For Quick Alerts
ALLOW NOTIFICATIONS  
For Daily Alerts

ನೈವೇದ್ಯಕ್ಕೂ ಸೈ, ತಿನ್ನೋದಕ್ಕೂ ಸೈ ಈ ಸ್ಪೆಷಲ್ ಸ್ವೀಟ್

By Staff
|

ವರಮಹಾಲಕ್ಷ್ಮಿ ಹಬ್ಬಕ್ಕೆ ಹೋಳಿಗೆ, ಸಿಹಿ ತಿಂಡಿ ತಯಾರಿಸಲೇಬೇಕು. ಆದರೆ ಈ ಬಾರಿ ಲಕ್ಷ್ಮಿ ಹಬ್ಬಕ್ಕೆ ಹೊಸ ತರಹದ ಸ್ವೀಟ್ ತಯಾರಿಸಿ ಮನೆಗೆ ಬಂದವರಿಗೂ ಹಂಚಿ. ಹರಿಯಾಣ ಮೂಲದ ಈ ಗೋಧಿ ಸ್ವೀಟ್ ತಯಾರಿಸಲು ಹೆಚ್ಚಿಗೆ ಸಾಮಾನೂ ಬೇಡ, ಸಮಯವೂ ಬೇಡ. ಮನೆಯಲ್ಲೇ ಸಿಗುವ ಸಾಮಾನುಗಳಿಂದ ಅತಿ ಬೇಗನೆ ಈ ಸ್ವೀಟನ್ನು ತಯಾರಿಸಬಹುದು. ಈ ಬಾರಿ ವರಮಹಾಲಕ್ಷ್ಮಿ ಹಬ್ಬಕ್ಕೆ ಈ ಸಿಹಿ ತಿಂಡಿಯೂ ನೈವೇದ್ಯದ ಪಟ್ಟಿಗೆ ಸೇರಲಿ.

ಬೇಕಾಗುವ ಸಾಮಾನುಗಳು:
* 1/4 ಕೆ.ಜಿ ಗೋಧಿಹಿಟ್ಟು
* 1/4 ಕೆ.ಜಿ ತುಪ್ಪ
* 1/4 ಕೆ.ಜಿ ಸಕ್ಕರೆ ಪುಡಿ
* 1/4 ಕಪ್ ಹಾಲು
* 1/4 ಚಮಚ ಯಾಲಕ್ಕಿ ಪುಡಿ
* ಗೋಡಂಬಿ, ಬಾದಾಮಿ, ಪಿಸ್ತ

ಗೋಧಿ ಸ್ವೀಟ್ ತಯಾರಿಸುವುದು ಹೇಗೆ?
ಬಾಣಲೆಯಲ್ಲಿ ತುಪ್ಪ ಹಾಕಿ ಅದು ಕರಗಿದ ನಂತರ ಗೋಧಿ ಹಿಟ್ಟನ್ನು ಕೆಂಪಗಾಗುವ ತನಕ ಹುರಿದುಕೊಳ್ಳಬೇಕು. ಅದು ತುಪ್ಪದೊಂದಿಗೆ ಚೆನ್ನಾಗಿ ಬೆರೆತ ಮೇಲೆ ಒಲೆ ಆರಿಸಿ ಅದು ತಣ್ಣಗಾಗುವ ತನಕ ಕಾಯಬೇಕು. ನಂತರ ಯಾಲಕ್ಕಿ ಪುಡಿ ಮತ್ತು ಸಕ್ಕರೆ ಪುಡಿಯನ್ನು ಬೆರೆಸಬೇಕು. ಈಗ ಬಾದಾಮಿ, ಗೋಡಂಬಿ, ಪಿಸ್ತ ಬೆರೆಸಿ ಹಾಲಿನ ಸಹಾಯದೊಂದಿಗೆ ಈ ಮಿಶ್ರಣವನ್ನು ಉಂಡೆ ಮಾಡಿಕೊಳ್ಳಬೇಕು.

ಈಗ ಸ್ಪೆಷಲ್ ಗೋಧಿ ಸ್ವೀಟ್ ರೆಡಿಯಾಗಿದೆ. ಮನೆಮಂದಿಯೆಲ್ಲಾ ಗೋಧಿ ಸ್ವೀಟ್ ತಿಂದು ಬಾಯಿ ಸಿಹಿ ಮಾಡಿಕೊಳ್ಳಿ.

English summary

Festival recipes | Wheat special sweet recipe | ಹಬ್ಬದ ಅಡುಗೆ | ವರಮಹಾಲಕ್ಷ್ಮಿ ಹಬ್ಬಕ್ಕೆ ವಿಶೇಷ ಗೋಧಿ ಸ್ವೀಟ್

For this varamahalakshmi festival try out a new sweet wheat pinni recipe and keep it as naivaidyam for goddess lakshmi. you dont need rich ingredients to make a sweet, it just need a simple ingredients available at home. Today we will present you the easy wheat pinni recipe that can be prepared for varamahalakshmi festival in just a few minutes. Take a look.
X
Desktop Bottom Promotion