For Quick Alerts
ALLOW NOTIFICATIONS  
For Daily Alerts

ಆಲೂಮಟರ್ ಫ್ರೈ ರೆಸಿಪಿ

|

ಅಡುಗೆಗೆ ಆಲೂಗಡ್ಡೆ ಮತ್ತು ಬಟಾಣಿ ಸೂಪರ್ ಕಾಂಬಿನೇಷನ್. ಇವುಗಳಿಂದ ಆಲೂಮಟರ್ ಗ್ರೇವಿ, ಪರೋಟ, ಕಟ್ಲೇಟ್ ಹೀಗೆ ಅನೇಕ ಬಗೆಯ ಅಡುಗೆಗಳನ್ನು ತಯಾರಿಸಬಹುದು.

ಆಲೂಗಡ್ಡೆಗೆ ಬಟಾಣಿ ಹಾಕಿ ತಯಾರಿಸುವ ರುಚಿ, ಆಲೂಗಡ್ಡೆಗೆ ಬೇರೆ ಯಾವುದೇ ಪದಾರ್ಥ ಸೇರಿಸಿದರೂ ಬರುವುದಿಲ್ಲ. ಇಲ್ಲಿ ಸುಲಭದಲ್ಲಿ ತಯಾರಿಸಬಹುದಾದ ಆಲೂಮಟರ್ ಪಲ್ಯದ ರೆಸಿಪಿ ನೀಡಿದ್ದೇವೆ ನೋಡಿ.

Aloo Matar Fry

ಬೇಕಾಗುವ ಪದಾರ್ಥಗಳು
ಆಲೂಗಡ್ಡೆ 3-4( ಉಪ್ಪು ಹಾಕಿ ಬೇಯಿಸಿ ಸಿಪ್ಪೆ ಸುಲಿದಿದ್ದು)
ಈರುಳ್ಳಿ2 (ಕತ್ತರಿಸಿದ್ದು)
ಹಸಿ ಬಟಾಣಿ ಅರ್ಧ ಕಪ್( ಉಪ್ಪು ಹಾಕಿ ಬೇಯಿಸಿದ್ದು)
ಅರಿಶಿಣ ಪುಡಿ ಅರ್ಧ ಚಮಚ
ಖಾರದ ಪುಡಿ 1 ಚಮಚ
ಜೀರಿಗೆ ಅರ್ಧ ಚಮಚ
ರುಚಿಗೆ ತಕ್ಕ ಉಪ್ಪು
ಎಣ್ಣೆ 2 ಚಮಚ

ತಯಾರಿಸುವ ವಿಧಾನ:

ಎಣ್ಣೆಯನ್ನು ಬಿಸಿ ಮಾಡಿ, ಅದಕ್ಕೆ ಜೀರಿಗೆ ಹಾಕಿ ಒಂದು ನಿಮಿಷದ ಬಳಿಕ ಈರುಳ್ಳಿ ಹಾಕಿ ಕಂದು ಬಣ್ಣ ಬರುವವರೆಗೆ ಫ್ರೈ ಮಾಡಿ, ಈಗ ಬೇಯಿಸಿದ ಬಟಾಣಿ ಹಾಕಿ 2-3 ನಿಮಿಷ ಫ್ರೈ ಮಾಡಿ, ನಂತರ ಬೇಯಿಸಿದ ಆಲೂಗಡ್ಡೆ ಹಾಕಿ ಅರಿಶಿಣ ಪುಡಿ, ಖಾರದ ಪುಡಿ, ರುಚಿಗೆ ತಕ್ಕ ಉಪ್ಪು ಹಾಕಿ ಮಿಕ್ಸ್ ಮಾಡಿ, 2-3 ನಿಮಿಷ ಫ್ರೈ ಮಾಡಿದರೆ ಆಲೂ ಮಟರ್ ಫ್ರೈ ರೆಡಿ.

English summary

Aloo Matar Fry

Here is a simple dry aloo matar recipe to prepare using the seasonal vegetable, green peas. Aloo matar can either be dry or can have a thick gravy depending on what you wish to eat. Check out...
Story first published: Tuesday, November 12, 2013, 16:30 [IST]
X
Desktop Bottom Promotion