಡು ಮತ್ತೆ ಮಿಶ್ರಣ ಮಾಡಿಕೊಳ್ಳಿ.

* ಸಿಹಿಕುಂಬಳಕಾಯಿ ಪಲ್ಯ ಈಗ ಬಡಿಸಲು ತಯಾರಾಗಿದೆ. ಇದನ್ನು ಅನ್ನ ಮತ್ತು ಚಪಾತಿ ಜತೆ ಸೇವಿಸಬಹುದು...

English summary

Sweet Pumpkin Palya For Sankranti

The recipe of this sweet pumpkin palya is very easy and you need simple ingredients for this. Want to prepare it at home this Makar Sankranti? Then, have a look at the recipe below.
Please Wait while comments are loading...
Subscribe Newsletter