For Quick Alerts
ALLOW NOTIFICATIONS  
For Daily Alerts

ಸಿಹಿ ತಿನಿಸಿನ ರಾಜ ನಮ್ಮ ಗಣಪನಿಗೆ 'ಓಟ್ಸ್ ಲಡ್ಡು'

By Jaya subramanya
|

ಭಾರತದಲ್ಲಿ ಹಬ್ಬಗಳನ್ನು ಆಚರಿಸುವುದನ್ನು ತುಸು ವಿಜೃಂಭಣೆಯಿಂದಲೇ ನಡೆಸುತ್ತಾರೆ. ಗಣಪನ ಹಬ್ಬ ವಿನಾಯಕ ಚತುರ್ಥಿ ಸನಿಹದಲ್ಲಿಯೇ ಇದೆ. ಎಲ್ಲಾ ಹಬ್ಬಗಳಂತೆಯೇ ವಿಘ್ನ ವಿನಾಶಕನ ಹಬ್ಬವನ್ನು ಇನ್ನಷ್ಟು ಸಂಭ್ರಮದಿಂದ ಆಚರಿಸುತ್ತಾರೆ.

ಉತ್ತರ ಭಾರತದ ಕಡೆಗಳಲ್ಲಿ ಒಂದು ತಿಂಗಳವರೆಗೆ ಗಣಪತಿಯ ಮೂರ್ತಿಯನ್ನು ಇರಿಸಿ ನಂತರವಷ್ಟೇ ವಿಸರ್ಜನೆ ಮಾಡುತ್ತಾರೆ. ಪ್ರಥಮ ಪೂಜೆ ಮಾಡಿಸಿಕೊಳ್ಳುವ ಭಗವಂತ ವಿನಾಯಕ ಬೇಡಿದ್ದನ್ನು ಪ್ರಸಾದಿಸುವ ಕರುಣಾಮಯಿ. ಅಂತೆಯೇ ಭಕ್ಷ್ಯಗಳೆಂದರೆ ಈ ದೇವರಿಗೆ ಅಚ್ಚುಮೆಚ್ಚು. ಗಣೇಶ ಹಬ್ಬಕ್ಕೆ ಸಿಹಿ ಸಿಹಿ ಹೂರಣದ ಹೋಳಿಗೆ!

ದೇವರಿಗೆ ಪ್ರಸಾದವನ್ನು ಮಾಡಿ ಅರ್ಪಿಸಲು ಮತ್ತು ಸಿಹಿಯಿಂದ ಹಬ್ಬವನ್ನು ಆಚರಿಸಲು ನೀವು ವಿಶೇಷವಾದ ತಿಂಡಿಯನ್ನು ಸಿದ್ಧಪಡಿಸಲೇಬೇಕು ಅಲ್ಲವೇ? ಹಾಗಿದ್ದರೆ ಗಣಪನಿಗೆ ಇಷ್ಟವಾಗಿರುವ ಲಾಡನ್ನೇ ಅತಿ ವಿಶೇಷವಾಗಿ ಹಬ್ಬಕ್ಕಾಗಿ ತಯಾರಿಸೋಣ.

Oats Ladoo

ಅದೂ ಓಟ್ಸ್‎ನಿಂದ ತಯಾರಿಸಲಾಗುವ ಈ ಲಾಡು ನಿಮ್ಮ ಡಯೆಟ್‎ಗೂ ಸಹಕಾರಿ ಎಂದೆನಿಸಿದ್ದು ಅಧಿಕ ಕೊಲೆಸ್ಟ್ರಾಲ್ ಭಯವಿಲ್ಲದೆ ಹಬ್ಬದ ಸಿಹಿಯನ್ನು ಸೇವಿಸಲು ಅನುಕೂಲವನ್ನು ಮಾಡಿಕೊಡುತ್ತದೆ. ಹಾಗಿದ್ದರೆ ಬನ್ನಿ ಇಂದಿನ ಲೇಖನದಲ್ಲಿ ಓಟ್ಸ್ ಲಾಡನ್ನು ಹೇಗೆ ತಯಾರು ಮಾಡುತ್ತಾರೆ ಎಂಬುದನ್ನು ಅರಿತುಕೊಳ್ಳೋಣ.

ಪ್ರಮಾಣ - 10 ಲಾಡುಗಳು
ಸಿದ್ಧತಾ ಸಮಯ - 15 ನಿಮಿಷಗಳು
ಅಡುಗೆಗೆ ಬೇಕಾದ ಸಮಯ - 10 ನಿಮಿಷಗಳು

ಸಾಮಾಗ್ರಿಗಳು
*ರೋಲ್ಡ್ ಓಟ್ಸ್ - 1 ಕಪ್
*ಬೆಲ್ಲ (ಕುಟ್ಟಿ ಪುಡಿ ಮಾಡಿರುವಂತಹದ್ದು) - 1/2 ಕಪ್
*ಬಿಳಿ ಎಳ್ಳು - 2 ಚಮಚ
*ತುಪ್ಪ - 2 ರಿಂದ 3 ಚಮಚ
*ಹಸಿರು ಏಲಕ್ಕಿ ಹುಡಿ - 1 ಚಮಚ
*ಒಣದ್ರಾಕ್ಷಿ - 20
*ಕೋಯಾ - 1 ಕಪ್
*ಬಾದಾಮಿ - 5 ಗಣೇಶ ಹಬ್ಬದ ಸಂಭ್ರಮವನ್ನು ಹೆಚ್ಚಿಸುವ ಕೇಸರಿ ಮೋದಕ

