For Quick Alerts
ALLOW NOTIFICATIONS  
For Daily Alerts

ಮಿಲ್ಕ್ ಮೈಸೂರ್ ಪಾಕ್

By * ವಾಣಿ ನಾಯಿಕ, ಬೆಂಗಳೂರು
|
Milk Mysore Pak
ಸಮಯದ ಅಭಾವವಿದ್ದಾಗ, ಹೆಚ್ಚಿನ ತಯಾರಿಯಿಲ್ಲದೆ ತಯಾರಿಸಬಹುದಾದ ಸಿಹಿ ತಿನಿಸು ಮಿಲ್ಕ್ ಮೈಸೂರ್ ಪಾಕ್. ಸ್ವಾದಿಷ್ಟ ಜೊತೆಗೆ ಮಿತವ್ಯಯಿ.

ಅಗತ್ಯ ಸಾಮಗ್ರಿಗಳು

ಹಾಲು 1 ಕಪ್
ಕಡಲೆಹಿಟ್ಟು 1 ಕಪ್
ತುಪ್ಪ 1 ಕಪ್
ಸಕ್ಕರೆ 2 ಕಪ್
ಏಲಕ್ಕಿ ಪುಡಿ ಚಿಟಿಕೆಯಷ್ಟು

ಮಾಡುವ ವಿಧಾನ

ಕಡಲೆಹಿಟ್ಟನ್ನು ಒಂದು ಬಾಣಲೆಯಲ್ಲಿ ಹುರಿದಿಟ್ಟುಕೊಳ್ಳಬೇಕು. ಮತ್ತೊಂದು ಪಾತ್ರೆಯಲ್ಲಿ ಹಾಲಿಗೆ ಸಕ್ಕರೆಯನ್ನು ಬೆರೆಸಿ ಒಲೆಯ ಮೇಲಿಡಿ. ಸಕ್ಕರೆ ಕರಗಿದ ನಂತರ ಐದು ನಿಮಿಷ ಹಾಲು ಕುದಿಯಲು ಬಿಡಿ.

ನಂತರ ಇದಕ್ಕೆ ಹುರಿದಿಟ್ಟುಕೊಂಡ ಕಡಲೆಹಿಟ್ಟು ಹಾಕಿ ಹಿಟ್ಟು ಗಂಟಾಗದಂತೆ ಕೈಯಾಡಿಸಿ. ಸ್ವಲ್ಪ ಸ್ವಲ್ಪ ತುಪ್ಪ ಅದಕ್ಕೆ ಹಾಕುತ್ತ ಕಲಕುತ್ತಿರಿ. ಕೊನೆಯಲ್ಲಿ ಏಲಕ್ಕಿ ಪುಡಿ ಸೇರಿಸಿ ಸ್ವಲ್ಪ ಹೊತ್ತು ಕುದಿಯಲು ಬಿಡಿ.

ಕುದ್ದು ಗಟ್ಟಿಯಾದ ನಂತರ ಒಂದು ಅಗಲವಾದ ತಟ್ಟೆಗೆ ತುಪ್ಪ ಸವರಿ ಅದರ ಮೇಲೆ ಕುದ್ದ ಪದಾರ್ಥವನ್ನು ಹರಡಿ. ಆರಿದ ನಂತರ ಬೇಕಾದ ಆಕಾರಕ್ಕೆ ಕತ್ತರಿಸಿ ತಿನ್ನಿರಿ.

Story first published: Wednesday, August 4, 2010, 16:51 [IST]
X
Desktop Bottom Promotion