For Quick Alerts
ALLOW NOTIFICATIONS  
For Daily Alerts

ಬಂಗುಡೆ ಮೀನಿನ ರಸಂ-ಆಹಾ ಅದೆಂಥ ರುಚಿ...

By Super
|

ರಸಂ ಎಂದಾಕ್ಷಣ ನೀರೇ ಹೆಚ್ಚಿರುವ ಖಾರವಾದ ಸಾರು ಬಾಯಲ್ಲಿ ನೀರೂರಿಸುತ್ತದೆ. ಕರ್ನಾಟಕದ ಹೆಚ್ಚಿನ ಭಾಗದಲ್ಲಿ ಇದನ್ನು ತಿಳಿಸಾರು ಎಂದೂ ಕರೆಯುತ್ತಾರೆ. ಸಾಮಾನ್ಯವಾಗಿ ಸಸ್ಯಾಹಾರಿ ಊಟದ ಒಂದು ಅಂಗವಾಗಿರುವ ರಸಂ ಮಾಂಸಾಹಾರದೊಂದಿಗೆ ಸೇವಿಸಲು ಇದುವರೆಗೆ ಕೇವಲ ಕೇರಳ ಮತ್ತು ಮಂಗಳೂರು ಕಡೆಯವರು ಮಾತ್ರ ತಯಾರಿಸುತ್ತಿದ್ದರು ಎಂದರೆ ಅಚ್ಚರಿಯಾಗುತ್ತದೆ. ಆದರೆ ಈಗ ಈ ರಸಂ ಮಾಡುವ ವಿಧಾನ ಕೆಳಗೆ ನೀಡಲಾಗಿದ್ದು ಈ ರುಚಿಯನ್ನು ನೀವೂ ಸವಿಯಬಹುದು.

ಒಮೆಗಾ 3 ಕೊಬ್ಬಿನ ತೈಲ ವಿಪುಲವಾಗಿರುವ ಬಂಗುಡೆ ಮೀನಿನ ರಸಂ ಮಾಡುವ ವಿಧಾನ ಲಭ್ಯವಿದ್ದು ರುಚಿ ಮತ್ತು ಆರೋಗ್ಯ ಎರಡನ್ನೂ ಒಮ್ಮೆಲೇ ಪಡೆಯಬಹುದು. ಇದನ್ನು ತಯಾರಿಸಲು ಹೆಚ್ಚು ಶ್ರಮಪಡಬೇಕಾಗಿಲ್ಲ, ಮೀನು ಸ್ವಚ್ಛಗೊಳಿಸುವ ಸಮಯವನ್ನು ಹೊರತು ಪಡಿಸಿದರೆ ಕೆಲವೇ ನಿಮಿಷಗಳಲ್ಲಿ ಈ ರಸಂ ಸಿದ್ಧವಾಗುತ್ತದೆ. ಇದರ ರುಚಿಯನ್ನು ಕಂಡವರು ಲೋಟಕ್ಕೆ ಸುರಿದು ಕಾಫಿಯಂತೆ ಹೀರುವುದನ್ನೂ ಕಾಣಬಹುದು.

ಮೀನಿನ ರಸಂ ಸೇವನೆಯಿಂದ ಜೀರ್ಣಕ್ರಿಯೆ ಉತ್ತಮಗೊಳ್ಳುವ ಜೊತೆಗೇ ಹೃದಯಸಂಬಂಧಿ ತೊಂದರೆ ಮತ್ತು ರಕ್ತಹೆಪ್ಪುಗಟ್ಟುವ ತೊಂದರೆಗಳನ್ನೂ ನಿವಾರಿಸುತ್ತದೆ. ಅಲ್ಲದೇ ನಿಯಮಿತವಾಗಿ ಸೇವಿಸಿದವರಲ್ಲಿ ಖಿನ್ನತೆ, ದುಗುಡ ಮೊದಲಾದ ಮಾನಸಿಕ ವ್ಯಾಧಿಗಳು ಕಡಿಮೆಯಾಗಿರುವುದು ಕಂಡುಬಂದಿದೆ. ವಿಶೇಷವಾಗಿ ಗರ್ಭಿಣಿಯರಿಗೆ ಇದು ಸೂಕ್ತವಾಗಿದ್ದು ಇದರ ಖಾರ ಮಿಶ್ರಿತ ಹುಳಿಯಾದ ರುಚಿ ಅವರ ಬಯಕೆಯನ್ನೂ ಪೂರ್ಣಗೊಳಿಸುತ್ತದೆ. ಬನ್ನಿ, ಈ ರಸಂ ಮಾಡುವ ಬಗೆಯನ್ನು ಈಗ ನೋಡೋಣ:

Easy Tasty Bangra Fish Rasam Recipe

ಪ್ರಮಾಣ: ಮೂವರಿಗೆ, ಒಂದು ಹೊತ್ತಿಗಾಗುವಷ್ಟು
ಸಿದ್ಧತಾ ಸಮಯ: ಹದಿನೈದು ನಿಮಿಷಗಳು
ತಯಾರಿಕಾ ಸಮಯ: ಹದಿನೈದು ನಿಮಿಷಗಳು

