For Quick Alerts
ALLOW NOTIFICATIONS  
For Daily Alerts

ಬೇಕಾಗಿದೆ : ಹುಳಿಯನ್ನ ಮತ್ತು ಬೇಳೆಹುಳಿ ರೆಸಿಪಿ

By Super
|
Wanted, huliyanna and bele huli recipe
ಕೊಲೊಂಬೋದ ಶ್ರೀಮತಿ ಭಾಗ್ಯ ಅವರು ಪುಳಿಯೋಗರೆ ಮಾಡುವ ವಿಧಾನ ವನ್ನು ತಿಳಿಸಿದ್ದರು. ಈ ಅಡುಗೆಗೆ ಪೂರಕ ಪ್ರತಿಕ್ರಿಯೆಯಾಗಿ ಸ್ಯಾನ್ ಹೋಸೆಯ ಜಿ.ಎಸ್. ಸತ್ಯ ಅವರ ಸ್ಮೃತಿಪಟಲದಿಂದ ಚಿಮ್ಮಿದ ಕನಕಪುರ ಪುಳಿಯೋಗರೆ v/s ಹುಳಿಯನ್ನ ಬರಹಕ್ಕೆ ಅಪಾರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಈ ಎರಡು ಬರಹಗಳಿಗೆ ನಮ್ಮ ಓದುಗರನೇಕರು ಅವರವರ ಭಾವಕ್ಕೆ ತಕ್ಕಂತೆ ಪ್ರತಿಕ್ರಿಯೆಗಳ ಮಳೆಗರೆದಿದ್ದಾರೆ. ಎಲ್ಲರಿಗೂ ಧನ್ಯವಾದ.

ಇಮೇಲ್ ಮೂಲಕ ಪ್ರತಿಕ್ರಿಯೆಗಳನ್ನು ರವಾನೆ ಮಾಡಿದ ಎಲ್ಲ ಮಹಿಳೆಯರಿಗೂ ಮಹನೀಯರಿಗೂ ಈ ಮೂಲಕವೆ ಧನ್ಯವಾದಗಳು ಸಲ್ಲುತ್ತವೆ. ಎಲ್ಲರದೂ ಒಂದೇ ಪ್ರಶ್ನೆ. ಹುಳಿಯನ್ನ ಎಂದರೇನು? ಹುಳಿ ಮಾಡಿ ಅನ್ನಕ್ಕೆ ಕಲಸಿದರೆ ಅದೇ ಹುಳಿಯನ್ನವೋ ಅಥವಾ ಅದನ್ನು ತಯಾರಿಸಲು ಪ್ರತ್ಯೇಕ ವಿಧಾನವಿದೆಯೋ ಎನ್ನುವುದು ಅನೇಕರನ್ನು ಕಾಡಿದ ಸಂಶಯ. ನೀವು (ಅಂದರೆ ದಟ್ಸ್ ಕನ್ನಡ ಅಡುಗೆ ಶಾಲೆ) ಅಯ್ಯಂಗಾರರ ಖಾದ್ಯ ಪುಳಿಯೋಗರೆ ಮತ್ತು ಸ್ಮಾರ್ಥರ ಹುಳಿಯನ್ನದ ಬಗ್ಗೆ ಬರೆದಿದ್ದೀರಾ. ಆದರೆ ಮಾಧ್ವ ಮನೆಗಳ ಮಹಾಪ್ರಸಾದ ಶ್ರೀಮದ್ ಬೇಳೆ ಹುಳಿಯ ರೆಸಿಪಿ ಪ್ರಕಟಿಸಿಲ್ಲ ಎಂದು ಕೆಲವರು ಆಕ್ಷೇಪ ಎತ್ತಿದ್ದಾರೆ. ಕೆಲವು ಆಕ್ಷೇಪಗಳು ರೇಗಿಸುವ ಧಾಟಿಯಲ್ಲಿವೆ!

