For Quick Alerts
ALLOW NOTIFICATIONS  
For Daily Alerts

ಸ್ಪೆಷಲ್ ಮಶ್ರೂಮ್ ಮಂಚೂರಿಯನ್ ಗ್ರೇವಿ ರೆಸಿಪಿ

|

ಚೈನೀಸ್ ಅಡುಗೆಯನ್ನು ಯಾರು ತಾನೇ ಇಷ್ಟ ಪಡುವುದಿಲ್ಲ ಹೇಳಿ ? ಹಲವಾರು ಜನರು ತಮ್ಮ ಮೆಚ್ಚಿನ ಡಿಶ್‌ನಲ್ಲಿ ಚೈನೀಸ್ ರೆಸಿಪಿಗೂ ಕೂಡ ಅಷ್ಟೇ ಪ್ರಾಮುಖ್ಯ ನೀಡುತ್ತಾರೆ. ಬಹಳಷ್ಟು ಚೈನೀಸ್ ತಿನಿಸುಗಳನ್ನು ನಾವು ಮನೆಯಲ್ಲೇ ಪ್ರಯತ್ನಿಸಬಹುದು. ಆದರೆ ಬಹಳ ಜನರು ನಿಖರವಾದ ಚೈನೀಸ್ ರುಚಿಯ ಭಕ್ಷ್ಯಗಳನ್ನು ಮನೆಯಲ್ಲೇ ತಯಾರಿಸಲು ಕಷ್ಟಪಡುತ್ತಾರೆ.

ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ: ಸ್ಪೆಷಲ್ ಗುಜರಾತಿ ದಾಲ್ ರೆಸಿಪಿ

ಚೈನೀಸ್ ತಿನಿಸುಗಳನ್ನು ಮನೆಯಲ್ಲೇ ತಯಾರು ಮಾಡಿದರೆ ಅದರ ರುಚಿ ಕೆಡುತ್ತದೆ, ಎಂದು ಇಂತಹ ರುಚಿಕರವಾದ ಮಂಚೂರಿಯನ್ ಅನ್ನು ನೀವು ಸಿದ್ಧಪಡಿಸದಿದ್ದರೆ, ಖಂಡಿತವಾಗಿಯೂ ನಿಮ್ಮ ಗ್ರಹಿಕೆ ತಪ್ಪು.

Mushroom Manchurian Gravy Recipe

ನೀವು ಮಶ್ರೂಮ್ ಅನ್ನು ಇಷ್ಟ ಪಡುತ್ತಿರಿ ಎಂದಾದರೆ ಹಾಗೂ ಆರೋಗ್ಯಯುಕ್ತವಾಗಿರುವ ಪದಾರ್ಥಗಳನ್ನು ಬಳಸಿಕೊಂಡು ಕೆಲವು ಚೈನೀಸ್ ಡಿಶ್ ಅನ್ನು ತಯಾರಿಸಲು ನೀವು ಬಯಸುವಿರಿ ಎಂದಾದರೆ, ಖಂಡಿತವಾಗಿಯೂ ಬೋಲ್ಡ್‌ ಸ್ಕೈ ನಿಮಗೆ ಸಹಾಯ ಮಾಡಲಿದೆ.

ಮನೆಯಲ್ಲಿಯೇ ತುಂಬಾ ಸರಳವಾಗಿ ತಯಾರಿಸಬಹುದಾದ ಮಶ್ರೂಮ್ ಮಂಚೂರಿಯನ್ ಗ್ರೇವಿ ರೆಸಿಪಿಯನ್ನು ಇಲ್ಲಿ ನಿಮಗಾಗಿ ನೀಡಲಾಗಿದೆ. ಭಾರತೀಯ ಶೈಲಿಯಲ್ಲಿ ತಯಾರಿಸಲಾಗುವ ಇಂತಹ ಸ್ವಾದಿಷ್ಟ ತಿನಿಸು ನಿಮ್ಮ ನಾಲಿಗೆಯ ರುಚಿಯನ್ನು ಇನ್ನಷ್ಟು ಇಮ್ಮಡಿಗೊಳಿಸುವಲ್ಲಿ ಎರಡು ಮಾತಿಲ್ಲ.

