For Quick Alerts
ALLOW NOTIFICATIONS  
For Daily Alerts

ಘಮಘಮಾ ಎನ್ನುವ ಅವರೆಕಾಳ್ ಸಾರ್, ರೆಸಿಪಿ

|

ಇದು ಅವರೆಕಾಳಿನ ಸೀಸನ್. ಈ ಸೀಸನ್ ನಲ್ಲಿ ಅವರೆಕಾಳಿನ ಅಡುಗೆಗಳನ್ನು ಮಾಡದಿದ್ದರೆ ಮತ್ತೆ ನೀವು ಮುಂದಿನ ವರ್ಷದವರೆಗೆ ಕಾಯಬೇಕಾಗುತ್ತದೆ, ನಿಮ್ಮನ್ನು ಅಷ್ಟು ಕಾಯಿಸಲು ನಮಗೂ ಇಷ್ಟವಿಲ್ಲ ಆದ್ದರಿಂದ ನಾವು ಈ ಮೊದಲೇ ಹೇಳಿದಂತೆ ಈ ಸೀಸನ್ ಗೆ ತಕ್ಕಂತೆ ಅನೇಕ ಅವರೆಕಾಳಿನ ರೆಸಿಪಿ ನೀಡಲಿದ್ದೇವೆ. ಅವರೆಕಾಳಿನಿಂದ ಮಾಡುವಂತಹ ಕೆಲವೊಂದು ವಿಶೇಷ ಅಡುಗೆಗಳು ನಿಮಗೆ ಗೊತ್ತಿದ್ದರೆ ನಮಗೂ ತಿಳಿಸಬಹುದು.

ಇವತ್ತು ನಾವು ಅವರೆಕಾಳಿನ ಸಾರು ಮಾಡುವ ವಿಧಾನ ತಿಳಿಯೋಣ. ಸವಿರುಚಿಯ, ಘಮ್ಮೆನ್ನುವ ಈ ಅವರೆಕಾಳಿನ ಸಾರನ್ನು ಸುಲಭವಾಗಿ ಮಾಡಬಹುದಾಗಿದ್ದು ಇದರ ರೆಸಿಪಿ ನೋಡಿ ಇಲ್ಲಿದೆ. ಸಂಕ್ರಾಂತಿ ಹಬ್ಬದ ವಿಶೇಷ ಅಡುಗೆಗೆ ಇದನ್ನು ಮಾಡಬಹುದು.

Averekalu Saru Recipe

ಬೇಕಾಗುವ ಪದಾರ್ಥ :

ಹಿತಕಿದ ಅವರೆ ಬೇಳೆ 2 ಕಪ್
1 ಚಮಚ ತುಪ್ಪ
ಚಮಚ ಮೆಂತೆ
1 ಕಪ್ ತೆಂಗಿನಕಾಯಿ ತುರಿ
1 ಚಮಚ ಹುರಿಗಡಲೆ
ಅರ್ಧ ಚಮಚ ಅರಿಶಿಣ
1 ಚಮಚ ಜೀರಿಗೆ
1 ಚಮಚ ಕೊತ್ತಂಬರಿ ಬೀಜ
1 ಚಮಚ ಗಸಗಸೆ
4 ಈರುಳ್ಳಿ
ಕೆಂಪು ಮೆಣಸಿನಕಾಯಿ (ಖಾರಕ್ಕೆ ತಕ್ಕಷ್ಟು)
ಎಣ್ಣೆ
1 ಕಟ್ಟು ಪಾಲಾಕ್ ಸೊಪ್ಪು (ಸಣ್ಣಗೆ ಹೆಚ್ಚಿರಬೇಕು)

ಮಾಡುವ ವಿಧಾನ :

* ಹಿತಕಿದ ಅವರೆಕಾಳನ್ನು ದಪ್ಪ ತಳದ ಪಾತ್ರೆಗೆ ಒಂದು ಚಮಚ ತುಪ್ಪ ಹಾಕಿ ಕಾಳುಗಳನ್ನು ಬಿಳಿ ಹೊಗೆ ಬರುವವರೆಗೆ ಹುರಿಯಿರಿ.

* ನಂತರ ಆ ಕಾಳನ್ನು ಕುಕ್ಕರಿಗೆ ಹಾಕಿ 2 ಕಪ್ ಕಾಳಿಗೆ 3 ಕಪ್ ನೀರು ಹಾಕಿ ಕುಕ್ಕರಿನಲ್ಲಿ ಬೇಯಿಸಿಕೊಳ್ಳಿ.

* ಮಸಾಲೆಗೆ 1 ಚಮಚ ಮೆಂತ್ಯ, ತುರಿದ ಕೊಬ್ಬರಿ, ಹುರಿಗಡಲೆ, ಅರಿಶಿಣ, ಜೀರಿಗೆ, ಕೊತ್ತಂಬರಿಬೀಜ, ಗಸಗಸೆ, ಈರುಳ್ಳಿ ಮತ್ತು ಕೆಂಪು ಮೆಣಸಿನಕಾಯಿಯನ್ನು ಎಣ್ಣೆಯ ಬಾಣಲೆಯಲ್ಲಿ ಕೆಂಪಾಗಿ ಹುರಿಯಿರಿ. ನಂತರ ಹುರಿಗಡಲೆಯನ್ನು ಹಾಕಿ ನುಣ್ಣಗೆ ರುಬ್ಬಿ.

* ಬೆಂದ ಕಾಳಿಗೆ ರುಬ್ಬಿದ ಮಸಾಲೆ ಹಾಕಿ ಚೆನ್ನಾಗಿ ಕಲಕಿ, ಅದಕ್ಕೆ ಸಣ್ಣಗೆ ಹೆಚ್ಚಿದ ಪಾಲಾಕ್‌ ಸೊಪ್ಪನ್ನು ಒಗ್ಗರಣೆ ಮಾಡಿ ಹಾಕಿ. ನಿಮ್ಮ ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಒಲೆಯ ಮೇಲಿಡಿ. ಚೆನ್ನಾಗಿ ಕುದಿಸಿ ನಂತರ ಉರಿಯಿಂದ ತೆಗೆದರೆ ಸವಿರುಚಿಯ ಅವರೆಕಾಳಿನ ಸಾರು ರೆಡಿ.

English summary

Averekalu Saru Recipe | Variety Of Curry Recipe | ಅವರೆಕಾಳು ಸಾರು ರೆಸಿಪಿ | ಅನೇಕ ಬಗೆಯ ಸಾರಿನ ರೆಸಿಪಿ

Avarekalu sambhar is one of the delicious Karnataka recipes. You can prepare it easily and serve as a side dish with rice, dosa or idlis. Check out the recipe to prepare avarekalu sambhar.
X
Desktop Bottom Promotion