ಅಗತ್ಯವಿರುವ ಸಾಮಾಗ್ರಿಗಳು:
*ಬಂಗಡೆ ಮೀನು: ನಾಲ್ಕು (ಮಧ್ಯಮದಿಂದ ದೊಡ್ಡ ಗಾತ್ರದ್ದು) - (ನೊರೆಬಂಗಡೆ ಅಥವಾ ಚಿಕ್ಕ ಗಾತ್ರದ್ದು ಅಷ್ಟು ಸೂಕ್ತವಲ್ಲ)-ಚೆನ್ನಾಗಿ ತೊಳೆದು ಸ್ವಚ್ಛಗೊಳಿಸಿದ್ದು
*ಈರುಳ್ಳಿ: ಒಂದು ಕಪ್
*ಟೊಮೇಟೊ: ಒಂದು ಕಪ್
*ಕೆಂಪು ಮೆಣಸಿನ ಪುಡಿ- 1/2 ಚಿಕ್ಕ ಚಮಚ (ಕಾಶ್ಮೀರಿ ಚಿಲ್ಲಿ ಆದರೆ ಒಂದು ಚಿಕ್ಕ ಚಮಚ)
*ಧನಿಯ ಪುಡಿ- 1/2 ಚಿಕ್ಕ ಚಮಚ
*ಕೆಂಪು ಮೆಣಸಿನ ಕಾಯಿ - 5 (ಬ್ಯಾಡಗಿ ಆದರೆ ಉತ್ತಮ)
*ಜೀರಿಗೆ - 1/4 ಚಿಕ್ಕ ಚಮಚ
*ಸಾಸಿವೆ - 1/4 ಚಿಕ್ಕ ಚಮಚ
*ಅರಿಶಿನ ಪುಡಿ - 1/4 ಚಿಕ್ಕ ಚಮಚ
*ಉಪ್ಪು-ರುಚಿಗನುಸಾರ
*ಎಣ್ಣೆ: ಅಗತ್ಯಕ್ಕೆ ತಕ್ಕಷ್ಟು

ವಿಧಾನ:
1) ಮೀನನ್ನು ಚೆನ್ನಾಗಿ ತೊಳೆದು ತಲೆ ನಿವಾರಿಸಿ ಸ್ವಚ್ಛಗೊಳಿಸಿ ಚಿಕ್ಕ ತುಂಡುಗಳನ್ನಾಗಿಸಿ (ದೊಡ್ಡ ಬಂಗಡೆಯಾದರೆ ಆರು, ಮಧ್ಯಮ ಆದರೆ ನಾಲ್ಕು)
2) ಒಂದು ದಪ್ಪತಳದ ಬಾಣಲೆಯಲ್ಲಿ ಕೊಂಚ ಎಣ್ಣೆ ಹಾಕಿ ಬಿಸಿಯಾದ ಬಳಿಕ ಜೀರಿಗೆ, ಸಾಸಿವೆ, ಅರಿಶಿನ ಪುಡಿ, ಒಣಮೆಣಸು, ನೀರುಳ್ಳಿ, ಟೊಮೇಟೊ ಹಾಕಿ ಹುರಿಯಿರಿ
3) ಟೊಮೇಟೊ ಕರಗಿ ಈರುಳ್ಳಿ ಸುಮಾರು ಕೆಂಪಗಾದ ಬಳಿಕ ಒಂದು ಲೋಟ ನೀರು ಸೇರಿಸಿ ಕುದಿ ಬರಿಸಿ.
4) ಈಗ ಮೀನಿನ ತುಂಡುಗಳನ್ನು ಹಾಕಿ ಉಪ್ಪು ಸೇರಿಸಿ ಕುದಿಸಿ. ಚಿಕ್ಕ ಉರಿಯಲ್ಲಿ ಮೀನು ಬೇಯುವವರೆಗೂ ಬೇಯಿಸಿ.
5) ನೀರು ಕಡಿಮೆ ಎನಿಸಿದರೆ ಕೊಂಚ ಸೇರಿಸಬಹುದು. ಈ ರಸಂ ಬಿಸಿ ಅನ್ನದೊಡನೆ ಸೇವಿಸಲು ಅತಿ ರುಚಿಯಾಗಿರುತ್ತದೆ.
ಈ ರಸಂ ಹೇಗೆನಿಸಿತು ಎಂಬುದನ್ನು ನಮಗೆ ತಿಳಿಸಿ. ಇದಕ್ಕಾಗಿ ಕೆಳಗಿನ ಕಮೆಂಟ್ಸ್ ಸ್ಥಳವನ್ನು ಉಪಯೋಗಿಸಿ.

English summary

Easy Tasty Bangra Fish Rasam Recipe

Fishes are rich in omega-3 fatty acids that are very important for our body. It is also rich in proteins and is low on fats. Hence, it is an essentail part of our diet and needs to be included in our diet in one or the other form. Therefore, today we shall share with you an easy bangra fish rasam recipe.
X
Desktop Bottom Promotion