ಹಾಗಾದರೆ ಇನ್ನೇಕೆ ತಡ ? ಬನ್ನಿ ಮಶ್ರೂಮ್ ಮಂಚೂರಿಯನ್ ಗ್ರೇವಿ ರೆಸಿಪಿ ಮಾಡುವ ವಿಧಾನವನ್ನು ಪ್ರಯತ್ನಿಸಿ.

ಮನೆಯಲ್ಲೇ ತಯಾರಿಸಬಹುದಾದ ಮಶ್ರೂಮ್ ಮಂಚೂರಿಯನ್ ಗ್ರೇವಿ ರೆಸಿಪಿ:

ಸಿದ್ಧತೆ ಸಮಯ: 10 ನಿಮಿಷಗಳು
ತಯಾರಿ ಸಮಯ: 30-45 ನಿಮಿಷಗಳು

ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ: ಬಟಾಣಿಯಿಂದ ಮಾಡುವ ಕೋಫ್ತಾ ಗ್ರೇವಿ

ಬೇಕಾಗುವ ಸಾಮಾಗ್ರಿಗಳು:

1. ಮಶ್ರೂಮ್ - 200 ಗ್ರಾಂ

2. ನೀರುಳ್ಳಿ - 3 (ಕತ್ತರಿಸಲಾಗಿರುವ)

3. ದೊಣ್ಣೆ ಮೆಣಸಿನ ಕಾಯಿ (ಕ್ಯಾಪ್ಸಿಕಂ) - 1 (ಸಾಧಾರಣ ಗಾತ್ರದ ತುಂಡುಗಳಾಗಿ ಕತ್ತರಿಸಲಾಗಿರುವ)

4. ಹಸಿಮೆಣಸಿನ ಕಾಯಿ - 4 ರಿಂದ 5

5. ಶುಂಠಿ - 1 ಇಂಚು (ಕತ್ತರಿಸಲಾಗಿರುವ )

6. ಬೆಳ್ಳುಳ್ಳಿ - 8 ರಿಂದ 9 ತುಣುಕು (ಫೀಸ್)

7. ವೆನಿಗರ್ - ಸ್ವಲ್ಪ ಹನಿ

8. ಸೊಯಾ ಸಾಸ್ - 2ಟೀ ಸ್ಪೂನ್

9. ಉಪ್ಪು - ರುಚಿಗೆ ತಕ್ಕಷ್ಟು

10. ಸಿಸ್ವನ್ ಸಾಸ್ (Schezwan sauce) - 1ಟೀ ಸ್ಪೂನ್

11. ಎಣ್ಣೆ - 2 ಟೀ ಸ್ಪೂನ್

12. ಕೆಂಪು ಮೆಣಸಿನ ಪೌಡರ್ - 1 ಟೀ ಸ್ಪೂನ್

13. ಟೊಮೇಟೋ - 2 (ಕತ್ತರಿಸಲಾಗಿರುವ)

14. ಅರಶಿನ ಪುಡಿ - 1 ಟೀ ಸ್ಪೂನ್

ತಯಾರಿಸುವ ವಿಧಾನ :

1. ಮಶ್ರೂಮ್ ಅನ್ನು ಕತ್ತರಿಸಿ, ನಂತರ ಕೆಂಪು ಮೆಣಸಿನ ಪುಡಿ, ಅರಶಿನ ಪುಡಿ, ಉಪ್ಪು, ಹಾಗೂ 1 ಟೀ ಸ್ಪೂನ್ ಎಣ್ಣೆಯನ್ನು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ, ಮತ್ತು ಅದನ್ನು 20-25 ನಿಮಿಷಗಳವರೆಗೆ ಹಾಗೆಯೇ ಬಿಟ್ಟುಬಿಡಿ.

