For Quick Alerts
ALLOW NOTIFICATIONS  
For Daily Alerts

ಕೊಬ್ರಿ ಹಾಲಿನ ತರಕಾರಿ ಪಲ್ಯ!

By * ನಿವೇದಿತಾ, ಬೆಂಗಳೂರು
|
Tasty coconut milk vegetable palya
ಎಲ್ಲ ಬಗೆಯ ಪಲ್ಯಗಳಲ್ಲೂ ಕೊಬ್ಬರಿಯನ್ನು ಸಾಮಾನ್ಯವಾಗಿ ಬಳಸುತ್ತೇವೆ. ಆದರೆ, ಇಲ್ಲಿ ಮಾಡುತ್ತಿರುವ ಹೊಸರುಚಿ ಮಾಮೂಲಿ ಪಲ್ಯದಂತಲ್ಲ. ಇದರಲ್ಲೇನಿದೆ ಮಹಾರುಚಿ ಎಂದು ರಾಗ ತೆಗೆಯದೆ, ಪಲ್ಯ ಮಾಡಿ. ಚಪಾತಿ, ದೋಸೆ, ರೊಟ್ಟಿ ಎಲ್ಲಕ್ಕೂ ಸೈ ಅನ್ನುತ್ತೆ ನಮ್ಮ ಕೊಬ್ರಿ ಹಾಲಿನ ತರಕಾರಿ ಪಲ್ಯ!

ಬೇಕಾಗುವ ಪದಾರ್ಥಗಳು :

1 ಬಟ್ಟಲು ಕೊಬ್ಬರಿ ಹಾಲು
3 ಆಲೂಗಡ್ಡೆ
1/2 ಕಪ್ ಬಟಾಣಿ ಕಾಳು
1/2 ಕಪ್ ಕ್ಯಾರೆಟ್(ದಪ್ಪವಾಗಿ ಹೆಚ್ಚಿದ)
ದೊಡ್ಡ ಗಾತ್ರದ 1 ಈರುಳ್ಳಿ
5 ಹಸಿಮೆಣಸಿನಕಾಯಿ (ಉದ್ದುದ್ದವಾಗಿ ಹೆಚ್ಚಿದ )
ಕರಿಬೇವು
5 ಲವಂಗ
5ರಿಂದ 6 ಕಾಳುಮೆಣಸು
1 ತುಣುಕು ಚಕ್ಕೆ
1 ಟೀ ಚಮಚ ಹೆಚ್ಚಿದ ಶುಂಠಿ
1 ಟೀ ಚಮಚ ಕೊಬ್ಬರಿ ಎಣ್ಣೆ

ತಯಾರಿಸುವ ವಿಧಾನ :

ಮೊದಲು ಆಲೂಗಡ್ಡೆ ಮತ್ತು ಕ್ಯಾರೆಟ್ಟನ್ನು ಸ್ವಲ್ಪ ದಪ್ಪದಪ್ಪವಾಗಿ ಹೆಚ್ಚಿಕೊಳ್ಳಿ, ಆನಂತರ ಈರುಳ್ಳಿ ಮತ್ತು ಹಸಿಮೆಣಸಿನಕಾಯಿಯನ್ನು ಉದ್ದುದ್ದಕ್ಕೆ ಹೆಚ್ಚಿಕೊಳ್ಳಿ.

ನಂತರ ಕುಕ್ಕರಿನಲ್ಲಿ ಆಲೂಗಡ್ಡೆ, ಕ್ಯಾರೆಟ್, ಬಟಾಣಿ ಕಾಳು, ಹೆಚ್ಚಿದ ಈರುಳ್ಳಿ ಮತ್ತು ರುಚಿಗೆ ತಕ್ಕಷ್ಟು ಉಪ್ಪು ಹಾಕಿ 3ರಿಂದ 4 ಕಪ್ಪು ನೀರನ್ನು ಸೇರಿಸಿ, 5 ನಿಮಿಷದವರೆಗೆ ಕುದಿಸಿ ಕುಕ್ಕರನ್ನು ಕೆಳಗಿಳಿಸಿ.

ಇನ್ನೊಂದೆಡೆ ಸ್ಟೋವ್ ಮೇಲೆ ಒಂದು ಬಾಣಲೆ ಇಟ್ಟು ಕೊಬ್ಬರಿ ಎಣ್ಣೆ ಹಾಕಿ. ಎಣ್ಣೆ ಕಾಯ್ದ ನಂತರ ಅದರಲ್ಲಿ ಸಾಸಿವೆ, ಜಿರಿಗೆ, ಕರಿಬೇವು, ಶುಂಠಿ, ಲವಂಗ, ಏಲಕ್ಕಿ, ಚಕ್ಕೆ, ಮೆಣಸು ಹಾಕಿ ಒಗ್ಗರಣೆ ಹಾಕಿಕೊಳ್ಳಿ. ಆನಂತರ ಮೊದಲೇ ಕುಕ್ಕರ್‌ನಲ್ಲಿ ಬೇಯಿಸಿಟ್ಟುಕೊಂಡ ಪದಾರ್ಥಕ್ಕೆ 1 ಕಪ್ಪು ಕೊಬ್ಬರಿ ಹಾಲನ್ನು ಹಾಕಿ ಚೆನ್ನಾಗಿ ಬೆರೆಸಿರಿ. ಆಮೇಲೆ ರುಚಿ ನೋಡಿ.

English summary

Tasty coconut milk vegetable palya - ಕೊಬ್ರಿ ಹಾಲಿನ ತರಕಾರಿ ಪಲ್ಯ!

Tasty coconut milk vegetable palya recipe. This can be eaten with chapati, rotti, dose etc.
Story first published: Wednesday, March 28, 2012, 12:51 [IST]
X
Desktop Bottom Promotion