Latest Updates
-
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ
ವಾವ್! ಲಿಂಬೆ ಹಣ್ಣಿನ ಚಿತ್ರಾನ್ನ ಜೊತೆ ಚಿಕನ್ ರೋಸ್ಟ್
ರುಚಿಯಾದ ಅಡುಗೆಗಳನ್ನು ತಿನ್ನುವಾಗ ಎಲ್ಲಿ ತೂಕ ಹೆಚ್ಚುತ್ತದೆಯೋ ಎಂಬ ಆತಂಕದಿಂದ ಹೆಚ್ಚು ತಿನ್ನಲು ಸಾಧ್ಯವಾಗುವುದಿಲ್ಲ. ಆದರೆ ಕೆಲವು ಆಹಾರಗಳು ತೂಕವನ್ನು ಅತಿ ಹೆಚ್ಚಾಗಿ ಹೆಚ್ಚಿಸುವುದಿಲ್ಲವಾದುದರಿಂದ ನಿಶ್ಚಿಂತೆಯಾಗಿ ಊಟ ಮಾಡಬಹುದು. ಹುರಿದ ಕೋಳಿ (ಚಿಕನ್ ರೋಸ್ಟ್) ಮತ್ತು ಲಿಂಬೆ ಹಣ್ಣಿನ ಚಿತ್ರಾನ್ನ (ಲೆಮನ್ ರೈಸ್) ಸಹಾ ಇಂತಹ ಒಂದು ಖಾದ್ಯವಾಗಿದ್ದು ರುಚಿಯಲ್ಲಿ ಹೆಚ್ಚು ಮತ್ತು ಕೊಬ್ಬಿನಲ್ಲಿ ಕಡಿಮೆ ಇರುವುದರಿಂದ ಸ್ಥೂಲಕಾಯಿ ಹೊಂದಿರುವವರಿಗೆ ಸೂಕ್ತವಾದ ಆಹಾರವಾಗಿದೆ.
ದೇಹದ ತಾಪಮಾನವನ್ನು ಕಡಿಮೆಗೊಳಿಸುವ ಗುಣದಿಂದಾಗಿ ಈ ಖಾದ್ಯ ಬೇಸಿಗೆಯಲ್ಲಿ ಸೇವಿಸಲು ಉತ್ತಮವಾದ ಆಯ್ಕೆಯಾಗಿದೆ. ಅನ್ನ, ಲಿಂಬೆ ಮತ್ತು ಕೋಳಿಮಾಂಸದ ಈ ಸಂಯೋಜನೆ ಹೆಚ್ಚಿನವರಿಗೆ ಹೊಸದಾಗಿದ್ದು ನೂತನ ಅನುಭವ ನೀಡುತ್ತದೆ.
ಪ್ರಮಾಣ: ಇಬ್ಬರಿಗೆ ಸಾಕಾಗುವಷ್ಟು
ಸಿದ್ಧತಾ ಸಮಯ: ಹದಿನೈದು ನಿಮಿಷಗಳು
ತಯಾರಿಕಾ ಸಮಯ: ಇಪ್ಪತ್ತು ನಿಮಿಷಗಳು

ಅಗತ್ಯವಿರುವ ಸಾಮಾಗ್ರಿಗಳು:
*ಬೇಯಿಸಿದ ಅಕ್ಕಿ - 1 ಕಪ್ (ಬಾಸ್ಮತಿ ಆದರೆ ಉತ್ತಮ)
*ಮೂಳೆರಹಿತ ಕೋಳಿ ಮಾಂಸ - 500 ಗ್ರಾಂ (ಪೆಪ್ಪರ್ ರೋಸ್ಟ್ ಮಾಡಿದ್ದು)
*ಲಿಂಬೆಹಣ್ಣಿನ ರಸ - 4 ದೊಡ್ಡಚಮಚ (ಬೀಜ ರಹಿತವಾಗಿಸಿದ್ದು)
*ಹಳದಿ ಪುಡಿ- ½ ಚಿಕ್ಕ ಚಮಚ
*ಬೇವಿನ ಎಲೆ - 5 ಎಲೆಗಳು
*ಈರುಳ್ಳಿ (ಮಧ್ಯಮಗಾತ್ರ) - 1 (ಚಿಕ್ಕದಾಗಿ ಹೆಚ್ಚಿದ್ದು)
*ಸಾಸಿವೆ - 1 ದೊಡ್ಡಚಮಚ
*ಹಸಿಮೆಣಸು - ದೊಡ್ಡದಾದರೆ 1, ಚಿಕ್ಕದಾದರೆ 2 (ಉದ್ದಕ್ಕೆ ಸೀಳಿದ್ದು)
*ಅಡುಗೆ ಎಣ್ಣೆ - 2 ದೊಡ್ಡಚಮಚ
*ಉಪ್ಪು - ರುಚಿಗನುಸಾರ
ವಿಧಾನ:
*ಮಧ್ಯಮಗಾತ್ರದ, ದಪ್ಪತಳದ ಬಾಣಲೆಯಲ್ಲಿ ಎಣ್ಣೆ ಹಾಕಿ ಮಧ್ಯಮ ಉರಿಯಲ್ಲಿ ಬಿಸಿಮಾಡಿ. ಬಿಸಿಯಾದ ಎಣ್ಣೆಯಲ್ಲಿ ಸಾಸಿವೆ ಸಿಡಿಸಿ.
