For Quick Alerts
ALLOW NOTIFICATIONS  
For Daily Alerts

ಈ ಚಿಕನ್ ಕರಿ ಸಕತ್ ಖಾರ- ಆದರೆ ದುಪ್ಪಟ್ಟು ಸ್ವಾದ

By Hemanth
|

ವಿಯೆಟ್ನಾಂ ಅಥವಾ ವಿಯೆಟ್ನಾಮೀಸ್ ಆಹಾರವೆಂದರೆ ಎಲ್ಲರ ಕಣ್ಣಲ್ಲಿ ನೀರು ಬರುತ್ತದೆ, ಏಕೆಂದರೆ ಅದು ಅಷ್ಟು ಖಾರವಾಗಿರುತ್ತದೆ ಎಂದರ್ಥ. ಆದರೆ ಕೆಲವೊಂದು ವಿಯೆಟ್ನಾಂನ ಆಹಾರಗಳು ಅಷ್ಟು ಖಾರವಾಗಿರುವುದಿಲ್ಲ. ಆದರೆ ಅಲ್ಲಿನ ಆಹಾರಗಳಲ್ಲಿ ಚೀನಾದ ಆಹಾರದ ಅನುಕರಣೆ ಸಹಜವಾಗಿ ಕಾಣಸಿಗುವುದು. ವಿಯೆಟ್ನಾಂನ ಹೆಚ್ಚಿನ ಆಹಾರಗಳಲ್ಲಿ ಹಣ್ಣು ಹಾಗೂ ತರಕಾರಿಗಳನ್ನು ಯಥೇಚ್ಛವಾಗಿ ಬಳಸಿಕೊಳ್ಳಲಾಗುತ್ತದೆ. ವಿಯೆಟ್ನಾಂನ ಆಹಾರಗಳಲ್ಲಿ ಹೆಚ್ಚಾಗಿ ಮೀನಿನ ಸಾಸ್ ನ್ನು ಕೋಳಿ, ಹಂದಿ, ಬೀಫ್, ತರಕಾರಿ ಹಾಗೂ ಮೀನಿನ ಪದಾರ್ಥಗಳಲ್ಲಿ ಬಳಸಲಾಗುತ್ತದೆ.

ಮೀನಿನ ಸಾಸ್ ನ್ನು ಹೆಚ್ಚಾಗಿ ಆಹಾರಗಳಿಗೆ ಉಪ್ಪಿನಅಂಶ ಬರಲು ಉಪಯೋಗಿಸುತ್ತಾರೆ. ಇಲ್ಲಿ ತಿಳಿಸಲಾಗಿರುವ ವಿಯೆಟ್ನಾಂನ ಎರಡು ಪದಾರ್ಥಗಳನ್ನು ಹೇಗೆ ತಯಾರಿಸಬಹುದು ಮತ್ತು ಅದು ಎಷ್ಟು ಸುಲಭ ಎಂದು ತಿಳಿದುಕೊಳ್ಳಿ. ನಾಲ್ಕು ಜನರಿಗೆ ಬಡಿಸಲು ಈ ಪದಾರ್ಥಗಳನ್ನು ಮಾಡಬಹುದು ಮತ್ತು ಅನ್ನಕ್ಕೆ ಇದು ತುಂಬಾ ರುಚಿಯಾಗಿರುತ್ತದೆ. ಬನ್ನಿ ಇದನ್ನು ಮಾಡುವ ವಿಧಾನ ಹೇಗೆ ಎಂಬುದನ್ನು ನೋಡೋಣ.. ಆಂಧ್ರ ಶೈಲಿಯಲ್ಲಿ ಬೊಂಬಾಟ್ ಚಿಕನ್ ಕರಿ ರೆಸಿಪಿ

