For Quick Alerts
ALLOW NOTIFICATIONS  
For Daily Alerts

ಅತಿಥಿಗಳ ಮನತಣಿಸುವ ಹೊಸ ವರ್ಷದ ರುಚಿಕರ ರೆಸಿಪಿ

By Manohar. V
|

ಹೊಸ ವರ್ಷವನ್ನು ಬರಮಾಡಿಕೊಳ್ಳಲು ನಮ್ಮ ಉತ್ತಮ ಉಡುಪುಗಳು, ಹೈ ಹೀಲ್ಡ್‌ಗಳತ್ತ ಗಮನ ನೀಡುತ್ತೇವೆ ಅದೇ ರೀತಿ ಅತಿಥಿಗಳನ್ನು ತೃಪ್ತಿಪಡಿಸುವುದಕ್ಕೋಸ್ಕರ ಸ್ವಾದಿಷ್ಟ ತಿನಿಸುಗಳನ್ನು ಮಾಡಲು ಸಾಮಾಗ್ರಿಗಳಿವೆಯೇ ಎಂದು ಅಡುಗೆಮನೆಗೂ ಲಗ್ಗೆ ಇಡುತ್ತೇವೆ. ಎಲ್ಲವೂ ಹೊಚ್ಚಹೊಸದಾಗಿ ಕಂಗೊಳಿಸಬೇಕೆಂಬದು ಇದರ ಹಿಂದಿರುವ ಆಶಯ. ಈ ಆಶಯವನ್ನು ಇನ್ನಷ್ಟು ರುಚಿಕರವನ್ನಾಗಿಸಲು ಬೋಲ್ಡ್ ಸ್ಕೈ ನಿಮ್ಮೊಂದಿಗೆ ಕೈಜೋಡಿಸಿದೆ.

ಹೊಸವರ್ಷದ ಭರ್ಜರಿ ತಯಾರಿಗಾಗಿ ನಾವು ಇಂದು ಹೊಸತಾದ ರುಚಿಯಾದ ತಿನಿಸುಗಳ ಪಟ್ಟಿಯನ್ನು ನಿಮ್ಮ ಮುಂದಿಡುತ್ತಿದ್ದೇವೆ. ಹೊಸ ವರ್ಷದ ಸಂಭ್ರಮಾಚರಣೆಯೊಂದಿಗೆ ಈ ಅತ್ಯುತ್ತಮ ರೆಸಿಪಿಗಳನ್ನು ಸಂಜೆಯ ಸ್ನ್ಯಾಕ್‌ಗೆ ತಯಾರಿಸಿಕೊಳ್ಳಿ.

ಹೌದು, ಮುಖ್ಯವಾಗಿ ಆಲ್ಕೋಹಾಲ್ ನಿಮ್ಮ ಮೇಜನ್ನು ಅಲಂಕರಿಸಲಿ..!! ಇಲ್ಲಿ ನಾವು ಕೊಡುವಂತಹ ರೆಸಿಪಿಗಳು ನಿಮ್ಮ ಬಿಯರ್‌ನ ಮತ್ತನ್ನು ಇನ್ನಷ್ಟು ಹೆಚ್ಚಿಸುತ್ತದೆ ಎಂಬುದರಲ್ಲಿ ಸಂಶಯವಿಲ್ಲ. ಇಂತಹ ಸುಂದರ ಹೊಸ ವರ್ಷದ ಸಂಭ್ರಮದ ಸಂಜೆಯಲ್ಲಿ ನಾವು ನಿಮಗಾಗಿ ಪ್ರಸ್ತುತಪಡಿಸಿರುವ ಹೊಸ ಹೊಸ ವ್ಯಂಜನಗಳನ್ನು ಸವಿಯಿರಿ. ಸಸ್ಯಾಹಾರಿಗಳು ಮತ್ತು ಮಾಂಸಹಾರಿಗಳು ಜೊತೆಯಾಗಿ ಈ ರೆಸಿಪಿಗಳನ್ನು ಟ್ರೈ ಮಾಡಬಹುದು. ಇಲ್ಲಿ ನಾವು ಸಂಗ್ರಹಿಸಿರುವ ರೆಸಿಪಿಗಳ ಪಟ್ಟಿ ನಿಮ್ಮ ಬಾಯಿಯಲ್ಲಿ ನೀರೂರುವಂತೆ ಮಾಡುವುದಂತೂ ಖಂಡಿತ.

