For Quick Alerts
ALLOW NOTIFICATIONS  
For Daily Alerts

ಊಟದ ರುಚಿಯನ್ನು ಹೆಚ್ಚಿಸುವ ಪಾಲಕ್ ಚಿಕನ್ ರೆಸಿಪಿ

|

ಅರೆ ಇದೇನಿದು, ಪಾಲಕ್ ಚಿಕನ್ ರೆಸಿಪಿ! ಆಶ್ಚರ್ಯವಾಯಿತೇ? ಹೌದು, ಇಂದು ನಾವು ರುಚಿಕರವಾದ ಪಾಲಕ್ ಚಿಕನ್ ರೆಸಿಪಿ ತಯಾರಿಸುವ ಬಗೆಯನ್ನು ನಿಮಗೆ ಹೇಳಿಕೊಡುತ್ತಿದ್ದೇವೆ. ಈ ರುಚಿಕರವಾದ ಚಿಕನ್ ರೆಸಿಪಿಯಲ್ಲಿ ಎಲ್ಲವೂ ರುಚಿಕರವಾಗಿದ್ದರು, ಕೂಡ ಇದರಲ್ಲಿ ಸ್ವಲ್ಪ ಕಹಿ ಇರುತ್ತದೆ ಎಂಬುದನ್ನು ಮರೆಯುವಂತಿಲ್ಲ..! ಹಾಗಾಗಿ ಪದಾರ್ಥಗಳ ಜೊತೆಗೆ ಸ್ವಲ್ಪ ಜೇನು ತುಪ್ಪ ಅಥವಾ ಸಕ್ಕರೆಯನ್ನು ಸೇರಿಸುವ ಮೂಲಕ ಇದನ್ನು ನೀವು ನಿವಾರಿಸಬಹುದು, ಬನ್ನಿ ಅದಕ್ಕೆ ಬೇಕಾದ ಪದಾರ್ಥಗಳನ್ನು ಮತ್ತು ತಯಾರಿಸುವ ಬಗೆಯನ್ನು ತಿಳಿದುಕೊಂಡು ಬರೋಣ.

ಖಾರ ಮತ್ತು ರುಚಿಕರವಾದ ಚಿಕನ್ ರೆಸಿಪಿ

ನಾಲ್ವರಿಗೆ ಬಡಿಸಬಹುದು
*ತಯಾರಿಕೆಗೆ ತಗುಲುವ ಸಮಯ : 15 ನಿಮಿಷಗಳು
*ಅಡುಗೆಗೆ ತಗುಲುವ ಸಮಯ : 20 ನಿಮಿಷಗಳು

Iron Rich Chicken Recipe With Spinach

ಅಗತ್ಯವಾದ ಪದಾರ್ಥಗಳು
*ಕೋಳಿ ಮಾಂಸ - 1 ಕೆ.ಜಿ
*ಪಾಲಕ್ - 1 ಕಟ್ಟು
*ಈರುಳ್ಳಿ - 1 ಕತ್ತರಿಸಿದಂತಹುದು
*ಬೆಳ್ಳುಳ್ಳಿ - 4
*ಅಡುಗೆ ಎಣ್ಣೆ - 2 ಟೀ.ಚಮಚ
*ಅರಿಶಿನ - 1 ಟೀ.ಚಮಚ
*ಖಾರದ ಪುಡಿ - 1 ಟೀ.ಚಮಚ
*ಜೀರಿಗೆ - 1 ಟೀ.ಚಮಚ
*ಕೊತ್ತಂಬರಿ - 1 ಟೀ.ಚಮಚ
*ರುಚಿಗೆ ತಕ್ಕಷ್ಟು ಉಪ್ಪು

