For Quick Alerts
ALLOW NOTIFICATIONS  
For Daily Alerts

ಸಿಹಿ ಪಾಕಶಾಲೆ: ರುಚಿಕರ ಹಲಸಿನ ಪಾಯಸ

By Super
|

ಬೇಕಾಗುವ ಪದಾರ್ಥಗಳು:

ಮಾಗಿದ ಹಲಸಿನ ಹಣ್ಣಿನ ತೊಳೆಗಳು-20,
ತೆಂಗಿನಕಾಯಿ-1/2 ಕಪ್,
ಬೆಲ್ಲದ ತುರಿ-3/4 ಕಪ್,
ತುಪ್ಪ-ಒಂದೂವರೆ ಕಪ್
ಗೋಡಂಬಿ ಚೂರುಗಳುಬೇಕಾದಷ್ಟು,
ಏಲಕ್ಕಿ ಪುಡಿ:1/4 ಟಿಸ್ಪೂನ್


ಮಾಡುವ ವಿಧಾನ

1) ಕಾಯಿತುರಿಗೆ ಸ್ವಲ್ಪ ನೀರು ಸೇರಿಸಿ ರುಬ್ಬಿ ಎರಡು ಬಗೆಯ ಕಾಯಿ ಹಾಲನ್ನು ತೆಗೆಯಿರಿ. ನಂತರ ಎರಡನ್ನೂ ಸೇರಿಸಿ.
2) ಹಲಸಿನ ತೊಳೆಗಳಲ್ಲಿರುವ ಬೀಜಗಳನ್ನು ತಗೆದು, ತೊಳೆಗಳನ್ನು ಸಣ್ಣ ಚೂರುಗಳನ್ನಾಗಿ ಕತ್ತರಿಸಿ.
3) ಒಂದು ಪಾತ್ರೆಯಲ್ಲಿ ಒಂದು ಕಪ್ ನೀರನ್ನು ಬಿಸಿಮಾಡಿ. ನೀರು ಕುದಿಯಲು ಆರಂಭವಾದಾಗ, ಇದಕ್ಕೆ ಹಲಸಿನ ತೊಳೆಗಳನ್ನು ಸೇರಿಸಿ, ಅವುಗಳನ್ನು ಮೃದುವಾಗುವವರೆಗೆ ಕುದಿಸಿ.
4) ಇದಕ್ಕೆ ಬೆಲ್ಲದ ತುರಿ ಹಾಗೂ ಕಾಯಿ ಹಾಲನ್ನು ಸೇರಿಸಿ.
5) ಅವನ್ನು ಬೆರಸುವಾಗ ಉರಿಯು ಕಡಿಮೆಯಾಗಿರಲಿ, ಮತ್ತು ಬೆಲ್ಲವು ಸಂಪೂರ್ಣವಾಗಿ ಕರಗುವಂತೆ ನೋಡಿಕೊಳ್ಳಿ.
6) ಗೋಡಂಬಿಯನ್ನು ತುಪ್ಪದಲ್ಲಿ ಹುರಿಯಿರಿ. ಏಲಕ್ಕಿ ಪುಡಿಯನ್ನು ಬಿಸಿ ತುಪ್ಪಕ್ಕೆ ಸೇರಿಸಿ ನಂತರ ಪಾಯಸದಲ್ಲಿ ಬೆರಸಿ.
7) ಒಳ್ಳೆಯ ಸುವಾಸನೆ ಬಂದ ನಂತರ ಒಲೆಯಿಂದ ಇಳಿಸಿ.

(ದಟ್ಸ್ ಕನ್ನಡಪಾಕಶಾಲೆ)

X
Desktop Bottom Promotion