For Quick Alerts
ALLOW NOTIFICATIONS  
For Daily Alerts

ಮಣ್ಣಿನ ಮಡಿಕೆಯಲ್ಲಿ ಮಾಡಿದ 'ಮೀನಿನ ಕರಿ'- ಅದೇನು ರುಚಿ ಅಂತೀರಾ?

By Arshad
|

ಅಡುಗೆಯಲ್ಲಿ, ವಿಶೇಷವಾಗಿ ಮಾಂಸದ ಅಡುಗೆಯ ರುಚಿ ಅಡುಗೆ ಮಾಡುವ ಪಾತ್ರೆಯನ್ನು ಅವಲಂಬಿಸಿರುತ್ತದೆ ಎಂದು ನಿಮಗೆ ಗೊತ್ತೇ? "ಬ್ಯಾಂಬೂ ಚಿಕನ್" ಅಥವಾ ಬಿದಿರಿನ ಚಿಕನ್ ಬಗ್ಗೆ ಕೇಳಿದ್ದೀರಾ? ಇದು ಎಲ್ಲಾ ಅಡುಗೆಗಳಿಗಿಂತಲೂ ಭಿನ್ನವಾಗಿದ್ದು ನಾನ್ ಸ್ಟಿಕ್ ಬಾಣಲಿಯ ಮೇಲೆ ತಯಾರಾಗುತ್ತದೆ.

ಇಂದಿನ ಯುವಜನತೆಗೆ ಇಷ್ಟವಾಗುವ ಫಾಸ್ಟ್ ಫುಡ್‌ಗಿಂತಲೂ ನಮ್ಮ ಅಜ್ಜಿಯರು ತಮ್ಮ ಹಿಂದಿನ ವಿಧಾನದ ಮೂಲಕ ಕೊಂಚ ನಿಧಾನವಾಗಿಯಾದರೂ ಸರಿ, ತುಂಬಾ ರುಚಿಯಾದ ಅಡುಗೆಗಳನ್ನು ಮಾಡುತ್ತಿದರಲ್ಲ? ಇವರ ಅಡುಗೆಯ ರುಚಿಗೆ ಪ್ರಮುಖ ಕಾರಣವೆಂದರೆ ಇವರು ಬಳಸುತ್ತಿದ್ದ ಪಾತ್ರೆ ಅಥವಾ ಮಣ್ಣಿನ ಮಡಿಕೆ. ಇವರು ಮಣ್ಣಿನ ಮಡಿಕೆಯಲ್ಲಿ ಮೀನು, ಮಾಂಸದ ಹಲವಾರು ಅಡುಗೆಗಳನ್ನು ಮಾಡುತ್ತಿದ್ದು ಇದರ ರುಚಿ ನಮ್ಮ ಬಾಲ್ಯವನ್ನು ನೆನೆಸುವಂತಿರುತ್ತದೆ.

ಇಂದಿನ ಗಡಿಬಿಡಿಯ ದಿನಗಳಲ್ಲಿ ಮಡಿಕೆ ನಮ್ಮ ಅಡುಗೆ ಮನೆಗಳಿಂದ ಬಿಡಿ, ಮಾರುಕಟ್ಟೆಯಿಂದಲೇ ಮಾಯವಾಗಿದೆ. ಮಡಿಕೆಯಲ್ಲಿ ಅಡುಗೆ ಮಾಡಲು ತುಂಬಾ ಹೊತ್ತು ಬೇಕೆಂಬುದೇ ಇದರ ಬಳಕೆಗೆ ಇಂದಿನವರು ನೀಡುವ ಮೊದಲ ನೆಪ! ತುಂಬಾ ಹೊತ್ತು ತೆಗೆದುಕೊಂಡರೂ ಹಿಂದಿನ ದಿನದ ರುಚಿಯನ್ನು ಮತ್ತೊಮ್ಮೆ ಪಡೆಯಲು ಈ ಮಡಿಕೆಯ ಅಡುಗೆಯೊಂದನ್ನು ಇಂದೇಕೆ ಪ್ರಯತ್ನಿಸಬಾರದು? ಈ ಮೂಲಕ ನಮ್ಮ ಮಕ್ಕಳಿಗೂ ಹಿಂದಿನ ಸಂಸ್ಕೃತಿಯ ಪರಿಚಯ ಮಾಡಿಕೊಟ್ಟಂತಾಗುತ್ತದೆ ಅಲ್ಲವೇ? ಬನ್ನಿ, ನಿಮ್ಮ ಯೋಚನೆ ಈ ಅಡುಗೆ ಪ್ರಯತ್ನಿಸೋಣ ಎಂಬಲ್ಲಿ ತಿರುಗಿದರೆ ಕೆಳಗಿನ ರೆಸಿಪಿ ನಿಮಗೆ ನೆರವಾಗಲಿದೆ.