ಮಾಡುವ ವಿಧಾನ
1. ನಾನ್ ಸ್ಟಿಕ್ ಪ್ಯಾನ್ ಅನ್ನು ತೆಗೆದುಕೊಂಡು ಕಡಿಮೆ ಉರಿಯಲ್ಲಿ ಎಳ್ಳನ್ನು ಹುರಿದುಕೊಳ್ಳಿ
2. ಇದಕ್ಕೆ ಬಾದಾಮಿಯನ್ನು ಹಾಕಿ ಕೊಂಚ ಸಮಯ ಹುರಿಯಿರಿ. ಇದನ್ನು ಪಕ್ಕದಲ್ಲಿಡಿ
3. ಈಗ, ಪ್ಯಾನ್‎ನಲ್ಲಿ ಓಟ್ಸ್ ಅನ್ನು ತೆಗೆದುಕೊಳ್ಳಿ ಮತ್ತು ಇದನ್ನು ಹುರಿಯಿರಿ, ಸಾಮಾನ್ಯ 5 ನಿಮಿಷ ಹುರಿದುಕೊಳ್ಳಿ
4. ಇದು ಸಂಪೂರ್ಣವಾಗಿ ತಣ್ಣಗಾದ ನಂತರ ಗ್ರೈಂಡರ್‎ನಲ್ಲಿ ಹುಡಿ ಮಾಡಿ
5.ಈಗ, ಇನ್ನೊಂದು ಪ್ಯಾನ್ ತೆಗೆದುಕೊಂಡು ಅದಕ್ಕೆ ತುಪ್ಪವನ್ನು ಹಾಕಿ
6.ಇದಕ್ಕೆ ಬೆಲ್ಲ ಮತ್ತು ಏಲಕ್ಕಿ ಹುಡಿಯನ್ನು ಸೇರಿಸಿಕೊಳ್ಳಿ. ಬೆಲ್ಲ ಸಂಪೂರ್ಣವಾಗಿ ಕರಗುವವರೆಗೆ ಕಾಯಿರಿ
7.ಮಿಶ್ರಣವನ್ನು ಚೆನ್ನಾಗಿ ಕಲಸಿಕೊಳ್ಳಿ, ಇದರಿಂದ ತಳ ಊರುವುದಿಲ್ಲ
8.ಇದಕ್ಕೆ ಓಟ್ಸ್, ನಟ್ಸ್ ಮತ್ತು ಎಳ್ಳನ್ನು ಬೆಲ್ಲಕ್ಕೆ ಹಾಕಿ ಚೆನ್ನಾಗಿ ಕಲಸಿಕೊಳ್ಳಿ
9.ಈ ಮಿಶ್ರಣ ಅಂಟಾಂಟಾಗಿದೆ ಎಂಬುದಾಗಿ ನಿಮಗೆ ಕಂಡುಬಂದಲ್ಲಿ, ಇದಕ್ಕೆ ನೀರು ಸೇರಿಸಿ ಅಂತೆಯೇ ಪ್ರಮಾಣದ ಬಗ್ಗೆ ಜಾಗ್ರತೆಯಿಂದಿರಿ.
10.ಮಿಶ್ರಣಕ್ಕೆ ಕೋಯಾವನ್ನು ಸೇರಿಸಿ ಮತ್ತು ಕರಗಲು ಬಿಡಿ. ಚೆನ್ನಾಗಿ ಮಿಶ್ರ ಮಾಡಿ. ಇದರಿಂದ ಗಂಟು ಕಟ್ಟುವುದಿಲ್ಲ
11.ಪ್ಯಾನ್‎ನಿಂದ ಎಲ್ಲಾ ಮಿಶ್ರಣ ಬಿಡಲು ಆರಂಭಗೊಳ್ಳುತ್ತಿದ್ದಂತೆ, ಕೊನೆಯದಾಗಿ ಇದನ್ನು ಮಿಶ್ರಮಾಡಿ ಮತ್ತು ಗ್ಯಾಸ್ ಆಫ್ ಮಾಡಿ.
12. 2-3 ನಿಮಿಷಗಳ ಕಾಲ ಕಾಯಿರಿ ಮತ್ತು ಮಿಶ್ರಣದಿಂದ ಸಣ್ಣ ಉಂಡೆಗಳನ್ನು ಮಾಡಿಕೊಳ್ಳಿ.
13. ದ್ರಾಕ್ಷಿ ಮತ್ತು ಬಾದಾಮಿಯಿಂದ ಲಾಡನ್ನು ಸಿಂಗರಿಸಿ
14. ನಿಮ್ಮ ಓಟ್ಸ್ ಲಾಡು ಸವಿಯಲು ಸಿದ್ಧವಾಗಿದೆ.
ಈ ಅದ್ಭುತ ಸಿಹಿಯನ್ನು ಖಂಡಿತ ಪ್ರಯತ್ನಿಸಿ ಮತ್ತು ನಿಮ್ಮ ಪ್ರತಿಕ್ರಿಯೆಯನ್ನು ನಮಗೆ ಬರೆದು ತಿಳಿಸಿ.

English summary

Oats Ladoo Recipe for Ganesh Chaturthi

Make oats ladoo recipe for Ganesh Chaturthi and do share them with your near and dear ones. You will need easy ingredients for this recipe. Read on to know more.
Story first published: Thursday, September 1, 2016, 20:01 [IST]
X
Desktop Bottom Promotion