ಒಂದೊಂದು ಜನಾಂಗ, ಪರಿವಾರಕ್ಕೆ ವಿಶೇಷವಾದ ಆಹಾರ ಪದ್ದತಿಗಳಿರುತ್ತವೆ. ನಿಮ್ಮ ಮನೆಯಲ್ಲಿ ಮಾಡಿದ ಸಾರಿಗೆ ಒಂದು ರುಚಿಯಾದರೆ, ನಿಮ್ಮ ಪಕ್ಕದ ಮನೆಯಲ್ಲಿ ಮಾಡಿದ ಸಾರಿಗೆ ಮತ್ತೊಂದು ರುಚಿ. ಲೋಕೋಭಿನ್ನರುಚಿಃ. ಸಾಮಾನ್ಯ ತಿಳಿವಳಿಕೆ ಪ್ರಕಾರ ಸ್ಮಾರ್ಥರ ಮನೆಗಳಲ್ಲಿ ತಿಳಿಸಾರನ್ನು ಚೆನ್ನಾಗಿ ಮಾಡುತ್ತಾರೆಂದೂ, ಮಾಧ್ವರ ಮನೆಗಳಲ್ಲಿ ಬೇಳೆ ಹುಳಿಯನ್ನು ರುಚಿಕಟ್ಟಾಗಿ ಮಾಡುತ್ತಾರೆಂದೂ ಮತ್ತು ಅಯ್ಯಂಗಾರರ ಪುಳಿಯೋಗರೆಗೆ ಈ ಜಗತ್ತಿನಲ್ಲಿ ಸರಿಸಾಟಿ ಇಲ್ಲವೆಂದೂ ಪ್ರತೀತಿ.

ಅದು ಹೇಗೂ ಇರಲಿ. ಜಿ.ಎಸ್. ಸತ್ಯ ಅವರು ಪ್ರಸ್ತಾಪಿಸಿದ 5 ಬಂಗಾರದ ಪದಕಗಳನ್ನು ಗೆದ್ದ ಖ್ಯಾತಿಯ ಹುಳಿಯನ್ನ ಮಾಡುವ ರೆಸಿಪಿಯನ್ನು ದಟ್ಸ್ ಕನ್ನಡ ಆಹ್ವಾನಿಸುತ್ತದೆ. ಬಲ್ಲವರು ಈ ಹುಳಿಯನ್ನ ಮಾಡುವ ವಿಧಾನವನ್ನು ನಮಗೆ ಬರೆದು ಕಳಿಸಬೇಕಾಗಿ ಕೋರಿಕೆ. ಅಂತೆಯೇ, ಶ್ರೀಮದ್ ಬೇಳೆ ಹುಳಿ ರೆಸಿಪಿಯನ್ನೂ ಆಹ್ವಾನಿಸುತ್ತಿದ್ದೇವೆ. ಬರಹ ಅಥವಾ ಯೂನಿಕೋಡಿನಲ್ಲಿ ನಿಮ್ಮ ರೆಸಿಪಿಯನ್ನು ಬರೆದಿರಬೇಕು. ರೆಸಿಪಿಗೆ ಒಪ್ಪುವ ಚಿತ್ರವನ್ನೂ ಕಳಿಸಿಕೊಟ್ಟರೆ ಪ್ರಕಟಿಸಲಾಗುವುದು.

ತಯಾರಿಸುವ ವಿಧಾನ ಬೇರೆಬೇರೆ ವಿಧಾನದಲ್ಲಿದ್ದರೆ ಎಲ್ಲ ರೆಸಿಪಿಗಳನ್ನೂ ಪ್ರಕಟಿಸಲಾಗುವುದು. ಅನೇಕರ ಲೇಖನಗಳು ಒಂದೇ ಮಾದರಿಯಲ್ಲಿದ್ದರೆ ಅತ್ಯುತ್ತಮ ಅಂದರೆ ರುಚಿಕಚ್ಚಾದ ಬರಹವನ್ನು ಆಯ್ದು ಪ್ರಕಟಿಸಲಾಗುವುದು- ಸಂಪಾದಕ.

ಬರೆದು [email protected]ಗೆ ಕಳಿಸಿ.

English summary

Huliyanna | BelEhuli | Recipe | Brahmins special | Puliyogare - ಬೇಕಾಗಿದೆ : ಹುಳಿಯನ್ನ ಮತ್ತು ಬೇಳೆಹುಳಿ ರೆಸಿಪಿ

Wanted: Huliyanna and Bele Huli recipe for kannada kitchens. ಬೇಕಾಗಿದೆ : ಹುಳಿಯನ್ನ ಮತ್ತು ಬೇಳೆಹುಳಿ ರೆಸಿಪಿ.
X
Desktop Bottom Promotion