For Quick Alerts
ALLOW NOTIFICATIONS  
For Daily Alerts

ರಜಾಬಂತು ಮಕ್ಕಳಿಗೆ ಬೇಸಿನ್‌ ಲಾಡು ಮಾಡಿಕೊಡಿ

By Staff
|

ಸಿಹಿ ತಿಂಡಿಗಳನ್ನು ಮನೆಯಲ್ಲೇ ತಯಾರಿಸುವುದಕ್ಕೆ ಕಲಿಯಿರಿ. ಸ್ವೀಟ್‌ ಮೀಟ್‌ ಸ್ಟಾಲ್‌ ಮೇಲೆ ತುಂಬ ಡಿಪೆಂಡ್‌ ಆಗದಿರಿ..

ಬೇಕಾದ ಸಾಮಾನುಗಳು :

  • ಕಡ್ಲೆ ಹಿಟ್ಟು 1 ಲೋಟ
  • ಸಕ್ಕರೆ 1 ಲೋಟ
  • ತುಪ್ಪ 1 ಲೋಟ
  • ಏಲಕ್ಕಿ ಹುಡಿ 1/2 ಚಮಚ
  • ಒಣ ದ್ರಾಕ್ಷಿ ಮತ್ತು ಗೋಡಂಬಿ

ಮಾಡುವ ವಿಧಾನ :

ಮೊದಲಿಗೆ ಗೋಡಂಬಿಯನ್ನು ಚಿಕ್ಕ ಚಿಕ್ಕ ತುಂಡು ಮಾಡಿ ಇಟ್ಟುಕೊಳ್ಳಿ. ಸಕ್ಕರೆಯನ್ನು ಚೆನ್ನಾಗಿ(ಮಿಕ್ಸಿಯಲ್ಲಿ ) ಹುಡಿ ಮಾಡಿ. ಕಡ್ಲೆ ಹಿಟ್ಟನ್ನು ಚೆನ್ನಾಗಿ ಜರಡಿ ಮಾಡಿಟ್ಟುಕೊಳ್ಳಿ.

ಒಂದು ದಪ್ಪ ಅಡಿಪಾಯವಿರುವ ಬಾಣಲೆ ತೆಗೆದುಕೊಳ್ಳಿ. ಅದರಲ್ಲಿ ಸ್ವಲ್ಪ ತುಪ್ಪ ಹಾಕಿ ಕಡ್ಲೆ ಹುಡಿಯನ್ನು ಹುರಿಯಿರಿ. ಬೆಂಕಿ ಸಣ್ಣದಾಗಿ ಉರಿಯುತ್ತಿರಲಿ. ಯಾಕೆಂದರೆ ಹಿಟ್ಟು ಕಪ್ಪಗಾಗಬಾರದಲ್ಲ . ಹಿಟ್ಟು ಕೆಂಪಗಾದ ತಕ್ಷಣ ಅದಕ್ಕೆ ಲೋಟದಲ್ಲಿ ಉಳಿದ ಎಲ್ಲ ತುಪ್ಪವನ್ನು ಹಾಕಿ ಹುರಿಯಿರಿ. ಘಮ ಘಮ ಪರಿಮಳ ಬಂದಾಗ ತೆಗೆದು ಕೆಳಗಿರಿಸಿ.

ಆ ಹಿಟ್ಟಿಗೆ ಹುಡಿಮಾಡಿಟ್ಟುಕೊಂಡ ಸಕ್ಕರೆ, ಗೋಡಂಬಿ ಚೂರುಗಳು ಮತ್ತು ಏಲಕ್ಕಿ ಹಾಕಿ ಜಾಲರಿ ಸೌಟಿನಲ್ಲಿ ಬೆರೆಸಿ ಚೆನ್ನಾಗಿ ಕಲಸಿರಿ. ಇನ್ನೂ ಬಿಸಿ ಆರದಿರುವಾಗ ಕೈಯಿಂದ ನಿಂಬೆ ಹಣ್ಣಿನ ಗಾತ್ರದ ಉಂಡೆ ಮಾಡಿ. ಅದನ್ನು ಒಂದು ತಟ್ಟೆಯಲ್ಲಿರಿಸಿ. ಈಗ ಉಂಡೆಯನ್ನು ಕೈಯಲ್ಲಿ ತೆಗೆದುಕೊಂಡು ಒಂದು ದ್ರಾಕ್ಷೆಯನ್ನು ಅದರಲ್ಲಿ ಒತ್ತಿ ಒಳಗಿಡಿ. ಈಗ ಬೇಸಿನ್‌ ಲಾಡು ರೆಡಿ.

Read more about: sweet ugadi
English summary

Karnataka Recipe : Basin ladu, a special sweet

Yugadis special dish 'Besin ladu'
X
Desktop Bottom Promotion