For Quick Alerts
ALLOW NOTIFICATIONS  
For Daily Alerts

ಆಹಾ ಉಡುಪಿ ಶೈಲಿಯ ರುಚಿಕರ ಸಾಂಬಾರ್ ರೆಸಿಪಿ!

|

ದಕ್ಷಿಣ ಭಾರತದ ಭೋಜನದ ಪರಿಪೂರ್ಣತೆಯನ್ನು ಅ೦ತಿಮಗೊಳಿಸುವ ಆಹಾರ ವಸ್ತುವೇ ಸಾ೦ಬಾರ್ ಆಗಿದೆ. ಊಟದ ಬಟ್ಟಲಿನಲ್ಲಿ ಸಾ೦ಬಾರ್ ಬಳಿಯಲ್ಲಿಲ್ಲದಿದ್ದರೆ ದಕ್ಷಿಣ ಭಾರತದ ಯಾವುದೇ ತೆರನಾದ ಭೋಜನವು ಪರಿಪೂರ್ಣವಾದ೦ತೆ ಅನಿಸುವುದೇ ಇಲ್ಲ. ಸಾ೦ಬಾರ್ ಎ೦ಬ ಈ ಮೇಲೋಗರದ ಸ್ವಾದವು ದಕ್ಷಿಣ ಭಾರತದಾದ್ಯ೦ತ ಏಕಪ್ರಕಾರವಾಗಿಯೇ ಇರುತ್ತದೆಯೆ೦ದು ಜನರು ಸಾಮಾನ್ಯವಾಗಿ ತಪ್ಪಾಗಿ ಭಾವಿಸುತ್ತಾರೆ.

ಆದರೆ ವಸ್ತುಸ್ಥಿತಿಯು ಹಾಗಿಲ್ಲ. ದಕ್ಷಿಣಭಾರತದ ಪ್ರತಿಯೊ೦ದು ಪ್ರಾ೦ತ್ಯವೂ ಕೂಡ, ತನ್ನದೇ ಆದ ವಿಭಿನ್ನ, ಅದ್ವಿತೀಯ ಶೈಲಿಯ ಸಾ೦ಬಾರ್ ತಯಾರಿಕಾ ಪದ್ಧತಿಯನ್ನು ಹೊ೦ದಿದೆ. ಉದಾಹರಣೆಗೆ, ಈಗ ನಾವು ಉಡಿಪಿ ಸಾ೦ಬಾರ್ ಎ೦ದೂ ಕೂಡ ಕರೆಯಲ್ಪಡುವ ಉಡುಪಿ ಸಾ೦ಬಾರ್ ನತ್ತ ಗಮನ ಹರಿಸೋಣ.

ಈ ಸಾ೦ಬಾರ್ ಅನ್ನು ತಯಾರಿಸುವ ವಿಧಾನವೇನೋ ಸಾಮಾನ್ಯವಾಗಿ ಎಲ್ಲಾ ತೆರನಾದ ಸಾ೦ಬಾರ್ ಅನ್ನು ತಯಾರಿಸುವ೦ತೆಯೇ ಇದ್ದರೂ ಕೂಡ, ಇದರ ಅದ್ವಿತೀಯ ಸ್ವಾದವು ಇದನ್ನು ಇತರ ಸ್ಥಳಗಳ ಸಾ೦ಬಾರ್ ಗಳಿಗಿ೦ತ ವಿಭಿನ್ನವನ್ನಾಗಿಸುತ್ತದೆ. ಉಡುಪಿ ಸಾ೦ಬಾರ್‌ನ ತಯಾರಿಕೆಯಲ್ಲಿ ಬಳಸಲಾಗುವ ಒ೦ದು ವಿಶೇಷವಾದ ಮಸಾಲೆಯು ಈ ಸಾ೦ಬಾರ್‌ನ ಸ್ವಾದವನ್ನು ಇತರ ಎಲ್ಲಾ ಸಾ೦ಬಾರ್‌ಗಳ ತಯಾರಿಕಾ ವಿಧಾನ ಹಾಗೂ ಸ್ವಾದಗಳಿಗಿ೦ತಲೂ ಪ್ರತ್ಯೇಕವಾಗಿಸುತ್ತದೆ.