Delicious Vietnamese Chicken Recipes

ಬೇಕಾಗುವ ಸಾಮಗ್ರಿಗಳು
*ಚರ್ಮ ತೆಗೆದಿರುವ ಒಂದು ಇಡೀ ಕೋಳಿ. ಎರಡು ಎಸಲು ಬೆಳ್ಳುಳ್ಳಿ.
*ಒಂದು ಚಮಚ ಕ್ಯಾನೊಲಾ ಎಣ್ಣೆ
*ಒಂದು ಚಮಚ ಸಕ್ಕರೆ
*ಒಂದು ಚಮಚ ಮೀನಿನ ಸಾಸ್
*½ ಚಮಚ ಕಡಿಮೆ ಉಪ್ಪಿನಾಂಶವಿರುವ ಸೋಯ ಸಾಸ್
*ಸಿಪ್ಪೆ ತೆಗೆಯದೆ ಹಾಗೆ ತುಂಡು ಮಾಡಿರುವ ಬಾಳೆಹಣ್ಣು
*2ಕತ್ತರಿಸಿದ ಲೆಮನ್ ಗ್ರಾಸ್(ಆರು ಇಂಚುಗಳಷ್ಟು ಉದ್ದವಿರಲಿ)
*ಕತ್ತರಿಸಿದ ನಾಲ್ಕು ತುಂಡು ಅನಾನಸ್ ಘಮಘಮಿಸುವ ಚಿಕನ್ ಕರಿ: ಬರೀ 20 ನಿಮಿಷ ಸಾಕು!

ಮಾಡುವ ವಿಧಾನ
*ಸೋಯಾಬಿನ್ ಸಾಸ್ ನ್ನು ಲೆಮನ್ ಗ್ರಾಸ್, ಸಕ್ಕರೆ, ಮೀನಿನ ಸಾಸ್, ಬೆಳ್ಳುಳ್ಳಿ ಮತ್ತು ಎಣ್ಣೆಯೊಂದಿಗೆ ಒಂದು ಪಾತ್ರೆಯಲ್ಲಿ ಮಿಶ್ರಣ ಮಾಡಿ. ಇನ್ನೊಂದು ಪಾತ್ರೆಯಲ್ಲಿ ಕೋಳಿಯನ್ನಿಡಿ.
*ಈಗ ಮಿಶ್ರಣವನ್ನು ಕೋಳಿಗೆ ಸವರಿ ಅದನ್ನು ಸುಮಾರು ಮೂರು ಗಂಟೆಗಳ ಕಾಲ ಫ್ರಿಡ್ಜ್ ನಲ್ಲಿಟ್ಟು ಹಾಗೆ ಬಿಟ್ಟುಬಿಡಿ. ಕೋಳಿಗೆ ಮಿಶ್ರಣವನ್ನು ಸವರಿ ರಾತ್ರಿಪೂರ್ತಿ ಬಿಟ್ಟು ಬೆಳಿಗ್ಗೆ ಪದಾರ್ಥ ಮಾಡಿದರೆ ಮತ್ತಷ್ಟು ರುಚಿಕರವಾಗಿರುತ್ತದೆ.
*ಇದಕ್ಕೆ ಅನಾನಸ್ ಮತ್ತು ಬಾಳೆಹಣ್ಣನ್ನು ಹಾಕಿ ಮತ್ತು ಉಳಿದಿರುವ ಮಿಶ್ರಣವನ್ನು ಹಾಕಿ ಅದನ್ನು 350 ಡಿಗ್ರಿಯಲ್ಲಿ 30 ನಿಮಿಷಗಳ ಕಾಲ ಬೇಕ್ ಮಾಡಿ. 30 ನಿಮಿಷಗಳ ಬಳಿಕ ಕೋಳಿಯನ್ನು ತಿರುಗಿಸಿ ಮತ್ತೆ ಅದು ಬೇಯುವ ತನಕ ಬೇಕ್ ಮಾಡಿಕೊಳ್ಳಿ.
*ಇದನ್ನು ಆರು ಜನರಿಗೆ ಬಡಿಸಬಹುದು ಮತ್ತು ನೂಡಲ್ಸ್ ಅಥವಾ ಅನ್ನದೊಂದಿಗೆ ಇದು ತುಂಬಾ ರುಚಿಯಾಗಿರುತ್ತದೆ. ಮೀನಿನ ಸಾಸ್, ಎಳೆ ಬಿದಿರಿನ ದಿಂಡು, ಸಾಸಿವೆಯೊಂದಿಗೆ ಇದು ಏಶ್ಯಾದ ಆಹಾರದಂತೆ ರುಚಿ ನೀಡುತ್ತದೆ. ಇಲ್ಲವಾದಲ್ಲಿ ಇದು ಇಟಾಲಿಯನ್ ಅಥವಾ ಸ್ಪೇನ್ ನ ಆಹಾರದಂತೆ ರುಚಿಸಬಹುದು.