ಈ ತಿನಿಸುಗಳನ್ನು ಸವಿದು ನಿಮ್ಮ ಅತಿಥಿಗಳು ನಿಮ್ಮನ್ನು ಹೊಗಳುವುದಂತೂ ಖಂಡಿತ. ಬನ್ನಿ ಬೋಲ್ಡ್‌ಸ್ಕೈಯೊಂದಿಗೆ ಈ ವ್ಯಂಜನಗಳನ್ನು ಸವಿದು ಹೊಸವರ್ಷದ ಆರಂಭವನ್ನು ಹಸುರಾಗಿಸಿ.

1. ರುಚಿಕರವಾದ ವೋಂಟೋನ್ಸ್:

1. ರುಚಿಕರವಾದ ವೋಂಟೋನ್ಸ್:

'ವೋಂಟೋನ್ಸ್' ಚೈನೀಸ್ ಸಿಝ್‌ವನ್ ಆಗಿದ್ದು, ಎಲ್ಲಾ ವಯಸ್ಸಿನವರು ಇದನ್ನು ಇಷ್ಟಪಡುತ್ತಾರೆ. ಇದನ್ನು ಫ್ರೈ ಕೂಡ ಮಾಡಬಹುದು ಅಥವಾ ಸ್ಟೀಮ್ ಕೂಡ ಮಾಡಬಹುದು. ಇದನ್ನು ನಿಮ್ಮ ಅತಿಥಿಗಳಿಗಾಗಿ ತಯಾರಿಸಿ, ಅವರ ಮೆಚ್ಚುಗೆ ಪಡೆಯಿರಿ.

2. ಸಂಜೆಯ ಸ್ನ್ಯಾಕ್ಸ್

2. ಸಂಜೆಯ ಸ್ನ್ಯಾಕ್ಸ್

ಇದೊಂದು ರುಚಿಕರ ಕ್ರಿಸ್ಪಿ ರೆಸಿಪಿಯಾಗಿದ್ದು ತಯಾರಿಸಲು ಸರಳವಾಗಿದೆ. ಇದು ನಿಮ್ಮ ಬಾಯಲ್ಲಿ ನೀರೂರುವಂತೆ ಮಾಡುವುದಂತೂ ಖಂಡಿತ. ಸಂಜೆಯ ಸ್ನ್ಯಾಕ್ಸ್ ಆಗಿ ಇದನ್ನು ನೀವು ಟ್ರೈ ಮಾಡಬಹುದು.

3. ಪಿಲ್ಲೋವಿ ಪರ್ಮೇಸನ್ ಹಾಗೂ ಗಾರ್ಲಿಕ್ ನೋಟ್ಸ್:

3. ಪಿಲ್ಲೋವಿ ಪರ್ಮೇಸನ್ ಹಾಗೂ ಗಾರ್ಲಿಕ್ ನೋಟ್ಸ್:

ಮೃದು ಹಾಗೂ ಮಾಡಲು ಸರಳವಾದ ಸಂಜೆಯ ಸ್ನ್ಯಾಕ್ಸ್ ಆದ ಪಿಲ್ಲೋವಿ ಪರ್ಮೇಸನ್ ಹಾಗೂ ಗಾರ್ಲಿಕ್ ನೋಟ್ಸ್ ಅತ್ಯುತ್ತಮ ತಿನಿಸಾಗಿದೆ. ಹೊಸ ವರ್ಷದ ಸವಿಯನ್ನು ಇದು ಇನ್ನಷ್ಟು ರಂಗೇರಿಸುತ್ತದೆ ಎಂಬುದರಲ್ಲಿ ಎರಡು ಮಾತಿಲ್ಲ.

4. ಪೊಟೇಟೊ ಸ್ಪೆಶಲ್:

4. ಪೊಟೇಟೊ ಸ್ಪೆಶಲ್:

ನಿಮಗೆ ಪೊಟೇಟೊ (ಆಲೂಗಡ್ಡೆ) ಇಷ್ಟವೆಂದಾದರೆ ಈ ಹುರಿದ ತಿನಿಸನ್ನು ನೀವು ಖಂಡಿತವಾಗಿ ಇಷ್ಟಪಡುತ್ತೀರಿ. ತೂಕ ಕಡಿಮೆ ಮಾಡಬೇಕೆಂದು ಬಯಸುವವರಿಗೆ ಇದೊಂದು ಆರೋಗ್ಯಕರವಾದ ತಿನಿಸಾಗಿದ್ದು, ಸಂಜೆಯ ಸೊಬಗನ್ನು ಮತ್ತಷ್ಟು ರಂಗೇರಿಸುತ್ತದೆ.

