For Quick Alerts
ALLOW NOTIFICATIONS  
For Daily Alerts

ಆಹಾ! ಬಿಸಿಬಿಸಿ ಸೋರೆಕಾಯಿ ಸೂಪ್!

By Staff
|
  • ಕೌಸಲ್ಯಾ ಭಟ್, ಚಿಕ್ಕಮಗಳೂರು

ನೀವು ಟೊಮೆಟೊ ಸೂಪ್ ಸವಿದಿರಬಹುದು. ಆದರೆ ಈ ರೀತಿಯ ಸೂಪ್‌ನ ರುಚಿ ನೋಡಿರಲಿಕ್ಕಿಲ್ಲ. ದಿನಕ್ಕೊಂದು ಬಟ್ಟಲು (bowl) ಸೂಪ್ ಸೇವಿಸುವುದರಿಂದ ಉತ್ತಮ ಆರೋಗ್ಯದ ಜೊತೆಗೆ, ದೇಹಕ್ಕೆ ನವ ಚೈತನ್ಯ ಉಂಟಾಗುತ್ತದೆ. ಇದನ್ನು ಮನೆಯಲ್ಲೇ ಅರ್ಧ ಗಂಟೆ ಸಮಯದಲ್ಲಿ ತಯಾರಿಸಿಕೊಳ್ಳಬಹುದು.

ಬೇಕಾಗುವ ಪದಾರ್ಥಗಳು :

ಸೋರೆಕಾಯಿ : 100 ಗ್ರಾಂ
ಕ್ಯಾರೆಟ್ : 2
ಟೊಮೆಟೊ : 2
ಜೀರಿಗೆ : ಕಾಲು ಟೀ ಚಮಚ
ಕಾಳು ಮೆಣಸಿನ ಪುಡಿ : 4-5 ಚಿಟಿಕೆ
ಉಪ್ಪು : ರುಚಿಗೆ ತಕ್ಕಷ್ಟು
ಬೆಲ್ಲ : ರುಚಿಗೆ ತಕ್ಕಷ್ಟು
ತುಪ್ಪ/ಬೆಣ್ಣೆ : ಅರ್ಧ ಟೀ ಚಮಚ

ಮಾಡುವ ವಿಧಾನ :

ಕ್ಯಾರೆಟ್ ಮತ್ತು ಸೋರೆಕಾಯಿಯನ್ನು ಚೆನ್ನಾಗಿ ತೊಳೆದು ಅದರ ಸಿಪ್ಪೆಯನ್ನು ತೆಗೆಯಿರಿ. ಸೋರೆಕಾಯಿ, ಕ್ಯಾರೆಟ್ ಮತ್ತು ಟೊಮೆಟೊಗಳನ್ನು ಹೆಚ್ಚಿಕೊಳ್ಳಿ. ಈ ಹೋಳುಗಳನ್ನು ನಾಲ್ಕು ಕಪ್ಪು ನೀರಿನಲ್ಲಿ ಬೇಯಿಸಿ. ಸ್ವಲ್ಪ ಹೊತ್ತು ತಣ್ಣಗಾಗಲು ಬಿಡಿ. ಈಗ ಅದನ್ನು ಬಸಿಯಿರಿ. ಬೆಂದ ಪದಾರ್ಥಗಳನ್ನು ಮಿಕ್ಸಿಯಲ್ಲಿ ನುಣ್ಣಗೆ ಅರೆದು ಬಸಿದ ರಸದೊಂದಿಗೆ ಬೆರೆಸಿ. ಅಷ್ಟೆ... ಸೂಪ್ ರೆಡಿ!!!

ನಾನ್‌ಸ್ಟಿಕ್ ಪಾತ್ರೆಯಲ್ಲಿ ತುಪ್ಪ/ಬೆಣ್ಣೆ ಹಾಕಿ ಜೀರಿಗೆಯನ್ನು ಘಮ್ಮೆನ್ನುವಂತೆ ಹುರಿಯಿರಿ. ಅರೆದು ಸಿದ್ಧಪಡಿಸಿದ ಸೂಪ್‌ಗೆ ಇದನ್ನು ಹಾಕಿ. ಇದಕ್ಕೆ ಎರಡು ಕಪ್ ನೀರು ಬೆರೆಸಿ ಕುದಿಸಿ. ಈ ಮಿಶ್ರಣ ಕುದಿಯುತ್ತಿದ್ದಂತೆ ಉಪ್ಪು ಮತ್ತು ಬೆಲ್ಲವನ್ನು ಹಾಕಿ. ಐದು ನಿಮಿಷದ ನಂತರ ಒಲೆಯಿಂದ ಕೆಳಗಿಳಿಸಿ. ಈಗ ಕಾಳು ಮೆಣಸಿನ ಪುಡಿಯನ್ನು ಸೇರಿಸಿ. ನಿಮ್ಮ ನೆಚ್ಚಿನ ಸೂಪ್‌ನ್ನು ಈಗ ಸವಿಯಬಹುದು.

Story first published: Thursday, September 27, 2007, 17:14 [IST]
X
Desktop Bottom Promotion