Just In
Don't Miss
- News
ಸಾಯುವ ಮುನ್ನಾ ಅತ್ಯಾಚಾರ ಸಂತ್ರಸ್ತೆ ಹೇಳಿದ ಕೊನೆಯ ಮಾತು
- Automobiles
ಇನ್ಮುಂದೆ ನಿಮ್ಮ ಮನೆ ಬಾಗಿಲಿಗೆ ಬರಲಿದೆ ಡೀಸೆಲ್..!
- Technology
ಹುವಾವೇ ಬ್ಯಾಂಡ್ 4 ಪ್ರೊ ಲಾಂಚ್ ಮಾಡಿದ ಹುವಾವೇ!
- Sports
ತಮಿಳುನಾಡು ಪ್ರೀಮಿಯರ್ ಲೀಗ್ನಲ್ಲಿ ನಡೆದ ಬೆಟ್ ಮೌಲ್ಯವೆಷ್ಟು ಗೊತ್ತ?!
- Movies
ಮೇಕಪ್ ಆರ್ಟಿಸ್ಟ್ ನಿಧನ: ಕಣ್ಣೀರಿಟ್ಟ ನಟಿ ಅನುಷ್ಕಾ ಶರ್ಮಾ ಮತ್ತು ಕತ್ರಿನಾ ಕೈಫ್
- Education
ರೆಪ್ಕೊ ಬ್ಯಾಂಕ್ ನಲ್ಲಿ 15 ಹುದ್ದೆಗಳ ನೇಮಕಾತಿ
- Finance
7,000 ರುಪಾಯಿ ಗುಜರಿ ಕಾರಿಗೆ 7 ಕೋಟಿ ಕೊಟ್ಟು ಖರೀದಿಸಿದ್ದ ಎಲಾನ್ ಮಸ್ಕ್
- Travel
ಹಿಮಾಚಲ ಪ್ರದೇಶದ ಈ ಜಲಪಾತಗಳು ನಿಮ್ಮನ್ನು ಬೇರೊಂದು ರಮ್ಯಲೋಕಕ್ಕೆ ಕೊಂಡೊಯ್ಯುವುದು ಖಂಡಿತ
ಕೊಂಚ ಖಾರ, ಸಕತ್ ರುಚಿ- 'ಸ್ಪೆಷಲ್ ಚಿಕನ್ ರೆಸಿಪಿ'!
ಈ ಬಾರಿಯ ಕ್ರಿಸ್‌ಮಸ್ ಮತ್ತು ಹೊಸ ವರ್ಷಕ್ಕಾಗಿ ಏನಾದರೂ ಹೊಸ ಬಗೆಯ ರುಚಿಯನ್ನು ಸಿದ್ಧ ಪಡಿಸಬೇಕೆನ್ನುವ ಯೋಜನೆಯಲ್ಲಿದ್ದೀರಾ? ಈ ಸಮಯದಲ್ಲಿ ಕೇಕ್ ಮತ್ತು ಇತರ ಸಿಹಿ ತಿನಿಸುಗಳು ಪ್ರಧಾನವಾಗಿದ್ದರೂ ಕೊಂಚ ಖಾರ ಕೂಡ ಬೇಕೇ ಬೇಕು. ಹೆಚ್ಚು ಸಿಹಿ ತಿಂದರೂ ಕೂಡ ಆಮೇಲೆ ಅದು ಇಷ್ಟವಾಗುವುದಿಲ್ಲ. ಇದಕ್ಕೆ ಬದಲಾಗಿ ನಡುವೆ ಕೊಂಚ ಖಾರವನ್ನು ಪ್ರಯತ್ನಿಸಿದರೆ ನಾಲಗೆಯ ಸ್ವಾದ ದುಪ್ಪಟ್ಟಾಗುತ್ತದೆ. ವಾವ್! ಲಿಂಬೆ ಹಣ್ಣಿನ ಚಿತ್ರಾನ್ನ ಜೊತೆ ಚಿಕನ್ ರೋಸ್ಟ್
