For Quick Alerts
ALLOW NOTIFICATIONS  
For Daily Alerts

ಬಿಸಿಲಿನ ದಾಹವನ್ನು ತಣಿಸುವ ಕಲ್ಲಂಗಡಿ ಯೋಗರ್ಟ್ ರೆಸಿಪಿ!

|

ಸ್ಮೂತಿಯನ್ನು ಜನಪ್ರಿಯ ಬೇಸಿಗೆ ಪೇಯವೆಂದು ಹೆಸರುವಾಸಿಯಾಗಿದ್ದು ಆರೋಗ್ಯಯುತ ಮತ್ತು ಹೊಟ್ಟೆ ಭರ್ತಿ ಮಾಡುವ ಗುಣವನ್ನು ಇದು ಹೊಂದಿದೆ. ವಿಭಿನ್ನ ಸಾಮಾಗ್ರಿಗಳನ್ನು ಬಳಸಿಕೊಂಡು ಈ ಸ್ಮೂತಿಯನ್ನು ತಯಾರಿಸುತ್ತಾರೆ.

ಸ್ಮೂತಿಯನ್ನು ಬೇಸಿಗೆಯಲ್ಲಿ ತಂಪನ್ನು ಒದಗಿಸಲು ಬಳಸುತ್ತೇವೆ. ಇದನ್ನು ಬ್ರೇಕ್‌ಫಾಸ್ಟ್ ರೆಸಿಪಿಯಾಗಿ ಕೂಡ ಸೇವಿಸುತ್ತಾರೆ. ಹೆಚ್ಚಾಗಿ ಸೀಸನ್‌ನಲ್ಲಿ ದೊರೆಯುವ ಹಣ್ಣುಗಳಿಂದ ಸಿದ್ಧಪಡಿಸುವ ಸ್ಮೂತಿ ಬೇಸಿಗೆಯ ಬೇಗೆಯನ್ನು ನೀಗಲು ಸಹಕಾರಿ.

Watermelon Smoothie With Yogurt Recipe

ಈ ಬೇಸಿಗೆಯಲ್ಲಿ ಮಾರುಕಟ್ಟೆಯಲ್ಲಿ ಸಿಗುವ ಹಣ್ಣುಗಳೆಂದರೆ ಮಾವು ಮತ್ತು ಕಲ್ಲಂಗಡಿಯಾಗಿದೆ. ಇಲ್ಲಿ ನಾವು ನೀಡಿರುವ ಸ್ಮೂತಿ ರೆಸಿಪಿ ರಸದಿಂದ ಯಥೇಚ್ಛವಾಗಿರುವ ಕಲ್ಲಂಗಡಿಯನ್ನು ಬಳಸಿ ಮಾಡಿರುವಂಥದ್ದು. ಈ ರಸವುಳ್ಳ ಕಲ್ಲಂಗಡಿಯನ್ನು ತಂಪಾದ ಯೋಗರ್ಟ್‌ನೊಂದಿಗೆ ಬ್ಲೆಂಡ್ ಮಾಡಿ ಈ ಹೆಲ್ದೀ ಪೇಯವನ್ನು ಸಿದ್ಧಪಡಿಸಬಹುದು.

ಈ ಬೇಸಿಗೆಯಲ್ಲಿ ಈ ಎರಡೂ ಸಾಮಾಗ್ರಿಗಳು ತಂಪನ್ನು ನೀಡುವಂಥದ್ದೇ. ಕಲ್ಲಂಗಡಿ ದೇಹದಲ್ಲಿ ಹೈಡ್ರೇಶನ್ ಇರುವಂತೆ ನೋಡಿಕೊಳ್ಳುತ್ತದೆ ಮತ್ತು ಯೋಗರ್ಟ್ ಕ್ಯಾಲ್ಶಿಯಂ ಭರಿತವಾಗಿದ್ದು ಆರೋಗ್ಯವಂತ ಬ್ಯಾಕ್ಟೀರಿಯಾ ಜೀರ್ಣಕ್ರಿಯೆಗೆ ಸಹಕಾರಿ. ಹೆಚ್ಚಾಗಿ ಈ ಸ್ಮೂತಿ ಬೇಸಿಗೆಯಲ್ಲಿ ತೂಕ ಇಳಿಸಲು ಸಹಕಾರಿಯಾಗಿದೆ.

