For Quick Alerts
ALLOW NOTIFICATIONS  
For Daily Alerts

ಹಬ್ಬಕ್ಕೆ ಸ್ಪೆಷಲ್ ಗೀರೈಸ್ ಘಮಲು ಹರಡಲಿ

By Staff
|

ಹಬ್ಬದಲ್ಲಿ ತುಪ್ಪದ ಘಮಲು ಮನೆತುಂಬಾ ಹರಡುವಂತೆ ಮಾಡುವ ಗೀರೈಸ್ ಬಾಯಿಗೂ ರುಚಿ, ಹೊಟ್ಟೆಗೂ ಹಿತ. ರುಚಿಕರವಾದ ಗೀರೈಸ್ ಅನ್ನು ಸುಲಭವಾಗಿ ಮಾಡುವ ವಿಧಾನವನ್ನು ಇಲ್ಲಿ ತಿಳಿದುಕೊಳ್ಳಿ.

ಗೀರೈಸ್ ಗೆ ಏನೇನು ಬೇಕು?:
2 ಕಪ್ ಬಾಸುಮತಿ ಅಕ್ಕಿ, 1/4 ಕಪ್ ತುಪ್ಪ, 1/2 ಕಪ್ ತೆಂಗಿನ ಹಾಲು, 1 ಚೆಕ್ಕೆ, 1 ಲವಂಗ, 2 ಪಲಾವ್ ಎಲೆ, ಏಲಕ್ಕಿ ಪುಡಿ, 1 ಚಮಚ ಜೀರಿಗೆ, ತುಪ್ಪದಲ್ಲಿ ಕರಿದ ದ್ರಾಕ್ಷಿ, ಗೋಡಂಬಿ, ಉಪ್ಪು

ಗೀರೈಸ್ ಮಾಡುವ ವಿಧಾನ:
* ಜೀರಿಗೆ, ಪಲಾವ್ ಎಲೆ, ಏಲಕ್ಕಿ, ಚೆಕ್ಕೆ, ಲವಂಗವನ್ನು ತುಪ್ಪದಲ್ಲಿ ಹುರಿದುಕೊಳ್ಳಬೇಕು. ಅದಕ್ಕೆ ಅಕ್ಕಿಯನ್ನು ಹಾಕಿ ಕೆಲವು ಸೆಂಕೆಂಡ್ ಚೆನ್ನಾಗಿ ಹುರಿದುಕೊಳ್ಳಬೇಕು.

* ಈಗ ಬಾಣಲೆಯಲ್ಲಿರುವುದನ್ನು ಪ್ರೆಶರ್ ಕುಕ್ಕರ್ ಗೆ ಹಾಕಿ ಅದಕ್ಕೆ ತೆಂಗಿನ ಹಾಲು, ರುಚಿಗೆ ತಕ್ಕಷ್ಟು ಉಪ್ಪು ಮತ್ತು 3 ಕಪ್ ನೀರು ಹಾಕಿ, ಉಳಿದ ತುಪ್ಪವನ್ನೂ ಬೆರೆಸಿ 3 ಕೂಗಿನವರೆಗೂ ಬೇಯಿಸಬೇಕು.

* ಕುಕ್ಕರ್ ತೆಗೆದ ನಂತರ, ತುಪ್ಪದಲ್ಲಿ ಹುರಿದ ದ್ರಾಕ್ಷಿ, ಗೋಡಂಬಿ ಬೆರೆಸಿದರೆ ಬಿಸಿಯಾದ ಗೀರೈಸ್ ತಿನ್ನಲು ರೆಡಿಯಾಗಿರುತ್ತೆ.

English summary

Ghee Rice Recipe | Easy Indian Recipe for Deepavali | ಗೀರೈಸ್ ರೆಸಿಪಿ | ದೀಪಾವಳಿಗೆ ಸುಲಭವಾದ ಗೀರೈಸ್ ರೆಸಿಪಿ

Celebrate diwali by feasting sumptuous easy indian recipes. How about the tasty ghee rice? there is nothing like rice feast as it satisfies the taste buds and also the stomach. Ghee rice is very easy to make and can be relished with any side dish (a kurma, curry, rasam or even raita). Take a look to know how to make ghee rice this diwali.
X
Desktop Bottom Promotion