For Quick Alerts
ALLOW NOTIFICATIONS  
For Daily Alerts

ಬಾಯಲ್ಲಿ ನೀರೂರಿಸುವ ಹೆಸರುಬೇಳೆ ಪಾಲಾಕ್ ರೆಸಿಪಿ

By Super
|

ದಕ್ಷಿಣ ಭಾರತದಲ್ಲಿ ಹೆಚ್ಚಾಗಿ ಬಳಕೆಯಾಗುವ ಸಾಂಬಾರ್, ಖಿಚಡಿ ಮತ್ತು ತಿಳಿಸಾರಿಗೆಲ್ಲಾ ತೊಗರಿಬೇಳೆಯನ್ನು ಬಳಸುತ್ತಾರೆ. ಆದರೆ ತೊಗರಿ ಬೇಳೆ ಬೇಯುವುದು ನಿಧಾನವಾಗಿ, ಕುಕ್ಕರಿನಲ್ಲಿಯೂ ಸುಮಾರು ನಾಲ್ಕು, ಐದು ಸೀಟಿಯ ಬಳಿಕವೇ ಬೇಯುತ್ತದೆ. ಆದರೆ ಹೆಸರು ಬೇಳೆ ಇನ್ನೂ ಬೇಗನೇ ಬೇಯುತ್ತದೆ. ರುಚಿಯಲ್ಲಿ ಹೆಸರು ಬೇಳೆ ತೊಗರಿಬೇಳೆಗಿಂತ ಕೊಂಚ ಭಿನ್ನವಾಗಿದೆ. ಆದರೆ ಹೆಸರುಬೇಳೆಯೊಂದಿಗೆ ಪಾಲಕ್ ಸೊಪ್ಪನ್ನು ಸೇರಿಸಿ ಮಾಡಿದ ಸೊಪ್ಪಿನ ಸಾರು, ತೊಗರಿಬೇಳೆಯ ತೊವ್ವೆ ಅಥವಾ ದಾಲ್‌ಗಿಂತಲೂ ರುಚಿಯಾಗಿರುತ್ತದೆ.

ಕಡಿಮೆ ಸಮಯದಲ್ಲಿ ತಯಾರಿಸಬಹುದಾದ ಈ ರೆಸಿಪಿಯನ್ನು ಪೋಷಕಾಂಶಗಳ ಆಗರವಾಗಿದ್ದು ಅತ್ಯಂತ ಆರೋಗ್ಯಕರವಾಗಿದೆ. ಇದನ್ನು ಅನ್ನದೊಂದಿಗೆ, ಚಪಾತಿ, ರೋಟಿ ಕುಲ್ಛಾ ಅಷ್ಟೇ ಏಕೆ? ಇಡ್ಲಿ, ದೋಸೆಗಳ ಜೊತೆಗೂ ಸವಿಯಬಹುದು. ಒಂದು ವೇಳೆ ಒಂದು ಚಮಚ ತುಪ್ಪ ಇದರ ಮೇಲೆ ಸುರಿದಾಗ ಇದರ ಪರಿಮಳ ಊಟದ ಕೋಣೆಯಲ್ಲಿ ಹರಡಿ ಮನೆಯವರ ಹಸಿವನ್ನು ಹೆಚ್ಚಿಸುತ್ತದೆ. ಮಕ್ಕಳು ಒಂದು ಚಪಾತಿ ತಿನ್ನಲೂ ತಕರಾರು ಮಾಡುತ್ತಿದ್ದವರು ಈಗ ಅಮ್ಮನ ಒತ್ತಾಯವಿಲ್ಲದೆಯೇ ಮೂರನೆಯ ಚಪಾತಿಗೆ ಬೇಡಿಕೆ ಸಲ್ಲಿಸುತ್ತಾರೆ. ಸುಲಭವಾಗಿ ತಯಾರಿಸಬಹುದಾದ ವಿಧಾನ ಇಂತಿದೆ: ಬಸಳೆ ಸೊಪ್ಪಿನ ಸಾರು ಈ ರೀತಿ ಮಾಡಿದರೆ ರುಚಿ ಅಧಿಕ

