For Quick Alerts
ALLOW NOTIFICATIONS  
For Daily Alerts

ಮಕರ ಸಂಕ್ರಾಂತಿಗೆ ಎಳ್ಳು, ಸಕ್ಕರೆ ಅಚ್ಚು, ಹುಗ್ಗಿ

By Super
|
Ellu bella
ಸಕ್ಕರೆ ಅಚ್ಚು, ಎಳ್ಳುಬೆಲ್ಲ, ಪಾಯಸ, ಸಿಹಿ ಹುಗ್ಗಿ, ಬರ್ಫಿ, ಹೋಳಿಗೆ... ಅಬ್ಬಬ್ಬಾ ಎಷ್ಟೊಂದು ಹಬ್ಬದ ಅಡುಗೆ....ಯಾರು ಮಾಡಿದ್ರು ಇಷ್ಟೆಲ್ಲ?

ಸಂಕ್ರಾಂತಿ ಎಳ್ಳು

ಬೇಕಾಗುವ ಸಾಮಗ್ರಿ : ಒಂದು ಬಟ್ಟಲು ಎಳ್ಳು, ಒಂದು ಹಿಡಿ ಹುರಿಗಡಲೆ, ಮುಕ್ಕಾಲು ಬಟ್ಟಲು ಶೇಂಗಾ ಬೀಜ, ಅರ್ಧ ಬಟ್ಟಲು ಬೆಲ್ಲದ ಚೂರು, ಕಾಲು ಬಟ್ಟಲು ಕೊಬ್ಬರಿ ಚೂರು ಹಾಗೂ ಒಂದು ಹಿಡಿ ಕುಸುರೆಳ್ಳು.

ಎಳ್ಳು ತಯಾರಿಸುವುದು ತುಂಬಾ ತಾಳ್ಮೆಯ ಕೆಲಸ. ಈ ವರ್ಷ ಅಂಗಡಿಯಲ್ಲಿ ಸಿಗುವ ಸಿದ್ಧಮಾಡಿದ ಬಿಳಿ ಎಳ್ಳಿನ ಎರಡು ಪ್ಯಾಕೆಟ್‌ ತನ್ನಿ.

ಮಾಡುವ ವಿಧಾನ : ಎಳ್ಳನ್ನು ಕೆಂಪಾಗದಂತೆ ಒಂದೇ ಹದಕ್ಕೆ ಹುರಿಯಿರಿ. ಶೇಂಗಾ ಬೀಜಗಳನ್ನು ಕಪ್ಪಾಗದಂತೆ ಹುರಿದು, ಆರಿದ ನಂತರ ಸಿಪ್ಪೆ ತೆಗೆದು ಹೋಳು ಮಾಡಿ. ಕೊಬ್ಬರಿ ಮೇಲಿನ ಕಪ್ಪು ಸಿಪ್ಪೆ ತೆಗೆದು ಸೀಳು ಮಾಡಿ ಗೋಧಿ ಗಾತ್ರದ ತುಂಡು ಮಾಡಿ. ಬೆಲ್ಲವನ್ನು ಹೆಚ್ಚಿ ಚಿಕ್ಕ ಚಿಕ್ಕ ಚೂರು ಮಾಡಿ ಕುಸುರೆಳ್ಳು ಹಾಗೂ ಇತರೆ ಎಲ್ಲ ಸಾಮಗ್ರಿಗಳನ್ನು ಬೆರೆಸಿ. ಎಳ್ಳು ಬೆಲ್ಲ ಮಾಡುವಾಗ ಮತ್ತು ನೀಡುವಾಗ ಒಳ್ಳೆಯ ಮಾತಾಡಬೇಕಾದುದು ಕಡ್ಡಾಯ!

- ಆರ್‌. ಸವಿತಾ, ದಾವಣಗೆರೆ

***

ಸಕ್ಕರೆ ಅಚ್ಚು

ಬೇಕಾಗುವ ಸಾಮಾನು : ಅರ್ಧ ಕೆ.ಜಿ. ಸಕ್ಕರೆ, ಕಾಲು ಲೀಟರ್‌ ಹಾಲು, ಒಂದು ನಿಂಬೆಹಣ್ಣು, ಕೇಸರಿ, ಹಳದಿ ಹಾಗೂ ಕೆಂಪು ಬಣ್ಣ, ಅಚ್ಚುಗಳು ( ಅಚ್ಚು ಮನೆಯಲ್ಲಿ ಇನ್ನೂ ಇಟ್ಟಿದ್ದೀರಾ? ), ಎಣ್ಣೆ.

