For Quick Alerts
ALLOW NOTIFICATIONS  
For Daily Alerts

ಚಾಂಪ್ ಮಸಾಲ: ರಂಜಾನ್ ಸ್ಪೆಷಲ್

|

ಚಾಂಪ್ ಮಸಾಲ ಸ್ವಾದಿಷ್ಟಕರವಾದ ನಾನ್ ವೆಜ್ ಅಡುಗೆಯಾಗಿದೆ. ಈ ಅಡುಗೆಯ ಮತ್ತೊಂದು ವಿಶೇಷವೆಂದರೆ ಯಾವುದೇ ಬಗೆಯ ಮಾಂಸ ಬಳಸಿ ಇದನ್ನು ತಯಾರಿಸಬಹುದು. ಇಲ್ಲಿ ನಾವು ಮಟನ್ ಹಾಕಿ ಮಾಡುವ ರೆಸಿಪಿ ನೀಡಿದ್ದೇವೆ.

ರಂಜಾನ್ ತಿಂಗಳಿನಲ್ಲಿ ವಿಶೇಷ ಅಡುಗೆಯಾಗಿ ಈ ಚಾಂಪ್ ಮಸಾಲವನ್ನು ಟ್ರೈ ಮಾಡಬಹುದು. ಚಾಂಪ್ ಮಸಾಲವನ್ನು ಫ್ರೈಡ್ ರೈಸ್ ಅಥವಾ ರೊಟ್ಟಿ ಜೊತೆ ತಿನ್ನಲು ತುಂಬಾ ಸ್ವಾದಿಷ್ಟಕರವಾಗಿರುತ್ತದೆ.

Chaamp Masala Recipe

ಬೇಕಾಗುವ ಸಾಮಾಗ್ರಿಗಳು
ಮಟನ್ ಅರ್ಧ ಕೆಜಿ( ಮೂಳೆ ಸಹಿತ ಮಟನ್)
ಟೊಮೆಟೊ 2 (ಪೇಸ್ಟ್ ಮಾಡಿ)
ಶುಂಠಿ -ಬೆಳ್ಳುಳ್ಳಿ ಪೇಸ್ಟ್ 2 ಚಮಚ
ಖಾರದ ಪುಡಿ(ರುಚಿಗೆ ತಕ್ಕಷ್ಟು)
ಮೊಸರು 1 ಕಪ್
ರುಚಿಗೆ ತಕ್ಕ ಉಪ್ಪು
ಗರಂ ಮಸಾಲ 1 ಚಮಚ
ಕರಿ ಜೀರಿಗೆ(shah jeera seed)1ಚಮಚ
ವೈಟ್ ವಿನೆಗರ್ 1 ಚಮಚ
ಚಕ್ಕೆ ಮತ್ತು ಲವಂಗದ ಪುಡಿ 1 ಚಮಚ
ಎಣ್ಣೆ 2 ಚಮಚ
ನೀರು 1 ಕಪ್
ಸ್ವಲ್ಪ ಕೊತ್ತಂಬರಿ ಸೊಪ್ಪು
ಸ್ವಲ್ಪ ನಿಂಬೆ ರಸ

ತಯಾರಿಸುವ ವಿಧಾನ:

* ಮಾಂಸವನ್ನು ಸ್ವಚ್ಛ ಮಾಡಿ ಚೆನ್ನಾಗಿ ತೊಳೆಯಿರಿ.

* ಈಗ ಪ್ರೆಶರ್ ಕುಕ್ಕರ್ ನಲ್ಲಿ ಸ್ವಲ್ಪ ಎಣ್ಣೆ ಹಾಕಿ ಬಿಸಿ ಮಾಡಿ, ಅದು ಬಿಸಿಯಾದಾಗ ಕರಿ ಜೀರಿಗೆ ಹಾಕಿಒಂದು ನಿಮಿಷ ಬಿಸಿ ಮಾಡಿ, ನಂತರ ಪೇಸ್ಟ್ ಮಾಡಿದ ಟೊಮೆಟೊ ಹಾಗೂ ಈರುಳ್ಳಿ ಹಾಕಿ 5 ನಿಮಿಷ ಸೌಟ್ ನಿಂದ ಆಡಿಸುತ್ತಾ ಬೇಯಿಸಿ.

* ನಂತರ ಶುಂಠಿ-ಬೆಳ್ಳುಳ್ಳಿ ಪೇಸ್ಟ್ ಹಾಕಿ ಮತ್ತೆ 2 ನಿಮಿಷ ಸೌಟ್ ನಿಂದ ಆಡಿಸುತ್ತಾ ಬೇಯಿಸಿ.

* ಈಗ ಮೊಸರು, ಖಾರದ ಪುಡಿ, ರುಚಿಗೆ ತಕ್ಕ ಉಪ್ಪು, ಗರಂ ಮಸಾಲ, ಚಕ್ಕೆ ಮತ್ತು ಲವಂಗ ಪುಡಿ ಹಾಕಿ, ನಿಂಬೆ ರಸ ಮತ್ತು ವೈಟ್ ವಿನೆಗರ್ ಹಾಕಿ ಮಿಕ್ಸ್ ಮಾಡಿ, ನಂತರ ಮಾಂಸವನ್ನು ಹಾಕಿ ಕಡಿಮೆ ಉರಿಯಲ್ಲಿ 5 ನಿಮಿಷ ಬಿಸಿ ಮಾಡಿ ನಂತರ 1 ಕಪ್ ನೀರು ಹಾಕಿ ಕುಕ್ಕರ್ ನ ಬಾಯಿ ಮುಚ್ಚಿ, 4-5 ವಿಶಲ್ ಬರುವವರೆಗೆ ಬೇಯಿಸಿ.

* ನಂತರ ಕುಕ್ಕರ್ ಅನ್ನು ಹತ್ತು ನಿಮಿಷ ಹಾಗೇ ಇಟ್ಟು ನಂತರ ಓಪನ್ ಮಾಡಿ ಕೊತ್ತಂಬರಿ ಸೊಪ್ಪು ಹಾಕಿದರೆ ಚಾಂಪ್ ಮಸಾಲ ರೆಡಿ.

ಇದನ್ನು ಫ್ರೈಡ್ ರೈಸ್ ತಿನ್ನಲು ತುಂಬಾ ರುಚಿಯಾಗಿರುತ್ತದೆ.

English summary

Chaamp Masala Recipe

After the hard penance during the whole Ramzan month, it is finally the time of festivities and food. Here we have a delicious and a perfect recipe which you can try out this ramzan.
X
Desktop Bottom Promotion