For Quick Alerts
ALLOW NOTIFICATIONS  
For Daily Alerts

ಅವಲಕ್ಕಿ ಹಪ್ಪಳ ಹಾಗೂ ಹಲಸಿನಹಣ್ಣು ಹಪ್ಪಳ

By * ಕನಕಲಕ್ಷ್ಮಿ, ಶಿವಮೊಗ್ಗ
|

ಡಬ್ಬದಲ್ಲಿ ಹಪ್ಪಳವಿರಬೇಕು, ಚಕ್ಕಳ ಮುಕ್ಕಳ ಹಾಕಿಕೊಂಡು ಊಟಕ್ಕೆ ಕುಳಿತಾಗ ಅದು ಸಪ್ಪಳ ಮಾಡುತ್ತಿರಬೇಕು!

ಹಲಸಿನಹಣ್ಣಿನ ಹಪ್ಪಳ

ಬೇಕಾಗುವ ಸಾಮಾನು :

ಹಲಸಿನಹಣ್ಣು - 1
ಅಕ್ಕಿಹಿಟ್ಟು - 100 ಗ್ರಾಂ
ಹಸಿ ಮೆಣಸಿನ ಕಾಯಿ- 10
ಘಮ್ಮೆನ್ನಲು ಇಂಗು ಮತ್ತು ರುಚಿಗೆ ಉಪ್ಪು

ಮಾಡುವ ವಿಧಾನ : ಹಲಸಿಕಾಯಿಯನ್ನು ಕತ್ತರಿಸಿ ತೊಳೆಯನ್ನು ಸಣ್ಣಗೆ ಬಿಡಿಸಿ ನೀರಿನಲ್ಲಿ ಬೇಯಿಸಿ. ಬೆಂದ ನಂತರ ಹಸಿ ಮೆಣಸಿನ ಕಾಯಿಯಾಡನೆ ರುಬ್ಬಿರಿ. ನಂತರ ಆ ಮಿಶ್ರಣಕ್ಕೆ ಅಕ್ಕಿ ಹಿಟ್ಟು , ಇಂಗು, ಉಪ್ಪು ಸೇರಿಸಿ ಮಿಶ್ರಣ ಮಾಡಿ ಪ್ಲಾಸ್ಟಿಕ್‌ ಪೇಪರ್‌ ಮೇಲೆ ಹಪ್ಪಳ ಇಟ್ಟು ಬಿಸಿಲಿನಲ್ಲಿ ಒಣಗಿಸಿ.

***

ಅವಲಕ್ಕಿ ಹಪ್ಪಳ

ಬೇಕಾಗುವ ಸಾಮಾನು :

ಅವಲಕ್ಕಿ ಪುಡಿ- 1 ಕಪ್‌
ಹಸಿ ಕಾರ- 4 ಚಮಚ
ಜೀರಿಗೆ, ಕೊತ್ತಂಬರಿ ಸೊಪ್ಪು ಹಾಗೂ ಉಪ್ಪು.

ಮಾಡುವುದು ಸಿಂಪಲ್‌ : ಇದನ್ನೆಲ್ಲ ಸ್ಪಲ್ಪ ನೀರಿನಲ್ಲಿ ಕಲಸಿ ಉಂಡೆಗಳಾಗಿ ಮಾಡಿ ಹಪ್ಪಳ ಲಟ್ಟಿಸಿ, ಒಣಗಿಸಿ ಕರಿಯಿರಿ. ಕುರುಕುರು!

English summary

Tasty cruncy Avalakki and Jackfruit papad | ಅವಲಕ್ಕಿ ಹಪ್ಪಳ ಹಾಗೂ ಹಲಸಿನಹಣ್ಣು ಹಪ್ಪಳ

Puffed rice and Jack fruit Papad recipe by Kanakalakshmi.
Story first published: Tuesday, March 27, 2012, 16:29 [IST]
X
Desktop Bottom Promotion