For Quick Alerts
ALLOW NOTIFICATIONS  
For Daily Alerts

ಅಕ್ಕಿ ವಡೆ

By Staff
|
  • ವಿನುತಾ ರಾಜೇಂದ್ರ, ಕೋಲಾರ

ಉದ್ದಿನ ವಡೆ, ಮದ್ದೂರು ವಡೆ ಬಗ್ಗೆ ಕೇಳಿದ್ದೀರಿ. ಅವೆಲ್ಲವೂ ಹಳೆಯದಾದವು. ಒಂದು ಸಲ ಅಕ್ಕಿ ವಡೆ ಪ್ರಯತ್ನಿಸಿ ನೋಡಿ. ಅಕ್ಕಿ ವಡೆ ಎಂಬ ಈ ಕುರುಕಲು ತಿಂಡಿ, ನಿಮ್ಮ ನಾಲಿಗೆಗೆ ಇಷ್ಟವಾಗಬಹುದು.

ಅಕ್ಕಿ ವಡೆ ಮಾಡೋದಕ್ಕೆ 2ಬಟ್ಟಲು ಅಕ್ಕಿ,ಅರ್ಧ ಬಟ್ಟಲು ಉದ್ದಿನ ಬೇಳೆ ಬೇಕು. ಜೀರಿಗೆ, ಓಮ, ಕೊತ್ತಂಬರಿ ಬೀಜದ ಪುಡಿ ಇವೆಲ್ಲವೂ ತಲಾ ಒಂದೊಂದು ಚಮಚ ತೆಗೆದಿಡಿ. ಇನ್ನು ಮನೆಯಲ್ಲಿ ಎಣ್ಣೆ ಮತ್ತು ಉಪ್ಪು ಇದ್ದೇ ಇರುತ್ತೆ. ಇನ್ನೇಕೆ ತಡ ಅಕ್ಕಿ ವಡೆ ಮಾಡೋದಕ್ಕೆ ಸಜ್ಜಾಗಿ.


ಮೊದಲು ಅಕ್ಕಿಯನ್ನು ಚೆನ್ನಾಗಿ ತೊಳೆಯಬೇಕು. ಆಮೇಲೆ ಒಣಗಿಸಿ. ಮಿಕ್ಸಿಗೆ ಹಾಕಿ ನುಚ್ಚು ಮಾಡಿ. ಮೊದಲೇ ನೆನೆಸಿದ ಉದ್ದಿನಬೇಳೆಗೆ ಜೀರಿಗೆ, ಓಮ, ಕೊತ್ತಂಬರಿ ಸೇರಿಸಿ. ಆ ಮರೆತೇ, ಸ್ವಲ್ಪ ನೀರು ಕೂಡ ಬೆರೆಸಿ. ಈ ಮಿಶ್ರಣವನ್ನು ರುಬ್ಬಿ. ಅದು ದೋಸೆ ಹಿಟ್ಟಿನ ಹದಕ್ಕೆ ಬರೋತನಕ ರುಬ್ಬಿ. ರುಬ್ಬೋ ಚಿಂತೆ ಈಗಿಲ್ಲ. ಹೇಗೂ ಮನೆಯಲ್ಲಿ ಮಿಕ್ಸಿ ಇದ್ದೇ ಇರುತ್ತೆ. ಈ ಮಿಶ್ರಣಕ್ಕೆ ಅಕ್ಕಿ ನುಚ್ಚು ಸೇರಿಸಿಬಿಡಿ. ಪುಟ್ಟಪುಟ್ಟ ಉಂಡೆ ಮಾಡಿ, ಪ್ಲಾಸ್ಟಿಕ್ ಹಾಳೆ ಮೇಲೆ ಲಟ್ಟಿಸಿ. ಎಣ್ಣೆ ಹಚ್ಚಿದ ಬಾಳೆ‌ ಎಲೆ ಆದರೆ ಚೆನ್ನಾಗಿರುತ್ತದೆ. ಆಮೇಲೆ ಬಾಣಲಿಗೆ ಹಾಕಿ ಕರಿಯಿರಿ. ಚೆನ್ನಾಗಿ ಬೆಂದ ಮೇಲೆ ರುಚಿ ನೋಡಿ.
English summary

ಅಕ್ಕಿ ವಡೆ - Quick Rice Vada

Quick Rice Vada by Vinutha Rajendra, Kolar.
X
Desktop Bottom Promotion