ಬಾಯಲ್ಲಿ ನೀರೂರಿಸುವ ಮೀನಿನ ಸಾರು

ಪ್ರಮಾಣ: ನಾಲ್ವರಿಗೆ, ಒಂದು ಹೊತ್ತಿಗಾಗುವಷ್ಟು

ಸಿದ್ಧತಾ ಸಮಯ: ಇಪ್ಪತ್ತು ನಿಮಿಷಗಳು

ತಯಾರಿಕಾ ಸಮಯ: 25 ರಿಂದ 30 ನಿಮಿಷಗಳು

ಅಗತ್ಯವಿರುವ ಸಾಮಾಗ್ರಿಗಳು

*ಮೀನು - 4 (ಮಧ್ಯಮ ಅಥವಾ ಚಿಕ್ಕ ಗಾತ್ರದ, ಇಡಿಯ, ನಿಮ್ಮ ಆಯ್ಕೆಯ ಯಾವುದೇ ತಾಜಾ ಮೀನು)

*ಹಸಿಶುಂಠಿ - ½ ಚಿಕ್ಕ ಚಮಚ (ಚಿಕ್ಕದಾಗಿ ಹೆಚ್ಚಿದ್ದು)

*ಈರುಳ್ಳಿ - 5-8 (ಹೆಚ್ಚಿದ್ದು)

*ಬೆಳ್ಳುಳ್ಳಿ - 5-8 ಎಸಳು (ಹೆಚ್ಚಿದ್ದು)

*ಕರಿಬೇವು - 1 ಇಡಿಯ ಎಲೆ

*ಹುಣಸೆಹುಳಿಯ ರಸ - ½ ಕಪ್

*ಕೊಬ್ಬರಿ ಎಣ್ಣೆ - 2 ದೊಡ್ಡ ಚಮಚ

*ಟೊಮೇಟೋ- 1 (ಹೆಚ್ಚಿದ್ದು)

*ಕೆಂಪು ಮೆಣಸಿನ ಪುಡಿ - 2 ಚಿಕ್ಕಚಮಚ

*ಧನಿಯ ಪುಡಿ - ¾ ಚಿಕ್ಕಚಮಚ

*ಕಾಳುಮೆಣಸಿನ ಪುಡಿ - ½ ಚಿಕ್ಕಚಮಚ

*ಅರಿಶಿನ ಪುಡಿ - ¼ ಚಿಕ್ಕಚಮಚ

*ಉಪ್ಪು ರುಚಿಗನುಸಾರ ಬಂಗುಡೆ ಮೀನಿನ ರಸಂ-ಆಹಾ ಅದೆಂಥ ರುಚಿ...

ವಿಧಾನ:

*ಮೊದಲು ಮೀನನ್ನು ಚೆನ್ನಾಗಿ ತೊಳೆದು ಸ್ವಚ್ಛಗೊಳಿಸಿ, ಒಳಭಾಗದಲ್ಲಿ ಯಾವುದೇ ಅಂಗ ಅಥವಾ ರಕ್ತ ಇರದಂತೆ ನೋಡಿಕೊಳ್ಳಿ.

ಒಂದು ಪಾತ್ರೆಯಲ್ಲಿ ಎಲ್ಲಾ ಮಸಾಲೆ ಪದಾರ್ಥಗಳನ್ನು ಅಂದರೆ, ಈರುಳ್ಳಿಯ ಅರ್ಧ ಭಾಗ, ಧನಿಯ ಪುಡಿ, ಮೆಣಸಿನ ಪುಡಿ, ಅರಿಶಿನ ಪುಡಿ, ಕಾಳುಮೆಣಸಿನ ಪುಡಿ, ಉಪ್ಪು ಟೊಮೇಟೋ ಎಲ್ಲವನ್ನೂ ಬ್ಲೆಂಡರಿನಲ್ಲಿ ಹಾಕಿ ನುಣ್ಣಗೆ ರುಬ್ಬಿಕೊಳ್ಳಿ.