ಪ್ರಮಾಣ: ಮೂವರಿಗೆ ಒಂದು ಹೊತ್ತಿಗಾಗುವಷ್ಟು

*ತಯಾರಿಕಾ ಸಮಯ: ಸುಮಾರು ಹದಿನೈದು ನಿಮಿಷ

*ಅಡುಗೆಯ ಸಮಯ: ಇಪ್ಪತ್ತು ನಿಮಿಷಗಳು

ಬೇಕಾಗುವ ಸಾಮಾಗ್ರಿಗಳು:

*ಹೆಸರು ಬೇಳೆ-ಒಂದು ಕಪ್ (ತೊಳೆದು ನೀರು ಬಸಿದಿದ್ದು)

*ಪಾಲಕ್ ಸೊಪ್ಪು (ಚಿಕ್ಕದಾಗಿ ಹೆಚ್ಚಿದ್ದು) - ಮೂರು ಕಪ್

*ಈರುಳ್ಳಿ (ಮಧ್ಯಮ ಗಾತ್ರ)- 2 (ಚಿಕ್ಕದಾಗಿ ಹೆಚ್ಚಿದ್ದು)

*ಬೆಳ್ಳುಳ್ಳಿ - ಐದು ಎಸಳು (ಸಿಪ್ಪೆ ಸುಲಿದು ಜಜ್ಜಿದ್ದು)

*ಶುಂಠಿ- ಸುಮಾರು ಒಂದಿಂಚಿನಷ್ಟು (ಸಿಪ್ಪೆ ಸುಲಿದು ಚಿಕ್ಕದಾಗಿ ಜಜ್ಜಿದ್ದು)

*ಹಸಿಮೆಣಸು-5 (ಉದ್ದಕ್ಕೆ ಸೀಳಿದ್ದು)

*ಟೊಮೇಟೊ -2 (ಮಧ್ಯಮ ಗಾತ್ರ, ಚಿಕ್ಕದಾಗಿ ಕತ್ತರಿಸಿದ್ದು)

*ಅರಿಶಿನ ಪುಡಿ- 1/2 ಚಿಕ್ಕ ಚಮಚ

*ಜೀರಿಗೆ - 1/2 ಚಿಕ್ಕ ಚಮಚ

*ಗರಂ ಮಸಾಲಾ ಪುಡಿ - 1 ಚಿಕ್ಕ ಚಮಚ

*ತೆಂಗಿನ ಹಾಲು - 3/4 ಕಪ್

*ಉಪ್ಪು - ರುಚಿಗನುಸಾರ

*ಅಡುಗೆ ಎಣ್ಣೆ -2 ದೊಡ್ಡ ಚಮಚ

*ಇಂಗು - ಒಂದು ಚಿಟಿಕೆ

ವಿಧಾನ:

*ಕುಕ್ಕರ್‌ನಲ್ಲಿ ಎಣ್ಣೆ ಹಾಕಿ ಜೀರಿಗೆ, ಅರಿಶಿನ ಪುಡಿ, ಶುಂಠಿ, ಬೆಳ್ಳುಳ್ಳಿ, ಹಸಿಮೆಣಸು, ಇಂಗು ಮತ್ತು ಈರುಳ್ಳಿ ಹಾಕಿ ಮಧ್ಯಮ ಉರಿಯಲ್ಲಿ ಈರುಳ್ಳಿ ಕೆಂಪಗಾಗುವವರೆಗೆ ತಿರುವಿರಿ.

*ಈಗ ಟೊಮೇಟೊ ಹಾಕಿ ಎಣ್ಣೆ ಬಿಡುವವರೆಗೆ ತಿರುವುತ್ತಾ ಇರಿ.

*ಇನ್ನು ಹೆಸರು ಬೇಳೆ, ಎರಡು ಕಪ್ ನೀರು ಉಪ್ಪು ಹಾಕಿ ಕುಕ್ಕರಿನ ಮುಚ್ಚಳ ಮುಚ್ಚಿ. ಆವಿ ಹೊರಬರಲು ಪ್ರಾರಂಭವಾದ ಬಳಿಕ ಸೀಟಿ ಹಾಕಿ. (ಮೊದಲೇ ಹಾಕಿದರೆ ಬೇಗನೇ ಬೇಯುವುದಿಲ್ಲ)