ಆಹಾ, ತೆಂಗಿನ ಹಾಲು ಬೆರೆಸಿ ಮಾಡಿದ ಚಿಕನ್ ಕರಿ ರೆಸಿಪಿ

ತಯಾರಿಸುವ ವಿಧಾನ
1. ಕೋಳಿ ಮಾಂಸವನ್ನು ತೊಳೆದು ಸ್ವಚ್ಛಗೊಳಿಸಿ. ತದನಂತರ ಕೋಳಿ ಮಾಂಸದ ಚರ್ಮವನ್ನು ಸಂಪೂರ್ಣವಾಗಿ ತೆಗೆದು, ಪಕ್ಕಕ್ಕಿಡಿ.
2. ಇನ್ನು ಪಾಲಕ್ ಸೊಪ್ಪನ್ನು ತೊಳೆದು, ನೀರನ್ನು ಬಸಿಯಿರಿ.
3. ಈರುಳ್ಳಿ ಮತ್ತು ಬೆಳ್ಳುಳ್ಳಿಯನ್ನು ಕತ್ತರಿಸಿ ಪಕ್ಕದಲ್ಲಿಟ್ಟುಕೊಳ್ಳಿ.
4. ಒಂದು ಬಾಣಲೆಯಲ್ಲಿ ಎಣ್ಣೆಯನ್ನು ಕಾಯಿಸಿಕೊಳ್ಳಿ. ಇದಕ್ಕೆ ಬೆಳ್ಳುಳ್ಳಿಯನ್ನು ಹಾಕಿ ಕಂದು ಬಣ್ಣಕ್ಕೆ ಬರುವವರೆಗೆ ಹುರಿದುಕೊಳ್ಳಿ.
5. ಇದರ ಮೇಲೆ ಕತ್ತರಿಸಿದ ಈರುಳ್ಳಿಯನ್ನು ಹಾಕಿ, ಕಂದು ಬಣ್ಣಕ್ಕೆ ಬರುವವರೆಗೆ ಹುರಿದುಕೊಳ್ಳಿ.
6. ಎಲ್ಲಾ ಮಸಾಲೆ ಪದಾರ್ಥಗಳನ್ನು ಹಾಕಿ 2 ನಿಮಿಷ ಬಿಡಿ. ಇದರ ಮೇಲೆ 1 ಕಪ್ ನೀರನ್ನು ಹಾಕಿ ಪೇಸ್ಟ್ ರೀತಿ ಬಾಣಲೆಯಲ್ಲಿ ಕಲೆಸಿಕೊಳ್ಳಿ.
7. ಬಾಣಲೆಯಲ್ಲಿ ಒಮ್ಮೆ ಮಸಾಲೆಯಲ್ಲ ಸೇರಿದ ಮೇಲೆ, ಅದಕ್ಕೆ ಕೋಳಿ ಮಾಂಸವನ್ನು ಹಾಕಿ. ಸ್ಟೌವ್‌ನ ಉರಿಯನ್ನು ಹೆಚ್ಚು ಮಾಡಿಕೊಳ್ಳಿ. ಕೋಳಿ ಮಾಂಸವು ಮೃದುವಾಗುವವರೆಗೆ ಬೇಯಿಸಿ. ಅಗತ್ಯ ಬಿದ್ದರೆ ನೀರನ್ನು ಬೆರೆಸಿ.
8. ಯಾವಾಗ ಕೋಳಿ ಮಾಂಸವು ಬೆಂದಿತು ಎನಿಸುತ್ತದೆಯೋ, ಆಗ ಅದಕ್ಕೆ ಪಾಲಕ್ ಸೇರಿಸಿ. ಬಾಣಲೆಯ ಮುಚ್ಚಳವನ್ನು ಮುಚ್ಚಿ. ಮಧ್ಯಮ ಗಾತ್ರದ ಉರಿಯಲ್ಲಿ ಇವುಗಳನ್ನು ಬೇಯಿಸಿ.

ಪೋಷಕಾಂಶದ ಸಲಹೆ
ಕೋಳಿ ಮಾಂಸವು ತೂಕ ಕಳೆದುಕೊಳ್ಳುವವರಿಗೆ ಹೇಳಿ ಮಾಡಿಸಿದ ಆಹಾರವಾಗಿರುತ್ತದೆ. ತ್ವಚೆ ರಹಿತವಾಗಿ ಕೋಳಿ ಮಾಂಸವನ್ನು ಸೇವಿಸುವುದು ಒಳ್ಳೆಯದು.

ಸಲಹೆ
ಮಸಾಲೆಗಳು ಚೆನ್ನಾಗಿ ಬೇಯಲು ಬಿಡಿ. ಮಸಾಲೆಗಳು ಪಾಲಕ್ ಚಿಕನ್ ಖಾದ್ಯದ ರುಚಿಯನ್ನು ಹೆಚ್ಚಿಸುತ್ತವೆ.

English summary

Iron Rich Chicken Recipe With Spinach

Chicken is one of the most common meats everyone has a liking to. To add more flavour to your chicken dish, drop in a few spinach leaves. Spinach is another healthy leafy veggie which is rich in iron and calcium.
Story first published: Tuesday, March 24, 2015, 12:46 [IST]
X
Desktop Bottom Promotion