For Quick Alerts
ALLOW NOTIFICATIONS  
For Daily Alerts

ಮೆಂತ್ಯೆ ಸೊಪ್ಪು-ಹೆಸರು ಬೇಳೆ ಪಲ್ಯ

By Staff
|

ಚಪಾತಿ ಅಥವಾ ರೊಟ್ಟಿ ಮಾಡಿದಾಗ ತಪ್ಪದೇ ಈ ಪಲ್ಯ ಮಾಡೋದು ಮರೀಬೇಡಿ... ಜೊತೆಗೆ ಸ್ವಲ್ಪ ನಿಂಬೆಹಣ್ಣು ಹಿಂಡಿದ ಹಸಿ ಈರುಳ್ಳಿ...

ಬೇಕಾಗುವ ಪದಾರ್ಥಗಳು :

ಮೆಂತ್ಯೆ ಸೊಪ್ಪು - 1 ಕಟ್ಟು (ಎಲೆ ಬಿಡಿಸಿ ತೊಳೆದು ಹೆಚ್ಚಿದ್ದು)
ಹೆಸರು ಬೆಳೆ - 1/2 ಬಟ್ಟಲು(ಹುರಿದಿದ್ದು)
ಈರುಳ್ಳಿ - 1
ಕೆಂಪು ಮೆಣಸಿನ ಪುಡಿ - 1/2 ಚಹಾ ಚಮಚ
ಅರಿಶಿಣ ಪುಡಿ - 1 ಚಿಟಿಕೆ
ಗರಂ ಮಸಾಲ - 1/2 ಚಹಾ ಚಮಚ
ಎಣ್ಣೆ - 3 ಚಹಾ ಚಮಚ
ಸಾಸಿವೆ, ಜೀರಿಗೆ(ಒಗ್ಗರಣೆಗೆ)
ಉಪ್ಪು - ರುಚಿಗೆ ತಕ್ಕಷ್ಟು

ಮಾಡುವ ವಿಧಾನ :

ಪಾತ್ರೆಗೆ ಎಣ್ಣೆ ಹಾಕಿಕೊಂಡು ಓಲೆಯ ಮೇಲಿಡಿ. ಎಣ್ಣೆ ಕಾದ ಬಳಿಕ ಸಾಸಿವೆ ಮತ್ತು ಜೀರಿಗೆ ಹಾಕಿ. ನಂತರ ಹೆಚ್ಚಿದ ಈರುಳ್ಳಿ ಹಾಕಿ.

ಈರುಳ್ಳಿ ಬೆಂದ ನಂತರ ಕೆಂಪು ಖಾರದ ಪುಡಿ, ಅರಿಶಿಣ ಪುಡಿ, ಗರಂ ಮಸಾಲ, ಉಪ್ಪು ಹಾಕಿ, ಕೈಯಾಡಿಸಿ. ಈಗ ಹೆಚ್ಚಿದ ಮೆಂತ್ಯ ಸೊಪ್ಪು ಹಾಗೂ ಹುರಿದ ಹೆಸರು ಬೇಳೆ, 1/2 ಲೋಟ ನೀರನ್ನು ಹಾಕಿ, ಪಾತ್ರೆಯ ಮುಚ್ಚಳ ಮುಚ್ಚಿ. ಹೆಸರು ಬೇಳೆ ಬೇಯುವವರೆಗೆ ಕುದಿಸಿ.

ಈ ಪಲ್ಯವನ್ನು ಚಪಾತಿ, ಜೋಳದ ರೊಟ್ಟಿಯ ಜತೆ ತಿಂದರೆ ಚೆನ್ನಾಗಿರುತ್ತೆ.

Read more about: palya ಪಲ್ಯ
English summary

South Indian Recipe : Fenugreek Curry

Vijay Satish Gosi introduces Fenugreek Curry.
X
Desktop Bottom Promotion