For Quick Alerts
ALLOW NOTIFICATIONS  
For Daily Alerts

ಚಪಾತಿ ಜೊತೆ ಸವಿಯಲು ದಾಲ್ ರೆಸಿಪಿ

|

ಕೆಲಸದ ಒತ್ತಡದ ನಡುವೆ ತರಕಾರಿ ತರಲು ಪುರುಸೊತ್ತು ಸಿಗಲಿಲ್ಲ. ಮನೆಯಲ್ಲಿ ಈರುಳ್ಳಿ, ಹಸಿ ಮೆಣಸಿಕಾಯಿ ಬಿಟ್ಟರೆ ಎಲ್ಲಾ ತರಕಾರಿ ಖಾಲಿಯಾಗಿತ್ತು. ಬೆಳಗ್ಗಿನ ಬ್ರೇಕ್ ಫಾಸ್ಟ್ ಗೆ ಚಪಾತಿ ಮಾಡಿ, ಅದರ ಜೊತೆ ತಿನ್ನಲು ಏನು ಮಾಡುವುದು ಎಂದು ಯೋಚಿಸಿದಾಗ ಹೊಳೆದಿದ್ದೇ ಈ ದಾಲ್ ರೆಸಿಪಿ.

ಸರಳವಾದ ಪದಾರ್ಥಗಳನ್ನು ಬಳಸಿ ಈ ದಾಲ್ ಅನ್ನು ರುಚಿಕರವಾಗಿ ತಯಾರಿಸಬಹುದು. ಇದರ ರೆಸಿಪಿಯನ್ನು ಈ ಕೆಳಗೆ ನೀಡಲಾಗಿದೆ ನೋಡಿ:

ಈ ದಾಲ್ ಅನ್ನು ಸ್ವಲ್ಪ ಗಟ್ಟಿಯಾಗಿ ಮಾಡಿ, ಆಗ ಚಪಾತಿ ಜೊತೆ ತಿನ್ನಲು ಬಲುರುಚಿಯಾಗಿರುತ್ತದೆ.

Easy Dal Curry Recipe

ಬೇಕಾಗುವ ಸಾಮಾಗ್ರಿಗಳು
ಹೆಸರು ಬೇಳೆ ಅರ್ಧ ಕಪ್
ಹಸಿ ಮೆಣಸಿನಕಾಯಿ 2
ಈರುಳ್ಳಿ 1
ಬೆಳ್ಳುಳ್ಳಿ ಎಸಳು 4-5
ಜೀರಿಗೆ ಅರ್ಧ ಚಮಚ
ಅರಿಶಿಣ ಪುಡಿ ಅರ್ಧ ಚಮಚ
ಗರಂ ಮಸಾಲ ಅರ್ಧ ಚಮಚ
ಖಾರದ ಪುಡಿ (ನಿಮ್ಮ ರುಚಿಗೆ ತಕ್ಕಷ್ಟು)
ಸ್ವಲ್ಪ ಸಾಸಿವೆ
ಚಿಟಿಕೆಯಷ್ಟು ಇಂಗು
ಎಣ್ಣೆ 2 ಚಮಚ
ಕರಿ ಬೇವಿನ ಎಲೆ
ರುಚಿಗೆ ತಕ್ಕ ಉಪ್ಪು

ತಯಾರಿಸುವ ವಿಧಾನ:

* ಮೊದಲಿಗೆ ಹೆಸರ ಬೇಳೆಯನ್ನು ತೊಳೆದು ಪ್ರೆಶರ್ ಕುಕ್ಕರ್ ನಲ್ಲಿ ಹಾಕಿ, ಈರುಳ್ಳಿ, ಹಸಿ ಮೆಣಸಿನಕಾಯಿ ಕತ್ತರಿಸಿ ಹಾಕಿ, ಸ್ವಲ್ಪ ಉಪ್ಪು ಹಾಕಿ 2 ವಿಶಲ್ ಬರುವವರೆಗೆ ಬೇಯಿಸಿ.

* ಹೆಸರು ಬೇಳೆ ಬೆಂದ ನಂತರ ಸಾರು ಪಾತ್ರೆಯನ್ನು ಉರಿ ಮೇಲೆ ಇಟ್ಟು, 2 ಚಮಚ ಎಣ್ಣೆ ಹಾಕಿ ಬಿಸಿಮಾಡಿ, ಸಾಸಿವೆ ಹಾಕಿ. ಸಾಸಿವೆ ಚಟಾಪಟಾ ಶಬ್ದ ಮಾಡುವಾಗ ಜೀರಿಗೆ ಮತ್ತು ಇಂಗು ಹಾಕಿ, ಕರಿ ಬೇವಿನ ಎಲೆ ಹಾಕಿ ನಂತರ ಬೆಳ್ಳುಳ್ಳಿ ಹಾಕಿ ಅದು ಸ್ವಲ್ಪ ಕಂದು ಬಣ್ಣಕ್ಕೆ ತಿರುಗುವವರೆಗೆ ಫ್ರೈ ಮಾಡಿ, ನಂತರ ಬೇಯಿಸಿದ ದಾಲ್ ಹಾಕಿ, ನಂತರ ಅರಿಶಿಣ ಪುಡಿ, ಗರಂ ಮಸಾಲ, ಖಾರದ ಪುಡಿ ಹಾಕಿ ಸ್ವಲ್ಪ ಉಪ್ಪು ಹಾಕಿ ಕುದಿಸಿ.

* ನಂತರ ಉಪ್ಪು ನೋಡಿ, ಉಪ್ಪು ಬೇಕಿದ್ದರೆ ಸ್ವಲ್ಪ ಉಪ್ಪು ಸೇರಿಸಿ 2 ನಿಮಿಷ ಕುದಿಸಿ ಉರಿಯಿಂದ ಇಳಿಸಿದರೆ ದಾಲ್ ರೆಡಿ.

English summary

Easy Dal Curry Recipe

Yesterday i didn't get time to bring vegetable, but i had to prepare some thing for chapathi, in that time, i prepared Dal. Even though i didn't add much vegetable, the dal taste was super. So i thought to to share that easy recipe with you.
X
Desktop Bottom Promotion