For Quick Alerts
ALLOW NOTIFICATIONS  
For Daily Alerts

ಕ್ಯಾರೆಟ್‌ ಸೂಪು

By Staff
|

ಗರಿಗರಿಯಾದ ಬ್ರೆಡ್‌ ತುಂಡುಗಳನ್ನು ಹಾಕಿಕೊಂಡು, ಕ್ಯಾರೆಟ್‌ ಸೂಪನ್ನು ಬಿಸಿಬಿಸಿಯಾಗಿ ಸವಿದರೆ ಅದರ ಮಜಾನೇ ಬೇರೆ... ಈ ರುಚಿಯನ್ನು ನೀವೂ ನೋಡಬಾರದೇಕೆ...?

ಬೇಕಾಗುವ ಸಾಮಗ್ರಿಗಳು :

2 ಸಣ್ಣದಾಗಿ ಕತ್ತರಿಸಿದ ಕ್ಯಾರೆಟ್‌ಗಳು
2 ಸಣ್ಣದಾಗಿ ಕತ್ತರಿಸಿದ ಆಲೂಗಡ್ಡೆಗಳು
1 ಸಣ್ಣದಾಗಿ ಕತ್ತರಿಸಿದ ಈರುಳ್ಳಿ
2 ಟೇಬಲ್‌ ಸ್ಪೂನ್‌ ಬೆಣ್ಣೆ
1 ಟೀ ಕಪ್‌ ಹಾಲು
ಉಪ್ಪು, ಕರಿಮೆಣಸು, ಪುದೀನಾ

ಮಾಡುವ ವಿಧಾನ :

ತುಂಡರಿಸಿದ ಕ್ಯಾರೆಟ್‌ ಹಾಗೂ ಆಲೂಗಡ್ಡೆಯನ್ನು 7-8 ನಿಮಿಷಗಳ ಕಾಲ ಪಾತ್ರೆಯಲ್ಲಿ ಬೇಯಿಸಿಕೊಳ್ಳಿ. ತಣ್ಣಗಾದ ನಂತರ ಇದಕ್ಕೆ ಸ್ವಲ್ಪ ನೀರು ಬೆರೆಸಿಕೊಂಡು, ಮಿಕ್ಸರ್‌ನಲ್ಲಿ ಹಾಕಿ ಜ್ಯೂಸ್‌ ರೀತಿಯಲ್ಲಿ ರುಬ್ಬಿಕೊಳ್ಳಿ.

ಮತ್ತೊಂದು ಕಡೆ ಪಾತ್ರೆಯಾಂದರಲ್ಲಿ ಬೆಣ್ಣೆ ಹಾಕಿ, ಒಂದೆರಡು ನಿಮಿಷಗಳ ಕಾಲ ಬಿಸಿ ಮಾಡಿಕೊಳ್ಳಿ. ಆನಂತರ ಬೆಣ್ಣೆಗೆ ಹೆಚ್ಚಿದ ಈರುಳ್ಳಿ ಹಾಕಿಕೊಂಡು 4-5 ನಿಮಿಷಗಳ ಕಾಲ ಹುರಿದುಕೊಳ್ಳಿ.

ಈಗ ಜ್ಯೂಸ್‌ ರೀತಿಯಲ್ಲಿ ರುಬ್ಬಿಕೊಂಡ ಪದಾರ್ಥಕ್ಕೆ, ಹಾಲು, ಉಪ್ಪು ಹಾಗೂ ಮೆಣಸು ಬೆರಸಿಕೊಳ್ಳಿ. ಚೆನ್ನಾಗಿ ಕಲೆಸಿ, ಕುದಿಸಿ. ಆನಂತರ ಸಣ್ಣ ಪ್ರಮಾಣದ ಶಾಖದಲ್ಲಿ 3-4 ನಿಮಿಷ ಕುದಿಸಿ. ಇದಕ್ಕೆ ಸಣ್ಣಗೆ ಕತ್ತರಿಸಿಕೊಂಡ ಪುದೀನಾ ಉದುರಿಸಿ. ಈಗ ರುಚಿಕಟ್ಟಾದ ರೆಡಿ. ಗರಿಗರಿಯಾದ ಬ್ರೆಡ್‌ ತುಂಡುಗಳನ್ನು ಹಾಕಿಕೊಂಡು, ಬಿಸಿಬಿಸಿಯಾಗಿ ಸವಿಯಿರಿ.

English summary

Carrot Soup an Indian vegetarian recipe

Carrot Soup an Indian vegetarian recipe
X
Desktop Bottom Promotion