For Quick Alerts
ALLOW NOTIFICATIONS  
For Daily Alerts

ದಟ್ಸ್ ಸಿಹಿಪಾಕಶಾಲೆ: ಸವಿಯಿರಿ ಬ್ರೆಡ್ ಹಲ್ವಾ

By Super
|

ಬ್ರೆಡ್ ನಾನಾ ಬಗೆಯ ತಿನಿಸನ್ನು ತಯಾರಿಸಲು ಉಪಯುಕ್ತವಾಗಿದೆ. ಸಂಜೆ ಸಮಯದಲ್ಲಿ ಕಾಫಿ, ಟೀ ಸೇವನೆಗೆ ಮೊದಲು ಮಾಮೂಲಿನಂತೆ ಬ್ರೆಡ್ ಟೋಸ್ಟ್, ರೋಸ್ಟ್ ತಿನ್ನುವವರಿಗೆ ಸಿಹಿ ಹೆಚ್ಚಿಸಲು ಶ್ರೀಘ್ರವಾಗಿ ಬ್ರೆಡ್ ಹಲ್ವಾ ತಯಾರಿಸಬಹುದು. ಇದು ಮಾಡಲು ಸುಲಭ, ತಿನ್ನಲು ರುಚಿಕರ.

ಬೇಕಾಗುವ ಸಾಮಾಗ್ರಿ:
ದೊಡ್ಡ ಬ್ರೆಡ್: ಕನಿಷ್ಠ 10 ತುಂಡುಗಳು
ಸಕ್ಕರೆ: 2 ಕಪ್
ಹಾಲು : 1 ಕಪ್
ತುಪ್ಪ: 1 ಕಪ್
ದ್ರಾಕ್ಷಿ, ಏಲಕ್ಕಿಪುಡಿ, ಗೋಡಂಬಿ ಚೂರು ರುಚಿಗೆ ತಕ್ಕಷ್ಟು
ರೋಸ್ ಎಸೆನ್ಸ್ : ಸ್ವಲ್ಪ

ಮಾಡುವ ವಿಧಾನ:
ಬ್ರೆಡನ್ನು ಸಣ್ಣ ಚೂರುಗಳಾಗಿ ತುಂಡರಿಸಿಕೊಂಡು ಸ್ವಲ್ಪ ತುಪ್ಪ ಹಾಕಿ ಬಾಣಲೆಯಲ್ಲಿ ತುಸು ಕೆಂಪಗೆ ಬರುವ ಹಾಗೆ ಹುರಿದುಕೊಳ್ಳಬೇಕು. ಬಾಣಲೆಯಲ್ಲಿ ಸಕ್ಕರೆ ಮತ್ತು ಸ್ವಲ್ಪ ಹಾಲನ್ನು ಹಾಕಿ ಸಿಹಿ ಪಾಕ ಮಾಡಿಕೊಂಡು, ಹುರಿದಿಟ್ಟುಕೊಂಡ ಬ್ರೆಡನ್ನು ಹಾಕಿ ಮಗುಚಿ ಉಳಿದ ಹಾಲಿ, ತುಪ್ಪ, ಗೇರು ಬೀಜ, ಏಲಕ್ಕಿ ಪುಡಿ, ರೋಸ್ ಎಸೆನ್ಸ್ ಎಲ್ಲವನ್ನೂ ಹಾಕಿ ಮಗುಚುತ್ತಾ ಇರಬೇಕು. ಆಮೇಲೆ ಅದು ಗಟ್ಟಿಯಾಗಿ ತಳಬಿಡುತ್ತಾ ಬರುವಾಗ ತುಪ್ಪ ಸವರಿದ ತಟ್ಟೆಗೆ ಹರಡಬೇಕು. ಆರಿದ ನಂತರ ತುಂಡು ಮಾಡಿ ಉಪಯೋಗಿಸಬಹುದು. ತುಂಡು ಮಾಡಲು ಬರದಿದ್ದರೆ ಕ್ಯಾರೇಟ್ ಹಲ್ವದಂತೆ ಚಮಚದಲ್ಲಿ ತಿನ್ನಬಹುದು.
(ದಟ್ಸ್ ಸಿಹಿಪಾಕಶಾಲೆ)

X
Desktop Bottom Promotion