ಭಾನುವಾರದ ಸ್ಪೆಷಲ್: ಬೆಳ್ಳುಳ್ಳಿ-ಚಿಕನ್ ರೈಸ್ ರೆಸಿಪಿ

Posted By: Arshad
Subscribe to Boldsky

ನಿಮ್ಮ ಮನೆಯ ಫ್ರಿಜ್ಜಿನಲ್ಲಿ ಕೊಂಚ ಕೋಳಿ ಮಾಂಸದ ದಾಸ್ತಾನು ಇದೆಯೇ? ಹಾಗಾದರೆ ನಿಮ್ಮ ಅಡುಗೆಮನೆಯಲ್ಲಿರುವ ಕೆಲವು ಸುಲಭ ಪರಿಕರಗಳಿಂದ ಭಿನ್ನವಾದ, ಆದರೆ ರುಚಿಯಲ್ಲಿ ಅತ್ಯುತ್ತಮವಾದ ಖಾದ್ಯದೊಂದನ್ನು ಇಂದೇಕೆ ತಯಾರಿಸಬಾರದು? ಸಸ್ಯಾಹಾರದಲ್ಲಿ ಆಲೂಗಡ್ಡೆ ಹೇಗೆಯೋ, ಹಾಗೇ ಮಾಂಸಾಹಾರದಲ್ಲಿ ಕೋಳಿಮಾಂಸ. ಇವೆರಡನ್ನು ಬಳಸಿ ಅತಿ ಹೆಚ್ಚಿನ ಪ್ರಕಾರದ ಖಾದ್ಯಗಳನ್ನು ತಯಾರಿಸಬಹುದು.

ನಿಮ್ಮ ಮನೆಯಲ್ಲಿ ಬೆಳ್ಳುಳ್ಳಿ ಇದ್ದರೆ ಇಂದು ಬೆಳ್ಳುಳ್ಳಿ ಚಿಕನ್ ರೈಸ್ ಎಂಬ ಹೊಸರುಚಿಯನ್ನೇಕೆ ಪ್ರಯತ್ನಿಸಬಾರದು? ಇದು ಮುಖ್ಯ ಆಹಾರದ ರೂಪದಲ್ಲಿ ಸೇವಿಸಬಹುದಾದುದರಿಂದ ನಿಮ್ಮ ಇಂದಿನ ಮಧ್ಯಾಹ್ನದ ಊಟದ ಸವಿಯನ್ನು ಹೆಚ್ಚಿಸುವುದರಲ್ಲಿ ಅನುಮಾನವೇ ಇಲ್ಲ.   

Garlic Chicken Rice Recipe

ಬೆಳ್ಳುಳ್ಳಿ ಕೇವಲ ಅಡುಗೆ ಸಾಮಾಗ್ರಿ ಮಾತ್ರವಲ್ಲ, ಬದಲಿಗೆ ತನ್ನ ಉರಿಯೂತ ನಿವಾರಕ ಮತ್ತು ಪ್ರತಿಜೀವಕ ಗುಣಗಳ ಮೂಲಕ ಔಷಧಿಯ ರೂಪದಲ್ಲಿಯೂ ಬಳಸಲಾಗುತ್ತದೆ. ಆದ್ದರಿಂದ ಬೆಳ್ಳುಳ್ಳಿ ಬಳಸಿರುವ ಈ ಖಾದ್ಯ ಕೇವಲ ರುಚಿಕರ ಮಾತ್ರವಲ್ಲ, ಆರೋಗ್ಯಕರವೂ ಹೌದು. ವಿಶೇಷವಾಗಿ ಭಾನುವಾರ ಮಧ್ಯಾಹ್ನದ ಊಟದಲ್ಲಿ ಈ ಖಾದ್ಯವನ್ನು ಬಡಿಸುವ ಮೂಲಕ ಮನೆಯವರೆಲ್ಲಾ ಆಸ್ವಾದಿಸಬಹುದಾದ ಈ ಖಾದ್ಯ ಎಲ್ಲರ ಮನ ಗೆಲ್ಲುವುದರಲ್ಲಿ ಅನುಮಾನವೇ ಇಲ್ಲ. ಬನ್ನಿ, ಇದನ್ನು ತಯಾರಿಸುವ ಬಗೆಯನ್ನು ನೋಡೋಣ...   ಖಾರ ಪ್ರಿಯರಿಗಾಗಿ ಚಿಕನ್ ಚಿಲ್ಲಿ ರೆಸಿಪಿ

ಪ್ರಮಾಣ: ನಾಲ್ವರಿಗೆ, ಒಂದು ಹೊತ್ತಿಗಾಗುವಷ್ಟು

ಸಿದ್ಧತಾ ಸಮಯ: ಹತ್ತು ನಿಮಿಷಗಳು

ತಯಾರಿಕಾ ಸಮಯ: ಹದಿನೈದು ನಿಮಿಷಗಳು.

