For Quick Alerts
ALLOW NOTIFICATIONS  
For Daily Alerts

ಶುಂಠಿ ಚಹಾದ ರುಚಿ ಸವಿದಿದ್ದೀರಾ...?

By Super
|

ಚಹಾ ಮಸಾಲೆ ಹಾಕಿಕೊಂಡು ಶುಂಠಿ ಚಹಾ ಸವಿದರೆ, ಅದು ಆರೋಗ್ಯಕ್ಕೂ ಒಳ್ಳೆಯದು. ಅಲ್ಲದೆ ಒಂದು ವಿಶಿಷ್ಟ ರೀತಿಯ ಆಹ್ಲಾದವೂ ಸಿಗುತ್ತದೆ. ಈ ಆಹ್ಲಾದ ನಿಮಗೂ ಲಭಿಸಲಿ...

ಬೇಕಾಗುವ ಪದಾರ್ಥಗಳು :

3ಕಪ್‌ ನೀರು
3ಕಪ್‌ ಹಾಲು
3ಟೇಬಲ್‌ ಸ್ಪೂನ್‌ ಸಕ್ಕರೆ
ಒಂದೂವರೆಯಿಂದ ಮೂರು ಟೇಬಲ್‌ ಸ್ಪೂನ್‌ ತುಂಡರಿಸಿದ ತಾಜಾ ಶುಂಠಿ
1 ಟೇಬಲ್‌ ಸ್ಪೂನ್‌ ಚಹಾಪುಡಿ
3-4ಪುದೀನಾ ಎಲೆ(ಬೇಕಿದ್ದರೆ)

ಮಾಡುವ ವಿಧಾನ :

ಎಲ್ಲ ಪದಾರ್ಥಗಳನ್ನು ಪಾತ್ರೆಯಾಂದರಲ್ಲಿ ಹಾಕಿಕೊಂಡು ಚೆನ್ನಾಗಿ ಕುದಿಸಿ. ಆನಂತರ ಪಾತ್ರೆಯಾಂದರಲ್ಲಿ ಶೋಧಿಸಿಕೊಳ್ಳಿ. ಇಲ್ಲದಿದ್ದರೆ ನೇರವಾಗಿ ಕಪ್‌ಗಳಲ್ಲಿ ಶೋಧಿಸಿಕೊಳ್ಳಿ.

  • ಮೂರು ಟೇಬಲ್‌ ಸ್ಪೂನ್‌ ಶುಂಠಿಪುಡಿ
  • ಅರ್ಧ ಟೇಬಲ್‌ ಸ್ಪೂನ್‌ ಲವಂಗದ ಪುಡಿ
  • ಅರ್ಧ ಟೇಬಲ್‌ ಸ್ಪೂನ್‌ ಕರಿಮೆಣಸಿನ ಪುಡಿ
  • ಒಂದು ಟೇಬಲ್‌ ಸ್ಪೂನ್‌ ದಾಲ್ಚಿನ್ನಿ ಪುಡಿ
  • ಒಂದು ಟೇಬಲ್‌ ಸ್ಪೂನ್‌ ಏಲಕ್ಕಿ ಪುಡಿ

ಮೇಲ್ಕಂಡ ಪದಾರ್ಥಗಳಿಂದ ತಯಾರಿಸಿದ ಚಹಾ ಮಸಾಲೆಯನ್ನು ಕಪ್‌ನಲ್ಲಿರುವ ಚಹಾಗೆ ಹಾಕಿ ಚೆನ್ನಾಗಿ ಮಿಶ್ರಣಮಾಡಿಕೊಳ್ಳಿ. ಆಮೇಲೆ ಚಹಾ ಸೇವನೆ ಶುರುಮಾಡಿ.

X
Desktop Bottom Promotion