For Quick Alerts
ALLOW NOTIFICATIONS  
For Daily Alerts

ಮೂಗು ಮುರಿಯದೆ ತಿನ್ನಿ ಬಹುಪಯೋಗಿ ಈರುಳ್ಳಿ

By * ಡಾ. ಶಿವಶಂಕರ ಐತಾಳ, ಮಂಗಳೂರು
|
Onion to combat cancer
ಸಂಪ್ರದಾಯಸ್ಥ ಮನೆಗಳಲ್ಲಿ ಈರುಳ್ಳಿ ವಾಸನೆ ಕೂಡ ಸುಳಿದಾಡದು. ಆದರೆ, 'ಸಂಪ್ರದಾಯ ಮುರಿದವರ' ಮನೆಗಳಲ್ಲಿ ಈರುಳ್ಳಿಯಿಲ್ಲದೆ ಬೆಳಗಿನ ತಿಂಡಿ ಆಗುವುದೇ ಇಲ್ಲ. ಕೊಳ್ಳುವಾಗ ಈರುಳ್ಳಿ ಕಣ್ಣಲ್ಲಿ ನೀರು ಬರಿಸಿದರೂ, ಇದು ನಮ್ಮ ಆರೋಗ್ಯದ ಮೇಲೆ ಮಾಡುವ ಪರಿಣಾಮವನ್ನು ಮನನ ಮಾಡಿಕೊಂಡರೆ ಕಣ್ಣಲ್ಲಿ ಪನ್ನೀರು ಬರುತ್ತದೆ.

ಇದರಲ್ಲಿ ಯಾವ ಪೋಷಕಾಂಶವಿಲ್ಲ ಹೇಳಿ? ವಿಟಮಿನ್ ಸಿ, ಫೋಲೇಟ್ (ವಿಟಮಿನ್ ಬಿ), ವಿಟಮಿನ್ ಬಿ6, ಫೈಬರ್, ಕ್ರೋಮಿಯಂ, ಮ್ಯಾಂಗನೀಸ್, ಪೊಟ್ಯಾಷಿಯಂ ಎಲ್ಲವೂ ಇದರಲ್ಲಿ ಅಡಕವಾಗಿದೆ. ರೋಗಗಳನ್ನು ಅಥವಾ ಗಾಯಗಳನ್ನು ಗುಣಪಡಿಸುವಲ್ಲಿ ಈರುಳ್ಳಿಯದು ಎತ್ತಿದ ಕೈ. ಹೊಟ್ಟೆ ಉರಿ ಶಮನವಾಡುವಲ್ಲಿ, ರಕ್ತದ ಹರಿವನ್ನು ಹೆಚ್ಚಿಸುವಲ್ಲಿ ಈರುಳ್ಳಿ (ಉಳ್ಳಾಗಡ್ಡಿ) ಪ್ರಮುಖ ಪಾತ್ರ ವಹಿಸುತ್ತದೆ.

ಸರ್ವರೋಗಗಳಿಗೂ ಈರುಳ್ಳಿ ರಾಮಬಾಣ ತಿಳಿದಿರಲಿ. ಹೃದ್ರೋಗ, ಕ್ಯಾನ್ಸರ್, ಮೊಣಕಾಲು ನೋವು, ಸೋಂಕುಗಳು, ಆಸ್ತಮಾ... ಅಷ್ಟೇ ಏಕೆ ಸಾಮಾನ್ಯವಾಗಿ ತಲೆದೋರುವ ನೆಗಡಿ, ಕೆಮ್ಮು, ಜ್ವರಗಳಿಗೂ ಈರುಳ್ಳಿ ಉಪಶಮನಕಾರಿ. ರಕ್ತವನ್ನು ತಿಳಿಯಾಗಿಸಿ ಹರಿವನ್ನು ಹೆಚ್ಚಿಸುವುದರಿಂದ ಹೃದಯ ದಿವಿನಾಗಿರುತ್ತದೆ. ಹಾಗೆಯೆ, ರಕ್ತದೊತ್ತಡವನ್ನು ತಗ್ಗಿಸುವಲ್ಲಿ, ಮಲಬದ್ಧತೆ ತಡೆಯುವಲ್ಲಿ ಇದು ಉಪಕಾರಿ.

ಮೊಣಕಾಲಿನ ಎಲುಬುಗಳು ಸವೆಯುವುದು ಮಹಿಳೆಯರಲ್ಲಿ ಪುರುಷರಿಗಿಂತ ಅಧಿಕ. ವೃದ್ಧಾಪ್ಯದಲ್ಲಿ ಕಾಡುವ ಈ ರೋಗ ಹೆಚ್ಚು ಬಾಧಿಸಬಾರದೆಂದರೆ ಈರುಳ್ಳಿಯನ್ನು ಮುಖ ಕಿವುಚಿಕೊಳ್ಳದೆ, ಆರೋಗ್ಯದ ಮೇಲೆ ಉತ್ತಮ ಪರಿಣಾಮ ಬೀರುತ್ತದೆಂದು ಸೇವಿಸಬೇಕು. ಅಡ್ಡ ಪರಿಣಾಮ ಬೀರದ ಈರುಳ್ಳಿಯನ್ನು ಅಧಿಕವಾಗಿ ಸೇವಿಸುತ್ತಿದ್ದರೆ ಸ್ತನ ಕ್ಯಾನ್ಸರ್ ಆಗುವ ಸಂಭವನೀಯತೆ ಶೇ.25ರಷ್ಟು ಮತ್ತು ಗರ್ಭಕೋಶದ ಕ್ಯಾನ್ಸರ್ ಆಗುವ ಸಂಭವನೀಯತೆ ಶೇ.73ರಷ್ಟು ತಗ್ಗುತ್ತದೆ ಎಂದು ವಿಜ್ಞಾನಿಗಳೇ ಹೇಳಿದ್ದಾರೆ. ನಂಬುವ ಜವಾಬ್ದಾರಿ ನಿಮ್ಮದು.

ಸೈಡ್ ಎಫೆಕ್ಟ್ : ಆತ್ಮವಿಶ್ವಾಸವನ್ನು ವೃದ್ಧಿಸುತ್ತದೆ. Next ಹಸಿರು ಸೊಪ್ಪು »

;

English summary

Onion to combat cancer | Healthy diet for women | Reduces risk of heart disease | ಹೃದ್ರೋಗ ನಿವಾರಣೆಗೆ ಈರುಳ್ಳಿ | ಮಹಿಳೆ ಆರೋಗ್ಯ ಸಲಹೆ

Top five healthy food for women to enjoy the goodness of a sound health. Onions spell wellness and also keeps away diseases like cancer, heart disease, arthritis and other health complications that are bound to strike women. Simple food to simply stay healthy!
X
Desktop Bottom Promotion