For Quick Alerts
ALLOW NOTIFICATIONS  
For Daily Alerts

ಬಾಯಿಯಲ್ಲಿ ನೀರೂರಿಸುವ ಕೊತ್ತಂಬರಿ ಸೊಪ್ಪಿನ ಚಟ್ನಿ!

By Manohar.V
|

ಊಟಕ್ಕೆ ಉಪ್ಪಿನಕಾಯಿ ಅಗತ್ಯವಾಗಿರುವಂತೆ ಚಟ್ನಿ ಕೂಡ ನಿಮ್ಮ ಊಟದ ರುಚಿ ಹೆಚ್ಚಿಸುತ್ತದೆ. ಇದನ್ನು ಸೈಡ್ ಡಿಶ್ ಆಗಿ ಅಥವಾ ಊಟ ಮತ್ತು ರೊಟ್ಟಿಯೊಂದಿಗೆ ನೀವು ಸೇವಿಸಬಹುದು. ಹಲವಾರು ಸಾಮಾಗ್ರಿಗಳನ್ನು ಬಳಸಿಕೊಂಡು ವೈವಿಧ್ಯಮಯ ಚಟ್ನಿಯನ್ನು ತಯಾರಿಸಬಹುದು. ಸಿಹಿ ಹುಳಿ ಮಿಶ್ರಿತ ಹುಣಸೆ ಹಣ್ಣಿನ ಚಟ್ನಿಯಿಂದ ಹಿಡಿದು ಖಾರ ಹಸಿರು ಕೊತ್ತಂಬರಿ ಸೊಪ್ಪಿನ ಚಟ್ನಿಯನ್ನು ತಯಾರಿಸಿಕೊಳ್ಳಬಹುದು. ಇದರ ಸಿದ್ಧತೆಗಾಗಿ ಹಲವಾರು ಸಾಮಾಗ್ರಿಗಳನ್ನು ಬಳಸಿಕೊಳ್ಳಬಹುದು.

ಕೊತ್ತಂಬರಿ ಸೊಪ್ಪಿನ ಚಟ್ನಿಯನ್ನು ಸೈಡ್ ಡಿಶ್ ಆಗಿ ಹಲವಾರು ಡಿಶ್ ಐಟಂಗಳಲ್ಲಿ ಬಳಸಲಾಗುತ್ತದೆ. ಮಸಾಲಾ ಇಡ್ಲಿ, ಅನ್ನದೊಂದಿಗೆ ಈ ಚಟ್ನಿಯನ್ನು ಬಳಸಿಕೊಂಡು ಅದರ ರುಚಿಯನ್ನು ಹೆಚ್ಚಿಸಿಕೊಳ್ಳಿ. ಕೊತ್ತಂಬರಿ ಸೊಪ್ಪಿನ ಚಟ್ನಿಯನ್ನು ಸಿದ್ಧಪಡಿಸುವ ಹಲವಾರು ವಿಧಾನಗಳಿವೆ. ಮನೆಯಲ್ಲೇ ಈ ಚಟ್ನಿಯನ್ನು ತಯಾರಿಸಬಹುದಾದ ಎರಡು ಪ್ರಮುಖ ವಿಧಾನಗಳಿವೆ.

Two Ways To Prepare Coriander Chutney

ಸಾಂಪ್ರದಾಯಿಕ ಕೊತ್ತಂಬರಿ ಚಟ್ನಿ ರೆಸಿಪಿ

ಸಾಮಾಗ್ರಿಗಳು
1.ಕೊತ್ತಂಬರಿ ಸೊಪ್ಪು - 1ಕಟ್ಟು

2.ಟೊಮೇಟೊ- 1 (ಸಮನಾಗಿ ಕತ್ತರಿಸಿದ್ದು)

3.ಬೆಳ್ಳುಳ್ಳಿ- 5-6 ಎಸಳು

4.ಹಸಿ ಮೆಣಸು-3-4

5.ಜೀರಿಗೆ - 1ಟೇಸ್ಪೂನ್

6.ಉಪ್ಪು-ರುಚಿಗೆ ತಕ್ಕಂತೆ

ಮಾಡುವ ವಿಧಾನ
1.ಕೊತ್ತಂಬರಿ ಸೊಪ್ಪನ್ನು ಚೆನ್ನಾಗಿ ತೊಳೆದುಕೊಳ್ಳಿ. ಕೆಸರಿಲ್ಲದಂತೆ ಅದನ್ನು ಶುಭ್ರವಾಗಿಸಿ.