2. ಪಾತ್ರೆಯಲ್ಲಿ 1 ಟೀ ಸ್ಪೂನ್ ಆಗುವಷ್ಟು ಎಣ್ಣೆಯನ್ನು ಬಿಸಿ ಮಾಡಿ. ಎಣ್ಣೆ ಬಿಸಿ ಆದ ನಂತರ ಕತ್ತರಿಸಲಾಗಿರುವ ನೀರುಳ್ಳಿಯನ್ನು ಹಾಕಿ, ಸ್ವಲ್ಪ ನಿಮಿಷಗಳವರೆಗೆ ಕೈಯಾಡಿಸಿ.

3. ತದನಂತರ ಕತ್ತರಿಸಲಾಗಿರುವ ಶುಂಠಿ, ಬೆಳ್ಳುಳ್ಳಿ ಸೇರಿಸಿ, ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ, ಹಾಗೂ ಇನ್ನೂ ಸ್ವಲ್ಪ ನಿಮಿಷ ಬೇಯಿಸಿ.

4. ಸ್ವಲ್ಪ ನಿಮಿಷದ ನಂತರ ದೊಣ್ಣೆ ಮೆಣಸಿನ ಕಾಯಿ (ಕ್ಯಾಪ್ಸಿಕಂ) ತುಣುಕುಗಳನ್ನು ಸೇರಿಸಿ ಹಾಗೂ 3-4 ನಿಮಿಷಗಳವರೆಗೆ ಬೇಯಿಸಿ.

5. ಸ್ವಲ್ಪ ಉಪ್ಪು ಮತ್ತು ವಿನೆಗರ್ ಅನ್ನು ಚಿಮುಕಿಸಿ.

6. ಇನ್ನು ಸಿಸ್ವನ್ ಸಾಸ್, ಕತ್ತರಿಸಲಾಗಿರುವ ಟೊಮೇಟೋ, ಹಸಿಮೆಣಸಿನ ಕಾಯಿ, ಸೊಯಾ ಸಾಸ್ ಇವೆಲ್ಲವನ್ನು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ, ಹಾಗೂ ಇದರ ಜೊತೆ ಕತ್ತರಿಸಲಾಗಿರುವ ಮಶ್ರೂಮ್ ಅನ್ನು ಸೇರಿಸಿ.

ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ: ಚೆನ್ನಾ ಬಿರಿಯಾನಿ ರೆಸಿಪಿ

7. ಕಡಿಮೆ ಉರಿಯಲ್ಲಿ 2-3 ನಿಮಿಷಗಳವರೆಗೆ ಮಶ್ರೂಮ್ ಮಂಚೂರಿಯನ್ ಗ್ರೇವಿಯನ್ನು ಬೇಯಿಸಿ. ಗ್ರೇವಿ ಸ್ವಲ್ಪ ದಪ್ಪವಾದ ನಂತರ ಒಲೆಯನ್ನು ಆಫ್ ಮಾಡಿ.

ನಿಮ್ಮ ಮೆಚ್ಚಿನ ಮಶ್ರೂಮ್ ಮಂಚೂರಿಯನ್ ಗ್ರೇವಿ ತಿನ್ನಲು ಸಿದ್ಧ ! ಭಾರತೀಯ ಶೈಲಿಯಂತೆ ಮಾಡಲಾಗಿರುವ ರುಚಿಕರವಾದ ಮಶ್ರೂಮ್ ಮಂಚೂರಿಯನ್ ಅನ್ನು ನೂಡಲ್ಸ್ ಅಥವಾ ಫ್ರೈಡ್ ರೈಸ್ ಜೊತೆ ಸೇವಿಸಿ.

Read more about: recipes ರೆಸಿಪಿ
English summary

Mushroom Manchurian Gravy Recipe

Many people who love Chinese cuisine, there are a lot of dishes in Chinese cuisine that are a must try. A lot of people find it hard to prepare the exact Chinese flavoured dishes at home.
Story first published: Friday, January 31, 2014, 14:47 [IST]
X
Desktop Bottom Promotion