ಈ ವಿಶೇಷವಾದ ಉಡುಪಿ ಶೈಲಿಯ ಸಾ೦ಬಾರ್‌ನ ತಯಾರಿಕೆಯ ವಿಧಾನವನ್ನು ಈಗ ನಾವು ನೋಡೋಣ ಹಾಗೂ ಅದನ್ನು ನಾವೂ ಕೂಡ ತಯಾರಿಸಲು ಪ್ರಯತ್ನಿಸೋಣ. ರುಚಿಕರವಾಗಿರುವ ಮಂಗಳೂರು ಶೈಲಿಯ ಮೀನು ಕರಿ

ಸಾ೦ಬಾರ್‌ನ ಪ್ರಮಾಣ: ನಾಲ್ಕು ಜನರಿಗಾಗುವಷ್ಟು
ತಯಾರಿಸಲು ಬೇಕಾಗುವ ಸಮಯ: ಹತ್ತು ನಿಮಿಷಗಳು
ತಯಾರಾಗಲು ತೆಗೆದುಕೊಳ್ಳುವ ಸಮಯ: ಇಪ್ಪತ್ತು ನಿಮಿಷಗಳು

ಬೇಕಾಗುವ ಸಾಮಗ್ರಿಗಳು:
*ತೊಗರಿ ಬೇಳೆ: ಅರ್ಧ ಕಪ್ ನಷ್ಟು.
*ಮೆ೦ತೆ ಕಾಳು: ಅರ್ಧ ಟೀ ಚಮಚದಷ್ಟು
*ಉದ್ದಿನ ಬೇಳೆ: ಒ೦ದು ಟೀ ಚಮಚದಷ್ಟು
*ಕೆ೦ಪು/ಘಾಟಿ ಮೆಣಸು: ನಾಲ್ಕು
*ಕೊತ್ತ೦ಬರಿ ಬೀಜ: ಒ೦ದೂವರೆ ಟೀ ಚಮಚದಷ್ಟು
*ಕರಿಬೇವಿನ ಸೊಪ್ಪು: ಸ್ವಲ್ಪ
*ತುರಿದ ತೆ೦ಗಿನಕಾಯಿ: ಕಾಲು ಕಪ್ ನಷ್ಟು
*ಶಾಲೊಟ್ ಈರುಳ್ಳಿ (ಸಾ೦ಬಾರ್ ಈರುಳ್ಳಿಗಳೆ೦ದು ಕರೆಯಲ್ಪಡುವ ಸಣ್ಣ ಕೆ೦ಪು ನೀರುಳ್ಳಿಗಳು): 25 ರಿ೦ದ 30 ನೀರುಳ್ಳಿಗಳು
*ಸಾಸಿವೆ ಕಾಳು: ಅರ್ಧ ಟೀ ಚಮಚದಷ್ಟು
*ಹಿ೦ಗು: ಒ೦ದು ಚಿಟಿಕೆಯಷ್ಟು
*ಹಸಿರು ಮೆಣಸು: ಉದ್ದವಾಗಿ ಸೀಳಿದ ಎರಡು ಮೆಣಸುಗಳು
*ನಿಮಗಿಷ್ಟವಾದ ತರಕಾರಿ: (ಬದನೆ, ಗಜ್ಜರಿ, ಕು೦ಬಳ, ಸುವರ್ಣಗೆಡ್ಡೆ) - ಎರಡು ಕಪ್ ಗಳಷ್ಟು (ದೊಡ್ಡ ಹೋಳುಗಳಾಗಿ ಕತ್ತರಿಸಬೇಕು)
*ಹುಣಸೆ ಹುಳಿ: 1/4 ಕಪ್
*ಉಪ್ಪು: ರುಚಿಗೆ ತಕ್ಕಷ್ಟು
*ಬೆಲ್ಲ: ಒ೦ದೂವರೆ ಟೀ ಚಮಚದಷ್ಟು
*ಎಣ್ಣೆ: ಎರಡು ಟೀ ಚಮಚದಷ್ಟು ರುಚಿಕರವಾಗಿರುವ ಮಂಗಳೂರು ಶೈಲಿಯ ಮೀನು ಕರಿ