5. ನಾಳಿಗೆಯ ರುಚಿ ಹೆಚ್ಚಿಸುವ ಕಬಾಬ್

5. ನಾಳಿಗೆಯ ರುಚಿ ಹೆಚ್ಚಿಸುವ ಕಬಾಬ್

ಸಾಮಾನ್ಯವಾಗಿ ರೇಷ್ಮೆಯನ್ನು ನಯಕ್ಕೆ ಹೋಲಿಸಲಾಗುತ್ತದೆ, ಅಂತೆಯೇ ಕಬಾಬ್ ಅನ್ನು ಕೂಡ ಇಲ್ಲಿ ರೇಷ್ಮೆಗೆ ಹೋಲಿಸಲಾಗಿದೆ. ಏಕೆಂದರೆ ಅದರ ಮೃದುವಾದ ರಚನೆ ಮತ್ತು ಬಾಯಲ್ಲಿ ನೀರೂರಿಸುವುದಕ್ಕೆ ಹೆಸರುವಾಸಿಯಾಗಿದ್ದು, ಅದನ್ನು ತಿನ್ನುತ್ತಿರುವಂತೆಯೇ ಇನ್ನಷ್ಟು ಬೇಕೆಂಬ ತುಡಿತವನ್ನು ಅದು ಉಂಟುಮಾಡುತ್ತದೆ.

6. ಕಟ್ಲೇಟ್:

6. ಕಟ್ಲೇಟ್:

ಭಾರತೀಯ ಮನೆಗಳಲ್ಲಿ ಸಂಜೆಯ ತಿನಿಸಿಗೆ ಹೆಸರುವಾಸಿಯಾದ ಐಟಂ ಕಟ್ಲೇಟ್ ಆಗಿದೆ. ಎಲ್ಲಾ ವಯಸ್ಸಿನವರೂ ಈ ತಿನಿಸನ್ನು ಇಷ್ಟಪಟ್ಟು ತಿನ್ನುತ್ತಾರೆ. ನಿಮ್ಮ ಅತಿಥಿಗಳ ಹಸಿವನ್ನು ನೀಗಿಸಲು, ಬಾಯಿ ರುಚಿ ಹಚ್ಚಿಸಲು ಈ ರುಚಿಕರ ರೆಸಿಪಿಯನ್ನು ಟ್ರೈ ಮಾಡಿ.

7. ದಾಲ್ ಡಂಪ್ಲಿಂಗ್ಸ್:

7. ದಾಲ್ ಡಂಪ್ಲಿಂಗ್ಸ್:

ಬೇಯಿಸಿದ ದಾಲ್ ಡಂಪ್ಲಿಂಗ್ಸ್ ಉತ್ತಮ ತಿನಿಸಾಗಿದ್ದು ಮಾಡಲು ಸರಳವಾಗಿದೆ. ದಾಲ್ ಡಂಪ್ಲಿಂಗ್ಸ್ ನಿಮ್ಮ ಅತಿಥಿಗಳಿಗೆ ಉಣಬಡಿಸಲು ಅತ್ಯುತ್ತಮವಾಗಿದೆ.

8. ಸಿಝುವನ್ ಡಿಶ್ ಮಶ್ರೂಮ್ ಮಂಚೂರಿ:

8. ಸಿಝುವನ್ ಡಿಶ್ ಮಶ್ರೂಮ್ ಮಂಚೂರಿ:

ಭಾರತೀಯ ಮತ್ತು ಚೈನೀಸ್ ಸಿಝುವನ್ ಡಿಶ್ ಮಶ್ರೂಮ್ ಮಂಚೂರಿಯಾಗಿದೆ. ಹೊಸ ವರ್ಷದ ಆಚರಣೆಯಲ್ಲಿ ಪ್ರಯತ್ನಿಸಲೇಬೇಕಾದ ರೆಸಿಪಿ ಇದಾಗಿದೆ.

9. ಪೋಪ್‌ಕಾರ್ನ್ ಶ್ರಿಂಪ್ಸ್:

9. ಪೋಪ್‌ಕಾರ್ನ್ ಶ್ರಿಂಪ್ಸ್:

ಪೋಪ್‌ಕಾರ್ನ್ ಶ್ರಿಂಪ್ಸ್ ಒಂದು ಸರಳ ಹಾಗೂ ರುಚಿಕರ ತಿನಿಸಾಗಿದೆ. ಸಣ್ಣ ಮಾರ್ಸೆಲ್‌ಗಳು ಕ್ರಿಸ್ಪಿಯಾಗಿದ್ದು, ಬಾಯಲ್ಲಿ ನೀರೂರುವಂತೆ ಮಾಡುತ್ತದೆ. ಸಂಜೆಯ ಕುರುಕುಲಾಗಿ ಇದನ್ನು ಟ್ರೈ ಮಾಡಿ.