ಮಾಡುವ ವಿಧಾನ : ಪಾತ್ರೆಯಲ್ಲಿ ಸಕ್ಕರೆ ಮತ್ತು ನೀರು ಸೇರಿಸಿ ಸಣ್ಣ ಉರಿಯಲ್ಲಿ ಕಲಕುತ್ತಿರಿ. ಸಕ್ಕರೆ ಪಾಕ ಬಂದಾಗ ಹಾಲು ಸೇರಿಸಿ ಕಲಕಿ. ನಿಂಬೆರಸ, ಬಣ್ಣ ಸೇರಿಸಿ ಬಟ್ಟೆಯಲ್ಲಿ ಸೋಸಿ ಸಕ್ಕರೆ ಪಾಕಕ್ಕೆ ಹಾಕಿ ಕುದಿಸಿ. ಸಕ್ಕರೆ ಪಾಕ ಹದಕ್ಕೆ ಬಂದ ಮೇಲೆ ಅಚ್ಚುಗಳಿಗೆ ಸುರಿಯಿರಿ. ಅಚ್ಚುಗಳಿಗೆ ಮೊದಲೇ ಎಣ್ಣೆ ಸವರಿಟ್ಟುಕೊಳ್ಳಿ. ಸ್ವಲ್ಪ ಆರಿದ ನಂತರ ತಟ್ಟೆಯಲ್ಲಿ ಜೋಡಿಸಿ. ಹೀಗೆ ಇನ್ನೊಂದು ಬಣ್ಣ ಸೇರಿಸಿ ಅಚ್ಚುಗಳನ್ನು ಮಾಡಬಹುದು. ತೇರು, ಗಣಪ, ಲಕ್ಷ್ಮಿ, ತೆಂಗಿನಕಾಯಿ, ಶಿವಲಿಂಗ, ಆಂಜಲೇಯ, ಹಡಗು, ಮನೆ ಮುಂತಾದ ಆಕೃತಿಗಳಲ್ಲಿ ಹೊರಹೊಮ್ಮುವ ಸಕ್ಕರೆ ಅಚ್ಚು, ಅಚ್ಚುಮೆಚ್ಚು.

***
ಸಿಹಿ ಹುಗ್ಗಿ

ಬೇಕಾಗುವ ಸಾಮಗ್ರಿ : ದ್ರಾಕ್ಷಿ, ಗೋಡಂಬಿ, ಬೇಯಿಸಿದ ಹೆಸರು ಬೇಳೆ ಒಂದು ಕಪ್‌, ಬೆಲ್ಲ , ಕೊಬ್ಬರಿ ತುರಿ, ಒಂದು ಚಮಚ ಗಸಗಸೆ, ತುಪ್ಪ , ಅಕ್ಕಿ ಮತ್ತು ಗೋಧಿಹಿಟ್ಟು.

ಮಾಡುವ ವಿಧಾನ : ಪಾತ್ರೆಗೆ ಒಂದು ಟೀ ಸ್ಪೂನ್‌ ತುಪ್ಪ ಹಾಕಿ ದ್ರಾಕ್ಷಿ, ಗೋಡಂಬಿಯನ್ನು ಹುರಿದುಕೊಂಡು ಪಕ್ಕಕ್ಕೆ ತೆಗೆದಿಟ್ಟುಕೊಳ್ಳಿ. ನಂತರ ಅದೇ ತುಪ್ಪದ ಪಾತ್ರೆಯಲ್ಲಿ ಹೆಸರಬೇಳೆ ಹಾಕಿ ಚೆನ್ನಾಗಿ ಹುರಿದು, ನೆನೆಸಿರುವ ಅಕ್ಕಿ ಹಾಕಿ ಚೆನ್ನಾಗಿ ಬೇಯಿಸಿಕೊಳ್ಳಿ. ನಂತರ ಬೆಲ್ಲದ ಪಾಕ ತಯಾರಿಸಿಕೊಂಡು ಅದಕ್ಕೆ ಸ್ವಲ್ಪ ತೆಂಗಿನ ತುರಿ ಮತ್ತು ಏಲಕ್ಕಿ ಪುಡಿ, ಒಂದು ಬಟ್ಟಲು ಕೊಬ್ಬರಿ ಹಾಕಿ. ಬೆಂದಿರುವ ಅನ್ನವನ್ನು ಅದಕ್ಕೆ ಸೇರಿಸಿ ಚೆನ್ನಾಗಿ ಬೆರೆಸಿದರೆ ಸಿಹಿ ಪೊಂಗಲ್‌ ಸಿದ್ಧ.

- ಲಕ್ಷ್ಮಿ , ಕೊಳ್ಳೇಗಾಲ

English summary

Ellu bella | Huggi recipe | Sakkare acchu | ಮಕರ ಸಂಕ್ರಾಂತಿಗೆ ಎಳ್ಳು, ಸಕ್ಕರೆ ಅಚ್ಚು, ಹುಗ್ಗಿ

How to prepare Huggi, Sakkare Acchu and Ellu Bella for Makara Sankranti festival.
Story first published: Tuesday, March 27, 2012, 17:39 [IST]
X
Desktop Bottom Promotion