2.ಕೊತ್ತಂಬರಿ ಸೊಪ್ಪು, ಟೊಮೇಟೊ, ಬೆಳ್ಳುಳ್ಳಿ, ಹಸಿಮೆಣಸು ಮತ್ತು ಜೀರಿಗೆಯನ್ನು ಮಿಕ್ಸಿ ಜಾರಿಗೆ ಹಾಕಿಕೊಳ್ಳಿ.

3.ರುಚಿಗೆ ತಕ್ಕಂತೆ ಉಪ್ಪು ಹಾಕಿ

4. ಪಾತ್ರೆಯಲ್ಲಿ ಸ್ವಲ್ಪ ನೀರು ಬೆರೆಸಿಕೊಂಡು ಮೃದುವಾಗಿ ರುಬ್ಬಿಕೊಳ್ಳಿ

5. ರುಬ್ಬಿಕೊಂಡ ನಂತರ, ಅದನ್ನು ಖಾರ ಮತ್ತು ಹುಳಿಯನ್ನಾಗಿಸಲು 1ಟೇ.ಸ್ಪೂನ್ ನಿಂಬೆರಸವನ್ನು ಮಿಶ್ರ ಮಾಡಿಕೊಳ್ಳಿ.

ಮೊಸರನ್ನು ಬಳಸಿಕೊಂಡು ಕೊತ್ತಂಬರಿ ಚಟ್ನಿ ಮಾಡುವ ವಿಧಾನ -

ಕೊತ್ತಂಬರಿ ಸೊಪ್ಪು ಚಟ್ನಿಯನ್ನು ಮಾಡುವ ಸರಳ ವಿಧಾನ ಇದಾಗಿದೆ. ಖಾರ ಮತ್ತು ಹೊಸ ರೀತಿಯ ಕೊತ್ತಂಬರಿ ಚಟ್ನಿ ರೆಸಿಪಿ ಇಲ್ಲಿದೆ. ಮೊಸರನ್ನು ಬಳಸಿಕೊಂಡು ಕೊತ್ತಂಬರಿ ಚಟ್ನಿ ತಯಾರಿಸ ಬಹುದು.

1.ಕೊತ್ತಂಬರಿ ಸೊಪ್ಪು - 1ಕಟ್ಟು

2.ಹಸಿಮೆಣಸು-3-4

3.ಜೀರಿಗೆ - 1ಟೇಸ್ಫೂನ್

4.ಬುಜಿಯಾ - ಒಂದು ಮುಷ್ಟಿ

5.ಕಡಲೆ - 1/2 ಟೇ.ಸ್ಫೂನ್

6.ಮೊಸರು- 1ಟೇಸ್ಫೂನ್

7.ಉಪ್ಪು-ರುಚಿಗೆ ತಕ್ಕಷ್ಟು

ಮಾಡುವ ವಿಧಾನ :

1.ಕೊತ್ತಂಬರಿ ಸೊಪ್ಪನ್ನು ಚೆನ್ನಾಗಿ ತೊಳೆದುಕೊಳ್ಳಿ. ಕೆಸರಿಲ್ಲದಂತೆ ಅದನ್ನು ಶುಭ್ರವಾಗಿಸಿ.

2.ಕೊತ್ತಂಬರಿ ಸೊಪ್ಪು, ಮೊಸರು, ಹಸಿಮೆಣಸು ಮತ್ತು ಜೀರಿಗೆಯನ್ನು ಮಿಕ್ಸರ್‌ಗೆ ಹಾಕಿ.

3. ಕೊನೆಗೆ ಬುಜಿಯಾ ಮತ್ತು ಕಡಲೆಯನ್ನು ಹಾಕಿ

4. ನುಣ್ಣಗೆ ಪೇಸ್ಟ್ ಮಾಡಿಕೊಳ್ಳಿ. ಮೊಸರು ಇದರಲ್ಲಿ ಮಿಶ್ರಗೊಂಡಿರುವುದರಿಂದ ಚಟ್ನಿ ಇನ್ನೂ ರುಚಿಕರವಾಗಿರುತ್ತದೆ.

English summary

Two Ways To Prepare Coriander Chutney

Chutneys are one of the best side dishes which can be a delicious treat in the meal. You can either use it as a side dish or simply enjoy your rice or roti with the chutney alone.
Story first published: Friday, January 3, 2014, 10:39 [IST]
X
Desktop Bottom Promotion