For Quick Alerts
ALLOW NOTIFICATIONS  
For Daily Alerts

ಮೀನು ಪ್ರಿಯರಿಗಾಗಿ-ಮೀನಿನ ಫ್ರೈ

|

ನೀವು ಮೀನು ಪ್ರಿಯರಾಗಿದ್ದರೆ ಈ ರೀತಿಯಲ್ಲಿ ಮೀನಿನ ಫ್ರೈ ಮಾಡಿ ನೋಡಿ. ಖಾರವಾಗಿ, ರೋಸ್ಟ್ ಆಗಿರುವ ಈ ಮೀನಿನ ಫ್ರೈ ರುಚಿ ಖಂಡಿತ ನಿಮಗಿಷ್ಟವಾಗುವುದು. ಇದಕ್ಕೆ ಸಾಮಾನ್ಯವಾಗಿ ಅಡುಗೆಗೆ ಬಳಸುವ ಮಸಾಲೆ ಪದಾರ್ಥಗಳನ್ನು ಬಳಸಿದರೆ ಸಾಕು, ಸೂಪರ್ ಆದ ಮೀನಿನ ಫ್ರೈ ರೆಡಿ.

ಇದರ ರೆಸಿಪಿ ನೋಡಿ ಇಲ್ಲಿದೆ:

Crunchy Fish Fry Recipe

ಬೇಕಾಗುವ ಸಾಮಾಗ್ರಿಗಳು
ಮೀನಿನ ತುಂಡುಗಳು
ಒಣ ಮೆಣಸು 8-10
ಹುಣಸೆ ಹಣ್ಣು(ದೊಡ್ಡ ನಿಂಬೆ ಹಣ್ಣಿನ ಗಾತ್ರದಷ್ಟು)
ಚಿಕ್ಕ ಈರುಳ್ಳಿ2-3
ಜೀರಿಗೆ 1 ಚಮಚ
ಕೊತ್ತಂಬರಿ ಬೀಜ 1 ಚಮಚ
2 ಎಸಳು ಬೆಳ್ಳುಳ್ಳಿ
ಚಕ್ಕೆ-ಲವಂಗ(ಸ್ವಲ್ಪ)
ಉಪ್ಪು

ತಯಾರಿಸುವ ವಿಧಾನ:

* ಮೀನನ್ನು ಸ್ವಚ್ಛಗೊಳಿಸಿ.

* ಕೊತ್ತಂಬರಿ ಬೀಜ ಮತ್ತು ಚಕ್ಕೆ, ಲವಂಗ, ದೊಡ್ಡ ಜೀರಿಗೆಯನ್ನು ರೋಸ್ಟ್ ಮಾಡಿ, ಒಣ ಮೆಣಸನ್ನು ಸ್ವಲ್ಪ ಬಿಸಿ ಮಾಡಿ.

* ನಂತರ ಕೊತ್ತಂಬರಿ ಬೀಜ, ಜೀರಿಗೆ, ಬೆಳ್ಳುಳ್ಳಿ, ಒಣ ಮೆಣಸು, ಚಕ್ಕೆ-ಲವಂಗ, ಈರುಳ್ಳಿ, ಹುಣಸೆ ಹಣ್ಣು, ಉಪ್ಪು ಹಾಕಿ ಪೇಸ್ಟ್ ಮಾಡಿ.

* ನಂತರ ಆ ಪೇಸ್ಟ್ ಅನ್ನು ಶುದ್ಧ ಮಾಡಿದ ಮೀನಿಗೆ ಹಾಕಿ ಮಿಕ್ಸ್ ಮಾಡಿ ಒಂದು ಗಂಟೆ ಕಾಲ ಇಡಿ.

* ಈಗ ತವಾಕ್ಕೆ 4-5 ಚಮಚ ಎಣ್ಣೆ ಹಾಕಿ, ಎಣ್ಣೆ ಬಿಸಿಯಾದಾಗ ಮೀನಿನ ತುಂಡು ಹಾಕಿ ತವಾದ ಬಾಯಿ ಮುಚ್ಚಿ ಸಾಧಾರಣ ಉರಿಯಲ್ಲಿ 10 ನಿಮಿಷ ಬೇಯಿಸಿ, ನಂತರ ಮುಚ್ಚಳ ತೆಗೆದು ಅದರ ಮೇಲೆ ಮತ್ತೊಂದು ಚಮಚ ಎಣ್ಣೆ ಹಾಕಿ ಮೀನನ್ನು ಮಗುಚಿ ಹಾಕಿ ಮತ್ತೆ 10 ನಿಮಿಷ ಫ್ರೈ ಮಾಡಿದರೆ ರುಚಿಯಾದ ಮೀನಿನ ಫ್ರೈ ರೆಡಿ.

English summary

Crunchy Fish Fry Recipe

This fish fry you can easily prepare. This seafood recipe is a light dinner treat for you to binge on.
X
Desktop Bottom Promotion