For Quick Alerts
ALLOW NOTIFICATIONS  
For Daily Alerts

ಚುಮುಚುಮು ಚಳಿಗೆ, ಮೈಮರೆಸುವ ಕರುಕುರು ಬೆಂಡೆ ಫ್ರೈ...

By Super
|

ಚಳಿಗಾಲದ ಚುಮುಚುಮು ಚಳಿಯಲ್ಲಿ ತಿನ್ನಲು ಅತ್ಯುತ್ತಮವಾದ ತಿಂಡಿ ಯಾವುದು? ಈ ಪ್ರಶ್ನೆಗೆ ಹೆಚ್ಚಿನವರು ನೀಡುವ ಉತ್ತರ: ಮೆಣಸಿನ ಬೋಂಡಾ. ಸರಿ, ಮೆಣಸಿನ ಬೋಂಡಾ ಚಳಿಗೆ ಉತ್ತಮ ಕುರುಕುತಿಂಡಿಯಾದರೂ ಇದು ಹೊಟ್ಟೆಯಲ್ಲಿ ವಾಯುಪ್ರಕೋಪ ಉಂಟುಮಾಡುವ ಕಾರಣ ಒಂದೆರಡಕ್ಕಿಂತ ಹೆಚ್ಚು ತಿನ್ನಲು ಸಾಧ್ಯವಿಲ್ಲ.

ಆದರೆ ಹೆಚ್ಚಿನವರು ಚಳಿಯಲ್ಲಿ ಬಿಸಿಬಿಸಿ ಕಾಫಿ ಅಥವಾ ಟೀ ಕುಡಿಯುತ್ತಾ ಬಿಸಿಬಿಸಿ ಬೊಂಡಾ ತಿನ್ನುತ್ತಾ ಮೈಮರೆಯುತ್ತಾ ಆರೋಗ್ಯ ಕೆಡಿಸಿಕೊಳ್ಳುವುದೇ ಹೆಚ್ಚು. ಆದರೆ ಇದರ ಬದಲಿಗೆ ಇದಕ್ಕೂ ರುಚಿಕರ ಮತ್ತು ಆರೋಗ್ಯಕರವಾದ ಬದಲಿ ಕುರುಕು ತಿಂಡಿಯೊಂದನ್ನು ಇಂದು ಬೋಲ್ಡ್ ಸ್ಕೈ ತಂಡ ಪ್ರಸ್ತುತಪಡಿಸುತ್ತಿದೆ, ಅದೇ ಮಸಾಲೆ ಬೆಂಡೆ ಫ್ರೈ.

ಇದನ್ನು ಸೇವಿಸಿದ ಬಳಿಕ ನಿಮ್ಮ ಚಳಿಗಾಲದ ಕುರುಕು ತಿಂಡಿಯ ಬಗ್ಗೆ ಇದ್ದ ಅಭಿಪ್ರಾಯಗಳೆಲ್ಲಾ ಬದಲಾಗಲಿವೆ. ಇದಕ್ಕೆ ಹೆಚ್ಚಿನ ಶ್ರಮದ ಅಗತ್ಯವೂ ಇಲ್ಲ ಹಾಗೂ ಹೆಚ್ಚು ಸಮಯವೂ ತಗಲುವುದಿಲ್ಲ, ಅಲ್ಲದೇ ಆರೋಗ್ಯಕರ ಸಹಾ. ಮಕ್ಕಳಂತೂ ಈ ತಿಂಡಿಯನ್ನು ಬಹುವಾಗಿ ಇಷ್ಟಪಡುತ್ತಾರೆ. ಬೆಂಡೆಯಲ್ಲಿ ಹೆಚ್ಚಿನ ಪ್ರಮಾಣದ ಕಬ್ಬಿಣ, ಫೋಲಿಕ್ ಆಮ್ಲ ಮೊದಲಾದ ಪೋಷಕಾಂಶಗಳಿದ್ದು ಮಕ್ಕಳಲ್ಲಿ ನೆನಪಿನ ಶಕ್ತಿಯನ್ನು ಹೆಚ್ಚಿಸುವಲ್ಲಿ ನೆರವಾಗುತ್ತದೆ. ಇದರಲ್ಲಿರುವ ವಿಟಮಿನ್ ಸಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಅಲ್ಲದೇ ಇದು ಮಧುಮೇಹಿಗಳೂ ತಿನ್ನಬಹುದಾದುದರಿಂದ ಮನೆಯ ಎಲ್ಲಾ ಸದಸ್ಯರೂ ಚಳಿಗಾಲದ ಸಂಭ್ರಮವನ್ನು ಹಂಚಿಕೊಳ್ಳಲು ಸೂಕ್ತವಾಗಿದೆ. ಬನ್ನಿ ಇದನ್ನು ತಯಾರಿಸುವ ಬಗೆಯನ್ನು ನೋಡೋಣ: ಗುಜರಾತಿ ಶೈಲಿಯಲ್ಲಿ ಬೆಂಡೆಕಾಯಿ ಪಲ್ಯ

Snack Recipe: Spicy Bhindi Fry

*ಪ್ರಮಾಣ: ನಾಲ್ವರಿಗೆ, ಒಂದು ಹೊತ್ತಿಗಾಗುವಷ್ಟು
*ಸಿದ್ಧತಾ ಸಮಯ: ಹದಿನೈದು ನಿಮಿಷಗಳು
*ತಯಾರಿಕಾ ಸಮಯ: ಹತ್ತು ನಿಮಿಷಗಳು