ಹಾಗಿದ್ದರೆ ಇಂದು ಹೊಸ ಬಗೆಯಲ್ಲಿ ಹನಿ ರೋಸ್ಟೆಡ್ ತರಕಾರಿ ಚಿಕನ್ ರೆಸಿಪಿ ತಯಾರಿಸುವುದು ಹೇಗೆ ಎಂಬುದನ್ನು ತಿಳಿಸಿಕೊಡಲಿದ್ದೇವೆ. ಹೌದು ಹೆಸರು ಹೊಸ ಬಗೆಯದಾದರೂ ಇದನ್ನು ಸರಳವಾಗಿಯೇ ನಿಮಗೆ ಸಿದ್ಧಪಡಿಸಬಹುದಾಗಿದೆ. ನಿಮ್ಮ ಕ್ರಿಸ್‌ಮಸ್ ಪಾರ್ಟಿಯ ಮೋಜನ್ನು ಹಾಳುಮಾಡದೆಯೇ ಈ ಹನಿ ರೋಸ್ಟೆಡ್ ತರಕಾರಿ ಚಿಕನ್ ರೆಸಿಪಿ ತಯಾರಿಯನ್ನು ನೋಡೋಣ.
ಪ್ರಮಾಣ: 4
ಸಿದ್ಧತಾ ಸಮಯ: 20 ನಿಮಿಷಗಳು
ಅಡುಗೆಗೆ ಬೇಕಾದ ಸಮಯ: 20 ನಿಮಿಷಗಳು
ಸಾಮಾಗ್ರಿಗಳು
1. ಕುಂಬಳಕಾಯಿ ಸ್ಕ್ಯಾಷ್ - 100 ಗ್ರಾಮ್
2. ಜೀರಿಗೆ - 1
3. ಸಿಹಿ ಗೆಣಸು - 1
4. ಶತಾವರಿ - 4
5. ಬ್ರಕೋಲಿ - ಕೆಲವು ಕಿರುಹೂವು
6. ಸಣ್ಣ ಕೆಂಪು ಈರುಳ್ಳಿ - 2
7. ಆಲೀವ್ ಆಯಿಲ್ - 4 ಚಮಚ
8. ಕ್ಯಾರೇಟ್ - 4
9. ರೋಸ್‌ಮೇರಿ - 2-3 ಚಿಗುರುಗಳು
10. ಚಿಕನ್ - 800 ಗ್ರಾಮ್ಸ್
11. ಉಪ್ಪು ರುಚಿಗೆ ತಕ್ಕಷ್ಟು
12. ಜೇನು - 100 ಮಿಲಿ
13. ಬೆಳ್ಳುಳ್ಳಿ - 5-6 ಎಸಳು (ಕತ್ತರಿಸಿದ್ದು)
14. ಸಾಸಿವೆ - 1/2 ಚಮಚ
15. ಕರಿಮೆಣಸು - 1 ಚಮಚ
16. ನಿಂಬೆ ರಸ - 2 ಚಮಚ
ಮಾಡುವ ವಿಧಾನ:
1. ಮೊದಲಿಗೆ ಚಿಕನ್ ಅನ್ನು ನೆನೆಯಿಸಿಕೊಳ್ಳಿ. ಒಂದು ಪಾತ್ರೆಯನ್ನು ತೆಗೆದುಕೊಂಡು ಇದಕ್ಕೆ ಸಾಸಿವೆ ಪೇಸ್ಟ್, ಆಲೀವ್ ಆಯಿಲ್, ಜೇನು, ಬೆಳ್ಳುಳ್ಳಿ, ಉಪ್ಪು ಮತ್ತು ಕಾಳು ಮೆಣಸನ್ನು ಸೇರಿಸಿಕೊಳ್ಳಿ. ಚೆನ್ನಾಗಿ ಎಲ್ಲವನ್ನೂ ಮಿಶ್ರ ಮಾಡಿ.