*ಈಗ ಉರಿಯನ್ನು ಚಿಕ್ಕದಾಗಿಸಿ ಸೀಳಿದ ಹಸಿಮೆಣಸು, ಬೇವಿನ ಎಲೆ ಹಾಕಿ ಹುರಿಯಿರಿ
*ಈಗ ಹೆಚ್ಚಿದ ನೀರುಳ್ಳಿಹಾಕಿ ಕಂದು ಬಣ್ಣ ಬರುವವರೆಗೆ ತಿರುವಿ
*ಇನ್ನು ಹುರಿದಿರುವ ಕೋಳಿಮಾಂಸದ ತುಂಡುಗಳನ್ನು ಹಾಕಿ ತಿರುವಿ. ಸುಮಾರು ಎರಡು ಮೂರು ನಿಮಿಷ ತಿರುವುತ್ತಾ ಇರಿ ಬಳಿಕ ಅರಿಶಿನ ಪುಡಿ ಸೇರಿಸಿ ತಿರುವಿ
*ತದನಂತರ ಅನ್ನವನ್ನು ಹಾಕಿ ಉಪ್ಪು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ
*ಮಿಶ್ರಣ ಚೆನ್ನಾಗಿ ಬಂದಿದೆ ಎಂದು ಅನಿಸಿದ ಬಳಿಕ ಲಿಂಬೆರಸವನ್ನು ಹಾಕಿ ಒಂದೆರಡು ಬಾರಿ ಮಾತ್ರ ತಿರುವಿ (ಹೆಚ್ಚು ತಿರುವಿದರೆ ಕಹಿಯಾಗುತ್ತದೆ) ಬಳಿಕ ಮುಚ್ಚಳವನ್ನು ಮುಚ್ಚಿ ಕೆಲನಿಮಿಷ ಮಂದವಾದ ಉರಿಯಲ್ಲಿ ಬೇಯಿಸಿ
*ಬಳಿಕ ಉರಿಯನ್ನು ನಂದಿಸಿ ಮುಚ್ಚಳ ತೆರೆಯದೇ ಹಾಗೇ ಕೆಲ ನಿಮಿಷ ಬಿಡಿ. ಬಳಿಕ ಮುಚ್ಚಳ ತೆರೆದು ಆವಿ ಹೊರಹೋಗಲು ಬಿಡಿ. ಇನ್ನೊಂದು ಬಾರಿ ತಿರುವಿ ಬಡಿಸಿ.
ಪೆಪ್ಪರ್ ರೋಸ್ಟ್ ಮಾಡುವ ಬಗೆ:
*ಮೂಳೆರಹಿತ ಮಾಂಸದ ತುಂಡುಗಳನ್ನು ಕೊಂಚ ಶುಂಠಿ ಮತ್ತು ಬೆಳ್ಳುಳ್ಳಿ ಪೇಸ್ಟ್ ಮತ್ತು ಖಾರಕ್ಕೆ ತಕ್ಕಷ್ಟು ಕಾಳುಮೆಣಸಿನ ಪುಡಿಯನ್ನು ಸೇರಿಸಿ ಕೊಂಚ ಕಾಲ ಇಡಿ. ಬಳಿಕ ಎಣ್ಣೆಯಲ್ಲಿ ಚಿಕ್ಕ ಉರಿಯಲ್ಲಿ ಕೆಂಪಗಾಗುವವರೆಗೆ ಹುರಿಯಿರಿ. ಎಣ್ಣೆಯಿಂದ ಹೊರತೆಗೆದ ಬಳಿಕ ಬಿಳಿಯ ಟಿಶ್ಯೂ ಕಾಗದ ಅಥವಾ ಬಟ್ಟೆಯಲ್ಲಿ ಹರಡಿ ಎಣ್ಣೆ ಇಂಗುವಂತೆ ಮಾಡಿ. ಪೂರ್ಣವಾಗಿ ತಣಿಯುವ ಮೊದಲೇ ಅಡುಗೆಯಲ್ಲಿ ಬಳಸಿ (ತಣ್ಣಗಾದರೆ ಗಟ್ಟಿಯಾಗುತ್ತದೆ)
ಸಲಹೆ 1: ಈ ಖಾದ್ಯದಲ್ಲಿ ಎಳೆಯ ಕೋಳಿಮಾಂಸವನ್ನು ಉಪಯೋಗಿಸಿರುವುದರಿಂದ ಉತ್ತಮ ಪ್ರಮಾಣದ ಪ್ರೋಟೀನ್ ಇದ್ದು ಆರೋಗ್ಯ ಮತ್ತು ರೋಗ ನಿರೋಧಕ ಶಕ್ತಿ ಹೆಚ್ಚಿಸಲು ನೆರವಾಗುತ್ತದೆ.
ಸಲಹೆ 2: ಕಾಳುಮೆಣಸಿನ ಪುಡಿಯ ಬದಲಿಗೆ ಇಡಿಯ ಕಾಳುಮೆಣಸನ್ನೂ ಉಪಯೋಗಿಸಬಹುದು. ಇದು ಕೊಂಚ ಭಿನ್ನವಾದ ರುಚಿಯನ್ನು ನೀಡುತ್ತದೆ.
ಸಲಹೆ 3: ಅನ್ನದೊಂದಿಗೆ ಹುರಿದ ಶೇಂಗಾಬೀಜಗಳನ್ನು ಸಹಾ ಸೇರಿಸಬಹುದು. ಇದು ನಡುನಡುವೆ ಹಲ್ಲಿಗೆ ಸಿಕ್ಕಿದಾಗ ವಿಶಿಷ್ಟ ರುಚಿಯನ್ನು ನೀಡುತ್ತದೆ.



Click it and Unblock the Notifications
