Latest Updates
-
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್ -
ಡೇಟಿಂಗ್ ಆಪ್ಗಳಲ್ಲಿ ಹನಿ ಟ್ರ್ಯಾಪ್: ಮೊದಲ ಭೇಟಿಯಲ್ಲೇ ಹಣ ಕಳೆದುಕೊಳ್ಳದಿರಲು ಈ ಸುರಕ್ಷತಾ ಟಿಪ್ಸ್ ಪಾಲಿಸಿ -
ಉತ್ತರಾಖಂಡದಲ್ಲಿ ಭಾರಿ ಮಳೆ: IMD ರೆಡ್ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಪ್ರಾಣ ರಕ್ಷಣೆಗೆ ಈ ಮುನ್ನೆಚ್ಚರಿಕೆಗಳು ಕಡ್ಡಾಯ! -
ಎಚ್ಚರಿಕೆ! ಪ್ಯಾಕೆಟ್ ಆಹಾರದ ಮೇಲೆ 'ರೆಡ್ ಹೆಕ್ಸಾಗನ್': ನಿಮ್ಮ ಆರೋಗ್ಯಕ್ಕೆ ಅಪಾಯವಿದೆಯೇ? -
ದೆಹಲಿಯಲ್ಲಿ 'ಭಜನ್ ಕ್ಲಬ್ಬಿಂಗ್' ಹವಾ: ಮೋದಿಯವರೇ ಫಿದಾ, ಯುವಕರ ಹೊಸ ಕ್ರೇಜ್ಗೆ ಕಾರಣವೇನು? -
ವಿಶ್ವ ಹೃದಯ ದಿನಕ್ಕೆ ರೆಡಿಯಾಗಿ: 20 ನಿಮಿಷದ ಈ ಸಿಂಪಲ್ ವರ್ಕೌಟ್ ನಿಮ್ಮ ಸ್ಟ್ಯಾಮಿನಾ ಹೆಚ್ಚಿಸುತ್ತೆ!
ತೆಂಗಿನಕಾಯಿತುರಿ ಶುಂಠಿ ಗೊಜ್ಜು

ಬೇಕಾಗುವ ಸಾಮಾನುಗಳು
ಕಾಯಿ ತುರಿ 1 ದೊಡ್ಡ ಬಟ್ಟಲು,
ಹಸಿ ಶುಂಠಿ ಸ್ವಲ್ಪ
ಬೆಳ್ಳುಳ್ಳಿ 6 ಎಸಳು (ಆಪ್ಶನಲ್)
ಹಸಿಮೆಣಸಿನಕಾಯಿ 6
ಅರಿಶಿನಪುಡಿ 1/2 ಚಮಚ
ಎಣ್ಣೆ 1/2 ಬಟ್ಟಲು
ಸಾಸಿವೆ 1/2 ಚಮಚ
ಕಡಲೇಕಾಯಿಬೀಜ 2 ಚಮಚ
ಹೆಚ್ಚಿದ ಈರುಳ್ಳಿ 1/2 ಬಟ್ಟಲು
ಕರಿಬೇವು, ಕೊತ್ತಂಬರಿ ಸೊಪ್ಪು ಸ್ವಲ್ಪ
ರುಚಿಗೆ ತಕ್ಕಷ್ಟು ಉಪ್ಪು.
ಮಾಡುವ ವಿಧಾನ
ಕಾಯಿತುರಿ, ಶುಂಠಿ, ಬೆಳ್ಳುಳ್ಳಿ, ಹಸಿಮೆಣಸಿನಕಾಯಿ, ಅರಿಶಿನಪುಡಿ ಎಲ್ಲವನ್ನು ಮಿಕ್ಸಿಗೆ ಹಾಕಿ ರುಬ್ಬಿಟ್ಟುಕೊಳ್ಳಿ. ನೀರು ಜಾಸ್ತಿ ಹಾಕಬೇಡಿ. ಕಡಲೇಕಾಯಿ ಬೀಜವನ್ನು ಸ್ವಲ್ಪ ಎಣ್ಣೆಯಲ್ಲಿ ಕರಿದಿಟ್ಟುಕೊಳ್ಳಿ.
ಬಾಣಲೆಗೆ ಎಣ್ಣೆ ಹಾಕಿ ಸಾಸಿವೆ, ಕರಿಬೇವು, ಈರುಳ್ಳಿ, ಹಾಕಿ ಚೆನ್ನಾಗಿ ಬಾಡಿಸಿ ರುಬ್ಬಿದ ಮಿಶ್ರಣ, ಉಪ್ಪು ಹಾಕಿ ಚೆನ್ನಾಗಿ ಕುದಿಸಿ. ತಳ ಹತ್ತದಂತೆ ನೋಡಿಕೊಳ್ಳುವುದು ಸ್ಟೌ ಮುಂದೆ ನಿಂತವರ ಡ್ಯೂಟಿ.
ಕುದ್ದು ಗಟ್ಟಿ ಆದ ಮೇಲೆ ಕರಿದ ಕಡಲೇಕಾಯಿ ಬೀಜ, ಕೊತ್ತಂಬರಿ ಸೊಪ್ಪು ಹಾಕಿ ಮತ್ತೊಂದಿಷ್ಟು ಕೈಯಾಡಿಸಿ ಕೆಳಗಿಳಿಸಿ. ಬಿಸಿಬಿಸಿ ಅನ್ನ ಉಣ್ಣಲು ಇಷ್ಟವಿಲ್ಲದವರಿಗೆ ಆರಿದನ್ನದ ಜೊತೆ ತಿನ್ನಲು ನೀಡಿ. ಆರಿದನ್ನ ಮೆಲ್ಲಲು ಇಷ್ಟವಿಲ್ಲದವರು ಕುಕ್ಕರು ಇಳಿಸುತ್ತಿದ್ದ ಹಾಗೆ ತುಪ್ಪದ ಜೊತೆ ಅನ್ನ ಗೊಜ್ಜು ಜಮಾಯಿಸಿ.



Click it and Unblock the Notifications