2.ಈಗ, ಮ್ಯಾರಿನೇಟ್ ಮಾಡಿರುವುದಕ್ಕೆ ರೋಸ್‌ಮೇರಿ ಮತ್ತು ಚಿಕನ್ ಅನ್ನು ಹಾಕಿ ಪುನಃ ಎಲ್ಲವನ್ನೂ ಮಿಶ್ರ ಮಾಡಿ. ಒಂದು ಗಂಟೆಯಷ್ಟು ಕಾಲ ನೆನೆಯಲು ಬಿಡಿ. ರಾತ್ರಿಗೆ ನೀವು ಈ ಖಾದ್ಯವನ್ನು ತಯಾರಿಸುತ್ತೀರಿ ಎಂದಾದಲ್ಲಿ ಬೆಳಗ್ಗೆಯೇ ನೆನೆಯಿಸಿಕೊಳ್ಳಿ.
3.ಈಗ, ಬೇಕಿಂಗ್ ಟ್ರೇಯನ್ನು ತೆಗೆದುಕೊಳ್ಳಿ ಮತ್ತು ಆಲೀವ್ ಆಯಿಲ್ ಹಚ್ಚಿ. ಉಪ್ಪು, ಜೇನು, ಬೆಳ್ಳುಳ್ಳಿ ಮತ್ತು ಕಾಳು ಮೆಣಸನ್ನು ಸೇರಿಸಿ ಚೆನ್ನಾಗಿ ಎಲ್ಲವನ್ನೂ ಮಿಶ್ರ ಮಾಡಿಕೊಳ್ಳಿ.
4.ಎಲ್ಲಾ ತರಕಾರಿಗಳನ್ನು ಮಿಶ್ರ ಮಾಡಿಕೊಳ್ಳಿ ಮತ್ತು ಮಿಶ್ರಣದಲ್ಲಿ ಇವುಗಳನ್ನು ನೆನೆಯಿಸಿ
5.ತರಕಾರಿಗಳೊಂದಿಗೆ ಮ್ಯಾರಿನೇಟ್ ಮಾಡಿದ ಚಿಕನ್ ಸೇರಿಸಿ ಮತ್ತು ಎಲ್ಲವನ್ನೂ 20-25 ನಿಮಿಷಗಳ ಕಾಲ ಬೇಕ್ ಮಾಡಿ ತಾಪಮಾನ 220 ಡಿಗ್ರಿ ಸೆಲ್ಶಿಯಸ್‌ನಲ್ಲಿರಲಿ.
6.ಜೇನು ರೋಸ್ಟೆಡ್ ಚಿಕನ್ ಮತ್ತು ತರಕಾರಿಗಳನ್ನು ನಿಮಗೆ ಈಗ ಉಣಬಡಿಸಬಹುದಾಗಿದೆ. ಖಾದ್ಯವನ್ನು ಎಲ್ಲಾ ತರಕಾರಿಗಳೊಂದಿಗೆ ಸಿದ್ಧಪಡಿಸಿ ಮತ್ತು ಚಿಕನ್ ಅನ್ನು ಬಿಸಿಬಿಸಿಯಾಗಿ ಉಣಬಡಿಸಿ.
ಕ್ರಿಸ್‌ಮಸ್ ಸಿದ್ಧತೆಗಾಗಿ ಈ ಖಾದ್ಯವನ್ನು ನೀವು ಇಷ್ಟಪಡುವುದು ಖಂಡಿತ. ಇದರ ಜೊತೆಗೆ ಗಾರ್ಲಿಕ್ ಬೆಳ್ಳುಳ್ಳಿಯನ್ನು ಸಿದ್ಧಪಡಿಸಿಕೊಂಡು ಕೆಂಪು ವೈನ್‌ನೊಂದಿಗೆ ಹೊಸ ವರ್ಷವನ್ನು ಸ್ವಾಗತಿಸುವ ಕ್ರಿಯೆಯನ್ನು ಮಾಡಬಹುದಾಗಿದೆ.