ಅಗತ್ಯವಿರುವ ಸಾಮಾಗ್ರಿಗಳು

1. ಈರುಳ್ಳಿ - ¼ ಕಪ್ (ಚಿಕ್ಕದಾಗಿ ಹೆಚ್ಚಿದ್ದು)

2. ದೊಣ್ಣೆ ಮೆಣಸು-ಕೆಂಪು ಬಣ್ಣದ್ದು - ½ ಕಪ್ (ಚಿಕ್ಕದಾಗಿ ಹೆಚ್ಚಿದ್ದು)

3. ಬೆಳ್ಳುಳ್ಳಿ - 4 ಎಸಳು (ಜಜ್ಜಿದ್ದು)

4. ಅಕ್ಕಿ - ½ ಕಪ್ (ಬೇಯಿಸದೇ ಇದ್ದದ್ದು) (ಬಾಸ್ಮತಿ ಉತ್ತಮ ಆಯ್ಕೆ)

5. ಸಸ್ಯಜನ್ಯ ಅಡುಗೆ ಎಣ್ಣೆ - 2 ದೊಡ್ಡಚಮಚ

6. ಲಿಂಬೆ ರಸ - ¼ ಕಪ್

7. ಕೋಳಿಯ ಎದೆಯಭಾಗದ ಮಾಂಸ - 1 (ಮೂಳೆರಹಿತವಾಗಿಸಿ, ಚಿಕ್ಕ ಪಟ್ಟಿಗಳಂತೆ ಕತ್ತರಿಸಿದ್ದು)

8. ಹಸಿಶುಂಠಿ - 2 ದೊಡ್ಡಚಮಚ (ಚಿಕ್ಕದಾಗಿ ಹೆಚ್ಚಿದ್ದು)

9. ಸೋಯಾ ಸಾಸ್ - 2 ದೊಡ್ಡಚಮಚ

10. ಜೇನು - 1 ದೊಡ್ಡಚಮಚ

11. ಕೋಳಿಮಾಂಸದ ಸೂಪ್ - ½ ಕಪ್

12. ತಾಜಾ ಪಾರ್ಸ್ಲೆ ಎಲೆಗಳು - 1 ದೊಡ್ಡಚಮಚ (ಚಿಕ್ಕದಾಗಿ ಹೆಚ್ಚಿದ್ದು)

13. ಉಪ್ಪು, ರುಚಿಗನುಸಾರ.          ಆಂಧ್ರ ಶೈಲಿಯಲ್ಲಿ ಬೊಂಬಾಟ್ ಚಿಕನ್ ಕರಿ ರೆಸಿಪಿ

ವಿಧಾನ:

*ಒಂದು ದೊಡ್ಡ ಪಾತ್ರೆಯಲ್ಲಿ ಕೋಳಿಮಾಂಸ, ಈರುಳ್ಳಿ, ಬೆಳ್ಳುಳ್ಳಿ, ಶುಂಠಿ, ಎಣ್ಣೆ, ಉಪ್ಪು ಮತ್ತು ಲಿಂಬೆರಸ ಬೆರೆಸಿ ಚೆನ್ನಾಗಿ ಮಿಶ್ರಣ ಮಾಡಿ ಸುಮಾರು ಅರ್ಧದಿಂದ ಒಂದು ಗಂಟೆ ಕಾಲ ಹಾಗೇ ಬಿಡಿ.  

*ಒಂದು ದಪ್ಪತಳದ ಕುಕ್ಕರ್‌ನಲ್ಲಿ ಅಕ್ಕಿಯನ್ನು ಹಾಕಿ ಕೊಂಚ ನೀರಿನೊಡನೆ ಸುಮಾರು ಅರ್ಧದಷ್ಟು ಬೇಯಿಸಿ. ಬಳಿಕ ಇದಕ್ಕೆ ನೆನೆಸಿಟ್ಟ ಕೋಳಿಯ ತುಂಡುಗಳನ್ನು ಹಾಕಿ ಮಿಶ್ರಣ ಮಾಡಿ.

*ಈಗ ದೊಣ್ಣೆಮೆಣಸು, ಸೋಯಾ ಸಾಸ್ ಹಾಕಿ ಮಿಶ್ರಣ ಮಾಡಿ. ಬಳಿಕ ಕೋಳಿಮಾಂಸದ ಸೂಪ್ ಹಾಕಿ ಚಿಕ್ಕ ಉರಿಯಲ್ಲಿ ಮುಚ್ಚಳ ಮುಚ್ಚಿ (ಸೀಟಿ ಹಾಕಬಾರದು) ಸುಮಾರು ಐದರಿಂದ ಎಂಟು ನಿಮಿಷಗಳ ಕಾಲ ಅಥವಾ ಕೋಳಿಮಾಂಸ ಬೇಯುವವರೆಗೆ ಬೇಯಿಸಿ.

*ಬಳಿಕ ಅಕ್ಕಿ ಪೂರ್ಣವಾಗಿ ಬೆಂದಿದೆಯೇ ಎಂದು ನೋಡಿ. ಬೆಂದಿದೆ ಎಂದು ಖಾತ್ರಿಪಡಿಸಿಕೊಂಡ ಬಳಿಕ ಜೇನು, ಪಾರ್ಸ್ಲೆ ಎಲೆಗಳನ್ನು ಹಾಕಿ ಮಿಶ್ರಣ ಮಾಡಿ

*ಬಿಸಿಬಿಸಿ ಇರುವಂತೆಯೇ ಮನೆಯವರಿಗೆ ಹಾಗೂ ಅತಿಥಿಗಳಿಗೆ ಬಡಿಸಿ, ಮೆಚ್ಚುಗೆಗಳಿಸಿ.

For Quick Alerts
ALLOW NOTIFICATIONS
For Daily Alerts

    English summary

    Garlic Chicken Rice Recipe

    Garlic is known for its anti-inflammatory and antiseptic properties. So the dish is a power-packed one, combining all the best benefits of the different ingredients like garlic, chicken, etc. You could try this recipe as a Sunday brunch meal and serve it to your family, who will definitely ask for more to binge on. So, here's the recipe for you, take a look.
    We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more