10. ಗೋಲ್‌ಗಪ್ಪಾ

10. ಗೋಲ್‌ಗಪ್ಪಾ

ಸಿಹಿ, ಖಾರ ಹಾಗೂ ಹುಳಿಮಿಶ್ರಿತ ಯಮ್ಮಿ ಡಿಶ್ ಇದಾಗಿದೆ. ಗೋಲ್‌ಗಪ್ಪಾಗಳನ್ನು ಹುಳಿನೀರಿನಲ್ಲಿ ಇಲ್ಲವೇ ಸಿಹಿಯಾದ ಸಕ್ಕರೆ ನೀರಿನಲ್ಲಿ ಮುಳುಗಿಸಿ ತಿನ್ನಬಹುದು. ರುಚಿಕರ ಪೇಯದೊಂದಿಗೆ ಈ ತಿನಿಸನ್ನು ಟ್ರೈ ಮಾಡಲು ಮರೆಯದಿರಿ.

 11. ಇಟಾಲಿಯನ್ ಮೀಟ್‌ಬಾಲ್ಸ್:

11. ಇಟಾಲಿಯನ್ ಮೀಟ್‌ಬಾಲ್ಸ್:

ಇಟಾಲಿಯನ್ ಮೀಟ್‌ಬಾಲ್ಸ್ ಸಂಜೆಯ ಮಜಾವನ್ನು ನೂರ್ಮಡಿಗೊಳಿಸುವ ಯಮ್ಮಿ ಡಿಶ್ ಆಗಿದೆ. ಒಂದು ಜನಪ್ರಿಯ ಇಟಾಲಿಯನ್ ರೆಸಿಪಿ ಇದಾಗಿದ್ದು ಹೊಸ ವರ್ಷಕ್ಕಾಗಿ ನೀವು ಸಿದ್ಧಪಡಿಸಲೇಬೇಕು. ಇಟಾಲಿಯನ್ ಮೀಟ್ ಬಾಲ್ಸ್‌ಗಳಲ್ಲಿ ಬಳಸಿರುವ ಚೀಸ್ ಇದಕ್ಕೊಂದು ತೀಕ್ಷ್ಣ ರುಚಿಗಟ್ಟನ್ನು ನೀಡಿದೆ.

12. ಮೆಕ್ಸಿಕನ್ ಮಸಾಲೆ:

12. ಮೆಕ್ಸಿಕನ್ ಮಸಾಲೆ:

ಭಾರತೀಯ ಸ್ವಾದ ಮಿಶ್ರಿತ ಮೆಕ್ಸಿಕನ್ ಮಸಾಲೆ ಸಹಿತ ರೆಸಿಪಿಯಾಗಿದೆ ಮೆಕ್ಸಿಕನ್ ಚಾಟ್. ಮಕ್ಕಳು ಇದನ್ನು ಹೆಚ್ಚು ಇಷ್ಟಪಡುತ್ತಾರೆ.

13. ಫ್ರೆಂಚ್ ಸ್ಪೆಶಲ್:

13. ಫ್ರೆಂಚ್ ಸ್ಪೆಶಲ್:

ಈ ಡಿಶ್ ಅನ್ನು 20 ನಿಮಿಷಗಳಲ್ಲಿ ತಯಾರಿಸಬಹುದು. ಇದೊಂದು ಫ್ರೆಂಚ್ ತಿನಿಸಾಗಿದ್ದು ಭಾರತೀಯ ಶೈಲಿಯನ್ನು ಇದರಲ್ಲಿ ಮಿಶ್ರ ಮಾಡಲಾಗಿದೆ. ಸ್ವದೇಶಿ ವಿದೇಶಿ ಮಿಶ್ರಿತ ತಿನಿಸಾದ ಇದು ನಿಮ್ಮ ಅತಿಥಿಗಳ ಹೊಟ್ಟೆ ಹಸಿವನ್ನು ಇನ್ನಷ್ಟು ಹೆಚ್ಚಿಸುತ್ತದೆ.

English summary

New Year Appetizers To Treat Your Guests

We all look forward to the end of the year when we get to put on our best clothes, high heels and of course deck the kitchen with tons of food and goodies. Today, Boldsky encourages you to prepare some of the most magnificent dishes we have in line for you.
X
Desktop Bottom Promotion