For Quick Alerts
ALLOW NOTIFICATIONS  
For Daily Alerts

ಮಕ್ಕಳ ಅಚ್ಚುಮೆಚ್ಚಿನ ಮಾವಿನ ಹಣ್ಣಿನ ಜಾಮ್

By Super
|

ಜಾಮ್ ಅಂದರೆ ಮಕ್ಕಳ ಪಂಚಪ್ರಾಣ. ಇದನ್ನು ಅಂಗಡಿಯಿಂದ ಕೊಳ್ಳುವ ಬದಲು ಸುಲಭವಾಗಿ ಮನೆಯಲ್ಲಿಯೆ ತಯಾರಿಸಬಹುದು. ಈ ಜಾಮ್ ತಯಾರಿಸಿ ಡಬ್ಬದಲ್ಲಿಟ್ಟರೆ ಮಕ್ಕಳಿಗೆ ಬ್ರೆಡ್ ಜೊತೆ ತಿನ್ನಲು ಕೊಡಬಹುದು. ಇವತ್ತು ನಾವು ರುಚಿಕರವಾದ ಮಾವಿನ ಹಣ್ಣಿನ ಜಾಮ್ ಮಾಡುವ ವಿಧಾನ ತಿಳಿಯೋಣ:

Mango Jam Recipe

ಬೇಕಾಗುವ ಸಾಮಾಗ್ರಿಗಳು:

* 2 1/2 ಕಪ್ ಮಾವಿನ ಹಣ್ಣು
* 250ಗ್ರಾಂ ಸಕ್ಕರೆ
* 1/4 ಚಮಚ ನಿಂಬೆ ರಸ
* 1 ಚಮಚ ಪೆಕ್ಟಿನ್ ( ಹಣ್ಣಿನಿಂದ ತಯಾರಿಸಿದ ದ್ರಾವಣ, ಫುಡ್ ಮಾರ್ಕೆಟ್ ನಲ್ಲಿ ದೊರೆಯುತ್ತದೆ)
* ಪೊಟಾಷ್ಯಿಯಂ ಮೆಟಾಸಲ್ಫೇಟ್ (ಇದೂ ಕೂಡ ಫುಡ್ ಮಾರ್ಕೆಟ್ ನಲ್ಲಿ ದೊರೆಯುತ್ತದೆ)

ತಯಾರಿಸುವ ವಿಧಾನ:

1. ಮಾವಿನ ಹಣ್ಣಿನ ತಿರುಳು ಮತ್ತು ಸಕ್ಕರೆ ಹಾಕಿ ಕಾಯಿಸಬೇಕು. ಮಾವಿನ ಹಣ್ಣು ಸ್ವಲ್ಪ ಗಟ್ಟಿ ಪೇಸ್ಟ್ ರೀತಿ ಆಗುವವರೆಗೆ ಬಿಸಿ ಮಾಡಬೇಕು.

2. ನಂತರ ಉರಿಯಿಂದ ತೆಗೆಯಬೇಕು.

3. ಈಗ ನಿಂಬೆ ರಸ, ಚಮಚ ಪೆಕ್ಟಿನ್, ಪೊಟಾಷ್ಯಿಯಂ ಮೆಟಾಸಲ್ಫೇಟ್ ಅನ್ನು 1/4 ಕಪ್ ಬಿಸಿ ನೀರಿನಲ್ಲಿ ಚೆನ್ನಾಗಿ ಮಿಶ್ರ ಮಾಡಿ ಮಾವಿನ ಹಣ್ಣಿನ ಪೇಸ್ಟ್ ಜೊತೆ ಮಿಶ್ರ ಮಾಡಬೇಕು.

4. ಮಿಶ್ರಣ ತಣ್ಣಗಾದ ಮೇಲೆ ನಂತರ ತಯಾರಾದ ಜಾಮ್ ಅನ್ನು ಗಾಳಿ ಸೇರದ ಡಬ್ಬದಲ್ಲಿ ಶೇಖರಿಸಿಡಬಹುದು.

English summary

Mango Jam Recipe | Variety Of Jam Recipe | ಮಾವಿನ ಹಣ್ಣಿನ ಜೆಲ್ಲಿ ರೆಸಿಪಿ | ಅನೇಕ ಬಗೆಯ ಜೆಲ್ಲಿ ರೆಸಿಪಿ

Children will love to eat jelly. Instead of buy Jam from food market you can prepare tasty jam at home itself. Here is a easy recipe of mango jam.
X
Desktop Bottom Promotion