*ಈಗ ಮಡಿಕೆಯನ್ನು ಚೆನ್ನಾಗಿ ಸ್ವಚ್ಛಗೊಳಿಸಿಕೊಂಡು ಪಾತ್ರೆಯ ಮೇಲಿಟ್ಟು ಬಿಸಿಮಾಡಿ.

*ಕೊಂಚ ಬಿಸಿಯಾದ ಬಳಿಕ ಎಣ್ಣೆ ಹಾಕಿ ಒಂದು ಈರುಳ್ಳಿ, ಬೆಳ್ಳುಳ್ಳಿ, ಶುಂಠಿ ಹಾಕಿ ಈರುಳ್ಳಿ ಕೆಂಪಗಾಗುವವರೆಗೆ ಬಾಡಿಸಿ.

*ಬಳಿಕ ಮಿಕ್ಸಿಯಲ್ಲಿ ಕಡೆದಿದ್ದ ಮಸಾಲೆಯನ್ನು ಹಾಕಿ ಚೆನ್ನಾಗಿ ಮಿಶ್ರಣ ಮಾಡಿ. ಮಧ್ಯಮ ಉರಿಯಲ್ಲಿ ಈ ಮಸಾಲೆಯಿಂದ ಎಣ್ಣೆ ಬಿಡುವವರೆಗೂ ತಿರುವುತ್ತಿರಿ.

*ಇನ್ನು ಹುಣಸೆ ರಸ ಬೆರೆಸಿ ಮಿಶ್ರಣ ಮಾಡಿ. ನಿಮ್ಮ ಆದ್ಯತೆ ತಕ್ಕಷ್ಟು ನೀರು ಸೇರಿಸಿ ನಡುನಡುವೆ ತಿರುವುತ್ತಾ ಕುದಿಸಿ. ನೀರು ಕುದಿಯಲು ಆರಂಭವಾದ ಬಳಿಕ ಮೀನು ಮತ್ತು ಕರಿಬೇವಿನ ಎಲೆಗಳನ್ನು ಹಾಕಿ ಮುಚ್ಚಳ ಮುಚ್ಚಿ ಮೀನು ಬೇಯುವವರೆಗೂ ಮಧ್ಯಮ ಉರಿಯಲ್ಲಿ ಕುದಿಸಿ.

*ಕೆಲವು ನಿಮಿಷಗಳ ಬಳಿಕ ಸಾರಿನ ರುಚಿಯನ್ನು ನೋಡಿ ಅಗತ್ಯವೆನಿಸಿದಷ್ಟು ಉಪ್ಪು ಸೇರಿಸಿ.

*ಮೀನು ಬೆಂದಿದೆ ಎಂದು ಖಾತ್ರಿಯಾದ ಬಳಿಕ ಮಡಕೆಯನ್ನು ಬೆಂಕಿಯ ಮೇಲಿನಿಂದ ನಿವಾರಿಸಿ ಬೇರೆಡೆ ಇರಿಸಿ.

*ಈ ಸಾರನ್ನು ತಕ್ಷಣವೇ ಬಡಿಸದೇ ಒಂದು ಘಂಟೆಯಾದರೂ ಹೀಗೇ ಇರುವಂತೆ ನೋಡಿಕೊಳ್ಳಿ. ಬಳಿಕ ಬಡಿಸಿ. ಅಜ್ಜಿಯ ಮೀನಿನ ಸಾರಿನ ರುಚಿಯನ್ನು ನಿಮ್ಮ ಮನೆಯ ಸದಸ್ಯರು ಮೆಚ್ಚದೇ ಇರಲಾರರು.

ಮೀನಿನ ಮುಳ್ಳು ಗಂಟಲಿನಲ್ಲಿ ಸಿಲುಕಿ ಕೊಂಡರೆ ಆತಂಕ ಪಡದಿರಿ!

English summary

Grandma Fish Curry Recipe In Mud Pot

Mud pot fish curry is one of those traditional methods of cooking that is not common today in this urban lifestyle. Why not bring back all the memories of the past and present this Grandma style fish curry recipe in a mud pot to the younger generation? Well, here are the ingredients you would require and the procedure that you should follow. Take a look.
X