ಅಗತ್ಯವಿರುವ ಸಾಮಾಗ್ರಿಗಳು:
*ಬೆಂಡೆಕಾಯಿ: ಹತ್ತರಿಂದ ಹದಿನೈದು (ಎಳೆಯದಾಗಿರಬೇಕು, ಮುರಿದಿರಬಾರದು)
*ಈರುಳ್ಳಿ: ಅರ್ಧ ಕಪ್
*ದೊಣ್ಣೆ ಮೆಣಸು- 1/2 ಕಪ್
ಮೆಣಸಿನ ಪುಡಿ - 1 ಚಿಕ್ಕ ಚಮಚ
*ಗರಂ ಮಸಾಲ ಪುಡಿ - 1/2 ಚಿಕ್ಕ ಚಮಚ
*ಜೋಳದ ಹಿಟ್ಟು - 1/2ಚಿಕ್ಕ ಚಮಚ
*ಧನಿಯ ಪುಡಿ - 1/4 ಚಿಕ್ಕ ಚಮಚ
*ಅಕ್ಕಿ ಹಿಟ್ಟು- 1/4 ಚಿಕ್ಕ ಚಮಚ
*ಕೊತ್ತಂಬರಿ ಸೊಪ್ಪು - ಒಂದು ಕಟ್ಟು
*ಎಣ್ಣೆ: ಹುರಿಯಲು ಅಗತ್ಯವಿದ್ದಷ್ಟು
*ಉಪ್ಪು: ಅಗತ್ಯಕ್ಕೆ ತಕ್ಕಂತೆ ಘಮ್ಮೆನ್ನುವ ಮೊಸರು ಬೆಂಡೆಕಾಯಿ ಸಾರು

ವಿಧಾನ:
1) ಮೊದಲು ಬೆಂಡೆಯನ್ನು ತೊಳೆದು ನೀರನ್ನು ಒರೆಸಿ ಉದ್ದನಾಗಿ ನಾಲ್ಕು ಭಾಗಗಳಾಗುವಂತೆ ಸೀಳಿ. ಆದರೆ ತುದಿ ಮತ್ತು ಬುಡದ ಭಾಗವನ್ನು ಸೀಳಬಾರದು. ಎಲ್ಲಾ ಬೆಂಡೆಗಳನ್ನು ಹೀಗೇ ಸೀಳಿ.
2) ಒಂದು ಪಾತ್ರೆಯಲ್ಲಿ ಬೆಂಡೆಗಳನ್ನು ಹಾಕಿ ಇದರ ಮೇಲೆ ಗರಂ ಮಸಾಲಾ, ಜೋಳದ ಹಿಟ್ಟು, ಅಕ್ಕಿ ಹಿಟ್ಟು, ಧನಿಯ ಪುಡಿ, ಮೆಣಸಿನ ಪುಡಿ, ಕೊತ್ತಂಬರಿ ಸೊಪ್ಪು, ಹೆಚ್ಚಿದ ಈರುಳ್ಳಿ, ಹೆಚ್ಚಿದ ದೊಣ್ಣೆ ಮೆಣಸು, ಉಪ್ಪು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ನೀರು ಸೇರಿಸಬೇಡಿ. ಒಣದಾಗಿಯೇ ಇರಲಿ.
3) ದಪ್ಪತಳದ ಬಾಣಲೆಯಲ್ಲಿ ಎಣ್ಣೆ ಬಿಸಿಮಾಡಿ. ಹುರಿಯುವಷ್ಟು ಬಿಸಿಯಾದ ಬಳಿಕ ಮಸಾಲೆ ಬೆಂಡೆಯ ಸೀಳಿನೊಳಕ್ಕೆ ಸೇರುವಂತೆ ಮಾಡಿ ಒಂದೊಂದಾಗಿ ಎಣ್ಣೆಯೊಳಕ್ಕೆ ಬಿಟ್ಟು ಚಿನ್ನದ ಬಣ್ಣ ಬರುವಷ್ಟು ಹುರಿಯಿರಿ.
4) ಬಳಿಕ ಹೊರತೆಗೆದು ಟಿಶ್ಯೂ ಪೇಪರ್ ಮೇಲೆ ಹರಡಿ ಎಣ್ಣೆ ಹೀರಿಕೊಳ್ಳುವಂತೆ ಮಾಡಿ. ಚಳಿಯ ಚುಮುಚುಮು ಹಾಗೂ ಬಿಸಿಬಿಸಿ ಕಾಫಿಯೊಂದಿಗೆ ಅತಿಥಿಗಳಿಗೆ ಹಾಗೂ ಮನೆಯ ಸದಸ್ಯರಿಗೆ ಬಡಿಸಿ, ಶ್ಲಾಘನೆ ಪಡೆಯಿರಿ.

English summary

Snack Recipe: Spicy Bhindi Fry

A must thing to do on a cosy day is to have a sip of coffee and take a bite of a spicy snack. Yes, this is the best thing that you can do on this chilly day. So, what's the special recipe that we are preparing today? Well, we at Boldsky want to share with you a best and easy snack recipe that you can make with bhindi (okra).
Story first published: Wednesday, January 20, 2016, 12:00 [IST]
X
Desktop Bottom Promotion