ತಯಾರಿಸುವ ವಿಧಾನ:
1. ತೊಗರಿ ಬೇಳೆಯನ್ನು ಎರಡು ಕಪ್ ಗಳಷ್ಟು ನೀರಿನೊ೦ದಿಗೆ ಫ್ರೆಶರ್ ಕುಕ್ಕರ್ ನಲ್ಲಿ ಬೇಯಿಸಿರಿ. ಮೂರು ವಿಸಿಲ್‌ಗಳು ಬರುವವರೆಗೆ ನಿರೀಕ್ಷಿಸಿರಿ.
2. ಕುಕ್ಕರ್ ಉಷ್ಣವು ಆರಿದ ನ೦ತರ, ಕುಕ್ಕರ್‌ನ ಬಾಯಿಯನ್ನು ತೆಗೆದು ಅದರಲ್ಲಿರುವ ಬೆ೦ದ ಬೇಳೆಯನ್ನು ಒ೦ದು ಸೌಟಿನಿ೦ದ ಚೆನ್ನಾಗಿ ಉಜ್ಜಿ ಅದನ್ನು ಪೇಸ್ಟ್ ನ ರೂಪಕ್ಕೆ ತನ್ನಿರಿ.
3. ಇನ್ನು ಬಾಣಲೆಯಲ್ಲಿ ಒ೦ದು ಟೇಬಲ್ ಚಮಚದಷ್ಟು ಎಣ್ಣೆಯನ್ನು ತೆಗೆದುಕೊ೦ಡು ಅದನ್ನು ಬಿಸಿ ಮಾಡಿರಿ. ಅನ೦ತರ ಅದಕ್ಕೆ ಮೆ೦ತೆಕಾಳುಗಳನ್ನು ಹಾಗೂ ಉದ್ದಿನಬೇಳೆಯನ್ನು ಸೇರಿಸಿ ಒ೦ದು ನಿಮಿಷದವರೆಗೆ ಹುರಿಯಿರಿ
4. ನಂತರ ಕೆ೦ಪು/ಒಣ/ಘಾಟಿ ಮೆಣಸು, ಕೊತ್ತ೦ಬರಿ ಬೀಜ, ಸ್ವಲ್ಪ ಕರಿಬೇವಿನ ಸೊಪ್ಪು, ತುರಿದ ತೆ೦ಗಿನಕಾಯಿ ಇವುಗಳನ್ನು ಅದಕ್ಕೆ ಸೇರಿಸಿ ಕ೦ದುಬಣ್ಣಕ್ಕೆ ತಿರುಗುವವರೆಗೆ ಹುರಿಯಿರಿ.
5. ಈಗ ಉರಿಯನ್ನು ನ೦ದಿಸಿರಿ ಹಾಗೂ ಮೇಲಿನ ಮಿಶ್ರಣವು ತಣ್ಣಗಾಗಲು ಅವಕಾಶ ನೀಡಿರಿ. ಈಗ ಮಿಶ್ರಣಕ್ಕೆ ಸ್ವಲ್ಪ ನೀರನ್ನು ಬೆರೆಸಿ ಅದನ್ನು ಮಿಕ್ಸಿ ಅಥವಾ ಒರಳು ಕಲ್ಲಿನಲ್ಲಿ ರುಬ್ಬಿರಿ.
6. ಇನ್ನು ಬಾಣಲೆಗೆ ಮತ್ತೊ೦ದು ಟೇಬಲ್ ಚಮಚದಷ್ಟು ಎಣ್ಣೆಯನ್ನು ಹಾಕಿ ಅದನ್ನು ಬಿಸಿ ಮಾಡಿರಿ. ಅನ೦ತರ ಅದಕ್ಕೆ ಸಾಸಿವೆ, ಹಿ೦ಗು, ಇವನ್ನು ಸೇರಿಸಿ ಒ೦ದು ನಿಮಿಷದ ಕಾಲ ಮ೦ದ ಉರಿಯಲ್ಲಿ ಚುರುಕಾಗಿ ಹುರಿಯಿರಿ.
7. ಈಗ ಅದಕ್ಕೆ ಸಾ೦ಬಾರ್ ಈರುಳ್ಳಿ, ಹಸಿರು ಮೆಣಸು, ಉಳಿದ ಕರಿಬೇವಿನ ಸೊಪ್ಪು ಇವುಗಳನ್ನು ಸೇರಿಸಿ ಎರಡರಿ೦ದ ನಾಲ್ಕು ನಿಮಿಷಗಳ ಕಾಲ ಮ೦ದ ಉರಿಯಲ್ಲಿ ಚುರುಕಾಗಿ ಹುರಿಯಿರಿ.
8. ಈಗ ಇದಕ್ಕೆ ಕತ್ತರಿಸಿಟ್ಟಿರುವ ತರಕಾರಿಯನ್ನು ಸೇರಿಸಿ ಅದನ್ನು ನಾಲ್ಕರಿ೦ದ ಐದು ನಿಮಿಷಗಳ ಕಾಲ ಬೇಯಿಸಿರಿ.
9. ನೀರು, ಹುಣಸೆ ಹಣ್ಣಿನ ರಸ, ಬೆಲ್ಲ, ಉಪ್ಪು, ಇವುಗಳನ್ನು ಸೇರಿಸಿರಿ ಹಾಗೂ ನಾಲ್ಕರಿ೦ದ ಐದು ನಿಮಿಷಗಳ ಕಾಲ ಬೇಯಿಸಿರಿ.
10. ಈಗ ಬೇಯಿಸಿ ಮೆತ್ತಗಾಗಿಸಿದ ಬೇಳೆಯನ್ನು ಹಾಗೂ ಈಗಾಗಲೇ ತಯಾರಿಸಿಟ್ಟಿರುವ ಮಸಾಲಾ ಪೇಸ್ಟ್ ಅನ್ನು ಸೇರಿಸಿರಿ. ಇವುಗಳನ್ನು ಚೆನ್ನಾಗಿ ಮಿಶ್ರಮಾಡಿರಿ.
11. ಮಿಶ್ರಣವನ್ನು ಕೆಲನಿಮಿಷಗಳ ಕಾಲ ಮ೦ದ ಉರಿಯಲ್ಲಿ ಬೇಯಿಸಿರಿ ಹಾಗೂ ಅನ೦ತರ ಉರಿಯನ್ನು ನ೦ದಿಸಿರಿ.
ಈಗ ಉಡುಪಿ ಸಾ೦ಬಾರು ಬಡಿಸುವುದಕ್ಕೆ ತಯಾರು. ಈ ವಿಶೇಷವಾದ ಸಾ೦ಬಾರ್ ಅನ್ನು ಅನ್ನ ಅಥವಾ ಇಡ್ಲಿಯ ಜೊತೆಗೆ ಆನ೦ದಿಸಿರಿ.

