For Quick Alerts
ALLOW NOTIFICATIONS  
For Daily Alerts

ಪಾಕಶಾಲೆ: ಪಿಂಕ್‌ಲೇಡಿ ಕುಡಿದು ನೋಡಿ!

By Staff
|
Pink lady watermelon
ನೆತ್ತಿ ಸುಡುವ ಬಿರು ಬೇಸಿಗೆ ಹತ್ತುಹಲವು ತಣ್ಣನೆಯ ಪೇಯಗಳು ಮನಃಪಟಲದ ಮೇಲೆ ಹಾದು ಹೋಗುವಂತೆ ಮಾಡುತ್ತದೆ. ಕೊಡದಲ್ಲಿನ ಒಂದು ಲೋಟ ತಣ್ಣೀರು ಅಥವಾ ತಂಪಾದ ಮರದ ನೆರಳು ನೆತ್ತಿ ಸೋಕಿದರೂ ಸಾಕು ಹಾಯ್ ಅನಿಸುತ್ತದೆ. ಇವೆಲ್ಲಕ್ಕಿಂತ ಮುಖ್ಯವಾಗಿ ಪಿಂಕ್‌‍ಲೇಡಿಯನ್ನು ಕುಡಿಯಲೇ ಬೇಕು!

ಇದ್ಯಾವುದು ಪಿಂಕ್‌ಲೇಡಿ ಎಂದು ಗರಂ ಆಗ ಬೇಡಿ. ಪಾನೀಯದ ಹೆಸರು ಮಾತ್ರ ವಿಚಿತ್ರವಾಗಿದೆ ಅಷ್ಟೆ. ಬೇಕಿದ್ದ್ದರೆ ಇದನ್ನು ನಾವು ಕಲ್ಲಂಗಡಿ ಪಾನೀಯ ಎನ್ನಲು ಅಡ್ಡಿಯಿಲ್ಲ. ಈಗ ಕಲ್ಲಂಗಡಿ ಹಣ್ಣುಗಳ ಕಾಲ. ದಣಿವಾರಿಸಿಕೊಳ್ಳಲು ರಾಶಿ ರಾಶಿ ಕಲ್ಲಂಗಡಿ ಹಣ್ಣುಗಳು ಕೈ ಬೀಸಿ ಕರೆಯುತ್ತವೆ.

ಇವಿಷ್ಟನ್ನು ಹೊಂದಿಸಿಕೊಳ್ಳಿ:

ಕಲ್ಲಂಗಡಿ ಹಣ್ಣಿನ ರಸ: 2 ಲೋಟ (ಹೆಚ್ಚಿದ ಕಲ್ಲಂಗಡಿ ಹಣ್ಣಿನ ತಿರುಳಿನ ಹೋಳುಗಳಲ್ಲಿನ ಬೀಜಗಳನ್ನು ತೆಗೆದು ಮಿಕ್ಸಿಯಲ್ಲಿ ಹಾಕಿ ಒಂದೆರಡು ಸುತ್ತು ತಿರುಗಿಸಿದರೆ ರಸ ಸಿದ್ಧವಾಗುತ್ತದೆ.)

ವೆನಿಲಾ ಐಸ್‌ಕ್ರೀಂ: 4 ಟೀ ಚಮಚ

ಲಿಂಬೆ ರಸ: 2 ಟೀ ಚಮಚ

ಘನಾಕೃತಿಯ ಮಂಜುಗಡ್ಡೆ: 2-3 ಹೋಳುಗಳು

ಹೀಗೆ ಮಾಡಿ:

ಕಲ್ಲಂಗಡಿ ಹಣ್ಣಿನ ರಸ, ಲಿಂಬೆ ರಸ, ವೆನಿಲಾ ಐಸ್‌ಕ್ರೀಂ, ಘನಾಕೃತಿಯ ಮಂಜುಗಡ್ಡೆಯನ್ನು ಒಟ್ಟಿಗೆ ಮಿಕ್ಸಿಗೆ ಹಾಕಿ ಒಂದೆರಡು ಸುತ್ತು ತಿರುಗಿಸಿದರೆ ಪಿಂಕ್ ಲೇಡಿ ತಯಾರಾದಂತೆ. ಇದಕ್ಕೆ ಒಂಚೂರು ಸಣ್ಣಗೆ ಹೆಚ್ಚಿದ ಪುದೀನಾ ಸೊಪ್ಪು , ಚಕ್ರಾಕಾರದಲ್ಲಿ ಕತ್ತರಿಸಿಕೊಂಡ ಕಲ್ಲಂಗಡಿ ಹಣ್ಣಿನ ಹೋಳನ್ನು ಅಲಂಕರಿಸಿ ಬಂದ ಅತಿಥಿಗಳಿಗೆ ದಣಿವಾರಿಸಿಕೊಳ್ಳಲು ಕೊಡಬಹುದು.

Story first published: Thursday, April 15, 2010, 14:23 [IST]
X
Desktop Bottom Promotion