2ನೇ ವಿಧಾನ
ಬೇಕಾಗಿರುವ ಸಾಮಗ್ರಿಗಳು
*2ಹಸಿರು ಈರುಳ್ಳಿ, 1 ಇಂಚಿನಷ್ಟು ಕತ್ತರಿಸಿರುವುದು
*1/8 ಚಮಚ ಕರಿಮೆಣಸು
*¼ ಭಾಗದಷ್ಟು ಮೂಳೆ ಹಾಗೂ ಚರ್ಮ ರಹಿತ ಚಿಕನ್ ಬ್ರೆಸ್ಟ್ ಸ್ಟ್ರಿಪ್
*½ ಕಪ್ ನೀರು
*½ ಕಪ್ ಟೊಮೆಟೊ ಸಾಸ್
*½ ಕಪ್ ಬೆಳ್ಳುಳ್ಳಿ ಉಪ್ಪು
*2 ಚಮಚ ಹುಡಿ ಮಾಡಿದ ಸಾಸಿವೆ ಕಾಳು
*½ ಚಮಚ ಮೀನಿನ ಸಾಸ್
*2 ಚಮಚ ತರಕಾರಿ ಎಣ್ಣೆ
*8 ತುಂಡು ಒಣಗಿಸಿದ ಎಳೆ ಬಿದಿರಿನ ತುಂಡುಗಳು ಪಾಲಾಕ್ ಚಿಕನ್ ಪಲ್ಯ

ವಿಧಾನ:
*ಮೊದಲು ಕೋಳಿಯನ್ನು ಕರಿಮೆಣಸಿನ ಹುಡಿ, ಮೀನಿನ ಸಾಸ್, ಎಣ್ಣೆ, ಟೊಮೆಟೊ ಸಾಸ್ ಮತ್ತು ಬೆಳ್ಳುಳ್ಳಿ ಉಪ್ಪಿನೊಂದಿಗೆ ಮಿಶ್ರಣ ಮಾಡಿ ಮುಚ್ಚಿ 15 ನಿಮಿಷ ಹಾಗೆ ಬಿಟ್ಟುಬಿಡಿ. ಒಂದು ಬಾಣಲೆಯಲ್ಲಿ ಎಣ್ಣೆ ಹಾಕಿ ಬಿಸಿ ಮಾಡಿ
*ಇನ್ನು ಇದಕ್ಕೆ ಈರುಳ್ಳಿ, ಸಾಸಿವೆ ಕಾಳು ಮತ್ತು ಬಿದಿರಿನ ತುಂಡುಗಳನ್ನು ಹಾಕಿ. ಸ್ವಲ್ಪ ಸಮಯದ ಬಳಿಕ ಕೋಳಿಯನ್ನು ಬಾಣಲೆಗೆ ಹಾಕಿ. ಇದಕ್ಕೆ ನೀರು ಹಾಕಿ 10 ನಿಮಿಷ ಕಾಲ ಅಥವಾ ಕೋಳಿ ಗುಲಾಬಿ ಬಣ್ಣ ಬಿಡುವ ತನಕ ಹಾಗೆ ಬೇಯಿಸಿ. ರುಚಿಕರವಾದ ವಿಯೆಟ್ನಾಂನ ಚಿಕನ್ ಸವಿಯಲು ಸಿದ್ಧ.

English summary

Delicious Vietnamese Chicken Recipes

Many people assume that most of the Vietnamese food is very spicy or is identical to Chinese food. Chicken plays a big role in Vietnamese cuisine and fresh fruits and veggies are very popular in these recipes. Fish sauce is used to flavour the chicken, beef or pork dishes, just as it's used to season fish, seafood and vegetarian meals.
Story first published: Thursday, June 16, 2016, 20:22 [IST]
X
Desktop Bottom Promotion