ಬೇಸಿಗೆಗಾಗಿ ತಂಪಾದ ಮಟ್ಕಾ ಲಸ್ಸಿ ರೆಸಿಪಿ!

ಪ್ರಮಾಣ : 2 ಗ್ಲಾಸ್‌ಗಳು
ಸಿದ್ಧತಾ ಸಮಯ 10 ನಿಮಿಷಗಳು

ಸಾಮಾಗ್ರಿಗಳು;
1. ಕಲ್ಲಂಗಡಿ - 1 ಕಪ್
2.ಬಾಳೆಹಣ್ಣು - 1(ಆಯ್ಕೆಯ)
3.ಗ್ರೀಕ್ ವೆನಿಲ್ಲಾ ಯೋಗರ್ಟ್ - 1/2 ಕಪ್
4.ಐಸ್ ತುಂಡುಗಳು - ಸ್ವಲ್ಪ
5.ಸಕ್ಕರೆ - 1/2 ಕಪ್

ಬಿರು ಬೇಸಿಗೆಗೆ ತಂಪಾದ ಮಸಾಲಾ ಕಲ್ಲಂಗಡಿ ಜ್ಯೂಸ್!

ಮಾಡುವ ವಿಧಾನ:
1. ಬಾಳೆಹಣ್ಣನ್ನು ಸಣ್ಣ ತುಂಡುಗಳನ್ನಾಗಿ ಮಾಡಿಕೊಳ್ಳಿ.

2.ಬ್ಲೆಂಡರ್‌ನಲ್ಲಿ, ಬೀಜಗಳಿಲ್ಲದೆ ಕಲ್ಲಂಗಡಿಯನ್ನು ಬ್ಲೆಂಡ್ ಮಾಡಿಕೊಳ್ಳಿ. ಬಾಳೆಹಣ್ಣು, ವೆನಿಲ್ಲಾ ಯೋಗರ್ಟ್, ಹಾಗೂ ಅಗತ್ಯವಿದ್ದಷ್ಟು ನೀರು ಸೇರಿಸಿ.

3. ಪುನಃ ಬ್ಲೆಂಡ್ ಮಾಡಿ ಮತ್ತು ಸಕ್ಕರೆ ಸೇರಿಸಿ. ಸಕ್ಕರೆ ಕರಗುವವರೆಗೆ ಬ್ಲೆಂಡ್ ಮಾಡಿಕೊಳ್ಳಿ.

4.ಗ್ಲಾಸ್‌ಗೆ ಐಸ್ ಕ್ಯೂಬ್ ಹಾಕಿ ಮತ್ತು ಕಲ್ಲಂಗಡಿ ಸ್ಮೂತಿಯನ್ನು ಅದಕ್ಕೆ ಸುರಿಯಿರಿ.

ಯೋಗರ್ಟ್‌ನೊಂದಿಗೆ ಕಲ್ಲಂಗಡಿ ಸ್ಮೂತಿ ಸವಿಯಲು ಸಿದ್ಧವಾಗಿದೆ. ತಂಪಾಗಿ ಅದನ್ನು ಕುಡಿಯಲು ನೀಡಿ.

English summary

Watermelon Smoothie With Yogurt Recipe

Smoothies are one of the most popular summer drinks which is healthy, filling and tasty too. They are prepared using different ingredients especially seasonal fruits. Smoothies are served in breakfast and is a delicious treat to beat the summer heat.
X
Desktop Bottom Promotion