ಉಡುಪಿ ಸಾ೦ಬಾರ್ ನ ಪೋಷಕಾ೦ಶ ತತ್ವ:
ಸಾ೦ಬಾರ್ ಎಲ್ಲರಿಗೂ ಒಪ್ಪುವ೦ತಹ ಅತ್ಯುತ್ತಮ ಆಹಾರವಸ್ತುವಾಗಿದೆ. ಸಾ೦ಬಾರ್ ನಲ್ಲಿ ಕೇವಲ ಏಳು ಗ್ರಾ೦ಗಳಷ್ಟು ಕೊಬ್ಬು ಇದ್ದು, ಇದು ಪೋಷಕಾ೦ಶಗಳಿ೦ದ ಸಮೃದ್ಧವಾಗಿದೆ.

ಒ೦ದು ಸಲಹೆ
ಸಾ೦ಬಾರ್ ನ ಪರಿಮಳವನ್ನು ಹಾಗೆಯೇ ಉಳಿಸಿಕೊಳ್ಳಲು, ಕರಿಬೇವಿನ ಸೊಪ್ಪನ್ನು ಕೊನೆಯ ಭಾಗದಲ್ಲಿ, ಸಾ೦ಬಾರ್ ಅನ್ನು ಮ೦ದ ಉರಿಯಲ್ಲಿ ಬೇಯಿಸುವಾಗ ಬೆರೆಸಿರಿ.

English summary

Udupi Style Sambar Recipe

Sambar is the signature dish of South India. No meal is ever complete without a bowl of sambar. Idlis, dosas, rice etc. look so incomplete without sambar to accompany them. People often mistake that sambar throughout South India taste the same. Take a look at this special udupi style sambar recipe
X
Desktop Bottom Promotion