Latest Updates
-
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್! -
ವಿಶ್ವ ಬೆನ್ನುಮೂಳೆ ದಿನ: ಬೆನ್ನುನೋವಿಗೆ ಗುಡ್ ಬೈ ಹೇಳಲು ಕೇವಲ 5 ನಿಮಿಷದ 'ಸ್ಪೈನ್ ರಿಸೆಟ್' ರೂಟಿನ್! -
ನವರಾತ್ರಿ ಸಂಭ್ರಮ: ಅತ್ತೆ-ಮಾವಂದಿರ ಮನೆಗೆ ಹೋಗುವಾಗ ನವದಂಪತಿಗಳು ಮರೆಯದೆ ಪಾಲಿಸಬೇಕಾದ ಶಿಷ್ಟಾಚಾರಗಳಿವು!
ರಂಜಾನ್ ಸ್ಪೆಷಲ್: ಖರ್ಜೂರ-ಡ್ರೈ ಫ್ರುಟ್ಸ್ ಲಡ್ಡು-ನೀವೂ ಮಾಡಿ ನೋಡಿ...
ಪವಿತ್ರ ರಂಜಾನ್ ಮಾಸ ಆರಂಭವಾಗಿದೆ. ವರ್ಷದ ಒಂಬತ್ತನೆಯ ತಿಂಗಳಿನಲ್ಲಿ ರಂಜಾನ್ ಹಬ್ಬವನ್ನು ಆಚರಿಸುತ್ತಾರೆ. ಈ ತಿಂಗಳಲ್ಲೇ ಪ್ರವಾದಿ ಮಹಮ್ಮದರು ಕುರಾನ್‌ನ ಉಪದೇಶವನ್ನು ಮಾಡಿದ್ದರು ಎಂಬುದಾಗಿ ನಂಬಲಾಗಿದೆ. ಮನಸ್ಸಿನಲ್ಲಿ ದೇವರನ್ನು ನೆನೆಯುತ್ತಾ ಉಪವಾಸವನ್ನು ಕೈಗೊಂಡು ಭಕ್ತಿಯಿಂದ ಅಲ್ಲಾಹುವನ್ನು ಧ್ಯಾನಿಸುವ ಮಾಸ.
ಇನ್ನು ರಂಜಾನ್ ಇಫ್ತಾರ್ ಕೂಟವನ್ನು ವೈವಿಧ್ಯಮಯ ಖಾದ್ಯಗಳಿಂದ ಸಿದ್ಧಪಡಿಸಲಾಗುತ್ತದೆ. ದಿನವಿಡೀ ಉಪವಾಸ ಕೈಗೊಳ್ಳುವವರನ್ನು ಶಕ್ತಿವಂತರಾಗಿ ಇರಿಸುವ ಪೋಷಕಾಂಶಯುಕ್ತ ಆಹಾರವನ್ನೇ ಸಿದ್ಧಪಡಿಸಲಾಗುತ್ತದೆ. ಕಡಿಮೆ ಕ್ಯಾಲೋರಿಯಿಂದ ಉಪವಾಸವನ್ನು ತ್ಯಜಿಸಿಕೊಂಡು ಸುಲಭವಾಗಿ ಜೀರ್ಣವಾಗುವ ಆಹಾರವನ್ನೇ ಸೇವಿಸುತ್ತಾರೆ.
ಹಾಗಿದ್ದರೆ ನಿಮ್ಮ ಇಫ್ತಾರ್ ಕೂಟಕ್ಕೆ ಜತೆಗೂಡುವ ಖಾದ್ಯವೊಂದನ್ನು ನಾವಿಲ್ಲಿ ನೀಡುತ್ತಿದ್ದು ಇದು ಕಡಿಮೆ ಕೊಬ್ಬಿನಿಂದ ಕೂಡಿದೆ ಮತ್ತು ದಿನವಿಡೀ ನಿಮ್ಮನ್ನು ಶಕ್ತಿವಂತರನ್ನಾಗಿ ಇರಿಸುತ್ತದೆ. ಖರ್ಜೂರ ಮತ್ತು ಒಣಹಣ್ಣುಗಳಿಂದ ಮಾಡಲಾಗುವ ಈ ಸಿಹಿ ಲಡ್ಡು ನಿಮ್ಮ ಉಪವಾಸವನ್ನು ಮುಕ್ತಾಯಗೊಳಿಸಲು ಸಹಕಾರಿಯಾಗಿದೆ.

ಸಾಮಾಗ್ರಿಗಳು
*ಖರ್ಜೂರ ಬೀಜರಹಿತವಾದುದು - 20
*ಸಣ್ಣದಾಗಿ ಕತ್ತರಿಸಿರುವ ಒಣಹಣ್ಣುಗಳು - ದ್ರಾಕ್ಷಿ, ಬಾದಾಮಿ, ಗೋಡಂಬಿ, ಪಿಸ್ತಾ 1 ಕಪ್
*ಬೇಕಾದಷ್ಟು ತುರಿದ ಕೊಬ್ಬರಿ
ಮಾಡುವ ವಿಧಾನ
*ವೈಕ್ರೋವೇವ್ ಟ್ರೇಯನ್ನು ತೆಗೆದುಕೊಂಡು ಅದರಲ್ಲಿ ಕತ್ತರಿಸಿರುವ ಒಣಹಣ್ಣುಗಳನ್ನು ಹಾಕಿ. 2 ನಿಮಿಷಗಳ ಕಾಲ ಹಣ್ಣುಗಳನ್ನು ಹುರಿದುಕೊಳ್ಳಿ.
*ಈಗ ಖರ್ಜೂರವನ್ನು ಇದರಲ್ಲಿ ಹಾಕಿ ಮತ್ತು 30 ರಿಂದ 40 ಸೆಕೆಂಡ್‌ಗಳ ಕಾಲ ಅದನ್ನು ಬಿಸಿ ಮಾಡಿ.
*ಈಗ ಟ್ರೇಯನ್ನು ಹೊರತೆಗೆದು ಅದಕ್ಕೆ ತುರಿದ ಕೊಬ್ಬರಿಯನ್ನು ಸೇರಿಸಿ.
*ಮಿಕ್ಸಿಯಲ್ಲಿ ಇದನ್ನು ರುಬ್ಬಿಕೊಳ್ಳಿ
*ಇನ್ನು ಮಿಶ್ರಣ ತಣ್ಣಗಾದ ನಂತರ ನಿಮ್ಮ ಕೈಗಳಿಂದ ಅದನ್ನು ಲಾಡಿನ ಉಂಡೆಗಳನ್ನಾಗಿ ಕಟ್ಟಿ.
*ಕೊಬ್ಬರಿಯಲ್ಲಿ ಈ ಉಂಡೆಗಳನ್ನು ಹೊರಳಾಡಿಸಿ.
*ಬೇಕಿದ್ದರೆ ಚಾಕಲೇಟ್ ಚಿಪ್ಸ್, ಎಳ್ಳು, ಕುಂಬಳಕಾಯಿ ಬೀಜ, ಕಡಲೆಯನ್ನು ಲಾಡಿಗೆ ಸೇರಿಸಿಕೊಳ್ಳಬಹುದಾಗಿದೆ.



Click it and Unblock the Notifications