*ನಾಲ್ಕು ಸೀಟಿಯ ಬಳಿಕ ಒಲೆ ನಂದಿಸಿ ಸೀಟಿಯ ಮೇಲೆ ತಣ್ಣೀರು ಸುರಿಯುತ್ತಾ ಒತ್ತಡ ಪೂರ್ಣವಾಗಿ ಕಡಿಮೆಯಾಗುವಂತೆ ಮಾಡಿ, ಬಳಿಕ ಸೀಟಿ ತೆಗೆಯಿರಿ

*ಈಗ ಮುಚ್ಚಳ ತೆರೆದು ಒಳಗಿನ ಭಾಗವನ್ನು ಚೆನ್ನಾಗಿ ತಿರುವಿ

*ತದನಂತರ ಪಾಲಕ್ ಸೊಪ್ಪು, ತೆಂಗಿನ ಹಾಲು, ಗರಂ ಮಸಾಲಾ ಹಾಕಿ ನಿಮ್ಮ ಆಯ್ಕೆಯ ಗಾಢತೆಗೆ ತಕ್ಕಷ್ಟು ನೀರು ಹಾಕಿ ಮುಚ್ಚಳ ಮುಚ್ಚದೇ ಸುಮಾರು ಹತ್ತು ನಿಮಿಷ ಬೇಯಿಸಿ

*ಪಾಲಕ್ ಸೊಪ್ಪು ಬೇಗನೇ ಬೇಯುತ್ತದೆ. ಬಳಿಕ ಒಲೆಯಿಂದ ಕೆಳಗಿಳಿಸಿ ಮುಚ್ಚಳ ಮುಚ್ಚಿ ಕೊಂಚ ಕಾಲ ಇಡಿ.

*ಬಿಸಿಬಿಸಿಯಾಗಿರುವಂತೆಯೇ ಬಡಿಸಿ. ರುಚಿಗಾಗಿ ಕೊಂಚ ತುಪ್ಪವನ್ನೂ ಬಳಸಬಹುದು.

ಸಲಹೆ:

1) ಪಾಲಕ್ ಸೊಪ್ಪಿನ ಬದಲಿಗೆ ಬಸಲೆ ಸೊಪ್ಪನ್ನೂ ಉಪಯೋಗಿಸಬಹುದು. ಬಸಲೆ ಸೊಪ್ಪು ಉಪಯೋಗಿಸಿದರೆ ಉಪ್ಪು ಮತ್ತು ಮೆಣಸು ಕೊಂಚ ಹೆಚ್ಚು ಬೇಕಾಗುತ್ತದೆ.

2) ಈ ಆಹಾರದಲ್ಲಿ ಕಬ್ಬಿಣದ ಅಂಶ ತುಂಬಾ ಹೆಚ್ಚಾಗಿರುವುದರಿಂದ ಗರ್ಭಿಣಿಯರಿಗೆ ಮತ್ತು ಬಾಣಂತಿಯರಿಗೆ ಹೇಳಿ ಮಾಡಿಸಿದ್ದಾಗಿದೆ.

3) ತೂಕ ಕಡಿಮೆ ಮಾಡಿಕೊಳ್ಳುವವರಿಗೆ ಈ ಆಹಾರ ಸೂಕ್ತ

4) ಒಂದು ದಿನದ ಮೊಳಕೆ ಬಂದ ಹೆಸರು ಕಾಳನ್ನು ಉಪಯೋಗಿಸಿಯೂ ಈ ತೊವ್ವೆಯನ್ನು ಮಾಡಬಹುದು ರುಚಿ ಕೊಂಚ ಸಿಹಿಸಿಯಾಗಿರುತ್ತದೆ. (ಕುಕ್ಕರಿನಲ್ಲಿ ಬೆಂದ ಬಳಿಕ ಹೆಸರು ಕಾಳನ್ನು ಮಿಕ್ಸಿಯಲ್ಲಿ ಕೊಂಚ ಪುಡಿಮಾಡಬೇಕಾಗುತ್ತದೆ)

English summary

Green Treat: Moong Dal With Spinach Recipe

Yellow dal is very famous in South India. A lot of people add this dal to prepare khichdi, pakoras, gravies etc. It is also added it various vegetable dishes to enhance the taste. Moong dal is often prepared with vegetables in the form of sambhar. But, today we share with you a healthy green treat.
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more
X